ಕುತ್ತಿಕೋಲ್ ಅಕ್ಷರ ಪ್ರಿಂಟರ್ಸ್ ಮಹಿಳೆಯರ ಯಶೋಗಾಥೆ
Team Udayavani, Jan 31, 2019, 1:00 AM IST
ಕಾಸರಗೋಡು: ಆತ್ಮವಿಶ್ವಾಸ ಸಹಿತ ಅಪಾರ ದುಡಿಮೆಯೊಂದಿಗೆ ಮಹಿಳೆ ಯರಿಗೆ ಸ್ವಾವಲಂಬಿ ಬದುಕು ನೀಡುವ ಮೂಲಕ ಕುತ್ತಿಕೋಲ್‌ನ ಅಕ್ಷರ ಪ್ರಿಂಟರ್ಸ್ ಸಂಸ್ಥೆ ನಾಡಿಗೆ ಮಾದರಿಯಾಗಿದೆ.
ನೆರೆಕೂಟಗಳ ಸಂಸ್ಥೆ: ಮಹಿಳೆಯರ ಸ್ವಸಹಾಯ ಸಂಘಗಳಾಗಿರುವ ನೆರೆಕೂಟ ಗಳ ಮೂಲಕ ಸದಸ್ಯೆಯರನ್ನು (ಒಂದು ನೆರೆಕೂಟದಿಂದ ತಲಾ ಹತ್ತು ಮಂದಿಯಂತೆ) ಆಯ್ಕೆ ಮಾಡಿ ಆರಂಭಿಸಲಾದ ಸಂಸ್ಥೆ ಆರೇ ವರ್ಷಗಳಲ್ಲಿ ಯಶೋಗಾಥೆ ರಚಿಸಿ ಇತರರಿಗೆ ಪ್ರೇರಣೆಯಾಗಿದೆ. ಹೆಚ್ಚುವರಿ ಶಿಕ್ಷಣಾರ್ಹತೆಯಿಲ್ಲದ, ಗ್ರಾಮೀಣ ಹೆಣ್ಣುಮಕ್ಕಳು ಸಮಾಜದಲ್ಲಿ ತಲೆಎತ್ತಿ ಬಾಳುವುದಕ್ಕೆ ಮತ್ತು ತಂತ್ರ ವಿಜ್ಞಾನ ಮೂಲಕ ಅನುಭವದ ಪಾಠ ಕಲಿಯುವುದಕ್ಕೆ ಈ ಸಂಸ್ಥೆ ಅನುವು ಮಾಡಿಕೊಟ್ಟಿದೆ. ಜತೆಗೆ ಉತ್ತಮ ಆದಾಯವನ್ನೂ ಒದಗಿಸುತ್ತಿದೆ.
ಕುಟುಂಬಶ್ರೀ ಬೆಂಬಲ: ಕುತ್ತಿಕೋಲ್ ಗ್ರಾಮ ಪಂಚಾಯತ್ ಆಡಳಿತೆ ಸಮಿತಿಯ ನೇತೃತ್ವದಲ್ಲಿ ಮಹಿಳೆಯರಿಗಾಗಿ ಸ್ವಂತ ಆದಾಯ ಕಂಡುಕೊಳ್ಳುವ ಉದ್ದೇಶ ದೊಂದಿಗೆ ಯೋಜನೆಯೊಂದನ್ನು ಜಾರಿ ಗೊಳಿಸಲು ನಿರ್ಧರಿಸಲಾಗಿತ್ತು. ಇದರ ಅಂಗವಾಗಿ ಅರ್ಜಿ ಆಹ್ವಾನಿಸಿ, ಸಂದರ್ಶನವನ್ನೂ ನಡೆಸಲಾಗಿತ್ತು. ಇದಕ್ಕೆ ಕುಟುಂಬಶ್ರೀಯ ಪೂರ್ಣ ಬೆಂಬಲವೂ ಲಭಿಸಿತ್ತು. ಆರಂಭದ ಹಂತದಲ್ಲಿ ಮುದ್ರಣಾಲಯಕ್ಕೆ ಬೇಕಾದ ಯಂತ್ರ ಸಹಿತ ಸಾಮಗ್ರಿಗಳನ್ನು ಕುತ್ತಿಕೋಲ್ ಗ್ರಾ. ಪಂ. ವತಿಯಿಂದಲೇ ಒದಗಿಸಲಾಗಿತ್ತು. ಅನಂತರ ಕುತ್ತಿಕೋಲ್ ಸೇವಾ ಸಹಕಾರಿ ಬ್ಯಾಂಕ್‌ನಿಂದ 5 ಲಕ್ಷ ರೂ. ಸಾಲ ಪಡೆದು ವ್ಯವಸ್ಥೆ ಮಾಡಲಾಗಿತ್ತು.
ಆರಂಭದ ಹಂತದಲ್ಲಿ 50 ಸಾವಿರ ರೂ.ನ ಕಾಯಕಗಳು ಈ ಮುದ್ರಣಾಲಯಕ್ಕೆ ಸಿಗುತ್ತಿದ್ದರೆ ಇಂದು ಲಕ್ಷಾಂತರ ರೂ.ನ ಕಾಯಕಗಳು ನಡೆಯುತ್ತಿವೆ. ಪ್ರತಿ ಸದಸ್ಯೆಗೆ 6 ಸಾವಿರ ರೂ.ಗೂ ಅಧಿಕ ವೇತನ ದೊರೆಯುತ್ತಿದೆ. ಸಂಸ್ಥೆಯ ಕಾಯಕದಲ್ಲಿ ತಮಗೆ ತೃಪ್ತಿಯಿದೆ ಎಂದು ಸಂಸ್ಥೆಯ ಸದಸ್ಯೆಯರು ಅಭಿಪ್ರಾಯಪಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.