ಭಾರೀ ಪ್ರತಿಭಟನೆಯ ಮಧ್ಯೆ ಷರತ್ತಿನೊಂದಿಗೆ ಮಲಯಾಳಿ ಅಧ್ಯಾಪಕರ ನೇಮಕ


Team Udayavani, Jan 15, 2019, 6:51 AM IST

15-january-8.jpg

ಕುಂಬಳೆ : ಪೈವಳಿಕೆ ಕಾಯರ್‌ಕಟ್ಟೆ ಮತ್ತು ಬೇಕೂರು ಸರಕಾರಿ ಸರಕಾರಿ ಹೈಸ್ಕೂಲ್‌ಗ‌ಳಿಗೆ ಫಿಸಿಕಲ್‌ ಸಯನ್ಸ್‌ ಕನ್ನಡ ವಿಭಾಗದ ತರಗತಿ ಗಳಿಗೆ ಪಿ.ಎಸ್‌.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ಮಲಯಾಳಿ ಅಧ್ಯಾಪಕರನ್ನು ಭಾರೀ ಪ್ರತಿಭಟನೆಯ ಮಧ್ಯೆ ಕೆಲವೊಂದು ಷರತ್ತಿನೊಂದಿಗೆ ನೇಮಕಗೊಳಿಸ ಲಾಯಿತು.ಮಂಜೇಶ್ವರ ಪೊಲೀಸರ ಬೆಂಗಾವಲಿ ನೊಂದಿಗೆ ನಿಯುಕ್ತ ಅಧ್ಯಾಪಕರು ಆಗಮಿಸಿ ದಾಗ ಉಭಯ ಶಾಲೆಯ ಗೇಟಿನ ಬಳಿ ಜಮಾಯಿಸಿದ್ದ ಶಾಲೆಯ ವಿದ್ಯಾರ್ಥಿಗಳು ಮತ್ತು ರಕ್ಷಕರು ಇವರನ್ನು ತಡೆದರು.

ಪರಿಸ್ಥಿತಿ ಬಿಗಡಾಯಿಸುವುದನ್ನು ಅರಿತ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಪ್ರತ್ಯೇಕ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಹಿಡಿದರು.ಕಾಸರಗೋಡು ಜಿ. ಪಂ. ಸದಸ್ಯರಾದ ಹರ್ಷಾದ್‌, ಫರೀದಾ ಝಕೀರ್‌, ಪುಷ್ಪಾ ಅಮೆಕ್ಕಳ, ಮಂಗಲ್ಪಾಡಿ ಗ್ರಾ.ಪಂ. ಸದಸ್ಯ ಉಮೇಶ್‌ ಶೆಟ್ಟಿ, ಬೇಕೂರು ಶಾಲಾ ಮುಖ್ಯಶಿಕ್ಷಕ ಉದಯಶಂಕರ್‌, ಪಿ.ಟಿ.ಎ. ಅಧ್ಯಕ್ಷ ಅಬ್ದುಲ್‌ ರಹಿಮಾನ್‌ ಸಹಾಯಕ ನಿರ್ದೇಶಕ ಡಾ| ಗಿರೀಶ್‌ ಚೋಳಯಿಲ್‌, ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್‌, ಮಂಜೇಶ್ವರ ಎಸ್‌.ಐ. ಶಾಜಿ ಎಂ.ಪಿ., ಕಾಸರಗೋಡು ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಭಾಸ್ಕರ ಕಾಸರಗೋಡು ಮುಂತಾದವರ ಸಮ್ಮುಖದಲ್ಲಿ ಮಾತುಕತೆ ನಡೆಯಿತು.

ಇದರಂತೆ ಪಿ.ಎಸ್‌.ಸಿ.ಯಿಂದ ನೇಮಕ ಗೊಂಡ ತಿರುವನಂತಪುರ ನಿವಾಸಿಗಳಾದ ನಿಭಾ ಆರ್‌.ಆರ್‌. ಮತ್ತು ಸುಹರಿ ಎಸ್‌. ಅವರನ್ನು ಶಾಲೆಯಲ್ಲಿ ಅಧ್ಯಾಪಕರಾಗಿ ನೇಮಕಗೊಳಿಸಿದ ಬಳಿಕ ದೀರ್ಘ‌ ರಜೆಯಲ್ಲಿ ತೆರಳುವಂತೆ ತೀರ್ಮಾನಿಸ ಲಾಯಿತು. ಈ ಅಧ್ಯಾಪಕರು ಮುಂದೆ ಚೆನ್ನಾಗಿ ಕನ್ನಡ ಅಭ್ಯಾಸ ಮಾಡಿದ ಬಳಿಕವಷ್ಟೇ ಮತ್ತೆ ತರಗತಿಗೆ ಮರಳುವ ಕರಾರಿನೊಂದಿಗೆ ವಾತಾವರಣ ತಿಳಿಗೊಂಡು ಕನ್ನಡಿಗರ ಹೋರಾಟಕ್ಕೆ ತತ್ಕಾಲ ಜಯದೊರೆಯುವಂತಾಯಿತು.

ಪೈವಳಿಕೆ ಶಾಲೆಯಲ್ಲಿ ನಡೆದ ಮಾತು ಕತೆಯ ಸಭೆಯಲ್ಲಿ ಜಿ.ಪಂ.ಸದಸ್ಯರು, ಡಿ.ಡಿ.ಇ, ಡಿ.ಇ.ಒ, ಎಸ್‌.ಐ., ಶಾಲಾ ಮುಖ್ಯ ಶಿಕ್ಷಕ ವೆಂಕಟ್ರಮಣ ನಾಯಕ್‌ ಪಿ.ಟಿ.ಎ. ಅಧ್ಯಕ್ಷ ಪುರುಶೋತ್ತಮ ಬಾಯಿಕಟ್ಟೆ , ಉಪಾಧ್ಯಕ್ಷ ಅಜೀಜ್‌ ಕಳಾಯಿ, ಗ್ರಾ. ಪಂ. ಮಾಜಿ ಅಧ್ಯಕ್ಷರಾದ ಅಚ್ಯುತ ಮತ್ತು ಎಂ. ಚಂದ್ರ ನಾಯಕ್‌, ಮಾಜಿ ಗ್ರಾ. ಪಂ. ಸದಸ್ಯ ಝಡ್‌.ಎ. ಕಯ್ನಾರ್‌, ಹುಸೈನ್‌ ಮಾಸ್ಟರ್‌ ಉಪಸ್ಥಿತರಿದ್ದರು.

ಪೆರಡಾಲ ಶಾಲೆಯಲ್ಲಿ ನಡೆದ ಪ್ರತಿಭಟನೆಗೆ ಸಜ್ಜಾಗಿ ಜಿ.ಪಂ.ಸದಸ್ಯ ನ್ಯಾಯವಾದಿ ಶ್ರೀಕಾಂತ್‌, ಬದಿಯಡ್ಕ ಗ್ರಾ. ಪಂ. ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್, ಬ್ಲಾ. ಪಂ. ಸದಸ್ಯ ಅವಿನಾಶ್‌, ವಿವಿಧ ಪಕ್ಷಗಳ ನಾಯಕರಾದ ಮಾಹಿನ್‌ ಕೇಳ್ಳೋಟ್, ಶ್ಯಾಮಪ್ರಸಾದ್‌ ಮಾನ್ಯ, ಚಂದ್ರಹಾಸ ಶೆಟ್ಟಿ, ಸುಂದರ ಬಾರಡ್ಕ,ಪಿಟಿಎ ಅಧ್ಯಕ್ಷರ ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ರಕ್ಷಕರು ಆಗಮಿಸಿದ್ದರು. ಆದರೆ ಈ ಶಾಲೆಗೆ ಪ್ರತಿಭಟನೆಯ ಮಾಹಿತಿ ತಿಳಿದ ನಿಯುಕ್ತ ಅಧ್ಯಾಪಕ ಆಗಮಿಸಲೇ ಇಲ್ಲ.

ನಿಯುಕ್ತ ಕನ್ನಡ ಬಲ್ಲ ಮಲೆಯಾಳಿ ಅಧ್ಯಾಪಕರನ್ನು ಶಿಕ್ಷಣ ಅಧಿಕಾರಿಗಳು ಮತ್ತು ಚುನಾಯಿತ ಸದಸ್ಯರು ಕನ್ನಡದ ಕುರಿತು ಪ್ರಶ್ನಿಸಿದಾಗ ಇವರಿಗೆ ಕನ್ನಡ ಏನೂ ಅರಿಯದೆಂಬುದಾಗಿ ಮನದಟ್ಟಾ ಯಿತು. ಪಿ.ಎಸ್‌.ಸಿ. ಪರೀಕ್ಷೆಯಲ್ಲಿ ಕನ್ನಡ ಬಲ್ಲವರೆಂದು ಸುಳ್ಳು ಮಾಹಿತಿ ನೀಡಿ ಉದ್ಯೋಗ ಗಿಟ್ಟಿಸಿರುವುದಾಗಿ ದೃಢವಾಯಿತು. ಇದನ್ನು ಒಪ್ಪಿಕೊಂಡ ಇವರು ಮುಂದಿನ ದಿನಗಳಲ್ಲಿ ಕನ್ನಡ ಅಭ್ಯಾಸ ಮಾಡಿ ಶಾಲೆಗೆ ಬರುವುದಾಗಿ ಬರಹ ಮೂಲಕ ತಿಳಿಸಿದರು.

ಮಕ್ಕಳ ದಿಟ್ಟ ನಿಲುವು
ಕನ್ನಡ ಬಲ್ಲೆನೆಂಬುದಾಗಿ ಹಿಂಬಾಗಿಲ ಮೂಲಕ ನೇಮಕಗೊಂಡ ಈ ಅಧ್ಯಾಪಕರನ್ನು ತರಗತಿಯ ಪಾಠಕ್ಕೆ ಬರಲು ಬಿಡ ಲಾರೆವು.ಅಧ್ಯಾಪಕರಿಗೆ ಉದ್ಯೋಗ ಪ್ರಶ್ನೆಯಾದರೆ ಇದು ನಮ್ಮ ಭವಿಷ್ಯದ ಪ್ರಶ್ನೆ.ಕನ್ನಡ ತಿಳಿಯದ ನಾವು ಪರೀಕ್ಷೆ ಯ ಮುಂದಿನ ದಿನಗಳಲ್ಲಿ ನಮಗೆ ಮಲಯಾಳಿ ಅಧ್ಯಾಪಕರು ಪಾಠ ಮಾಡಿದಲ್ಲಿ ಇದನ್ನು ಅರಗಿಸಲು ಕಷ್ಟ. ಆದುದರಿಂದ ಮುಂದೆ ನಾವು ಉಪವಾಸ ಪ್ರತಿಭಟನೆ ನಡೆಸಲೂ ಸಿದ್ಧವೆಂಬುದಾಗಿ ಉಭಯ ಶಾಲಾ ಮಕ್ಕಳ ಹೇಳಿಕೆಯಾಗಿತ್ತು. ಎರಡೂ ಶಾಲೆಗಳಲ್ಲಿ ಮಧ್ಯಾಹ್ನದ ತನಕ ಸುಡುಬಿಸಿಲಿನಲ್ಲಿ ಶಾಲೆಯ ಗೇಟಿನಲ್ಲಿ ಪ್ರತಿಭಟನೆ ನಡೆಸಿದರು.

ಸುಳಿಯದ ಕನ್ನಡ ಸಂಘಟನೆಗಳು
ಕಾಸರಗೋಡು ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಯವರನ್ನು ಬಿಟ್ಟರೆ ಯಾವುದೇ ಕನ್ನಡ ಸಂಘಟನೆಗಳ ನಾಯಕರು ಇತ್ತ ಸುಳಿಯದಿರುವುದು ಹಲವರ ಸಂಶಯಕ್ಕೆ ಎಡೆ ಮಾಡಿತು. ಕರ್ನಾಟಕ ಸರಕಾರದಿಂದ ಕೇವಲ ಸವಲತ್ತಿಗಾಗಿ ಕಾರ್ಯಕ್ರಮಗಳನ್ನು ನಡೆಸುವ ಕೆಲವು ಕನ್ನಡ ಸಂಘಟನೆಗಳ ನಾಯಕರೆನಿಸಿ ಕೊಳ್ಳುವವರು ಇಂತಹ ಕನ್ನಡದ ಜ್ವಲಂತ ಸಮಸ್ಯೆಗೆ ಸ್ಪಂದಿಸುತ್ತಿಲ್ಲವೆಂಬ ಆರೋಪಕ್ಕೆ ಕಾರಣವಾಯಿತು.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.