ವಿಷರಹಿತ ಆಹಾರ ಬೆಳೆಸೋಣ: ಕೊಂಡೆವೂರು ಶ್ರೀ
Team Udayavani, Jan 23, 2020, 2:04 AM IST
ಕುಂಬಳೆ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆದ ಕೊಯ್ಲು ಉತ್ಸವ ಸಂಭ್ರಮದಲ್ಲಿ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಕೃಷಿ ಮಹತ್ವದ ಬಗ್ಗೆ ಮಾತನಾಡಿ ಇಂದು ನಾವೇ ಉತ್ತು ಬಿತ್ತಿ ಬೆಳೆದ ಆಹಾರ ಸೇವಿಸದೇ, ಹಣ ತೆತ್ತು ಅಂಗಡಿ ಅಕ್ಕಿ ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಇದರಿಂದ ದೇಶ ಅಭಿವೃದ್ಧಿ ಸಾಧ್ಯವಿಲ್ಲ, ದೇವರ ಸƒಷ್ಟಿ ಯ ಭೂಮಿಯಲ್ಲಿ ಅವನದೇ ಸƒಷ್ಟಿಯಾದ ನಮ್ಮ ಶರೀರ ಬಳಸಿ ಕೃಷಿ ಮಾಡಿದಾಗ ಭೂಮಿ ಸಸ್ಯ ಶ್ಯಾಮಲೆಯಾಗಿ ಉತ್ಪತ್ತಿ ಹೆಚ್ಚಾಗುತ್ತದೆ ಎನ್ನುವ ನಮ್ಮ ಹಿರಿಯರ ಕೃಷಿ ಪರ ಕಳಕಳಿಯನ್ನು ನಾವು ಅರಿತು, ಆರೋಗ್ಯದಾಯಕ ಸಾವಯವ ಕೃಷಿ ಸಂಸ್ಕೃತಿ ಉಳಿಸಿ ಉತ್ತಮ ಕೃಷಿಕನಾಗಿ ಬೆಳೆಯೋಣ. ದೇಶ ಅಭಿವೃದ್ಧಿಗೊಳಿಸೋಣ ಎಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಆಶ್ರಮದ ವಿಶ್ವಸ್ಥ ನ್ಯಾಯವಾದಿ ಮೋನಪ್ಪ ಭಂಡಾರಿಯವರು ನಾವು ರಾಸಾಯನಿಕ ರಹಿತ ಸಾವಯವ ಕೃಷಿಯಿಂದ ಶುದ್ಧ ಪರಿಸರದಲ್ಲಿ ಬಾಳ್ಳೋಣ ಎಂದರು.
ಅತಿಥಿಗಳಾಗಿ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಪದ್ಮನಾಭ ನರಿಂಗಾನ ಮತ್ತು ಬಾಬು ಪಚ್ಲಂಪಾರೆ ಉಪಸ್ಥಿತರಿದ್ದರು. ಸ್ಮಿತಾ ಮತ್ತು ಪ್ರಜ್ಞಾ ಕೊಂಡೆವೂರು ಪ್ರಾರ್ಥನೆಹಾಡಿದರು. ಹರೀಶ್ ಮಾಡ ನಿರೂಪಿಸಿದರು.ಬಳಿಕ ಶ್ರೀ ದೇವರ ಮುಂದೆ ಪ್ರಾರ್ಥಿಸಿ ,ಮುಟ್ಟಾಳೆ ಧರಿಸಿ ಪೂಜ್ಯ ಶ್ರೀಗಳ ನೇತƒತ್ವದಲ್ಲಿ , ಚೆಂಡೆ ಜಾಗಟೆ,ಮುತ್ತು ಕೊಡೆಗಳೊಂದಿಗೆ ಸೇರಿದ ಕೃಷಿ ಆಸಕ್ತರ ಆಕರ್ಷಕ ಮೆರವಣಿಗೆ ಗದ್ದೆಯೆಡೆಗೆ ಸಾಗಿ ಗದ್ದೆಯಲ್ಲಿ ಶ್ರೀಗಳೊಂದಿಗೆ ಅತಿಥಿಗಳೂ ಸೇರಿ ಭತ್ತ ಕಟಾವಿಗೆ ಚಾಲನೆ ನೀಡಿದರು. 93 ರ ಹಿರಿಯಜ್ಜಿ ಕಮಲಮ್ಮ ಮತ್ತು ಚಿಣ್ಣರೂ ಉತ್ಸಾಹದಿಂದ ಪಾಲ್ಗೊಂಡರು.ಭತ್ತ ಕಟಾವು ಮಾಡಿ ಅಲ್ಲಿಯೇ ಭತ್ತ ಹೊಡೆಯಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Dharmasthala: ಭಾರತೀಯ ಆಧ್ಯಾತ್ಮಿಕ ತವರೂರು ಶ್ರೀ ಕ್ಷೇತ್ರ ಧರ್ಮಸ್ಥಳ: ಜಗದೀಪ್ ಧನ್‌ಕರ್
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು
Dharmasthala ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್
Yuzi Chahal: ಡಿವೋರ್ಸ್ ಸುದ್ದಿಯ ನಡುವೆ ಬೇರೆ ಯುವತಿ ಜತೆ ಕಾಣಿಸಿಕೊಂಡ ಚಾಹಲ್; ಯಾರೀಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.