ಕುಂಬಳೆ ಗ್ರಾಮ ಪಂಚಾಯತ್‌ಕಾರ್ಯ “ಲಯ’
Team Udayavani, Aug 3, 2017, 6:30 AM IST
ಕಾಸರಗೋಡು: ಅಚ್ಚಗನ್ನಡ ಪ್ರದೇಶವಾದ ಕಾಸರಗೋಡಿನಲ್ಲಿ ಒಂದೆಡೆ ಕನ್ನಡದ ಉಳಿವಿಗಾಗಿ ಹೋರಾಟ ನಡೆಯುತ್ತಿದ್ದರೆ, ಇನ್ನೊಂದೆಡೆ ಕನ್ನಡದ ನಿರ್ನಾಮ ಯತ್ನ ನಡೆಯುತ್ತಿದೆ. ಇದಕ್ಕೆ ಕುಂಬಳೆ ಗ್ರಾಮ ಪಂಚಾಯತ್‌ನ ನಾಮಫಲಕವೇ ಸಾಕ್ಷಿಯಾಗಿದೆ.
ಕುಂಬಳೆ ಗ್ರಾಮ ಪಂಚಾಯತ್ ಕಚೇರಿ ಕಟ್ಟಡದಲ್ಲಿ ಅಳವಡಿಸಿದ ನಾಮಫಲಕದಲ್ಲಿ ಕಾರ್ಯಾಲಯ ಬದಲಾಗಿ “ಕಾರ್ಯಲಯ’ ಎಂದು ದಾಖಲಿಸಲಾಗಿದೆ. ವಿವಿಧ ಅಗತ್ಯಗಳಿಗಾಗಿ ಪಂಚಾಯತ್ ಕಚೇರಿಗೆ ಬರುವವರು ಈ ನಾಮಫಲಕದತ್ತ ಕಣ್ಣು ಹಾಯಿಸಿದರೆ ಗಾಬರಿಗೊಳ್ಳುವುದಂತೂ ಖಂಡಿತ. ಯಾಕೆಂದರೆ “ಲಯ’ ಎಂದರೆ ನಾಶ ಎಂದರ್ಥವಾಗಿದೆ. ಇದನ್ನು ಎರಡು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ಮೊದಲನೆಯದಾಗಿ ಕುಂಬಳೆ ಗ್ರಾಮ ಪಂಚಾಯತ್ ಕಾರ್ಯಲಯ ವಾಗಿದೆಯೆಂದೂ, ಎರಡನೆಯದಾಗಿ ಪಂಚಾಯತ್‌ನಲ್ಲಿ ಸಾರ್ವಜನಿಕ ಕಾರ್ಯಗಳು ಕೂಡ “ಲಯ’ವೇ ಎಂದು ತಿಳಿಯದೆ ಗೊಂದಲ ಹುಟ್ಟಿಸುವುದು ಸಹಜ.
ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಲಭಿಸಬೇಕಾದ ಕಚೇರಿಯಲ್ಲಿ ವಿರುದ್ಧ ಅರ್ಥಕೊಡುವ ನಾಮಫಲಕಗಳನ್ನು ಅಳವಡಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಅದೇ ರೀತಿ ಇದೇ ನಾಮಫಲಕದಲ್ಲಿ ಸಭಾಂಗಣ ಎಂಬ ಪದ ಬಳಸುವ ಬದಲು ಕೋನ್ಫರೆನ್ಸ್ ಹಾಲ್ ಎಂದು ಬರೆಯಲಾಗಿದೆ.
ಕನ್ನಡದಲ್ಲಿ ಸರಿಯಾದ ಪದಗಳಿರುವಾಗ ಆಂಗ್ಲ ಪದವನ್ನೇ ನೇರವಾಗಿ ಕನ್ನಡದಲ್ಲಿ ಬರೆಯಲಾಗಿದೆ. ಆಂಗ್ಲ ಅಕ್ಷರ ಮಾಲೆಗಿಂತಲೂ ದುಪ್ಪಟ್ಟು ಅಕ್ಷರ ಮಾಲೆಯಿರುವ ಮಧುರವಾದ ಕನ್ನಡ ಭಾಷೆಯಲ್ಲಿ ಪದಗಳಿಗೇನೂ ಕೊರತೆಯಿಲ್ಲ. ಕನ್ನಡ ಪದಗಳಿಂದ ಕೂಡಿದ ನಾಮಫಲಕ ಬರೆಯಬೇಕೆಂಬ ಇಚ್ಛಾಶಕ್ತಿಯ ಕೊರತೆ ಕುಂಬಳೆ ಗ್ರಾಮ ಪಂಚಾಯತ್ ಅಧಿಕಾರಿಗಳಲ್ಲಿ ಕಾಣಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.