ಕುಂಬಳೆ ಪೊಲೀಸ್ ಠಾಣೆ: ತುಕ್ಕುಹಿಡಿಯುತ್ತಿರುವ ವಾಹನಗಳು
Team Udayavani, Jan 20, 2020, 5:16 AM IST
ಕುಂಬಳೆ: ಕುಂಬಳೆ ಪೊಲೀಸ್ ಠಾಣೆಯ ಹಿಂದೆ ಮುಂದೆ ಸುಮಾರು ನೂರಿನ್ನೂರಷ್ಟು ದೊಡ್ಡ ಸಣ್ಣ ವಾಹನಗಳು ಬೇಕಾ ಬಿಟ್ಟಿ ಬೀಡು ಬಿಟ್ಟಿವೆ. ಠಾಣೆಯ ಮುಂಭಾಗ ರಸ್ತೆಯ ಪಕ್ಕ, ರಾಜ್ಯ ಕುಡಿಯುವ ನೀರು ಸರಬರಾಜು ಕಚೇರಿ ಮುಂಭಾಗ, ಕುಂಬಳೆ ಗಾಂಧಿ ಮೈದಾನವಲ್ಲದೆ ಕುಂಬಳೆ ಬೆಡಿ ಸಿಡಿಸುವ ವಿಶಾಲ ಮೈದಾನದಲ್ಲಿ ವಾಹನಗಳಲ್ಲದೆ ಮರಳು ರಾಶಿ ಮತ್ತು ಜಲ್ಲಿ ರಾಶಿಗಳನ್ನು ಕಾಣಬಹುದು. ಕಣಿಪುರ ವಾರ್ಷಿಕ ಜಾತ್ರೆಗೆ ಮುನ್ನ ಇದನ್ನು ಒಂದೆರಡು ದಿನಗಳ ಮಟ್ಟಕ್ಕೆ ಬದಿಗೆ ಸರಿಸಲಾಗುವುದು. ಇಲ್ಲಿದ್ದ ವಾಹನಗಳನ್ನು ಒಂದರ ಮೇಲೆ ಒಂದರಂತೆ ಪೇರಿಸಲಾಗುವುದು. ಆದರೆ ಬೆಡಿ ಕಳೆದ ಬಳಿಕ ಇಲ್ಲಿ ಮತ್ತೆ ಮುಂಚಿನ ಸ್ಥಿತಿಗೆ ಮರಳುತ್ತದೆ.
ಆಕ್ರಮವಾಗಿ ಶರಾಬು, ಹೊಯಿಗೆ ಸಾಗಿಸಿದ ಮತ್ತು ಪರವಾನಿಗೆ ಇಲ್ಲದ ಅಪಘಾತಕ್ಕೊಳಗಾದ ವಾಹನಗಳನ್ನು ಮತ್ತು ಹೊಳೆಯಿಂದ ಮರಳು ಸಾಗಿಸಿದ ದೋಣಿಗಳನ್ನು ವಶಪಡಿಸಿ ಠಾಣೆಯ ಸುತ್ತ ಮುತ್ತ ಇರಿಸಲಾಗಿದೆ. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಏರುತ್ತಲೇ ಇರುವುದು.ಇದರಲ್ಲಿ ಕೆಲವು ವಾಹನಗಳ ಟಯರ್ ಮತ್ತು ಬಿಡಿ ಭಾಗಗಳು ಮಾಯವಾಗುವುದು.ಇನ್ನು ಕೆಲವು ಬೆಲೆ ಬಾಳುವ ವಾಹನಗಳು ತುಕ್ಕು ಹಿಡಿದು ಹಾಳಾಗುವುದು. ಇದು ಇಂದು ನಿನ್ನೆಯ ಕಥೆಯಲ್ಲ. ಪೊಲೀಸ್ ಠಾಣೆ ಆರಂಭವಾದಾಗಿನಿಂದಲೂ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳ ಆವರಣದೊಳಗೆ ಸುತ್ತಮುತ್ತ ವಾಹನಗಳ ಸಂತೆಯನ್ನು ಕಾಣಬಹುದು. ಈ ವಶಪಡಿಸಿಕೊಂಡ ವಾಹನಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ದಾಖಲಾಗಿರುವುದರಿಂದ ಕೇಸು ಆಮೆ ನಡಿಗೆಯ ಗತಿಯಲ್ಲಿ ಸಾಗುವುದರಿಂದ ವಾಹನಗಳು ಇನ್ನಷ್ಟು ಹಾಳಾಗಲು ಕಾರಣ ವಾಗುವುದು. ಆದುದರಿಂದ ಇದರಲ್ಲಿ ಬೆಲೆಬಾಳುವ ಕೆಲವು ಬಸ್ಸು ಲಾರಿಗಳ ಸಹಿತ ವಾಹನಗಳು ತುಕ್ಕು ಹಿಡಿದು ಮಣ್ಣು ಸೇರುತ್ತಿವೆ.ಹೆಚ್ಚಿನ ವಾಹನಗಳ ಟಯರುಗಳ ಗಾಳಿ ಹೋಗಿ ಜಗ್ಗಿ ಮಣ್ಣಿನೊಂದಿಗೆ ಲೀನವಾಗಲು ಕಾರಣವಾಗುತ್ತಿದೆ.
ವಶಪಡಿಸಿದ ವಾಹನಗಳನ್ನು ಕೇಸು ದಾಖಲಿಸಿದ ಬಳಿಕ ತತ್‌ಕ್ಷಣ ಮಾಲಕರಿಗೆ ಬಿಟ್ಟು ಕೊಡಲು ಕಾನೂನಿನ ತೊಡಕು ಇದ್ದ ಕಾರಣ ಈ ರೀತಿ ಠಾಣೆ ಪರಿಸರದಲ್ಲಿ ವಾಹನಗಳು ಕೊಳೆಯಲು ಕಾರಣವಾಗಿದೆ. ಇದರಿಂದ ಆದೆಷ್ಟೋ ರಾಷ್ಟ್ರೀಯ ನಷ್ಟಕ್ಕೆ ಕಾರಣವಾಗುವುದು. ಆದುದ ರಿಂದ ಕಾನೂನನ್ನು ಸಡಿಲಗೊಳಿಸಿ ಅಕ್ರಮ ಸಾಗಾಟದ ವಾಹನಗಳನ್ನು ತತ್‌ಕ್ಷಣ ಏಲಂ ಮಾಡಿ ಇದರ ಮೊತ್ತವನ್ನು ನ್ಯಾಯಾಲಯದ ವಶ ಇರಿಸಿ ಕೇಸು ಇತ್ಯರ್ಥವಾದ ಬಳಿಕ ಸಂಬಂಧಪಟ್ಟವರಿಗೆ ಹಸ್ತಾಂತರಿಸಿದಲ್ಲಿ ಅಥವಾ ಸರಕಾರಕ್ಕೆ ಪಾತಿಸಿದಲ್ಲಿ ಅದೆಷ್ಟೋ ಮೊತ್ತ ವ್ಯಯವಾಗುವುದನ್ನು ಮತ್ತು ವಾಹನಗಳು ಮಣ್ಣುಪಾಲಾಗುವುದನ್ನು ತಡೆಯಬಹುದು.
ಹಾಳಾದ ವಾಹನ ಕೊಂಡೊಯ್ಯಲು ನಿರಾಸಕ್ತಿ
ವಾಹನಗಳ ವಿರುದ್ಧ ನ್ಯಾಯಾ ಲಯದಲ್ಲಿ ದಾವೆ ಹಲವು ವರ್ಷಗಳ ತನಕ ಮುಂದುವರಿಯುವುದರಿಂದ ವಶಪಡಿಸಿದ ವಾಹನಗಳು ಹಾಳಾಗಲು ಕಾರಣವಾಗುವುದು. ದಾಖಲೆಗಳು ಸರಿ ಇಲ್ಲದೆ ಮತ್ತು ವಾಹನಗಳಿಗೆ ಬ್ಯಾಂಕ್ ಮತ್ತು ಇನ್ನಿತರ ಹಣಕಾಸು ಸಂಸ್ಥೆಗಳಲ್ಲಿ ಮಾಲಕರು ಸಾಲ ಪಾವತಿಸಲು ಬಾಕಿ ಇರುವುದರಿಂದ ಹೆಚ್ಚಿನ ವಾಹನ ಮಾಲಕರು ದಾವೆ ಮುಗಿದ ಬಳಿಕವೂ ವಾಹನಗಳನ್ನು ಒಯ್ಯಲು ಸಿದ್ಧರಾಗದ ಕಾರಣ ವಾಹನಗಳು ತುಕ್ಕು ಹಿಡಿದು ನಷ್ಟವಾಗಲು ಕಾರಣವಾಗಿದೆ. ಕೇಸು ಮುಗಿದ ವಾಹನಗಳನ್ನು ಗುಜಿರಿಗೆ ಒಯ್ಯಲೂ ಮಾಲಕರು ಮುಂದಾಗುವುದಿಲ್ಲ. ನ್ಯಾಯಾ ಲಯದ ಕಾಯಿದೆಯಲ್ಲಿ ಬದಲಾವಣೆ ಯಾದಲ್ಲಿ ರಾಷ್ಟ್ರೀಯ ನಷ್ಟವನ್ನು ತಡೆಯಬಹುದಾಗಿದೆ.
-ರಾಜೀವನ್ ವಳಪ್ಪು.
ಸ್ಟೇಶನ್ ಹೌಸ್ ಆಫೀಸರ್, ಕುಂಬಳೆ
-ಅಚ್ಯುತ ಚೇವಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.