ಸ್ಥಳೀಯಾಡಳಿತಗಳ ಅಭಿವೃದ್ಧಿಗೆ ತೊಡಕಾಗಿರುವ ನಿಧಿ ಕೊರತೆ
ಕೆಂದ್ರ, ರಾಜ್ಯಗಳ ಅನುದಾನ ಅವಲಂಬಿತ ಗ್ರಾಮ ಪಂಚಾಯತ್‌ಗಳು
Team Udayavani, Mar 29, 2019, 6:15 AM IST
ಕುಂಬಳೆ: ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 38 ಗ್ರಾಮ ಪಂಚಾಯತ್‌ಗಳಿವೆ. ಆದರೆ ಇದರಲ್ಲಿ ಗ್ರಾಮೀಣ ಪ್ರದೇಶಗಳ ಸ್ಥಳೀಯಾಡಳಿತಗಳಿಗೆ ಸ್ವಂತ ಆದಾಯವಿಲ್ಲದೆ ಅಭಿವೃದ್ಧಿಗೆ ಕೇಂದ್ರ ರಾಜ್ಯ ಸರಕಾರಗಳ ನಿಧಿಯನ್ನು ಅವಲಂಬಿಸಬೇಕಾಗಿದೆ.
ಮಂಜೇಶ್ವರ ತಾಲೂಕಿನ ಪೈವಳಿಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ ಪೈವಳಿಕೆ, ಬಾಯಾರು, ಚಿಪ್ಪಾರು, ಕಯ್ನಾರು ,ಕುಡಾಲುಮೇರ್ಕಳ ಎಂಬ 5 ಗ್ರಾಮಗಳನ್ನು ಹೊಂದಿರುವ ಗ್ರಾಮೀಣ ಪ್ರದೇಶವಾದ ಪೈವಳಿಕೆ ಗ್ರಾಮ ಪಂಚಾಯತ್ 72.5ಚ.ಕಿ.ಮಿ.ವಿಶಾಲ ವಿಸೀ¤ರ್ಣ ಹೊಂದಿದ್ದು ಒಟ್ಟು 19 ವಾರ್ಡುಗಳನ್ನು ಹೊಂದಿದೆ. ಪ್ರಸಿದ್ಧ ಪ್ರಾವಾಸಿ ಕೇಂದ್ರ ಪೊಸಡಿ ಗುಂಪೆ ಸಹಿತ ಗುಡ್ಡ ಬೆಟ್ಟಗಳ ಸಹಿತ ತೆಂಗು ಕಂಗು ಭತ್ತ ಬಾಳೆ ಇನ್ನಿತರ ಕೃಷಿ ಬೆಳೆಯುವ ಪ್ರದೇಶವಾಗಿದೆ.
ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 13 ಸಹಸ್ರ ಮನೆ ಮತ್ತು ಇತರ ಅಂಗಡಿ ಮುಂಗಟ್ಟು ಕಟ್ಟಡಗಳಿದ್ದು ಸುಮಾರು 35 ಸಹಸ್ರದಷ್ಟು ಜನಸಂಖ್ಯೆಯನ್ನು ಹೊಂದಿದೆ.ಇದರಲ್ಲಿ 6 ಸಹಸ್ರ ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೊಳಪಟ್ಟಿರುವರು.ಸರಕಾರಿ ಮತ್ತು ಅನುದಾನಿತ 20 ವಿದ್ಯಾಲಯಗಳು, ಬಾಯಾರಿನಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ,ಪೈವಳಿಕೆಯಲ್ಲಿ ಆಯುರ್ವೇದ, ಚೇವಾರಿನಲ್ಲಿ ಹೋಮಿಯೋ ಆಸ್ಪತ್ರೆಗಳಿವೆ.
ಚೇವಾರು,ಬಾಯಾರು,ಬಾಯಿಕಟ್ಟೆ,ಕುರುಡಪದವು ಎಂಬಲ್ಲಿ ಸಾರ್ವಜನಿಕ ಕುಟುಂಬ ಕ್ಷೇಮ ಆರೋಗ್ಯ ಕೇಂದ್ರಗಳಿವೆ.ಎಲ್ಲಾ ವಾರ್ಡುಗಳಲ್ಲೂ ಅಂಗನವಾಡಿಗಳು ಕಾರ್ಯಾಚರಿಸುತ್ತಿವೆ. ಪಂಚಾಯತ್ ವಿಶಾಲ ಭೂಪ್ರದೇಶವನ್ನು ಹೊಂದಿದ್ದರೂ ಜನಸಂಖ್ಯೆ ವಿರಳವಾಗಿದ್ದು ಅಭಿವೃದ್ಧಿಗೆ ಆದಾಯ ಸಾಲದಾಗಿದೆ. ಕಟ್ಟಡ ತೆರಿಗೆಯ ವರಮಾನ ಕಮ್ಮಿಯಾಗಿದ್ದು ಕೇಂದ್ರ ರಾಜ್ಯ ಸರಕಾರಗಳ ನಿಧಿಯನೇ° ಅವಲಂಬಿಸಿ ಅಭಿವೃದ್ಧಿ ಕಾಮಗಾರಿ ನಡೆಸಬೇಕಾಗಿದೆ.
ಕುಂಠಿತವಾಗುತ್ತಿರುವ ಭತ್ತದ ಕೃಷಿ
ಪೈವಳಿಕೆ ಬಯಲು,ಕುಡಾಲು ಬಯಲು,ಕುರುಡಪದವು ಕುರಿಯ ಬೈಲು,ಕನಿಯಾಲ,ಬಾಯಾರು,ಸಜಂಕಿಲ , ಚಿಪ್ಪಾರು, ಚೇರಾಲು, ಮೇರ್ಕಳೆಗಳಲ್ಲಿ ಭತ್ತದ ಕೃಷಿ ಪ್ರಧಾನವಾಗಿದ್ದರೂ ಆಳುಗಳ ಕೊರತೆ ಹಂದಿ ನವಿಲುಗಳ ಕಾಟದಿಂದ ಭತ್ತದ ಬೇಸಾಯ ಕುಂಟಿತಗೊಂಡಿದೆ.
ಆದುದರಿಂದ ಭತ್ತದ ಗದ್ದೆಗಳಲ್ಲಿ ಅಡಕೆ,ತೆಂಗು,ರಬ್ಬರ್ ನಾಣ್ಯಬೆಳೆಗಳು ಆಕ್ರಮಿಸಿದೆ.ಗ್ರಾಮೀಣ ಪ್ರದೇಶಗಳಿಗೆ ನೂತನ ರಸ್ತೆ ,ತೋಡುಗಳಗೆ ಸೇತುವೆ ನಿರ್ಮಾಣ,ಹಳೆಯ ರಸ್ತೆಗಳಿಗೆ ಡಾಮರೀಕರಣಕ್ಕೆ ನಿಧಿಯ ಕೊರತೆಯಿಂದ ಹೆಚ್ಚಿನ ಗ್ರಾಮೀಣ ಪ್ರದೇಶಗಳು ಹಿಂದುಳಿದಿವೆ.
ಸಮಗ್ರಅಭಿವೃದ್ಧಿ
ಕಳೆದ ಮೂರೂವರೆ ವರ್ಷಗಳ ಆಡಳಿತ ಕಾಲದಲ್ಲಿ ಎಲ್ಲಾ ವಾರ್ಡುಗಳು ಸಾಕಷ್ಟು ಅಭಿವೃದ್ದಿ ಕಂಡಿದೆ.ಆಡಳಿತ ವಿಪಕ್ಷವೆನ್ನದೆ ಲಭ್ಯ ನಿಧಿಯನ್ನು ಸಕಾಲದಲ್ಲಿ ಸಮರ್ಪಕವಾಗಿ ಬಳಸಲಾಗಿದೆ.ಕೃಷಿಗೆ ಆದ್ಯತೆ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೂತನ ರಸ್ತೆ ನಿರ್ಮಿಸಲಾಗಿದೆ.ಕೆಟ್ಟು ಹೋಗಿದ್ದ ರಸ್ತೆಗಳಿಗೆ ಡಾಮರೀಕರಣ ಮಾಡಲಾಗಿದೆ. ಉದೋÂಗ ಖಾತರಿ ಯೋಜನೆಯಲ್ಲಿ ಕೆಲವೊಂದು ನೂತನ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸಲಾಗಿದೆ.ಜನಪರ ಯೋಜನೆಯಲ್ಲಿ ಮಹಿಳಾ ಸಬಲೀಕರಣ,ವಿಕಲಾಂಗ ಕೇÒಮ ಯೋಜನೆಯನ್ನು ಮತ್ತು ಹಿಂದುಳಿದ ಕಾಲನಿಗಳಲ್ಲಿ ಹಲವು ಆಭಿವೃದ್ಧಿ ಯೋಜನೆ ಗಳನ್ನು ನಿರ್ವಹಿಸಲಾಗಿದೆ.
ಕೊಮ್ಮಂಗಳ ಮತ್ತು ಅಟ್ಟೆಗೋಳಿ ಸ್ಮಶಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ವಿಶ್ವಬ್ಯಾಂಕ್ ನೀಡಿದ 40 ಲಕ್ಷ ರೂ.ನಲ್ಲಿ ಕೆಲವು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ.ಕೊಮ್ಮಂಗಳದಲ್ಲಿ 36 ಲಕ್ಷ ವೆಚ್ಚದಲ್ಲಿ ತ್ಯಾಜ್ಯ ಪ್ಲಾಸ್ಟಿಕ್ ಸಂಗಹ್ರ ಕೇಂದ್ರವನ್ನು ತೆರೆಯಲಾಗಿದೆ. ಇಲ್ಲಿ ಸಂಗ್ರಹವಾದ ಪ್ಲಾಸ್ಟಿಕ್‌ಗಳನ್ನು ಬೆರ್ಪಡಿಸಿ ಬ್ಲಾಕ್ ಪಂಚಾಯತ್ ಘಟಕಕ್ಕೆ ನೀಡಲಾಗುತ್ತಿದೆ.ಚೇವಾರು, ಸಜಂಕಿಲ, ಚಿಪ್ಪಾರು, ಕಳಾಯಿ ಎಂಬಲ್ಲಿ ಕಬ್ಬಿಣದ ಸಂಚಾರಿ ಶವದಹನ ಪೆಟ್ಟಿಗೆ ಸ್ಥಾಪಿಸಲಾಗಿದೆ. 2019-20 ರ ಜನಪರ ಯೋಜನೆಯಲ್ಲಿ ಒಟ್ಟು 72,36,800 ನಿಧಿಯ ವಿವಿಧ ಅಭಿವೃದ್ಧಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.ಇದರಲ್ಲಿ ಕೃಷಿ, ಜಲಸಂರಕ್ಷಣೆ, ಕುಡಿಯುವ ನೀರು, ಬಡವರಗೆ ಗೃಹ ನಿರ್ಮಾಣ, ಶ¾ಶಾನಗಳ ಅಭಿವೃದ್ಧಿ, ಮಾಲಿನ್ಯ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ ಎಂಬುದಾಗಿ ಆಡಳಿತ ಮಂಡಳಿಯ ಅಭಿಪ್ರಾಯವಾಗಿದೆ.
ವಿಪಕ್ಷ ಆರೋಪ
ಎಡಬಲರಂಗದ ಮೈತ್ರಿಕೂಟದ ಆಡಳಿತ ಸ್ವಜನ ಪಕ್ಷಪಾತ ನಡೆಸುತ್ತಿರುವುದಾಗಿ ಪ್ರಧಾನ ಪ್ರತಿಪಕ್ಷವಾದ ಬಿ.ಜೆ.ಪಿ.ಆರೋಪಿಸುತ್ತಿದೆ.ಅಭಿವೃದ್ಧಿಯಲ್ಲಿ ಬಿ.ಜೆ.ಪಿ.ಸದಸ್ಯರ ವಾರ್ಡಿಗೆ ಸಾಕಷ್ಟು ನಿಧಿ ಮೀಸಲಿರಿಸದೆ ತಾರತಮ್ಯ ಮಾಡುವುದಲ್ಲದೆ ವಿಪಕ್ಷ ವಾರ್ಡ್ ಪ್ರತಿನಿಧಿಗಳ ಬೇಡಿಕೆಗೆ ಆಡಳಿತ ಗೌರವ ನೀಡುವುದಿಲ್ಲ, ದಾರಿದೀಪ ಅಳವಡಿಕೆ,ಶವ ಪೆಟ್ಟಿಗೆ ಖರೀದಿಯಲ್ಲಿ ಮತ್ತು ಇನ್ನಿತರ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ.ಲೈಫ್ ಮನೆ ನಿರ್ಮಾಣ ಯೋಜನೆಯಲ್ಲಿ ಅರ್ಹರಿಗೆ ಅನ್ಯಾಯವಾಗಿದೆ.ಗ್ರಾಮ ಸಭೆಯನ್ನು ಕೇವಲ ಕಾಟಾಚಾರಕ್ಕೆ ನಡೆಸಲಾಗುವುದು.ಗ್ರಾಮ ಪಂಚಾಯತ್ ಸಭೆಯ ದಾಖಲೆಯನ್ನು ಸದಸ್ಯರಿಗೆ ಸಕಾಲದಲ್ಲಿ ನೀಡುತ್ತಿಲ್ಲವೆಂಬುದಾಗಿ ಬಿ.ಜೆ.ಪಿ.ಸದಸ್ಯರ ಆರೋಪವಾಗಿದೆ.
ಕಳಪೆ ಕಾಮಗಾರಿ, ಹರಿಯದ ಜಲನಿಧಿ
ಕಳೆದ 2010ರ ಗ್ರಾಮ ಪಂಚಾಯತ್ ಆಡಳಿತದ ಕಾಲದಲ್ಲಿ ಕೈಗೊಂಡ ಕೇಂದ್ರ ರಾಜ್ಯ ಸರಕಾರಗಳ ಮತ್ತು ಗ್ರಾ. ಪಂ. ಮತ್ತು ಫಲಾನುಭವಿಗಳ ಪಾಲಿನ 10,1470 ಕೋಟಿ ರೂ. ನಿಧಿಯ ಕುಡಿಯುವ ನೀರಿನ ಬೃಹತ್ ಜಲನಿಧಿ ಯೋಜನೆ ನಿಧಾನ ಗತಿಯಲ್ಲಿ ಸಾಗಿ ಇನ್ನೂ ಪೂರ್ತಿಗೊಳ್ಳದೆ ನೀರಿಗಾಗಿ ಜನರು ಪರದಾಡಬೇಕಾಗಿದೆ. ಪೊನ್ನೆಂಗಳ, ಪೆರ್ವಡಿ, ಪರಪ್ಪು,ಗಾಳಿಯಡ್ಕ,ಚಿಪ್ಪಾರುಪದವು, ಕುಡಾಲುಮೇರ್ಕಳ, ಬೆರಿಪದವು, ಕುರುಡಪದವು, ಪೈವಳಿಕೆ, ಪೆರ್ಮುದೆ, ಪೊಸಡಿಗುಂಪೆ, ಬದಿಯಾರು ಎಂಬ 12 ಕಡೆಗಳಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.ಇದರಲ್ಲಿ ಫಲಾನುಭವಿಗಳಿಂದ ಸುಮಾರು 5 ಸಾವಿರದಷ್ಟು ಹಣ ಸಂಗ್ರಹಿಸಲಾಗಿದೆ.ಆದರೆ ಕೆಲವೆಡೆ ಈ ಯೋಜನೆಯ ಕಳಪೆ ಕಾಮಗಾರಿ ನಡೆದು ಕೆಲಕಾಲ ನೀರು ಪೈಪ್ ಮೂಲಕ ಹರಿದರೂ ಬಳಿಕ ನೀರು ಸ್ಥಗಿತಗೊಂಡಿದೆ.ಮೂರು ಅಡಿ ಆಳದಲ್ಲಿ ಅಳವಡಿಸಬೇಕಿದ್ದ ಪಿವಿಸಿ ಪೈಪ್‌ಗ್ಳನ್ನು ಕೇವಲ ಒಂದಡಿ ಆಳದಲ್ಲಿ ಅಳವಡಿಸಿದ ಕಾರಣ ಇದು ಒಡೆದು ಹೋಗಿದೆ.ಕಳಪೆ ಕಬ್ಬಿಣದ ಪೈಪ್‌ಗ್ಳು ತುಕ್ಕು ಹಿಡಿದಿದೆ. ಪಿವಿಸಿ ಪೈಪ್‌ಗ್ಳು ಅಲ್ಲಲ್ಲಿ ಕೆಟ್ಟಿವೆ.ಹೆಚ್ಚಿನ ಕಡೆಗಳಲ್ಲಿ ಕಾಮಗಾರಿ ಇನ್ನೂ ಪೂರ್ತಿಗೊಳ್ಳದೆ ಅಪೂರ್ಣವಾಗಿದೆ.ಆದರೆ ಅಚ್ಚರಿಯೆಂದರೆ ಯೋಜನೆಯ ಬಹುಪಾಲು ಬಿಲ್ ಪಾವತಿಯಾಗಿದೆ.
ಈ ಯೋಜನೆಯಲ್ಲಿ ವ್ಯಾಪಕ ಅವ್ಯವಹಾರ ನಡೆದು ಹಗಲು ದರೋಡೆ ನಡೆದ ಹಗರಣ ವನ್ನು ತನಿಖೆ ನಡೆಸಬೇಕೆಂದು ಕೇಂದ್ರ ರಾಜ್ಯ ವಿಜಿಲೆನ್ಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಅಧಿಕಾರಿಗಳು ಭ್ರಷ್ಟಾಚಾರವನ್ನು ಬೆಂಬಲಿಸಿದ ಆರೋಪ ಬಲವಾಗಿದೆ. ಅಲ್ಲದೆ ಹಿಂದಿನ ಮತ್ತು ಇಂದಿನ ಸ್ಥಳೀಯಾಡಳಿತದ ಆಡಳಿತೆ ಸಾರ್ವಜನಿಕರ ದೂರುಗಳನ್ನು ಪರಿಗಣಿಸದೆ ಅವ್ಯವಹಾರಕ್ಕೆ ಪರೋಕ್ಷ ಬೆಂಬಲ ನೀಡಿದ ಆರೋಪವಿದೆ.
ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಗ್ರಾಮೀಣ ಪ್ರದೇಶಗಳ ಉದ್ಧಾರವಾಗಬೇಕಾಗಿದೆ ಎಂಬುದನ್ನು ಮನಗಂಡು ಸ್ಥಳೀಯಾಡಳಿತಗಳಿಗೆ ಕೇಂದ್ರ, ರಾಜ್ಯ ಸರಕಾರಗಳು ಇನ್ನಷ್ಟು ಹೆಚ್ಚಿನ ನಿಧಿಯನ್ನು ನೀಡಬೇಕಿದೆ. ಇಲ್ಲವಾದಲ್ಲಿ ಬಕಾಸು ರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ನಿಧಿ ಕೊರತೆಯಿಂದ ಹಳ್ಳಿಯ ಅಭಿವೃದ್ಧಿ ಕನಸು ಕೇವಲ ಮರೀಚಿಕೆಯಾಗಿ ಉಳಿಯಲಿದೆ.
ಜನಪರ ಯೋಜನೆ
ಕಳೆದ 1995 ರಿಂದ ರಾಜ್ಯದಲ್ಲಿ ಜಾರಿಗೆ ಬಂದಿರುವ ಜನಪರ ಯೋಜನೆಯ (ಜನಕೀಯ ಯೋಜನೆ)ಬಳಿಕ ಸ್ಥಳೀಯಾಡಳಿತೆಗಳಲ್ಲಿ ಅಭಿವೃದ್ಧಿಗೆ ಚಾಲನೆ ದೊರೆತಿದೆ.ಆದರೆ ಆರ್ಥಿಕ ಸಂಪನ್ಮೂಲ ಅಭಿವೃದ್ಧಿ,ನಿರ್ಮಾಣ, (ಇನ್‌ಫ್ರಾ ಸ್ಟ್ರಕ್ಚರ್) ಕೃಷಿ,ದಾರಿದ್ರÂ ನಿರ್ಮೂಲನೆ,ಮಹಿಳಾ ಸಬಲೀಕರಣ, ಅಂಗವಾಡಿಗಳಿಗೆ ಪೋಷಕಾಹಾರ, ವಿಕಲಾಂಗರಿಗೆ,ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ವಿಭಾಗಗಳಿಗೆ ಇದರಿಂದ ಪ್ರತೇÂಕ ನಿಧಿ ವಿಂಗಡಿಸಿ ಮೀಸಲಿರಿಸಬೇಕಾಗಿದೆ.ಇದರಿಂದಲಾಗಿ ಅಗತ್ಯದ ಕಾಮಗಾರಿಗಳನ್ನು ಕೈಗೊಳ್ಳಲು ತೊಡಕಾಗಿದೆ.ಇನ್ನೊಂದಡೆ ಯೋಜನೆಗಳ ನಿರ್ವಹಣೆಗೆ ತಾಂತ್ರಿಕ ಅನುಮತಿಯ ವಿಳಂಬವೂ ಅಡ್ಡಿಯಾಗಿದೆ.
ಕೆಸರು ನೀರಿನ ಸಮಸ್ಯೆ
ಚೆಕ್ ಡಾಮ್ ನಿರ್ಮಾಣದ ಸಂದರ್ಭ ದಲ್ಲಿ ಸುರಿದ ಮಣ್ಣು ಮತ್ತು ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿ ಸಂಗ್ರಹ ವಾಗುತ್ತಿರುವ ನೀರನ್ನು ಹಲವು ಮೋಟಾರುಗಳ ಮೂಲಕ ಕಟ್ಟಿ ನಿಂತ ನೀರಿಗೆ ಹಾಯಿಸುವ ಕಾರಣ ಈ ಪ್ರದೇಶ ದಲ್ಲಿರುವ ನೀರು ಸಂಪೂರ್ಣ ಕಲಕಿದೆ. ಹೀಗಾಗಿ ಕುಂಟಾರು ಕ್ಷೇತ್ರ ಮತ್ತು ಇಲ್ಲಿನ ಪರಿಸರ ನಿವಾಸಿಗಳು ಸಮಸ್ಯೆಯನ್ನು ಎದುರಿಸಬೇಕಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.