ಕೇರಳ: ಐಸಿಸ್ ಪರ ವಾಟ್ಸಪ್ ಗ್ರೂಪ್
Team Udayavani, May 8, 2017, 10:08 AM IST
ಕಾಸರಗೋಡು: ಉಗ್ರಗಾಮಿ ಸಂಘಟನೆ ಐಸಿಸ್ ಪರ ವಾಟ್ಸಪ್ ಗ್ರೂಪ್‌ಗೆ ಯುವಕನೋರ್ವನನ್ನು ಅನುಮತಿಯಿಲ್ಲದೆ ಸೇರಿಸಿದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಈ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ನೀಡಿದ್ದು, ಅದರಂತೆ ಎನ್‌ಐಎ ತಂಡವು ಕಾಸರಗೋಡಿನಲ್ಲಿ ತನಿಖೆ ಕೈಗೊಂಡಿದೆ. ಆಣಂಗೂರು ಸಮೀಪದ ಕೊಲ್ಲಂಪಾಡಿಯ ಯುವಕನ ಒಪ್ಪಿಗೆ ಇಲ್ಲದೆ ಆತನ ಹೆಸರನ್ನು ಐಸಿಸ್ ಪರ ವಾಟ್ಸಪ್ ಗ್ರೂಪ್‌ಗೆ ಸೇರಿಸಲಾಗಿದೆ.
ಆ ಬಳಿಕ ಆತನ ವಾಟ್ಸಪ್‌ಗೆ ಮೆಸೇಜ್-ಟು ಕೇರಳ ಗ್ರೂಪ್‌ನಲ್ಲಿ ನಿಮ್ಮನ್ನು ಸದಸ್ಯರನ್ನಾಗಿ ಮಾಡಲಾಗಿದೆ ಎಂಬ ಸಂದೇಶ ಬಂದಿತ್ತು. ಕೇರಳದ ವಿವಿಧ ಪ್ರದೇಶಗಳಿಂದಾಗಿ 200ಕ್ಕೂ ಹೆಚ್ಚು ಮಂದಿಯನ್ನು ಇದೇ ಗ್ರೂಪ್‌ಗೆ ಸದಸ್ಯರನ್ನಾಗಿ ಸೇರಿಸಲಾಗಿದೆ. ಅವರಲ್ಲಿ ನೀವೂ ಸೇರಿದ್ದೀರಿ, ನಮ್ಮೊಂದಿಗೆ ಸಹಕರಿಸಿ ಎಂದು ಯುವಕನಿಗೆ ಸಂದೇಶದಲ್ಲಿ ತಿಳಿಸಲಾಗಿತ್ತು. ಆ ಸಂದೇಶ ದೊರಕಿದ ಕೂಡಲೇ ಗ್ರೂಪ್‌ನ ಉದ್ದೇಶವೇನು ಎಂದು ಯುವಕ ಸಂದೇಶದ ಮೂಲಕ ಪ್ರಶ್ನಿಸಿದಾಗ ಅದಕ್ಕೆ ಇಸ್ಲಾಮಿಕ್ ಸ್ಟೇಟನ್ನು ಬೆಂಬಲಿಸುವ ಸಂದೇಶ ಎಂದು ಪ್ರತ್ಯುತ್ತರವಾಗಿ ತನಗೆ ಲಭಿಸಿತ್ತೆಂದು ಯುವಕ ಪೊಲೀಸರಿಗೆ ತಿಳಿಸಿದ್ದಾನೆ.
ಪೊಲೀಸರು ತನಿಖೆ ನಡೆಸಿದಾಗ ಆ ಸಂದೇಶ ಅಫ್ಘಾನಿಸ್ಥಾನದ ಫೋನ್ ನಂಬರ್‌ನಿಂದ ಬಂದಿರುವುದಾಗಿ ತಿಳಿದುಬಂದಿದೆ. ಕೇರಳ ರಾಜ್ಯ ಸ್ಪೆಷಲ್ ಬ್ರಾಂಚ್ ಪೊಲೀಸರು ಪರಿಶೀಲಿಸಿದ ಅನಂತರ ಎನ್‌ಐಎಗೆ ಮಾಹಿತಿ ನೀಡಲಾಯಿತು. ಅದರಂತೆ ಎನ್‌ಐಎ ಕಾಸರಗೋಡಿನಲ್ಲಿ ತನಿಖೆ ಆರಂಭಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.