ಮಂಜೇಶ್ವರ ಮಂಡಲದಲ್ಲಿ ಎಡರಂಗ ಅಭ್ಯರ್ಥಿ ದ್ವಿತೀಯ ಹಂತದ ಪರ್ಯಟನೆ
Team Udayavani, Apr 4, 2019, 6:30 AM IST
ಕುಂಬಳೆ: ಕಾಸರಗೋಡು ಲೋಕಸಭಾ ಎಡರಂಗ ಅಭ್ಯರ್ಥಿ ಕೆ.ಪಿ. ಸತೀಶ್ಚಂದ್ರನ್ ಅವರು ಮಂಜೇಶ್ವರ ಮಂಡಲದ ದ್ವಿತೀಯ ಹಂತದ ಪರ್ಯಟನೆಯಲ್ಲಿ ವಿವಿಧೆಡೆಗಳಲ್ಲಿ ಸಂಚರಿಸಿ ಮತದಾರರಿಂದ ಮತ ಯಾಚಿಸಿ ಕ್ಷೇತ್ರಾದ್ಯಂತ ಸಂಚಲನ ಮೂಡಿಸಿದರು.
ಉದ್ಯಾವರಮಾಡ ಅರಸು ದೈವಸ್ಥಾನ, ಮೀಂಜ ಮೀಯಪದವು, ಬಳ್ಳಂಗೂಡೇಲು, ಕುಳೂರು ಚಿನಾಲ, ಎಣ್ಮಕಜೆ ಪಳ್ಳ, ಬಾಡೂರು ಪೆರ್ಮುದೆ ಮೊದಲಾದೆಡೆಗಳಲ್ಲಿ ಕಾರ್ಯಕರ್ತರು ಮೈಸೂರು ಪೇಟ, ಹಾಳೆಯ ಮುಟ್ಟಪ್ಪಾಳೆ ತೊಡಿಸಿ ಹಾರಾರ್ಪಣೆಗೈದು, ಶಾಲು ಹೊದೆಸಿ, ಹಾರಾರ್ಪಣೆಗೈದು ಭವ್ಯ ಸ್ವಾಗತ ನೀಡಿದರು.
ಅಭ್ಯರ್ಥಿಯೊಂದಿಗೆ ಮಾಜಿ ಶಾಸಕ ಸಿ.ಎಚ್. ಕುಞಂಬು, ಎಡರಂಗ ಮಂಜೇಶ್ವರ ಮಂಡಲ ಸಮಿತಿ ಸಂಚಾಲಕ ಡಾ| ವಿ.ಪಿ.ಪಿ. ಮುಸ್ತಫಾ, ಎಡರಂಗ ನಾಯಕರಾದ ಕೆ.ಆರ್. ಜಯಾನಂದ, ಬಿ.ವಿ. ರಾಜನ್, ಪಿ. ರಘುದೇವನ್, ಎಂ. ಶಂಕರ ರೈ, ಅಬ್ದುಲ್ ರಜಾಕ್ ಚಿಪ್ಪಾರ್, ಸಿ.ಎ. ಸುಬೈರ್, ರಾಮಕೃಷ್ಣ ಕಂಡಂಬಾರ್, ಬೇಬಿ ಶೆಟ್ಟಿ, ಸಜಿತ್ ರೈ, ಅಜಿತ್ ಎಂ.ಸಿ., ಜಯರಾಂ ಬಲ್ಲಂಗೂಡೇಲು, ಮುನೀರ್ ಕುಂಡಳಂ, ಹೈದರ್ ಕುಳಂಗರ, ತಾಜುದ್ದೀನ್ ಮೊಗ್ರಾಲ್, ಅಹಮ್ಮದಾಲಿ ಕುಂಬಳೆ, ಜೋನ್ ಐಮನ್, ವಿ.ಕೆ. ರಮೇಶ್, ರಾಘವನ್, ಹಮೀದ್ ಅಭ್ಯರ್ಥಿಯ ಜತೆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.