![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, May 8, 2024, 1:33 AM IST
ಕಾಸರಗೋಡು: ಕಾಸರಗೋಡು ಮತ್ತು ಕಾಂಞಂಗಾಡ್ ರೈಲು ನಿಲ್ದಾಣಗಳ ಆದಾಯದಲ್ಲಿ ಹೆಚ್ಚಳವಾಗಿದೆ. ದಕ್ಷಿಣ ರೈಲ್ವೇಯ ಅಧೀನದಲ್ಲಿರುವ ಉತ್ತಮ ಆದಾಯವಿರುವ ನಿಲ್ದಾಣಗಳಲ್ಲಿ ಕಾಸರಗೋಡಿಗೆ 33ನೇ ಸ್ಥಾನ ಹಾಗೂ ಕಾಂಞಂಗಾಡ್‌ಗೆ 58ನೇ ಸ್ಥಾನ ಲಭಿಸಿದೆ.
ರಾಜ್ಯದಲ್ಲಿ ಕಾಸರಗೋಡು ರೈಲು ನಿಲ್ದಾಣ 15ನೇ ಸ್ಥಾನದಲ್ಲಿದ್ದರೆ, ಕಾಂಞಂಗಾಡ್ 25ನೇ ಸ್ಥಾನದಲ್ಲಿದೆ. ವಂದೇ ಭಾರತ್ ರೈಲು ಸಂಚಾರ ಆರಂಭಗೊಂಡಿರುವುದು ಕಾಸರ ಗೋಡಿನ ಆದಾಯವನ್ನು ಹೆಚ್ಚಿಸಲು ಪೂರಕವಾಯಿತು.
ಒಂದು ವರ್ಷ ಪೂರ್ತಿಯಾದ ಕೋಟ್ಟಯಂ ಮೂಲಕವಿರುವ ವಂದೇ ಭಾರತ್ ಹಾಗೂ ಆಲಪ್ಪುಳ ಮೂಲಕವಿರುವ ದ್ವಿತೀಯ ವಂದೇ ಭಾರತ್ ರೈಲಿಗೆ ಈ ಭಾಗದ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ಅಪರಾಹ್ನ 2.30ಕ್ಕೆ ವಂದೇ ಭಾರತ್ ಕಾಸರಗೋಡಿನಿಂದ ಸಂಚಾರ ಆರಂಭಿಸುವ ಕಾರಣ ಮುಂಗಡ ಕಾದಿರಿಸುವಿಕೆಯಲ್ಲೂ ಹೆಚ್ಚಿನ ಪರಿಗಣನೆ ಲಭಿಸುತ್ತಿದೆ.
ಉತ್ತರ ಮಲಬಾರ್‌ನ ಅತ್ಯಂತ ಹೆಚ್ಚು ಆದಾಯವಿರುವ ರೈಲು ನಿಲ್ದಾಣಗಳಲ್ಲಿ ತಲಶ್ಯೇರಿಯನ್ನು ಹಿಂದಿಕ್ಕಲು ಕಾಸರಗೋಡಿಗೆ ಇದರಿಂದ ಸಾಧ್ಯವಾಗಿದೆ. ಕಳೆದ ವರ್ಷ ತಲಶ್ಯೇರಿಯ ಬಳಿಕದ ಸ್ಥಾನದಲ್ಲಿ ಕಾಸರಗೋಡು ನಿಲ್ದಾಣವಿತ್ತು. ಈ ಬಾರಿ ಸ್ಥಿತಿ ಉತ್ತಮಪಡಿಸಿಕೊಂಡಿದೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.