‘ಕುಂಟಂಗೇರಡ್ಕ ಸಾಧನೆ ಸಾರ್ಥಕ’
Team Udayavani, Jul 10, 2019, 5:23 AM IST
ಕುಂಬಳೆ: ಹಸಿರು ಇಂದು ನಮ್ಮ ಪರಿಸರದಿಂದ ಮಾಯವಾಗುತ್ತಿದೆ. ಕಾಂಕ್ರೀಟೀಕರಣಕ್ಕೆ ನಾವು ಮಾರುಹೋಗುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಹರಿತ ಕೇರಳ ಮಿಶನ್ ಹಸಿರು ತಾಣ ಎಂಬ ಹಸಿರು ಬೆಳೆಸಿ ಉಳಿಸುವ ಯೋಜನೆಯೊಂದಕ್ಕೆ ರೂಪು ನೀಡಿದೆ. ಇಂದು ಅದು ಕುಂಬಳೆ ಗ್ರಾಮ ಪಂಚಾಯತ್‌ನ ಕಿದೂರು ಕುಂಟಂಗೇರಡ್ಕದಲ್ಲಿ ಸಾರ್ಥಕವಾಗಿದೆ ಎಂದು ಹಸಿರು ತಾಣವನ್ನು ಉದ್ಘಾಟಿಸಿ ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುಂಡರೀಕಾಕ್ಷ ಹೇಳಿದರು.
ಕಿದೂರು ಪಕ್ಷಿಪ್ರೇಮಿ ತಂಡವು ಪಾಳು ಬಿದ್ದ ಸರಕಾರಿ ಭೂಮಿಯನ್ನು ಕಳೆದ ಮೂರು ವರ್ಷಗಳಿಂದ ಜೈವ ಬೇಲಿ ನಿರ್ಮಿಸಿ ಅಲ್ಲಿ ಸ್ಥಳೀಯ ಸಸ್ಯ ಸಂಪತ್ತನ್ನು ಸಂರಕ್ಷಿಸಿ ಬರುತ್ತಿತ್ತು. ಇದೀಗ ಅದೇ ಜಾಗವನ್ನೇ ಹಸಿರು ತಾಣವನ್ನಾಗಿ ಘೋಷಿಸಲಾಯಿತು. ಅಲ್ಲದೆ ಹೆಚ್ಚಿನ ಸಸ್ಯ ಪ್ರಭೇದಗಳನ್ನು ನೆಟ್ಟು ಬೆಳೆಸುವಲ್ಲಿ ಗ್ರಾಮೀಣ ಉದ್ಯೋಗ ಖಾತರಿಯ ಸದಸ್ಯರಿಗೆ ಜವಾಬ್ದಾರಿ ನೀಡಲಾಯಿತು.
ಗ್ರಾಮ ಪಂಚಾಯತ್ ಸದಸ್ಯರಾದ ಅರಣಾ ಮಂಜುನಾಥ ಆಳ್ವ ಅಧ್ಯಕ್ಷತೆ ವಹಿಸಿದರು.
ಹರಿತ ಕೇರಳ ಮಿಶನಿನ ಜಿಲ್ಲಾ ಸಂಯೋಜಕ ಅಭಿರಾಜ್, ಕುಂಬಳೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಜಯನ್, ಸಾಮಾಜಿಕ ಮುಂದಾಳು ಚಂದ್ರ ಕಾಜೂರು, ಚಂದ್ರಾವತಿ ಮಡ್ವ, ಕಿದೂರು ಪಕ್ಷಿ ಪ್ರೇಮಿ ತಂಡದ ಸದಸ್ಯರಾದ ರಾಜು ಕಿದೂರು, ಪ್ರದೀಪ್ ಕಿದೂರು, ರವಿಚಂದ್ರ ಕುಂಟಂಗೇರಡ್ಕ, ಸುಂದರ ಕೊಲ್ಲೂರು, ಜೋಯೆಲ್ ಕಿದೂರು ಮೊದಲಾದವರು ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ
ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ
India Cricket: ಸೀಮಿತ ಓವರ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಸ್ಟಾರ್ ಆಲ್ ರೌಂಡರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.