ವರ್ಕಾಡಿ ಬಂಟರ ಸಂಘದಿಂದ “ಕೆಸರ್‌ಡೊಂಜಿ ದಿನ’
Team Udayavani, Aug 2, 2017, 6:35 AM IST
ವರ್ಕಾಡಿ: ಬಂಟರ ಸಂಘ ವರ್ಕಾಡಿ ವಲಯ ಮತ್ತು ಗ್ರಾಮ ಸಮಿತಿ ಇವುಗಳ ಜಂಟಿ ಆಶ್ರಯದಲ್ಲಿ ಕೆಸರ್‌ಡೊಂಜಿ ದಿನ ಕಾರ್ಯಕ್ರಮವು ರವಿವಾರ ಕೊಡ್ಲಮೊಗರು ಶ್ರೀ ಮಲರಾಯ ದೈವಸ್ಥಾನದ ಕೆಡ್ಡಸಗದ್ದೆಯಲ್ಲಿ ವಿಜೃಂಭಣೆ ಯಿಂದ ಜರಗಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ದೀಪಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಸಮಾಜದ ಅಭಿವೃದ್ಧಿಯಲ್ಲಿ ಬಂಟರ ಸಂಘಗಳು ಇನ್ನಷ್ಟು ಕೆಲಸ ಮಾಡಬೇಕು. ಸಾಮಾಜಿಕ ಜವಾಬ್ದಾರಿ ಎಂಬುದು ಅತ್ಯಂತ ಶ್ರೇಷ್ಠ ಹಾಗೂ ಕಷ್ಟದ ಕಾರ್ಯವಾದರೂ ಅದನ್ನು ಛಲದಿಂದ ಕೈಗೆತ್ತಿಕೊಂಡು ಮುನ್ನಡೆಯಬೇಕು. ಪ್ರತಿಯೋರ್ವರೂ ಸಮಾಜಕ್ಕೆ ತನ್ನ ಕೈಲಾದ ಕೊಡುಗೆಗಳನ್ನು ಸಲ್ಲಿಸಿದಾಗ ಇಡೀ ದೇಶದ ಅಭಿವೃದ್ಧಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಚಿಂತಿಸಬೇಕಾಗಿದೆ. ಯಾವುದೇ ಸಂಘಟನೆಯು ಬಲಿಷ್ಠವಾಗಿದ್ದಲ್ಲಿ ಉತ್ತಮ, ಉದಾತ್ತವಾದ ಚಿಂತನೆಗಳು ಸಮ್ಮಿಳಿತಗೊಂಡು ಊರಿನ ಪ್ರಗತಿಗೆ ದಾರಿಮಾಡಿಕೊಡುತ್ತದೆ ಎಂದು ಶ್ರೀ ಮಾತಾನಂದಮಯಿ ನುಡಿದರು.
ಬಂಟರ ಸಂಘದ ವರ್ಕಾಡಿ ವಲಯದ ಅಧ್ಯಕ್ಷೆ ಪುಷ್ಪಾವತಿ ಪುಷ್ಪರಾಜ್ ಶೆಟ್ಟಿ ಬಾಕ್ರಬೈಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಂಟರ ಸಂಘದ ವರ್ಕಾಡಿ ವಲಯದ ಗೌರವಾಧ್ಯಕ್ಷ ಶಂಕರಮೋಹನ ಪೂಂಜ ಅಡೇಕಳ, ದೇವಪ್ಪ ಶೆಟ್ಟಿ ಚಾವಡಿಬೈಲು, ಮಂಜೇಶ್ವರ ಫಿರ್ಕಾ ಅಧ್ಯಕ್ಷ ದಾಸಣ್ಣ ಆಳ್ವ ಕುಳೂರುಬೀಡು, ಆಸರೆ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷೆ ಡಾ| ಆಶಾಜ್ಯೋತಿ ರೈ ಮಂಗಳೂರು, ವಿಠಲದಾಸ್ ಭಂಡಾರಿ, ಪಾತೂರು ಶ್ರೀ ಸೂಯೇìಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಬಿ. ರಮಾನಾಥ ಶೆಟ್ಟಿ ಬಾಕ್ರಬೈಲು, ಕುಶಲನಾಥ ಶೆಟ್ಟಿ ಕೋಣಿಬೈಲು, ಧಾರ್ಮಿಕ ಹಾಗೂ ಸಾಮಾಜಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು, ದೈವದ ಪಾತ್ರಿ ಶೇಖರ ಶೆಟ್ಟಿ ಕೊಡ್ಲಮೊಗರು, ಬಿ.ತ್ಯಾಂಪಣ್ಣ ರೈ ಪಾದೂರು, ಚಲನಚಿತ್ರ ನಟ ರೂಪೇಶ್ ಶೆಟ್ಟಿ, ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯೆ ಗೀತಾ ವಿ.ಸಾಮಾನಿ, ರಾಮಣ್ಣ ಶೆಟ್ಟಿ ಅಲಬೆಗುತ್ತು ಮೊದಲಾದವರು ಶುಭಹಾರೈಸಿದರು.
ಬಂಟರ ಸಂಘದ ವರ್ಕಾಡಿ ವಲಯದ ಕಾರ್ಯದರ್ಶಿ ಶೇಖರ ಶೆಟ್ಟಿ ಪಿಲಿಕುಂಡ ಸ್ವಾಗತಿಸಿ, ರವಿಚಂದ್ರ ಶೆಟ್ಟಿ ಅರಿಬೈಲು ವಂದಿಸಿದರು. ದೇವಿಪ್ರಸಾದ್ ಶೆಟ್ಟಿ ಬೆಜ್ಜ ಕಾರ್ಯಕ್ರಮ ನಿರೂಪಿಸಿದರು.
ಕೆಸರುಗದ್ದೆಯಲ್ಲಿ ನಲಿದಾಡಿ ಸಂಭ್ರಮ: ಸಭಾ ಕಾರ್ಯ ಕ್ರಮದ ಬಳಿಕ ದೊಂದಿ ಉರಿಸುವ ಮೂಲಕ ಕೆಸರಿನ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ಈ ಮೂಲಕ ನೆರೆದಿದ್ದ ಬಹುತೇಕ ಸ್ಪರ್ಧಾಳುಗಳು ಕೆಸರುಗದ್ದೆಯಲ್ಲಿ ನಲಿದಾಡಿ ಸಂಭ್ರಮಿಸಿದರು. ಅಲ್ಲದೆ ಮನದ ಒತ್ತಡಗಳನ್ನು, ಬದುಕಿನ ಜಂಜಾಟಗಳನ್ನು ಮರೆತು ಎಲ್ಲರೊಂದಿಗೆ ಬೆರೆತು ಖುಷಿಪಟ್ಟರು.
ವಾಲಿಬಾಲ್, ಹಗ್ಗ ಜಗ್ಗಾಟ ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಮಧ್ಯಾಹ್ನ ಆಟಿಯ ವಿಶೇಷ ಭೋಜನ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಆ.6ರಂದು ವರ್ಕಾಡಿ ಸುಂಕದಕಟ್ಟೆ ಕೋಳ್ಯೂರು ಆಡಿಟೋರಿಯಂನಲ್ಲಿ ಜರಗುವ ಆಟಿದ ಕೂಟದ ಸಮಾರೋಪ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.