ಕನ್ನಡ ಭಾಷೆ ಗೌರವ ಪ್ರಜ್ಞೆ ಕೇರಳ ಸರಕಾರಕ್ಕಿರಲಿ: ಭೀಮಾಶಂಕರ ಪಾಟೀಲ


Team Udayavani, Mar 29, 2018, 9:55 AM IST

Patila-28-3.jpg

ಕಾಸರಗೋಡು: ಭಾಷಾ ಸಂರಕ್ಷಣೆಯ ಜವಾಬ್ದಾರಿ ಸರಕಾರಗಳಿಗಿರಬೇಕು. ಭಾಷೆಯ ಉಳಿವು ಸಂಸ್ಕೃತಿಯ ಉಳಿವು. ಭಾಷಾ ಭೇದ ಎಂದೂ ಸಲ್ಲದು. ಕೇರಳದಲ್ಲಿ ಕನ್ನಡ ಭಾಷೆಯನ್ನು ನಿರಂತರ ಅವಗಣಿಸಲಾಗುತ್ತಿದೆ. ಸರಕಾರದ ವತಿಯಿಂದಲೇ ಈ ಅಮಾನುಷ ಕೆಲಸ ನಡೆಯುತ್ತಿದೆ. ಕನ್ನಡ ಭಾಷೆಯನ್ನು ಗೌರವದಿಂದ ನೋಡುವ ಭಾವನೆಯನ್ನು ಇನ್ನಾದರೂ ಕೇರಳ ಸರಕಾರ ತಳೆಯಬೇಕು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಬೆಂಗಳೂರು ಇದರ ಅಧ್ಯಕ್ಷ ಭೀಮಾಶಂಕರ ಪಾಟೀಲ ಅವರು ಹೇಳಿದರು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಹಾಗೂ ವಿ.ಕೆ.ಎಂ. ಕಲಾವಿದರು ಬೆಂಗಳೂರು ಇದರ ಸಹಯೋಗದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಮೀಪುಗುರಿ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಆಯೋಜಿಸಿದ ವಿಶ್ವರಂಗಭೂಮಿ ದಿನಾಚರಣೆ ಮತ್ತು ಕಾಸರಗೋಡು ಕರ್ನಾಟಕ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಸರಗೋಡಿನ ಕನ್ನಡಿಗರು ವಲಸೆ ಬಂದವರಲ್ಲ. ಅವರು ಇಲ್ಲಿನ ಮೂಲ ನಿವಾಸಿಗಳು. ಕನ್ನಡ ಭಾಷೆಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ನಿರಂತರ ಮಲೆಯಾಳೀಕರಣ ನಡೆಯುತ್ತಿದ್ದರೂ ಕನ್ನಡದ ಬೇರು ಇಲ್ಲಿ ಗಟ್ಟಿಯಾಗಿರುವುದರಿಂದ ಅದು ಎಲ್ಲ ಹೊಡೆತಗಳನ್ನು ಎದುರಿಸಿ ನಿಂತುಕೊಂಡಿದೆ. ಆದರೆ ಜನಮತವನ್ನು ಪಡೆದು ಅಧಿಕಾರಕ್ಕೇರಿದ ಸರಕಾರ ಕನ್ನಡ ಭಾಷೆಯನ್ನು ಇಲ್ಲವಾಗಿಸುವ ಪ್ರಯತ್ನವನ್ನು ಕೊನೆಗಾಣಿಸಬೇಕು. ಈ ನಿಟ್ಟಿನಲ್ಲಿ ಕಾಸರಗೋಡಿನ ಕನ್ನಡಿಗರು ನಡೆಸುತ್ತಿರುವ ಹೋರಾಟಕ್ಕೆ ಪೂರ್ಣ ಬೆಂಬಲ ನೀಡುವುದಾಗಿ ಪಾಟೀಲ ಅವರು ಹೇಳಿದರು.ಕರ್ನಾಟಕ ಸರಕಾರದಂತೆ ಕೇರಳ ಸರಕಾರವು ಎಲ್ಲಾ ಭಾಷಿಗರನ್ನು ಗೌರವದಿಂದ ಕಾಣುತ್ತಾ ಭಾಷಾ ಅಲ್ಪಸಂಖ್ಯಾಕರ ಸಂವಿಧಾನಬದ್ಧ ಹಕ್ಕು, ಸವಲತ್ತುಗಳಿಗೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕು. ಕಲೆ, ಸಾಹಿತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕನ್ನಡಿಗರನ್ನು ಗುರುತಿಸಿ ಕೇರಳ ಸರಕಾರವು ಪ್ರಶಸ್ತಿ ನೀಡಿ ಸಮ್ಮಾನಿಸಿ ಗೌರವಿಸಬೇಕೆಂದರು. ಕಾಸರಗೋಡಿನ ಕನ್ನಡಿಗರ ನೋವು, ಸಂಕಟ ಸಮಸ್ಯೆಗಳ ಬಗ್ಗೆ ರೂಪಕಗಳನ್ನು ಸಿದ್ಧಪಡಿಸಿ ಕರ್ನಾಟಕದ ವಿವಿಧೆಡೆ ಪ್ರದರ್ಶಿಸಿ ಜಾಗೃತಿ ಮೂಡಿಸಲು ಕಲಾವಿದರು ಮುಂದಾಗಬೇಕು ಎಂದ ಅವರು ಕಾಸರಗೋಡು ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗವೇ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಡೆಪ್ಯೂಟಿ ಕಲೆಕ್ಟರ್‌ ಶಶಿಧರ ಶೆಟ್ಟಿ, ವಿ.ಕೆ.ಎಂ.ಕಲಾವಿದರು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿ.ಎಂ.ತಿಮ್ಮಯ್ಯ ಭಾಗವಹಿಸಿದರು. ವಿ.ಕೆ.ಎಂ. ಸಂಸ್ಥೆಯ ಅಧ್ಯಕ್ಷ ಕೆ.ಎಸ್‌.ವೆಂಕಟೇಶಲು, ಎಂ.ಎಸ್‌.ವೆಂಕಟರಾಮ, ದೇವನಾಗೇಶ್‌, ಕಾಸರಗೋಡು ನಗರಸಭಾ ಸದಸ್ಯೆ ಕೆ.ಶಂಕರ್‌, ಸದಸ್ಯೆ ಸಂಧ್ಯಾ ಶೆಟ್ಟಿ, ಮಧೂರು ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಕೆ.ಮಾಧವ ಮಾಸ್ತರ್‌, ಪತ್ರಕರ್ತ ಶೇಖರ ಅಜೆಕಾರು, ಉದ್ಯಮಿ ರಾಮಪ್ರಸಾದ್‌, ಉದ್ಯಮಿ ಕೆ.ನಿರಂಜನ ಕೊರಕ್ಕೋಡು, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್‌ ಸೇವಾ ಸಂಘದ ಅಧ್ಯಕ್ಷ ಬಿ.ಪಿ.ವೆಂಕಟರಮಣ, ಕೊಪ್ಪಲು ಶ್ರೀ ಮಹಾಮಾಯ ಅಮ್ಮನವರ ದೇಗುಲ ಸೇವಾ ಸಮಿತಿ ಅಧ್ಯಕ್ಷ ಲೋಕೇಶ್‌ ಕೊಪ್ಪಲು, ಹರಿದಾಸ ಜಯಾನಂದ ಕುಮಾರ್‌ ಹೊಸದುರ್ಗ, ಉದ್ಯಮಿ ಲೋಕೇಶ್‌ ಮೀಪುಗುರಿ, ಕೆ.ಸಿ.ಎನ್‌. ಚಾನೆಲ್‌ ನಿದೇರ್ಶಕ ಪುರುಷೋತ್ತಮ ನಾೖಕ್‌, ಶ್ರೀರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್‌ ಕೋಟೆಕಣಿ, ರಘು ಮೀಪುಗುರಿ, ರತ್ನಾ ನಾಗೇಶ್‌ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೆ.ವಿ.ರಮಣ, ರಾಮಕೃಷ್ಣ ಮಯ್ಯ ಶಿರಿಬಾಗಿಲು, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಪಿ.ದಿವಾಕರ ಅಶೋಕನಗರ, ಎಂ.ಆರ್‌.ರಂಗರಾಮಯ್ಯ, ರತ್ನ ನಾಗೇಶ್‌, ಅರುಣ್‌ ಕುಮಾರ್‌ ಮೊದಲಾದವರಿಗೆ 2018 ನೇ ಸಾಲಿನ ವಿಶ್ವರಂಗ ಭೂಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸತ್ಯನಾರಾಯಣ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಂಗವಾಗಿ ಬೆಂಗಳೂರಿನ ವಿವಿಧ ರಂಗಭೂಮಿ ತಂಡಗಳಿಂದ ಬೆಳ್ಳಕ್ಕಿ ಹಿಂಡು ಬೆದರ್ಯಾವೊ, ಜಲಗಾರ, ಸಂಗ್ಯಾಬಾಳ್ಯ ನಾಟಕ ಪ್ರದರ್ಶನಗೊಂಡಿತು. ಭರವಸೆಯ ಯುವ ಕಲಾವಿದೆ ತಲಶ್ಯೆರಿಯ ದರ್ಶನಾ ಮತ್ತು ಮಡಿಕೇರಿಯ ಮಂಜುಭಾರ್ಗವಿ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

ಟಾಪ್ ನ್ಯೂಸ್

1-H-R

Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bus Fare Hike: ಕರ್ನಾಟಕಕ್ಕೆ ಕೇರಳ ಸರಕಾರಿ ಬಸ್‌ ಟಿಕೆಟ್‌ ದರ ಏರಿಕೆ

Bus Fare Hike: ಕರ್ನಾಟಕಕ್ಕೆ ಕೇರಳ ಸರಕಾರಿ ಬಸ್‌ ಟಿಕೆಟ್‌ ದರ ಏರಿಕೆ

cr

ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Untitled-1

Kasaragod Crime News: ನೇಣು ಬಿಗಿದು ಯುವಕ ಆತ್ಮಹ*ತ್ಯೆ

1-katte

ಕಟ್ಟೆಮಾಡು ದೇಗುಲ ವಸ್ತ್ರ ಸಂಹಿತೆೆ ವಿವಾದ: ಆಡಳಿತ ಮಂಡಳಿ ಸಭೆಯಲ್ಲಿ ಮೂಡದ ಒಮ್ಮತ‌

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

3

Kinnigoli: ಈಗಲೇ ಕುಡಿಯುವ ನೀರಿನ ಸಮಸ್ಯೆ; ಒಂದೇ ವಾರದಲ್ಲಿ ನಾಲ್ಕು ಬೋರ್‌ವೆಲ್‌

1-H-R

Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!

2(1

Sullia: ಜಾಕ್‌ವೆಲ್‌ ಹೂಳು ತೆಗೆದ ಬಳಿಕ ನಾಗಪಟ್ಟಣ ಡ್ಯಾಂಗೆ ಗೇಟ್‌

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

1(1

Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.