ದಿ| ಗಣಪತಿ ದಿವಾಣ , ಕಾಸರಗೋಡಿನ ಸಾಹಿತ್ಯ ಲೋಕ – 211


Team Udayavani, Aug 7, 2017, 6:35 AM IST

sahitya.jpg

ಕನ್ನಡ ಸಾಹಿತ್ಯ ಲೋಕಕ್ಕೆ – ಕಲಾರಂಗಕ್ಕೆ ಹಲವು ಅಮೂಲ್ಯ ರತ್ನಗಳನ್ನು ನೀಡಿದುದರಲ್ಲಿ ದಿವಾಣ ಮನೆತನವೂ ಒಂದಾಗಿದೆ. ತುಳುನಾಡಿನ ಒಂದು ಸಾಮಂತ ರಾಜರ ದಿವಾಣಗಿರಿಯ ವಂಶಸ್ಥರಾಗಿರುವುದರಿಂದ ಈ ಮನೆತನಕ್ಕೆ ದಿವಾಣ ಎಂದು ಹೆಸರಾಯಿತು. ಈ ಮನೆತನದಲ್ಲಿ ಹುಟ್ಟಿಬೆಳೆದು ಬಾನೆತ್ತರಕ್ಕೇರಿದ ಕವಿ-ಕಲಾವಿದರಲ್ಲಿ ದಿ| ಗಣಪತಿ ದಿವಾಣರ ಹೆಸರು ಮುಂಚೂಣಿಯಲ್ಲಿ ಬರುತ್ತದೆ.

ಬದುಕು ಬಾಲ್ಯ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೋಡಪದವು ದಿವಾಣ ಎಂಬಲ್ಲಿ ದಿ| ಭೀಮ ಭಟ್ಟ -ಪರಮೇಶ್ವರಿ ಆಮ್ಮ ದಂಪತಿಯ ಪುತ್ರನಾಗಿ 1929ರ ಅಕ್ಟೋಬರ 2ರಂದು ಗಣಪತಿ ದಿವಾಣರು  ಜನಿಸಿದರು. ಸಾವಿತ್ರಿ, ಲಕ್ಷ್ಮೀ, ಸರಸ್ವತಿ, ಶಾರದಾ ಅವರು ಸಹೋದರಿಯರು.

ದಿ| ಗಣಪತಿ ದಿವಾಣ ಅವರು ವಿಟ್ಲ ಕೋಡಪದವು ಶಾಲೆಯಲ್ಲಿ 8ನೇ ತರಗತಿ ತನಕ ವಿದ್ಯಾರ್ಜನೆ ಗೈದರು. ಕಾಸರಗೋಡಿನ ಕುಂಬಳೆ ಕಾವೇರಿಕ್ಕಾನ ಈಶ್ವರ ಭಟ್ಟರ ಆಶ್ರಯದಲ್ಲಿ ಗಡಿನಾಡು ನಲ್ಕ ಎಂಬಲ್ಲಿಗೆ ವಾಸ್ತವ್ಯ ಬದಲಾಯಿಸಿದ ದಿ| ದಿವಾಣರು ಅನಂತರ ಕಾಸರಗೋಡಿನ ನೀರ್ಚಾಲು ಸಮೀಪದ  ಬೇಳ ಎಂಬಲ್ಲಿಯೂ ಆ ಬಳಿಕ ಎಡನಾಡಿನಲ್ಲಿಯೂ ನೆಲೆಸಿದರು.

ಸಮಾಜ ಸೇವೆ: ಕಾಸರಗೋಡು ಕನ್ನಡ ಲೇಖಕರ ಸಂಘದ ಕಾರ್ಯಕಾರೀ ಸಮಿತಿ ಸದಸ್ಯರಾಗಿ, ಎಡನಾಡು ನಾಡಹಬ್ಬ ಸಂಚಾಲಕರಾಗಿ, ದರ್ಪಣ ಪತ್ರಿಕೆಯ ಗೌರವ ಸಂಪಾ ದಕರಾಗಿ ಹೀಗೆ ಹತ್ತು ಹಲವು ಸಂಸ್ಥೆಗಳಲ್ಲಿ ದುಡಿದಿರುವ ಅವರು ಎಡನಾಡು ಉಪ ಅಂಚೆ ಕಚೇರಿ ಮಾಸ್ತರರಾಗಿ, ಪುತ್ತಿಗೆ ಪಂಚಾಯತು ಸದಸ್ಯರಾಗಿ, ಮುಗು ಸೇವಾ ಸಹಕಾರಿ ಬ್ಯಾಂಕ್‌ ನಿರ್ದೇಶಕರಾಗಿ ಸಮಾಜಸೇವೆಯನ್ನು ಮಾಡಿದ್ದಾರೆ. ರಾಜಕೀಯ ಪಕ್ಷವೊಂದರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಅವರು ಪಾರ್ಲಿಮೆಂಟ್‌ ಸದಸ್ಯರೊರ್ವರ ಆಪ್ತ ಸಹಾಯಕರೂ ಆಗಿದ್ದರು.

ಸಾಹಿತ್ಯ ಸೇವೆ: ದಿ| ದಿವಾಣರ ಕನ್ನಡಪರ ಕಾಳಜಿ, ಹೋರಾಟ ಅನನ್ಯವಾದದ್ದು, ಪ್ರಾಮಾಣಿಕವಾದದ್ದು. ದಿ| ಗಣಪತಿ ದಿವಾಣರ ಬದುಕು ಮತ್ತು ಬರಹ ನೇರವಾದುದು ಮತ್ತು ಸ್ಪಷ್ಟವಾದದ್ದು. ಅವರು ನುಡಿದಂತೆ ನಡೆದು ಬರೆದಂತೆ ಬದುಕಿದವರು ಎಂಬುದು ಅವರ ಹೆಚ್ಚುಗಾರಿಕೆಯಾಗಿತ್ತು. ಅವರು  ಕಂಡದ್ದನ್ನು ಕಂಡಂತೆ ಹೇಳುವ ಮತ್ತು ಬರೆಯುವ ಗುಣ. ಅದು ಹಲವರಿಗೆ ಅಪಥ್ಯವಾಗಿತ್ತು. ಆದರೆ ಅದಕ್ಕಾಗಿ ದಿ| ದಿವಾಣರು ಎಂದೂ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಂಡವರಲ್ಲ.

ಪ್ರಥಮವಾಗಿ ಬೇಳದಲ್ಲಿ ಹೊಟೇಲ್‌ ಮಾಣಿಯಾಗಿ ಕೆಲಸ ನಿರ್ವಹಿಸುತ್ತಿ¤ದ್ದ ದಿ| ದಿವಾಣರ ಕವನ ಲೇಖನ‌ಗಳನ್ನು ಆಗಲೇ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದರು. ಅವರಿಗೆ ಲೋಕ ಸಮಾಜವೇ ವಿದ್ಯಾಭ್ಯಾಸ ನೀಡಿದ ವಿಶ್ವವಿದ್ಯಾಲಯ. ಕನ್ನಡದ ಸೇವೆಯೇ ಅವರ ಇಂಗಿತವಾಯಿತು. ಬಾಲ್ಯಾರಭ್ಯ ಕನ್ನಡವನ್ನು, ಸಾಹಿತ್ಯವನ್ನು, ಕಾವ್ಯರಚನೆಯನ್ನು ತಪಸ್ಸಿನಂತೆ ನಡೆಸುತ್ತಾ ಬಂದು ಕಾಸರಗೋಡಿನ ಸಾಹಿತ್ಯಲೋಕದ ಕವಿಶ್ರೇಷ್ಠರಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟರು.
ಸಾಮಾಜಿಕ, ರಾಜಕೀಯ ಒಳಹೊರಗುಗಳನ್ನು ಅರಿತಿದ್ದ ದಿ| ದಿವಾಣರು ಮಂಗಳೂರುನಿಂದ ಪ್ರಕಟವಾಗು ತ್ತಿದ್ದ “ಸಂಗಾತಿ’ ವಾರಪತ್ರಿಕೆಯಲ್ಲಿ “ದರ್ಪಣಾ ಚಾರ್ಯ’ ಎಂಬ ಹೆಸರಲ್ಲಿ ಬರೆಯುತ್ತಿದ್ದ “ಕ್ಷಕಿರಣ’ ಎನ್ನುವ ಅಂಕಣ ಅತ್ಯಂತ ಜನಪ್ರಿಯವಾಗಿದ್ದು ಉನ್ನತ ಮಟ್ಟದಲ್ಲಿ ಚರ್ಚಾ ವಿಷಯವಾಗುತ್ತಿತ್ತು.

ದಿ| ಗಣಪತಿ ದಿವಾಣರು ಕರ್ಮವೀರ, ರಾಷ್ಟ್ರಮತ, ರಾಷ್ಟ್ರಬಂಧು, ಮುಂಗಾರು, ಯುಗಪುರುಷ, ಸಂಪ್ರಭ, ಹವ್ಯಕ ವಾರ್ತೆ, ದರ್ಪಣ, ಹೊಸಸಂಜೆ, ಮಂಗಳೂರು ಮಿತ್ರ, ಕಾಸರಗೋಡಿನ ನಾಡಪ್ರೇಮಿ, ಗಡಿನಾಡು, ಕಾರವಲ್‌ ಮುಂತಾದ ಪತ್ರಿಕೆಗಳಲ್ಲಿ ಅಂಕಣ ಬರಹಗಳನ್ನು ಬರೆದಿದ್ದಾರೆ. ಅವರು ಆಕಾಶವಾಣಿ ಕಲಾವಿದರಾಗಿಯೂ ಅನೇಕ ತುಳು -ಕನ್ನಡ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

ದಿ| ಗಣಪತಿ ದಿವಾಣರ ಹಲವು ಕೃತಿಗಳು: ಅನ್ನಕ್ಕಾಗಿ (ನೀಳYತೆ), ಕಲ್ಲು ಸಕ್ಕರೆ ಭಾಗ -1 (ಪದ್ಯ ರೂಪದ ಒಗಟುಗಳು), ದಿವಾಣ ದರ್ಪಣ (ಹನಿ ಕವನಗಳು, ಚುಟುಕುಗಳು ಮತ್ತು ಕವನಗಳು), ಅಣ್ಣ ಕಳ್ಳಿಗೆ (ಕಳ್ಳಿಗೆ ಮಹಾಬಲ ಭಾಡಾರಿಯರ ವ್ಯಕ್ತಿ ಚಿತ್ರಣ), ಕನ್ನಾಟಿ (ಹವ್ಯಕ ಭಾಷಾ ಕವನಗಳು), ಅಕ್ಷರ ಕಜ್ಜಾಯ(ಮಕ್ಕಳಿಗಾಗಿ 19 ಅಕ್ಷರಗಳಿಗೆ 19 ಕವನಗಳು), ಅಮƒತ (26 ದೇವರ ಭಜನೆಗಳು), ಹೋಳಿಗೆ ಜೋಳಿಗೆ (29 ನಗೆ ಬರಹಗಳು), ಚಿಪ್ಪಿನೊಳಗಿನ ಜೀವ (340 ಒಗಟುಗಳು) ಮಗಳಿಗೆ ಪತ್ರ ( ಅಂಕಣ ಬರಹಗಳು) ಅಲ್ಲದೆ ಬೆನ್ಪುನ ನರಮಾನಿ, ಮೀಸೆ ಇತ್ತಿ ಆಣುಗುಳು (ತುಳು ಪದ್ಯಾವಳಿ), ಕೊಂಭು ವಾದ್ಯೊ (ತುಳು ಕವನಗಳು) ಮೊದಲಾದವುಗಳು ಅವರು ರಚಿಸಿದ ತುಳು ಕೃತಿಗಳಾಗಿವೆ. ತೊಡಿಕ್ಕಾನ ಮಲ್ಲಿಕಾರ್ಜುನ ವೈಭವ, ಶ್ರೀ ಕೃಷ್ಣ ವೈಭವ ಮೊದಲಾದ ಧ್ವನಿಸುರುಳಿಗಳನ್ನೂ ಹೊರತಂದಿದ್ದಾರೆ. ತಮ್ಮದೇ ಆದ ದಿವಾಣ ಪ್ರಕಾಶನ, ಎಡನಾಡು ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ಕೃತಿಗಳನ್ನು ಪ್ರಕಾಶನಗೊಳಿಸಿದ್ದಾರೆ.

ನಾಡಿನ ವಿವಿಧ ಪತ್ರಿಕೆಗಳಲ್ಲಿ ದಿ| ಗಣಪತಿ ದಿವಾಣರ ಸುಮಾರು 10 ಸಾವಿರಕ್ಕೂ ಹೆಚ್ಚು ಲೇಖನಗಳು, ಅನಿಸಿಕೆ ಗಳು, ಕವನಗಳು ಪ್ರಕಟವಾಗಿವೆ. ಅವರ ಈ ಕೆಳಗಿನ ಕೃತಿಗಳು ಹಸ್ತಪ್ರತಿಗಳಲ್ಲೇ ಇದ್ದು ಅಪ್ರಕಟಿತವಾಗಿಯೇ ಉಳಿದಿವೆ. ತೋಡಿಕಾನ ದೇವರೆ (ಭಜನೆಗಳು), ಮಾಳೊಡ್‌ª ಮಂಟಪೊಗು ( ತುಳು ಕತೆಗಳು) ಕಲ್ಲು ಸಕ್ಕರೆ ಭಾಗ -2 (ಪದ್ಯ ರೂಪದ ಒಗಟುಗಳು), ಶಾರದ ಸಾರ (ಅಂಕಣ ಬರಹಗಳು), ಸತ್ಯದ ಸಾûಾತ್ಕಾರ (ಅರ್ಥ ಸಹಿತ ಯಕ್ಷಗಾನ ಪ್ರಸಂಗ), ಉಪ್ಪಿನಕಾಯಿ (ವಿಡಂಬನಾ ಬರಹಗಳು), ಮಣಿಸರ (ಮಕ್ಕಳಿಗಾಗಿ ಕವನಗಳು), ಪುಟ್ಟನ ಪುರಾಣ(ಮಕ್ಕಳಿಗಾಗಿ ಕತೆಗಳು), ಬಿಚ್ಚಿ-ಮೆಚ್ಚಿ (ಹನಿ ಕವನಗಳು), ಹೈವ-ಭವ (ಹವ್ಯಕ ಭಾಷಾ ಪ್ರಬಂಧಗಳು).

ಪ್ರಶಸ್ತಿ ಸಮ್ಮಾನಗಳು: ದಿವಾಣರ ಸಾಹಿತ್ಯ ಸೇವೆಯನ್ನು ಕೇರಳ – ಕರ್ನಾಟಕ ಸರಕಾರಗಳು ಗುರುತಿಸದಿದ್ದರೂ ನಾಡಿನ ವಿವಿಧ ಭಾಗಗಳಲ್ಲಿ ಅವರನ್ನು ಸಮ್ಮಾನಿಸಿ ಗೌರವಿಸ ಲಾಗಿದೆ. ಮುಖ್ಯವಾಗಿ ಕಾಂತಾವರ ಕನ್ನಡ ಸಂಘದಿಂದ, ಕಾಸರಗೋಡು ಕರ್ನಾಟಕ ಸಮಿತಿ, ಬಂಟ್ವಾಳದ ಸುಮುಖ ಪ್ರಕಾಶನ, ಬಂಟ್ವಾಳ ತಾಲೂಕು ಪತ್ರಕರ್ತರ ಸಂಘ ಮತ್ತು ವಕೀಲರ ಸಂಘದ ವತಿಯಿಂದ ಡಾ| ಶಿವರಾಮ ಕಾರಂತರ ಮೂಲಕ, ಕಾಸರಗೋಡು ಕನ್ನಡ ಸಾಹಿತ್ಯ ಪರಿಷತ್‌ನ ಕೇರಳ ವಿಶೇಷ ಘಟಕದ ವತಿಯಿಂದ ಸಮ್ಮಾನಿಸಿ ಗೌರವಿಸಲಾಗಿದೆ. 1998ರಲ್ಲಿ ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಅವರಿಗೆ ಲಭಿಸಿತ್ತು.

ಬಂಟ್ವಾಳದ ಪ್ರತಿಷ್ಠಿತ ಮುಗುಳಿ ಮನೆತನದ ಗಣಪತಿ ಭಟ್‌ ಮತ್ತು ಚಕ್ರಕೋಡಿ ಶಾಸ್ತ್ರಿ ಮನೆತನದ ಸಣ್ಣಮ್ಮ ಯಾನೆ ತಿರುಮಲೇಶ್ವರಿ ದಂಪತಿಯ ಸುಪುತ್ರಿ ಶಾರದಾರ‌ನ್ನು ವಿವಾಹವಾದ ದಿ| ಗಣಪತಿ ದಿವಾಣರಿಗೆ ಭೀಮ ಭಟ್‌, ಗೋಪಾಲಕೃಷ್ಣ ದಿವಾಣ, ಶಿವಶಂಕರ ದಿವಾಣ (ಯಕ್ಷಗಾನ ಕಲಾವಿದ), ರವಿರಾಜ, ಸತ್ಯನಾರಾಯಣ, ಶ್ರೀರಾಮ ದಿವಾಣ (ಸಾಹಿತಿ -ಲೇಖಕ) ಪುತ್ರರು. ಏಕ ಮಾತ್ರ ಪುತ್ರಿ ಸರ್ವೇಶ್ವರಿ.

ಸಾವಿರಗಳ ಬರಹಗಾರ ಅವರು ದಿವಾಣ ಧೀಮಂತ ಕುಟುಂಬದಲ್ಲಿ ಜನ್ಮವೆತ್ತಿದರೂ ಬಾಲಾರಭ್ಯ ಶ್ರೀಮಂತಿಕೆೆ ಗಳಿಸದೆ ಕೇವಲ ಧೀಮಂತಿಕೆಯನ್ನು ತನ್ನ ಸಾಹಸಮಯ ಜೀವನ ಶ್ರದ್ಧೆಯಿಂದ ಉಳಿಸಿ ಬೆಳೆಸಿದವರು. ಅವರು 1999ರ ಜ. 19ರಂದು ಬದುಕಿಗೆ ವಿದಾಯ ಹಾಡಿದರೂ ಈಗಲೂ ತಮ್ಮ ಬರಹಗಳ ಮೂಲಕ ಬದುಕಿದ್ದಾರೆ.

ಲೇಖನ: ಕೇಳು ಮಾಸ್ತರ್‌ ಅಗಲ್ಪಾಡಿ

ಟಾಪ್ ನ್ಯೂಸ್

Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು

Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು

Table Space: ಟೇಬಲ್‌ ಸ್ಪೇಸ್‌ ಸ್ಥಾಪಕ ಅಮಿತ್‌ ಬ್ಯಾನರ್ಜಿ ಹೃದಯಾಘಾತದಿಂದ ನಿಧನ

Table Space: ಟೇಬಲ್‌ ಸ್ಪೇಸ್‌ ಸ್ಥಾಪಕ ಅಮಿತ್‌ ಬ್ಯಾನರ್ಜಿ ಹೃದಯಾಘಾತದಿಂದ ನಿಧನ

Delhi-Cong

Delhi Polls: ದಿಲ್ಲಿಯ ಮಹಿಳಾ ಮತದಾರರ ಸೆಳೆಯಲು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

ನನ್ನ ಮಗಳ ಬಾಯ್‌ಫ್ರೆಂಡ್‌ ಫೋಟೋ ರಿವೀಲ್‌ ಮಾಡಿದರೆ 21 ಲಕ್ಷ ಬಹುಮಾನ: ಬಿಗ್‌ ಬಾಸ್‌ಗೆ ಸವಾಲು

ನನ್ನ ಮಗಳ ಬಾಯ್‌ಫ್ರೆಂಡ್‌ ಫೋಟೋ ರಿವೀಲ್‌ ಮಾಡಿದರೆ 21 ಲಕ್ಷ ಬಹುಮಾನ: ಬಿಗ್‌ ಬಾಸ್‌ಗೆ ಸವಾಲು

Mahakumbh Mela: ಪ್ರಯಾಗ್ ರಾಜ್‌ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು‌ ಬೆದರಿಕೆ

Mahakumbh Mela: ಪ್ರಯಾಗ್ ರಾಜ್‌ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು‌ ಬೆದರಿಕೆ

siddanna-2

HMPV: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ

Tulu movie Daskath will release in Kannada soon

Daskath ಮೆಚ್ಚಿದ ಪ್ರೇಕ್ಷಕರಿಗೆ ಬಿಗ್‌ ನ್ಯೂಸ್‌ ಕೊಟ್ಟ ಚಿತ್ರತಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-katte

ಕಟ್ಟೆಮಾಡು ದೇಗುಲ ವಸ್ತ್ರ ಸಂಹಿತೆೆ ವಿವಾದ: ಆಡಳಿತ ಮಂಡಳಿ ಸಭೆಯಲ್ಲಿ ಮೂಡದ ಒಮ್ಮತ‌

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

1-ksde

CPCRI; ಅಡಿಕೆ ಉತ್ಪನ್ನ ಬಗ್ಗೆ ಸಂಶೋಧನೆ

Fraud case: ಸಚಿತಾ ರೈ ವಿರುದ್ಧ ಇನ್ನೊಂದು ಕೇಸು ದಾಖಲು

Fraud case: ಸಚಿತಾ ರೈ ವಿರುದ್ಧ ಇನ್ನೊಂದು ಕೇಸು ದಾಖಲು

Kasargod: ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ ಸಹೋದರಿಯ ಪತಿ ಪೋಕ್ಸೋ ಪ್ರಕಾರ ಬಂಧನ

Kasargod: ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ ಸಹೋದರಿಯ ಪತಿ ಪೋಕ್ಸೋ ಪ್ರಕಾರ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು

Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು

Table Space: ಟೇಬಲ್‌ ಸ್ಪೇಸ್‌ ಸ್ಥಾಪಕ ಅಮಿತ್‌ ಬ್ಯಾನರ್ಜಿ ಹೃದಯಾಘಾತದಿಂದ ನಿಧನ

Table Space: ಟೇಬಲ್‌ ಸ್ಪೇಸ್‌ ಸ್ಥಾಪಕ ಅಮಿತ್‌ ಬ್ಯಾನರ್ಜಿ ಹೃದಯಾಘಾತದಿಂದ ನಿಧನ

Delhi-Cong

Delhi Polls: ದಿಲ್ಲಿಯ ಮಹಿಳಾ ಮತದಾರರ ಸೆಳೆಯಲು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

ನನ್ನ ಮಗಳ ಬಾಯ್‌ಫ್ರೆಂಡ್‌ ಫೋಟೋ ರಿವೀಲ್‌ ಮಾಡಿದರೆ 21 ಲಕ್ಷ ಬಹುಮಾನ: ಬಿಗ್‌ ಬಾಸ್‌ಗೆ ಸವಾಲು

ನನ್ನ ಮಗಳ ಬಾಯ್‌ಫ್ರೆಂಡ್‌ ಫೋಟೋ ರಿವೀಲ್‌ ಮಾಡಿದರೆ 21 ಲಕ್ಷ ಬಹುಮಾನ: ಬಿಗ್‌ ಬಾಸ್‌ಗೆ ಸವಾಲು

1-kmc

Manipal KMC; ಮಧುಮೇಹಿ ಮಕ್ಕಳಿಗಾಗಿ ಶೈಕ್ಷಣಿಕ ಕಾರ್ಯಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.