ಮಕ್ಕಳಲ್ಲಿ  ಧಾರ್ಮಿಕ ಚಿಂತನೆಗಳ ಅರಿವು ಮೂಡಿಸಬೇಕು : ಒಡಿಯೂರು ಶ್ರೀ


Team Udayavani, Apr 26, 2018, 6:20 AM IST

sahj.jpg

ಕಾಸರಗೋಡು: ವಿಶ್ವಕ್ಕೇ ಮಾದರಿಯಾದ ಸನಾತನ ಧರ್ಮ, ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ಚಿಂತನೆಗಳ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಮಹಾಸಂಸ್ಥಾನಮ್‌ನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.ಅವರು ಅಮೈ ಕೃಷ್ಣನಗರದ ಶ್ರೀ ಕೃಷ್ಣ ಭಜನ ಮಂದಿರದಲ್ಲಿ ನೂತನವಾಗಿ ನಿರ್ಮಿಸಿದ ಶಾಶ್ವತ ಚಪ್ಪರ ಸಮರ್ಪಣೆ ಹಾಗೂ 17ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಪಾಶ್ಚಾತ್ಯ ಅನುಕರಣೆಯನ್ನು ನಿಲ್ಲಿಸಿ ಭಾರತೀಯ ಧಾರ್ಮಿಕ ಚಿಂತನೆಯನ್ನು ಮತ್ತು ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ಭಗವಂತನ ಆರಾಧನೆಯ ಮೂಲಕ ಬದುಕು ಸಾರ್ಥಕತೆಯನ್ನು ಪಡೆಯುತ್ತದೆ. ಜೀವನ ಧರ್ಮವನ್ನು ಕಲಿಸುವ ಹಿಂದೂ ಧಾರ್ಮಿಕ ಚಿಂತನೆ, ಮೌಲ್ಯಗಳನ್ನು ಮಕ್ಕಳಿಗೆ ಹೇಳಿ ಕೊಡುವ ಮೂಲಕ ಧರ್ಮ ರಕ್ಷಣೆ ಸಾಧ್ಯವಾಗುತ್ತದೆ ಎಂದ ಸ್ವಾಮೀಜಿ ಅವರು ಹಿಂದೂ ಧರ್ಮ ಅವಿನಾಶಿನಿ. ದೇವರೊಂದಿಗೆ ಅನುಸಂಧಾನ ಮಾಡಿಕೊಳ್ಳಲು ಹೃದಯಲ್ಲಿ ಭಗವಂತನನ್ನು ಪ್ರತಿಷ್ಠಾಪಿಸಿಕೊಳ್ಳಬೇಕು. ಕಲಿಯುಗದಲ್ಲಿ ಭಗವಂತನನ್ನು ಒಲಿಸಿಕೊಳ್ಳಲು ಭಜನೆ ಸಾಕು ಎಂದರು.

ಉತ್ತರ ಭಗವಂತನಲ್ಲಿದೆ: ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮುದ್ರಣಗೊಳ್ಳುತ್ತಿರುವ ಗ್ರಂಥವೊಂದಿದ್ದರೆ ಅದು ಭಗವದ್ಗೀತೆ ಎಂದು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಹೇಳಿದರು. ಎಲ್ಲ ಸಮಸ್ಯೆಗಳಿಗೆ ಉತ್ತರ ಭಗವಂತನಲ್ಲಿದೆ. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ದುರಂತಗಳು ಎದುರಾಗುವುದಿಲ್ಲ ಎಂದ ಅವರು ಸನಾತನ ಚಿಂತನೆಗಳು ಜೀವನವನ್ನು ಸುಗಮವಾಗಿ ಸಾಗಿಸಲು ಅಡಿಪಾಯವಾಗಿವೆ. ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಸನಾತನ ಧರ್ಮದ ಅರಿವು ಮೂಡಿಸುವ ಮೂಲಕ ಸತಜೆಗಳನ್ನಾಗಿ ಬೆಳೆಸಲು ಸಾಧ್ಯವಾಗುತ್ತದೆ. ಅದಕ್ಕೆ ಇಂತಹ ಮಂದಿರಗಳು ಕೇಂದ್ರಗಳಾಗಬೇಕು. ಧಾರ್ಮಿಕಮೌಲ್ಯ
ಚಿಂತನೆಗಳನ್ನು ಮಕ್ಕಳಿಗೆ ತಿಳಿ ಹೇಳಬೇಕು ಎಂದರು.

ಧಾರ್ಮಿಕ ಸಭೆಯಲ್ಲಿ ಮಂದಿರದ ಅಧ್ಯಕ್ಷ ದೇವಪ್ಪ ಅಧ್ಯಕ್ಷತೆ ವಹಿಹಿಸಿದರು. ಆರ್‌ಎಸ್‌ಎಸ್‌ ಕರ್ನಾಟಕ ಪ್ರಾಂತ್ಯ ಮಾಧ್ಯಮ ವಿಭಾಗ ಪ್ರಮುಖ್‌ ರಾಜೇಶ್‌ ಪದ್ಮಾರ್‌ ಧಾರ್ಮಿಕ ಭಾಷಣ ಮಾಡಿದರು.ವಾರ್ಡ್‌ ಕೌನ್ಸಿಲರ್‌ ಸುಜಿತ್‌ ಕುಮಾರ್‌, ವಿ.ಹಿಂ.ಪ.ಮಾತೃ ಮಂಡಳಿಯ ಜಲಜಾಕ್ಷಿ ಟೀಚರ್‌,ವಿಟ್ಲ ಮೈತ್ರೇಯಿ ಗುರುಕುಲದ ಜಗನ್ನಾಥ ಕಾಸರಗೋಡು ಮೊದಲಾದವರು ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜ ಸೇವಕ ಬಿ.ಕೃಷ್ಣ ಕೊರಕ್ಕೋಡು, ಭಜನ ವಿದ್ವಾನ್‌ ಸುರೇಶ್‌ ಬಲ್ಲಾಳ್‌ಬಾಗ್‌ ಮಂಗಳೂರು ಮತ್ತು ಕಲ್ಯಾಣಿ ಅವರನ್ನು ಗೌರವಿಸಲಾಯಿತು. ಭಜನಾ ಮಂದಿರದ ಕಾರ್ಯದರ್ಶಿ ಸುರೇಶ್‌ ಅವರು ಸ್ವಾಗತಿಸಿದರು. ರಾಜೇಶ್‌ ಕಾರ್ಯಕ್ರಮ ನಿರೂಪಿಸಿದರು. ಗುಣಪಾಲ ಅವರು ವರದಿ ಮಂಡಿಸಿ, ವಂದಿಸಿದರು. ಕಾರ್ಯಕ್ರಮಕ್ಕೆ ಮುನ್ನ ಒಡಿಯೂರು ಶ್ರೀ ಗುರುದೇವದತ್ತ ಮಹಾಸಂಸ್ಥಾನಮ್‌ನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ನಡೆಯಿತು. 

ಎ. 25ರಂದು ಬೆಳಗ್ಗೆ ಗಣಪತಿ ಹೋಮ, ಶ್ರೀ ಕೃಷ್ಣ ಅಷ್ಟೋತ್ತರ ಶತ ನಾಮಾರ್ಚನೆ, ಶ್ರೀ ಸತ್ಯನಾರಾಯಣ ಪೂಜಾ ಕಲಶ ಪ್ರತಿಷ್ಠಾಪನೆ, ಮಧ್ಯಾಹ್ನ ಪ್ರತಿಷ್ಠಾ ಪೂಜೆ, ಸುಗಮ ಸಂಗೀತ,  ಅನ್ನಸಂತರ್ಪಣೆ ನಡೆಯಿತು. ಸಂಜೆ ದೀಪ ಪ್ರತಿಷ್ಠೆ, ಏಕಾಹ ಭಜನೆ ಆರಂಭಗೊಂಡಿತು. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಜರಗಿತು.

ಟಾಪ್ ನ್ಯೂಸ್

Pramod-Muthalik

Waqf Issue: ವಕ್ಫ್ ವಿರುದ್ಧ ಹಿಂದೂಗಳು ಒಗ್ಗೂಡಲಿ: ಪ್ರಮೋದ್‌ ಮುತಾಲಿಕ್‌

arrested

Baba Siddique ಹ*ತ್ಯೆ: ಶೂಟರ್‌ ಸೇರಿ ಮೂವರ ಬಂಧನ

pinarayi

Jamaat ಬೆಂಬಲ ಹೇಳಿಕೆ: ಪಿಣರಾಯಿ, ಪ್ರಿಯಾಂಕಾ ವಾದ್ರಾ ಮಧ್ಯೆ ವಾಕ್ಸಮರ!

Sheik Hasina

Bangladesh; ಶೇಖ್‌ ಹಸೀನಾ ಪಕ್ಷದ ಬೆಂಬಲಿಗರನ್ನು ಬಂಧಿಸಿದ ಸೇನೆ

Manipal: ಶಿಕ್ಷಣದ ಜತೆ ಆರೋಗ್ಯ ಸುಧಾರಣೆಗೂ ಆದ್ಯತೆ

Manipal: ಶಿಕ್ಷಣದ ಜತೆ ಆರೋಗ್ಯ ಸುಧಾರಣೆಗೂ ಆದ್ಯತೆ

Kukke Shree Subrahmanya ಕ್ಷೇತ್ರದಲ್ಲಿ ಭಕ್ತ ಸಂದಣಿ

Kukke Shree Subrahmanya ಕ್ಷೇತ್ರದಲ್ಲಿ ಭಕ್ತ ಸಂದಣಿ

Mangaluru Airport: 7,637 ಪ್ರಯಾಣಿಕರನ್ನು ನಿರ್ವಹಿಸಿ ಹೊಸ ದಾಖಲೆ

Mangaluru Airport: 7,637 ಪ್ರಯಾಣಿಕರನ್ನು ನಿರ್ವಹಿಸಿ ಹೊಸ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17

Kasargod: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಮತ್ತೆ ಕಲ್ಲು ತೂರಾಟ

16

Kasargod: ಪಟಾಕಿ ದುರಂತ; ಸಾವಿನ ಸಂಖ್ಯೆ 5ಕ್ಕೆ

POlice

Kasaragod: ರೈಲುಗಾಡಿಗೆ ಕಲ್ಲು ತೂರಾಟ; ಪ್ರಯಾಣಿಕನಿಗೆ ಗಾಯ

10-kodagu

Promotion: ಕೊಡಗಿನ ಮಧು ಮೊಣ್ಣಪ್ಪ ಸುಬೇದಾರ್‌ ಮೇಜರ್‌

Untitled-2

Kasaragod: ಸ್ತನ್ಯಪಾನ ಗಂಟಲಲ್ಲಿ ಸಿಲುಕಿ ಮಗುವಿನ ಸಾವು

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

Pramod-Muthalik

Waqf Issue: ವಕ್ಫ್ ವಿರುದ್ಧ ಹಿಂದೂಗಳು ಒಗ್ಗೂಡಲಿ: ಪ್ರಮೋದ್‌ ಮುತಾಲಿಕ್‌

Vimana 2

Passenger ನಿಂದಲೇ ವಿಮಾನಕ್ಕೆ ಹುಸಿ ಬಾಂಬ್‌ ಬೆದರಿಕೆ ಕರೆ!

AANE 2

Madhya Pradesh; ಮರಿ ಆನೆ ಸಾ*ವು: ಒಟ್ಟು 11ಕ್ಕೆ ಏರಿಕೆ

sudha-murthy

Air travel ಅಗ್ಗದ ಟಿಕೆಟ್‌ ಖರೀದಿ: ಸುಧಾಮೂರ್ತಿ

arrested

Baba Siddique ಹ*ತ್ಯೆ: ಶೂಟರ್‌ ಸೇರಿ ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.