“ಕಯ್ಯಾರರ ಹೆಸರಲ್ಲಿ ಸಾಹಿತ್ಯ ಚಟುವಟಿಕೆ ನಿರಂತರವಾಗಲಿ’
Team Udayavani, Jun 12, 2019, 6:10 AM IST
ಬದಿಯಡ್ಕ: ಕಾಸರಗೋಡು ಕನ್ನಡಿಗರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದ ಕಯ್ಯಾರರು ಬಹುಭಾಷಾ ಪರಿಣತರು. ತಮ್ಮ ಭಾಷಾ ಸಂರಕ್ಷಣೆಯ ಹೋರಾಟದ ಕತೆಗಳ ಮೂಲಕ ಭಾಷಾ ಅಲ್ಪಸಂಖ್ಯಾಕರ ಹಿತರಕ್ಷಣೆಗಾಗಿ ಕೈಗೊಳ್ಳುವ ಕಾರ್ಯಗಳಿಗೆ ಸ್ಪೂರ್ತಿ ನೀಡಿದವರು. ಸ್ಪಷ್ಟವಾಗಿ ಸರಳವಾಗಿ ಪರಿಸ್ಥಿತಿಯನ್ನು ಮನನ ಮಾಡಿಕೊಡುತ್ತಿದ್ದ ಕಯ್ಯಾರರ ಮಾರ್ಗದರ್ಶನ ಮತ್ತು ಅನುಗ್ರಹದಿಂದ ಕನ್ನಡಿಗರಿಗೆ ಆಗುವ ಅನ್ಯಾಯದೆದುರು ಸಿಡಿದೇಳಲು ಧೆ„ರ್ಯ ಮತ್ತು ಮನೋಬಲವನ್ನು ನೀಡಿದ್ದರು.
ಹಳ್ಳಿಯಲ್ಲಿ ಹುಟ್ಟಿ ದೇಶದ ಕವಿಯಾದ ಈ ಹಿರಿಯ ಚೇತನ ಶಿಕ್ಷಕನಾಗಿ, ಸಾಹಿತಿಯಾಗಿ, ಬಹುಭಾಷಾ ಪಂಡಿತನಾಗಿ ಬದುಕಿದವರು. ಅವರ ನೆನಪುಗಳು, ನೀಡಿದ ಕೊಡುಗೆಗಳನ್ನು ಮುಂದಿನ ಜನಾಂಗವೂ ನೆನಪಿಸುವಂತೆ ದಿನನಿತ್ಯ ಸ್ಮರಿಸುವಂತೆ ಮಾಡಲು ಹಾಗೂ ಕಯ್ನಾರರ ಹೆಸರಲ್ಲಿ ಸಾಹಿತ್ಯ ಚಟುವಟಿಕೆಗಳು ನಿರಂತರಾಗಿ ನಡೆಯುವಂತೆ ಮಾಡುವ ನಿಟ್ಟಿನಲ್ಲಿ ಕಯ್ನಾರ ಸ್ಮಾರಕ ಭವನವನ್ನು ನಿರ್ಮಿಸಲು ಜಿಲ್ಲಾ ಪಂಚಾಯತ್‌ಗೆ ಬೇಡಿಕೆ ಸಲ್ಲಿಸಿದ್ದು, ಈಗಾಗಲೇ ಕಾರ್ಯಾರಂಭವಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಅಡ್ವ ಶ್ರೀಕಾಂತ್ ಹೇಳಿದರು.
ಬದಿಯಡ್ಕ ಕವಿತಾ ಕುಟೀರದಲ್ಲಿ ಜರಗಿದ ಕಯ್ಯಾರ ಕಿಂಞಣ್ಣ ರೈಯವರ 104ನೇ ಜನ್ಮದಿನಾ ಚರಣೆಯನ್ನು ದೀಪ ಬೆಳಗಿಸಿ ಕಯ್ನಾರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಯ್ಯಾರರ ಕುಟುಂಬದ ಸಂಪೂರ್ಣ ಸಹಕಾರ ಮತ್ತು ಬೆಂಬಲ ಸ್ಮಾರಕ ನಿರ್ಮಾಣಕ್ಕಿದ್ದು ಈಗಾಗಲೇ 30 ಸೆಂಟ್ಸ್ ಸ್ಥಳವನ್ನು ಅದಕ್ಕಾಗಿ ಮೀಸಲಿಟ್ಟಿದ್ದಾರೆ. ಭಾಷೆ ಮತ್ತು ಸಂಸ್ಕೃತಿಗೆ ಅವರು ನೀಡಿದ ಅಪ್ರತಿಮ ಕೊಡುಗೆ ಮತ್ತು ಮಾಡಿದ ಸಾಧನೆ ಸದಾ ಸ್ಮರಣೀಯ. ಅವರ ಎಲ್ಲ ಭಾಷೆಗಳ ಸಾಹಿತ್ಯದ ಅಧ್ಯಯನ, ಸಂಶೋಧನೆಗೆ ಸಹಕಾರಿಯಾಗುವಂತಹ ಸ್ಮಾರಕ ಇದಾಗಿರುತ್ತದೆ.
ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಯ್ಯಾರರು ಸದಾ ಸ್ಮರಣೀಯರು. ಅವರ ಕವನಗಳಲ್ಲಿನ ಹಿರಿದಾದ ಆಶಯ ಮತ್ತು ಗಟ್ಟಿತನ ಊಹಾತೀತ ಎಂದು ಅಭಿಪ್ರಾಯಪಟ್ಟರು. ಕಯ್ನಾರರ ಕವನಗಳನ್ನು ಹಾಡುವ ಮೂಲಕ ಅವರಿಗೆ ನುಡಿನಮನ ಸಲ್ಲಿಸಿದರು.
ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಟಿ.ಎಚ್.ಎಂ.ಬಸವರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಗಡಿನಾಡ ಸಾಹಿತ್ಯ, ಸಾಂಸ್ಕೃತಿಕ ಅಕಾಡೆಮಿ ಉಪಾಧ್ಯಕ್ಷ ಪ್ರೋ| ಶ್ರೀನಾಥ್, ಬ್ಲಾಕ್ ಪಂಚಾಯತ್ ಸದಸ್ಯ ಅವಿನಾಶ್ ರೈ, ಶ್ರೀಕಾಂತ್ ಮೀಡಿಯಾ ಕ್ಲಾಸಿಕಲ್, ಅಶ್ರಫ್ ಮುನಿಯೂರು, ಸುಧಾಮ ಗೋಸಾಡ, ಆನಂದ. ಉದಯ ಕಾರ್ತಿಕ ಬದಿಯಡ್ಕ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಸವರಾಜು ಅವರು ಅಡ್ವ ಶ್ರೀಕಾಂತ್ ಅವರನ್ನು ಶಾಲು ಹೊದಿಸಿ ಅಭಿನಂದಿಸಿದರು. ಕಯ್ನಾರರ ಪುತ್ರ ಡಾ| ಪ್ರಸನ್ನ ರೈ ಕಯ್ಯಾರರ ಪುಸ್ತಕಗಳನ್ನು ಅತಿಥಿಗೆ ನೀಡಿ ಗೌರವಿಸಿದರು.
ದುರ್ಗಾಪ್ರಸಾದ್ ರೈ ಪ್ರಾಸ್ತಾವಿಕ ನುಡಿಗಳ ನ್ನಾಡಿದರು. ಜ್ಯೋತ್ನಾ ಪ್ರಾರ್ಥನೆ ಹಾಡಿದರು. ಡಾ| ಪ್ರಸನ್ನ ರೈ ಸ್ವಾಗತಿಸಿ, ನಿರಂಜನ್ ರೈ ವಂದಿಸಿದರು. ಪ್ರಭಾವತಿ ಕೆದಿಲಾಯ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.