ಕೇರಳ: ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಳ


Team Udayavani, Feb 22, 2017, 4:01 PM IST

herasment.jpg

ಕೇರಳ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಮಹಿಳೆಯರ ವಿರುದ್ಧ ಅಪರಾಧ ಕೃತ್ಯಗಳು ಹೆಚ್ಚುತ್ತಲೇ ಇವೆ. 2007ನಲ್ಲಿ 9,381 ಅಪರಾಧ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 14,061 ಕ್ಕೇರಿದೆ. 2009ರ ವರೆಗೆ 10 ಸಾವಿರಕ್ಕಿಂತ ಕೆಳಗೆ ಅಪರಾಧ ಕೃತ್ಯಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಆ ಬಳಿಕ ಹತ್ತು ಸಾವಿರಕ್ಕಿಂತ ಹೆಚ್ಚು ಅಪರಾಧ ಕೃತ್ಯಗಳು ನಡೆದಿದ್ದು, ಪೊಲೀಸರು ಈ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಹಲವು ಪ್ರಕರಣಗಳು ಪೊಲೀಸ್‌ ಠಾಣೆ ಮೆಟ್ಟಲೇರದೆ ಮುಚ್ಚಿ ಹೋದವುಗಳು ಸಾಕಷ್ಟಿದೆ. ಆ ವರದಿ ಈ ಅಂಕಿಅಂಶದಲ್ಲಿಲ್ಲ. 2010 ರಲ್ಲಿ 10,781 ಅಪರಾಧ ಕೃತ್ಯಗಳಿಗೇರಿತು. 2011 ರಲ್ಲಿ ಮಹಿಳೆಯರ ವಿರುದ್ಧ ನಡೆದ ಅಪರಾಧ ಕೃತ್ಯಗಳು ಕಡಿಮೆಯಲ್ಲ. 13,279 ಕ್ಕೇರಿತು. ಆ ಬಳಿಕ ಮುಂದಿನ ಮೂರು ವರ್ಷಗಳಲ್ಲಿ ಗಮನಾರ್ಹ ಕುಸಿತ ಕಂಡು ಬಂದಿಲ್ಲ. ಆದರೆ 2015 ರಲ್ಲಿ ಕೇಸುಗಳ ಸಂಖ್ಯೆ 12,383 ಕ್ಕೆ ಕುಸಿದರೂ, 2016 ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅಪರಾಧ ಕೃತ್ಯಗಳಲ್ಲಿ ಹೆಚ್ಚಳ ಉಂಟಾಗಿದೆ.

ಕಾಸರಗೋಡು: ಹೇಳಿಕೇಳಿ ಕೇರಳ “ದೇವರ ನಾಡು'(!). ಸಂಪೂರ್ಣ ಸಾಕ್ಷರತೆಯ ಕೋಡು ಬೇರೆ. ಬುದ್ಧಿಜೀವಿಗಳೆಂಬ (!) ಹಣೆಪಟ್ಟಿ. ಹೀಗೆ ಹಲವು ವಿಶೇಷಣಗಳಿಂದ ಕೂಡಿದ ಕೇರಳದ  ಅರಾಜಕತೆ ನೋಡಿದರೆ ಈ ರಾಜ್ಯಕ್ಕೆ ಈ ವಿಶೇಷಣಗಳು ಎಷ್ಟು ಸೂಕ್ತ  ಎಂಬ ಪ್ರಶ್ನೆ ಹಲವರನ್ನು ಕಾಡಿದ್ದರೆ ಅಚ್ಚರಿಯಿಲ್ಲ.

ಕೇರಳದಾದ್ಯಂತ ದಿನಾ ನಡೆಯುತ್ತಿರುವ ಹಿಂಸೆ, ಕೊಲೆ ಪ್ರಕರಣಗಳ ಬೆನ್ನಲ್ಲೇ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಇವುಗಳೆಲ್ಲ ಕೇರಳವನ್ನು ಎಲ್ಲಿಗೆ ಕೊಂಡೊಯುತ್ತಿವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಗಳು. ದಿನಗಳ ಹಿಂದೆ ಚಿತ್ರ ನಟಿಯ ಮೇಲಿನ ಅತ್ಯಾಚಾರ ಕೇರಳೀಯರಿಗೆ ದೊಡ್ಡ “ಶಾಕ್‌’ ನೀಡಿದೆ. ಕೇರಳದಲ್ಲಿ ವರ್ಷದಿಂದ ವರ್ಷಕ್ಕೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇದ್ದು ಕೇರಳೀಯರು ತಲೆತಗ್ಗಿಸುವಂತಾಗಿದೆ. ಪ್ರತೀ ವರ್ಷ ಕೇರಳದಲ್ಲಿ ಅತ್ಯಾಚಾರಕ್ಕೆ ಬಲಿಯಾಗುತ್ತಿರುವವರ ಮಹಿಳೆಯರ ಸಂಖ್ಯೆ ಬರೋಬರಿ 978. ಲೈಂಗಿಕ ಕಿರುಕುಳಕ್ಕೆ ತುತ್ತಾಗುವವರ ಸಂಖ್ಯೆ ಕಡಿಮೆಯಲ್ಲ. 3,510 ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಈಡಾಗುತ್ತಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ಮಹಿಳೆಯರ ಮೇಲೆ ಅತೀ ಹೆಚ್ಚು ಲೈಂಗಿಕ ದೌರ್ಜನ್ಯ ನಡೆದ ವರ್ಷ 2016. 1,644 ಅತ್ಯಾಚಾರ ಪ್ರಕರಣ ಮತ್ತು 4,035 ಲೈಂಗಿಕ ಕಿರುಕುಳ ನಡೆದು ದಾಖಲೆಯನ್ನೇ(!) ಸೃಷ್ಟಿಸಿದೆ. ರಾಜ್ಯದ ರಾಜಧಾನಿ ತಿರುವನಂತಪುರದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯ ಮಹಿಳೆಯರು ದೌರ್ಜನಕ್ಕೆ ತುತ್ತಾಗುತ್ತಿದ್ದಾರೆ.

ತಿರುವನಂತಪುರದಲ್ಲಿ ಪ್ರತೀ ವರ್ಷ ಸರಾಸರಿ 136.5 ಮಂದಿ ಮಹಿಳೆಯರು ಅತ್ಯಾಚಾರಕ್ಕೆ ಗುರಿಯಾಗುತ್ತಿದ್ದಾರೆ. ಕೈಗಾರಿಕಾ ಕೇಂದ್ರವಾದ ಎರ್ನಾಕುಳಂನಲ್ಲಿ ಸರಾಸರಿ 91.3 ಮಂದಿ ಮಹಿಳೆಯರು ಪ್ರತೀ ವರ್ಷ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ.

ತಿರುವನಂತಪುರ ಜಿಲ್ಲೆಯಲ್ಲಿ ಕಳೆದ ವರ್ಷ 204 ಮಂದಿ ಮಹಿಳೆಯರು ಅತ್ಯಾಚಾರಕ್ಕೀಡಾಗಿದ್ದಾರೆ. ಕೊಲ್ಲಂ ಜಿಲ್ಲೆಯಲ್ಲಿ ಈ ಸಂಖ್ಯೆ 148. ಎರ್ನಾಕುಲಂ ಜಿಲ್ಲೆಯಲ್ಲಿ 148, ತೃಶ್ಶೂರು ಜಿಲ್ಲೆಯಲ್ಲಿ 174, ಕಲ್ಲಿಕೋಟೆ ಜಿಲ್ಲೆಯಲ್ಲಿ 113 ಎಂಬಂತೆ ಮಹಿಳೆಯರು ಅತ್ಯಾಚಾರಕ್ಕೆ ತುತ್ತಾಗಿದ್ದಾರೆ. ಅತ್ಯಂತ ಹೆಚ್ಚಿನ ದೌರ್ಜನ್ಯ ನಡೆದ ಜಿಲ್ಲೆ ತಿರುವನಂತಪುರ. ಈ ಜಿಲ್ಲೆಯಲ್ಲಿ 797 ದೌರ್ಜನ್ಯ ಪ್ರಕರಣ ನಡೆದಿವೆ. ಕೊಲ್ಲಂ ಜಿಲ್ಲೆಯಲ್ಲಿ 439 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ದಿನಗಳ ಹಿಂದೆಯಷ್ಟೇ ಮಲಯಾಳ ಚಿತ್ರರಂಗದ ಹಾಗು ಕನ್ನಡ ಚಿತ್ರರಂಗದ ಖ್ಯಾತ ನಟಿಯಾಗಿರುವ ಭಾವನ ಅವರನ್ನು ಅಪಹರಿಸಿ ಕಿರುಕುಳ ನೀಡಿದ ಘಟನೆ ಕೇರಳದ ಜನತೆಗೆ ಶಾಕ್‌ ನೀಡಿದ್ದು, ಮಾತ್ರವಲ್ಲ ಈ ಘಟನೆ ಚಾನೆಲ್‌ಗ‌ಳಲ್ಲಿ ಭಾರೀ ಚರ್ಚೆಗೆ ಆಸ್ಪದವಾಗಿದೆ. ಚಿತ್ರರಂಗ ಈ ಘಟನೆಯನ್ನು ತೀವ್ರವಾಗಿ ಖಂಡಿಸಿತು. ಇಂತಹ ಘಟನೆ ಪ್ರಥಮ ಅಲ್ಲ ಎಂಬ ಮಾತೂ ಕೇಳಿ ಬಂತು. ಆದರೆ ಹಿಂದೆ ನಡೆದ ಇಂತಹ ಹಲವು ಘಟನೆಗಳು ಪೊಲೀಸ್‌ ಠಾಣೆ ಮೆಟ್ಟಲೇರದೆ ಮುಚ್ಚಿ ಹೋದವು ಇವೆ. ಇಂತಹ ಘಟನೆ ಪೊಲೀಸ್‌ ಠಾಣೆಗೇರಿದರೆ ವ್ಯಾಪಕ ಸುದ್ದಿಯಾಗುವುದಲ್ಲದೇ ಮಾನಹಾನಿಗೂ ಕಾರಣವಾಗುತ್ತದೆ. ಈ ಕಾರಣದಿಂದ ಇಂತಹ ಘಟನೆಗಳು ಪರಸ್ಪರ ಮಾತುಕತೆಯಿಂದ ನಿವಾರಿಸಿಕೊಂಡವೂ ಇವೆ.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Suside-Boy

Kasaragodu: ರೈಲಿನಿಂದ ಬಿದ್ದು ವ್ಯಕ್ತಿ ಸಾವು

14

Kasaragod: ಕೇರಳದಿಂದ ಕರ್ನಾಟಕಕ್ಕೆ ಪಲಾಯನಗೊಂಡಿದ್ದ ನಕ್ಸಲರು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.