ಕೇರಳ ಸರಕಾರದ ಜನದ್ರೋಹಿ ನೀತಿ : ಆರೋಪ
Team Udayavani, Feb 23, 2017, 4:05 PM IST
ಹೊಸಂಗಡಿ: ಕೇರಳದ ಎಡರಂಗ ಸರಕಾರ ಬಡವರಿಗೆ ರೇಶನ್ ವಿತರಿಸದೆ ಬಡ ಜನರನ್ನು ಉಪವಾಸ ಬೀಳುವಂತೆ ಮಾಡಿದೆ. ಕೇಂದ್ರ ಸರಕಾರ ಕೇರಳದ ಬೇಡಿಕೆಯಂತೆ ಅಕ್ಕಿಯನ್ನು ಈಗಾಗಲೇ ಕೇರಳಕ್ಕೆ ನೀಡಿರುವಾಗ ಜನಸಾಮಾನ್ಯರಿಗೆ ರೇಶನ್ ಅಂಗಡಿಗಳ ಮೂಲಕ ವಿತರಣೆಯಾಗಬೇಕಾದ ಅಕ್ಕಿ ಗೋದಾಮುಗಳಿಂದ ವಿಲೇವಾರಿ ಯಾಗದೆ ಉಳಿದಿರುವುದು ಖಂಡ ನೀಯ. ಎಡರಂಗ ಆರೋಪವನ್ನು ಕೇಂದ್ರ ಸರಕಾರದ ಮೇಲೆ ಹೊರಿಸ ಹೊರಟಿರುವುದು ಕಪಟತನ ಎಂದು ಯುವಮೋರ್ಚಾ ಜಿಲ್ಲಾ ಅಧ್ಯಕ ಪಿ.ಆರ್. ಸುನಿಲ್ ಕುಮಾರ್ ಹೇಳಿದರು.
ಕೇರಳ ಸರಕಾರದ ಜನದ್ರೋಹಿ ನೀತಿ ಯನ್ನು ಪ್ರತಿಭಟಿಸಿ ಕುಂಜತ್ತೂರಿನಲ್ಲಿ ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಆಯೋಜಿಸಿದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾರಾನಾಥ ಹೊಸಂಗಡಿ ಸಭೆಯ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಮಂಜೇ ಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿ.ಎಂ. ಮಾತನಾಡಿ ಕೇರಳದ ಎಡ ಮತ್ತು ಐಕ್ಯರಂಗಗಳ ಹೊಂದಾಣಿಕೆ ರಾಜಕೀಯವನ್ನು ವಿವರಿಸಿದರು. ಕೇಂದ್ರದ ಯೋಜನೆಗಳನ್ನು ತನ್ನದೆಂದು ಬಿಂಬಿಸ ಹೊರಟಿರುವ ಕೇರಳ ಸರಕಾರದ ಎಡಬಿಡಂಗಿ ರಾಜಕೀಯ ಜನತೆ ಅರ್ಥ ಮಾಡಿಕೊಂಡಿದ್ದಾರೆ. ನೈತಿಕ ರಾಜಕೀಯವಿಲ್ಲದ ಎಡರಂಗ ಮುಸ್ಲಿಂ ಲೀಗ್, ಕಾಂಗ್ರೆಸ್ ಪೈವಳಿಕೆ ಪಂಚಾಯತ್‌ನಲ್ಲಿ ನಡೆಸುತ್ತಿರುವ ಅನೈತಿಕ ರಾಜಕೀಯ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.
ಬಿಜೆಪಿ ಮುಖಂಡರಾದ ಹರಿಶ್ಚಂದ್ರ ಎಂ., ಪದ್ಮನಾಭ ಕಡಪ್ಪುರ, ಯಾದವ ಬಡಾಜೆ ಮೊದಲಾದವರು ಉಪಸ್ಥಿತರಿದ್ದರು. ಚಂದ್ರಹಾಸ ಸುವರ್ಣ ಸ್ವಾಗತಿಸಿದರು. ಬಾಬು ಮಾಸ್ತರ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.