ಕಿತ್ತುಹೋದ ಕುಂಟಾರು-ಅತ್ತನಾಡಿ ರಸ್ತೆ; ದುರಸ್ತಿ ಮರೀಚಿಕೆ
Team Udayavani, Jun 27, 2018, 10:53 AM IST
ಮುಳ್ಳೇರಿಯ: ಕಾಸರಗೋಡು-ಸುಳ್ಯ ಪ್ರಧಾನ ರಸ್ತೆಗೆ ಸಂಪರ್ಕ ಕಲ್ಪಿಸುವ ಒಂದೂವರೆ ಕಿಲೋ ಮೀಟರ್ ಉದ್ದದ ಈ ರಸ್ತೆಯು ಹಲವು ವರ್ಷಗಳಿಂದ ಸಂಚಾರ ಸಮಸ್ಯೆಯನ್ನು ಎದುರಿಸುತ್ತಲೇ ಇದೆ. ಕಾರಡ್ಕ ಗ್ರಾಮ ಪಂಚಾಯಿತಿಗೆ ಸೇರಿದ ಕುಂಟಾರಿನಿಂದ ಅತ್ತನಾಡಿಗೆ ಸಾಗಲು ಅತೀ ನಿಕಟವಾದ ಈ ರಸ್ತೆಯ ಒಂದು ಕಿ.ಮೀ. ಭಾಗವನ್ನು ಡಾಮರೀಕರಣಗೊಳಿಸಿ ಹತ್ತು ವರ್ಷಗಳು ಕಳೆಯಿತು. ಪರಿಣಾಮವಾಗಿ ಬಹುಪಾಲು ರಸ್ತೆಯು ಹೊಂಡಮಯವಾಗಿ ವಾಹನಗಳು ಸಂಚರಿಸದ ಸ್ಥಿತಿ ಎದುರಾಗಿದೆ. ನಡುಬಯಲು ಪ್ರದೇಶದ ಮೂಲಕ ಹಾದು ಹೋಗುವ ಈ ರಸ್ತೆಯ ಭಾಗದಲ್ಲಿ ವಾಹನ ಚಾಲನೆಗೆ ಅಸಾಧ್ಯವಾಗುವ ರೀತಿಯಲ್ಲಿ ಕಿತ್ತುಹೋಗಿದೆ. ಇದರ ದುರಸ್ತಿಗಾಗಿ ಹಲವು ವರ್ಷಗಳಿಂದ ಒತ್ತಾಯಿಸಲಾಗುತ್ತಿದ್ದರೂ ದುರಸ್ತಿ ಮಾತ್ರ ಮರೀಚಿಕೆಯಾಗಿದೆ. ಈಗ ಈ ರಸ್ತೆಯಲ್ಲಿ ಓಡಾಡುವ
ವಾಹನಗಳಲ್ಲಿ ಬಹುಪಾಲು ಸುತ್ತುಬಳಸಿ ಸಂಚರಿಸಬೇಕಾಗುತ್ತಿವೆ.
ಇದೇ ರಸ್ತೆಯು ಉಯಿತ್ತಡ್ಕ ಪ್ರದೇಶದಲ್ಲಿ ಅರ್ಧ ಕಿಲೋ ಮೀಟರ್ ನಷ್ಟು ಭಾಗ ಬಹುಕಾಲದಿಂದ ಡಾಮರೀಕರಣಗೊಳ್ಳದೆ, ದುರಸ್ತಿಯೂ ಇಲ್ಲದೆ ನೆನೆಗುದಿಗೆ ಬಿದ್ದಿತ್ತು. ಸತತ ಒತ್ತಾಯದ ಪರಿಣಾಮವಾಗಿ ಸ್ಥಳೀಯರ ವಿರೋಧ ಹಾಗೂ ಒಪ್ಪಂದದ ಆಧಾರದಲ್ಲಿ 2015 ಮಾರ್ಚ್ ತಿಂಗಳಲ್ಲಿ ಕಾರಡ್ಕ ಗ್ರಾ. ಪಂ.ವತಿಯಿಂದ 2ಲಕ್ಷ ರೂ.ವೆಚ್ಚದಲ್ಲಿ ಅಗಲಗೊಳಿಸಲಾಯಿತು. ಹಾಗೆಯೇ ಎಂಎಲ್‌ಎ ನಿಯನ್ನುಉಪಯೋಗಿಸಿ ಡಾಮರೀಕಣಗೊಳಿಸಸಲಾಯಿತು. ಇದರಿಂದಾಗಿ ಈಗ ರಸ್ತೆಯಲ್ಲಿ ವಾಹನ ಸಂಚಾರ ಸುಗಮಗೊಂಡಿತು. ಆದರೆ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಸಮಸ್ಯೆಗಳು ಇಲ್ಲಿಯೂ ಮರುಕಳಿಸುತ್ತಿವೆ.
ಇನ್ನೊಂದು ದೊಡ್ಡ ಸಮಸ್ಯೆ ಎಂದರೆ ರಸ್ತೆ ದುರಸ್ತಿ ನಡೆದುದು ಮಾತ್ರವಲ್ಲದೆ ಚರಂಡಿ ವ್ಯವಸ್ಥೆ ಮಾಡಲೇ ಇಲ್ಲ! ಹೀಗಾಗಿ ಮುಂದಿನ ದಿನಗಳಲ್ಲಿ ಮಳೆಯು ಹೆಚ್ಚಾದಂತೆ ಈ ರಸ್ತೆ ಸಹಾ ಕಿತ್ತುಹೋದೀತು ಎಂಬ ಆತಂಕವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ. ಈ ರಸ್ತೆಯ ಮೂಲಕ ದಿನನಿತ್ಯ ನೂರಾರು ವಾಹನಗಳು, ಕಾಲ್ನಡಿಗೆಯ ಮೂಲಕ ಶಾಲಾ ವಿದ್ಯಾರ್ಥಿಗಳು, ಮಕ್ಕಳು, ಮಹಿಳೆಯರು ಮೊದಲಾದವರು ಸಾಗುತ್ತಾರೆ. ಆದರೆ ಇವೆಲ್ಲಕ್ಕೂ ದುರಸ್ತಿ ಇಲ್ಲದೆ ಹಾಗೆಯೇ ಉಳಿದ ಒಂದು ಕಿಲೋ ಮೀಟರ್ ರಸ್ತೆ ಅಡ್ಡಿಯಾಗಿದೆ.
ಚರಂಡಿ ನಿರ್ಮಾಣ
ಈ ರಸ್ತೆಯ ಹದಗೆಡಲು ಪ್ರಮುಖ ಕಾರಣ ಸರಿಯಾದ ಚರಂಡಿ ನಿರ್ಮಾಣ ನಡೆಸದಿರುವುದು. ಪರಿಣಾಮವಾಗಿ ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿಯುವ ಕಾರಣ ಬೇಗನೇ ರಸ್ತೆಯು ಕೆಟ್ಟು ಹೋಗುತ್ತಿದೆ. ರಸ್ತೆ ಕಾಮಗಾರಿ ನಡೆಸಿದವರು ಸಾಧಾರಣವಾಗಿ ಚರಂಡಿಯನ್ನು ನಿರ್ಮಿಸಬೇಕಿದ್ದರೂ ಅದನ್ನು ಕಡೆಗಣಿಸಿ ಜಾಗ ಖಾಲಿ ಮಾಡುವವರೇ ಹೆಚ್ಚು. ಇದರಿಂದ ರಸ್ತೆ ವರ್ಷಗಳಲ್ಲಿಯೇ ಹೊಂಡಾಗುಂಡಿಯಾಗುತ್ತಿದೆ.
ಈ ರಸ್ತೆಯು ನಂದ್ಯಾರ್ ಪದವು- ಪಾರಶಾಲಾ ಮಲೆನಾಡು ಹೆದ್ದಾರಿಯನ್ನು ಅತ್ತನಾಡಿಯಲ್ಲಿ ಸಂಪರ್ಕಿಸುವ ಕಾರಣ ಈ ರಸ್ತೆಗೆ ಹೆಚ್ಚಿನ ಪ್ರಾಧಾನ್ಯ ಇದೆ. ರಸ್ತೆಯ ಪ್ರಾಧಾನ್ಯವನ್ನು ಮನಗಂಡು ಕೂಡಲೇ ದುರಸ್ತಿಗೆ ಸಂಬಂಧಪಟ್ಟ ಅಧಿಕೃತರು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ರಸ್ತೆಯನ್ನು ಡಾಮರೀಕರಣಗೊಳಿಸಿ ಹತ್ತು ವರ್ಷ ಕಳೆದರೂ ಸಂಪೂರ್ಣ ಹದಗೆಟ್ಟಿ ಈ ರಸ್ತೆಯನ್ನು ದುರಸ್ತಿಗೊಳಿಸದಿರುವುದು ವಿಪರ್ಯಾಸ. ಈ ರಸ್ತೆಯಲ್ಲಿ ವಾಹನ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ದುರಸ್ತಿಗೆ ಗ್ರಾಮ ಪಂಚಾಯತ್ ಕೂಡಲೇ ಕ್ರಮ ಕೈಗೊಳ್ಳಬೇಕು.
-ದಿಲೀಪ ಕುಂಟಾರು,
ವಾಹನ ಚಾಲಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.