ಕಯ್ನಾರು-ಪರಂಬಳ-ಜೋಡುಕಲ್ಲು ರಸ್ತೆ ದುರವಸ್ಥೆ !


Team Udayavani, Jul 11, 2017, 1:30 AM IST

duravaste.jpg

ಕುಂಬಳೆ: ಪೈವಳಿಕೆ ಮತ್ತು ಮಂಗಲ್ಪಾಡಿ ಗ್ರಾಮ ಪಂಚಾಯತ್‌ಗೆ ಪರಸ್ಪರ ಸಂಪರ್ಕ ಕಲ್ಪಿಸುವ ಕಯ್ನಾರು ಪರಂಬಳ ಜೋಡುಕಲ್ಲು ರಸ್ತೆಯ ಅವಸ್ಥೆ ಶೋಚನೀಯವಾಗಿದೆ. ಸುಮಾರು 4 ಕಿ.ಮೀ. ಉದ್ದದ ಗ್ರಾಮೀಣ ಪ್ರದೇಶದ ಈ ರಸ್ತೆಯಲ್ಲಿ ಜನ-ವಾಹನ ಸಂಚರಿಸಲು ಹರಸಾಹಸ ಪಡಬೇಕಾಗಿದೆ.

ಕಳೆದ 5 ವರ್ಷದ ಹಿಂದೆ ಕ್ಷೇತ್ರದ ಶಾಸಕರ ವಿಶೇಷ ಅನುದಾನದಿಂದ ರಸ್ತೆ ಅಭಿವೃದ್ಧಿಗೆ ಬರೋಬ್ಬರಿ 1.5 ಕೋಟಿ ರೂ. ನಿಧಿ ಮಂಜೂರುಗೊಂಡಿದೆ.ರಸ್ತೆ ಕಾಮಗಾರಿಯನ್ನು ಉತ್ತಮವಾಗಿ ನಿರ್ವಹಿಸಲು ಸರ್ವಪಕ್ಷದ ಎಲ್ಲರನ್ನೊಳಗೊಂಡ ಫಲಾನುಭವಿ ಸಮಿತಿಯನ್ನು ರಚಿಸಲಾಯಿತು.

ಕಾಮಗಾರಿಯ ಮೇಲ್ವಿಚಾರಣೆಗೆ ಪ್ರತ್ಯೇಕ ತಜ್ಞರ ಸಮಿತಿಯನ್ನೂ ರಚಿಸಲಾಯಿತು. ಕರಾರಿನ ಬಳಿಕ ಕಾಮಗಾರಿ ಆರಂಭಗೊಂಡಿತು. ಆದರೆ ಕಾಮಗಾರಿ ಆರಂಭದಲ್ಲೇ ರಸ್ತೆ ಕಳಪೆಯಾದ ಕಾರಣ ಮೇಲ್ನೋಟ ಸಮಿತಿಯವರು ಗುತ್ತಿಗೆಯವರೊಂದಿಗೆ ರಾದ್ಧಾಂತಕ್ಕೆ ಇಳಿಯಬೇಕಾಯಿತು. ಉತ್ತಮ ಕಾಮಗಾರಿ ನಡೆಸದಿದ್ದಲ್ಲಿ ಕಾಮಗಾರಿಗೆ ಬಿಡುವುದಿಲ್ಲ ಎಂಬುದಾಗಿಯೂ ಸಮಿತಿಯವರು, ಇಲಾಖೆಯ ಯೋಜನೆಯಲ್ಲಿ ಒಳಪಡಿಸಿದಂತೆ ನಮಗೆ ಎಷ್ಟು ಸಾಧ್ಯವೆಂಬ ಗುತ್ತಿಗೆದಾರರ ಜಟಾಪಟಿಯಲ್ಲಂತೂ ವಿವಾದದಲ್ಲಿ ಕಾಮಗಾರಿ ಮುಗಿಸಲಾಯಿತು. 

ಇದರ ಫಲ ಮುಂದಿನ ಪ್ರಥಮ ಮಳೆಗಾಲದಲ್ಲೇ ಪ್ರಕಟವಾಯಿತು. ಒಂದೇ ಮಳೆಗೆ ರಸ್ತೆ ಹೊಂಡ ಮಯವಾಯಿತು. ಕೆಸರು ಕಂಬಳ ರಸ್ತೆಯಾಯಿತು. ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂಬುದಾಗಿ ವಿಜಿಲೆನ್ಸ್‌ ಅಧಿಕಾರಿಗೆ ದೂರು ಸಲ್ಲಿಸಿದರೂ ಕಳ್ಳರಿಗೆ ಬೆಳಕು ತೋರಿಸುವ ಅಧಿಕಾರಿಗಳಿಂದ ಪರಿಣಾಮ ಸೊನ್ನೆಯಾಗಿ ಪರಿಣಮಿಸಿತು.

ರಸ್ತೆ ತೀರಾ ಕೆಟ್ಟು ಹೋಗಿ ಸಂಚರಿಸಲಸಾಧ್ಯವಾ ದಾಗ ಕಾಸರಗೋಡು ಜಿಲ್ಲಾ ಪಂಚಾಯತ್‌, ಪೈವಳಿಕೆ ಗ್ರಾಮ ಪಂಚಾಯತ್‌ಗಳಿಂದ ಮತ್ತೆ ರಸ್ತೆಗೆ ನಿಧಿ ವ್ಯಯಿಸಿ ರಸ್ತೆ ಡಾಮರೀಕರಣ ನಡೆಸಲಾಯಿತು.ಆದರೆ ಈ ಕಾಮಗಾರಿಯ ಆಯುಷ್ಯವೂ ಕುಂಠಿ ತವಾಗಿತ್ತು. ಪ್ರಕೃತ ರಸ್ತೆಯುದ್ದಕ್ಕೂ ಇಂಗು ಗುಂಡಿಯಾಗಿದೆ. ರಸ್ತೆಯಲ್ಲಿ ಸಂಚರಿಸಲು ಸರ್ಕಸ್‌ ಸಾಹಸ ಮಾಡಬೇಕಾಗಿದೆ.

ಕಲ್ಲಿನ ಲಾರಿಗಳ ಕೊಡುಗೆ: ರಸ್ತೆ ಕಾಮಗಾರಿ ಕಳಪೆಯಾಗಿರುವುದಕ್ಕೆ ಘನವಾಹನಗಳ ಒಂದಷ್ಟು ಕೊಡುಗೆಯೂ ಇದೆ. ಕೆಂಪು ಕಲ್ಲು ಮತ್ತು ಕಗ್ಗಲ್ಲು ತುಂಬಿದ ಸಾಕಷ್ಟು ಲಾರಿಗಳು ಈ ರಸ್ತೆಯಲ್ಲಿ ನಿತ್ಯ ಸಾಗುವುದು. ಈ ಭಾರ ತುಂಬಿದ ಲಾರಿಗಳ ಸಂಚಾರದಿಂದಲೂ ರಸ್ತೆ ಕೆಡಲು ಕಾರಣವಾಗಿದೆ. ಕಳಪೆ ಕಾಮಗಾರಿಯ ಮೇಲೆ ಈ ಲಾರಿಗಳು ಸಾಗಿದಾಗ ರಸ್ತೆ ಪಕ್ಕನೆ ಕೆಡಲು ಕಾರಣವಾಯಿತು. ಉಭಯ ಪಂಚಾಯತ್‌ ಸಂಪರ್ಕ ಕಲ್ಪಿಸುವ ಈ ರಸ್ತೆ ಗ್ರಾಮೀಣ ಪ್ರದೇಶದ ಕೃಷಿಕರಿಗೆ ಅತಿ ಅಗತ್ಯ ವಾಗಿದೆ. ದೇವಾಲಯಗಳು, ವಿದ್ಯಾಲಯಗಳು, ವಿವಿಧ ಕಚೇರಿಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ದುರಸ್ಥಿ  ಅನಿವಾರ್ಯವಾಗಿದೆ. ಸಂಬಂಧ  ಪಟ್ಟವರು ರಸ್ತೆ ಹೊಂಡಕ್ಕೆ ಕನಿಷ್ಠ ಕಲ್ಲನ್ನಾದರೂ ಸುರಿದು ಪುಣ್ಯ ಕಟ್ಟಿಕೊಳ್ಳಬೇಕಾಗಿದೆ.

ಟಾಪ್ ನ್ಯೂಸ್

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

court

Kasaragod; ಯುವಕನ ಕೊಲೆ: 6 ಮಂದಿಗೆ ಜೀವಾವಧಿ

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

2

Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ

12

Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

bjp-congress

Aranthodu:ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

court

Kasaragod; ಯುವಕನ ಕೊಲೆ: 6 ಮಂದಿಗೆ ಜೀವಾವಧಿ

death

Puttur: ಅಪಘಾತದಲ್ಲಿ ಗಾಯಾಳಾಗಿದ್ದ ಬೈಕ್‌ ಸಹ ಸವಾರ ಸಾವು

arrested

BC Road; ಎರಡು ತಂಡಗಳ ಮಧ್ಯೆ ಮಾರಾಮಾರಿ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.