ಲೈಫ್ ಮಿಷನ್: ಜಿಲ್ಲೆಯಲ್ಲಿ 7,903 ಮಂದಿಗೆ ವಸತಿ ಭಾಗ್ಯ
Team Udayavani, Mar 2, 2020, 5:06 AM IST
ಕಾಸರಗೋಡು: ಮಾನವ ಬದುಕಿನ ಬಹಳದೊಡ್ಡ ಕನಸುಗಳಲ್ಲಿ ಒಂದಾಗಿರುವ ಸ್ವಂತ ಮನೆಯನ್ನು ಹೊಂದುವ ಸಹಜ ಬಯಕೆಗೆ ರಾಜ್ಯ ಸರಕಾರ ಜಾರಿಗೊಳಿ ಸುತ್ತಿರುವ ಲೈಫ್ ಮಿಷನ್ ಯೋಜನೆ ಮೂಲಕ ಜಿಲ್ಲೆಯಲ್ಲೂ ವಸತಿ ಭಾಗ್ಯ ಪಡೆ ದವರ ಸಂಖ್ಯೆ ಸಣ್ಣದ್ದಲ್ಲ. 7903 ಕುಟುಂಬ ಗಳು ಇಲ್ಲಿ ಈ ಮೂಲಕ ಸ್ವಂತ ಮನೆ ಪಡೆದುಕೊಂಡಿವೆ.
ಲೈಫ್ ಮಿಷನ್‌ನ ದ್ವಿತೀಯ ಹಂತದಲ್ಲಿ ಮಾತ್ರ 143.08 ಕೋಟಿ ರೂ. ಜಿಲ್ಲೆಯ ಫಲಾನುಭವಿಗಳಿಗೆ ಹಸ್ತಾಂತರಗೊಂಡಿದೆ. ಇದರಲ್ಲಿ ರಾಜ್ಯ ಸರಕಾರದ ಪಾಲು ಎಂಬ ರೀತಿಯಲ್ಲಿ 18.14 ಕೋಟಿ ರೂ., ಸ್ಥಳೀಯಾಡಳಿತ ಸಂಸ್ಥೆಗಳ ಪಾಲು ರೂಪದಲ್ಲಿ 9.01 ಕೋಟಿ ರೂ., ಹುಡ್ಕೊàದಿಂದ 47.44 ಕೋಟಿ ರೂ., ಲೈಫ್-ಪಿ.ಎಂ.ಆರ್.ವೈ. ರೂರಲ್ ಮೂಲಕ 22.75 ಕೋಟಿ ರೂ., ಲೈಫ್-ಪಿ.ಎಂ.ಆರ್.ವೈ. ಅರ್ಬನ್ ಪಾಲು ರೂಪದಲ್ಲಿ 45.73 ಕೋಟಿ ರೂ. ಲಭಿಸಿದೆ.
ಮೊದಲ ಹಂತದಲ್ಲಿ 2,881 ಮನೆಗಳು, ದ್ವಿತೀಯ ಹಂತದಲ್ಲಿ 2,873 ಮನೆಗಳು, ಲೈಫ್-ಪಿ.ಎಂ.ಎ.ವೈ. ರೂರಲ್ ವಿಭಾಗದಲ್ಲಿ 566 ಮನೆಗಳು, ಲೈಫ್-ಅರ್ಬನ್ ವಿಭಾಗದಲ್ಲಿ 1,098 ಮನೆಗಳು, ವಿವಿಧ ಸರಕಾರಿ ಇಲಾಖೆಗಳ ವ್ಯಾಪ್ತಿಯಲ್ಲಿ 485 ಲೈಫ್ ಭವನಗಳು ಜಿಲ್ಲೆಯಲ್ಲಿ ಈ ವರೆಗೆ ನಿರ್ಮಾಣ ಪೂರ್ಣಗೊಳಿಸಿವೆ.
ಅತ್ಯಧಿಕ ಮನೆಗಳು ಪರಪ್ಪ ಬ್ಲಾಕ್ ಪಂಚಾಯತ್ ವ್ಯಾಪ್ತಿಯಲ್ಲಿ ಪರಪ್ಪ ಬ್ಲಾಕ್ ಪಂಚಾಯತ್‌ನಲ್ಲಿ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಲೈಫ್ ಮಿಷನ್ ಮೂಲಕದ ಮನೆಗಳಿವೆ. ಇಲ್ಲಿ 1,886 ಮನೆಗಳು ಈ ಯೋಜನೆ ಮೂಲಕ ತಲೆಯೆತ್ತಿ ನಿಂತಿವೆ. ಕಾಸರಗೋಡು ಬ್ಲಾಕ್ ಪಂಚಾಯತ್‌ನಲ್ಲಿ 1,102, ಕಾರಡ್ಕ ಬ್ಲಾಕ್ ಪಂಚಾಯತ್‌ನಲ್ಲಿ 788, ಮಂಜೇಶ್ವರ ಬ್ಲಾಕ್ ಪಂಚಾಯತ್‌ನಲ್ಲಿ 608, ಕಾಂಞಂ ಗಾಡ್ ಬ್ಲಾಕ್ ಪಂಚಾಯತ್‌ನಲ್ಲಿ 589, ನೀಲೇಶ್ವರ ಬ್ಲಾಕ್ ಪಂಚಾಯತ್‌ನಲ್ಲಿ 534 ಮನೆಗಳು ನಿರ್ಮಾಣಗೊಂಡಿವೆ. ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ 137 ಮನೆಗಳು, ಕಾಂಞಂಗಾಡ್ ನಗರಸಭೆಯಲ್ಲಿ 752 ಮನೆಗಳು, ನೀಲೇಶ್ವರ ನಗರಸಭೆ ವ್ಯಾಪ್ತಿಯಲ್ಲಿ 356 ಮನೆಗಳು ನಿರ್ಮಾಣಗೊಂಡಿವೆ. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 51, ಪರಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ 455, ಪರಿಶಿಷ್ಟ ಪಂಗಡ ವ್ಯಾಪ್ತಿಯಲ್ಲಿ 632, ಮೀನುಗಾರಿಕೆ ವಲಯದಲ್ಲಿ 107 ಮನೆಗಳು, ಅಲ್ಪಸಂಖ್ಯಾಕ ಇಲಾಖೆ ವ್ಯಾಪ್ತಿಯಲ್ಲಿ 6 ಮನೆಗಳು ನಿರ್ಮಾಣವಾಗಿವೆ.
ಅದ್ವಿತೀಯ ಸಾಧನೆ
ಕೇವಲ ಎರಡೂವರೆ ವರ್ಷಗಳ ಅವಧಿಯಲ್ಲಿ ಲೈಫ್ ಮಿಷನ್ ಯೋಜನೆ ನಡೆಸಿದ ಸಾಧನೆ ದಾಖಲೆಯದ್ದು. ಪುಟ್ಟ ಅವಧಿಯಲ್ಲಿ ಜಿಲ್ಲೆಯಲ್ಲಿ 7,903 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಈ ಹಿಂದೆ ವಿವಿಧ ಯೋಜನೆಗಳ ಮೂಲಕ ಆರ್ಥಿಕ ಸಹಾಯ ಲಭಿಸಿದ ಫಲಾನುಭವಿಗಳ ಮನೆಗಳ ಕಾಮಗಾರಿ ಪೂರ್ತೀಕರಣ ಮೊದಲ ಹಂತದಲ್ಲಿ 2017ರ ನವೆಂಬರ್ ತಿಂಗಳಲ್ಲಿ ಆರಂಭಿಸಲಾಗಿತ್ತು. ದ್ವಿತೀಯ ಹಂತದ್ದು 2018ರ ಮಾರ್ಚ್ ತಿಂಗಳಲ್ಲಿ ಜಾಗವಿದ್ದರೂ, ಮನೆಯಿಲ್ಲದ ಮಂದಿಗಾಗಿ ವಸತಿ ನಿರ್ಮಾಣ ನಡೆಸಲಾಗಿತ್ತು. ಮೂರನೇ ಹಂತದಲ್ಲಿ ಜಾಗ, ಮನೆ ಇಲ್ಲದವರಿಗಾಗಿ ಮನೆಗಳ ನಿರ್ಮಾಣ ನಡೆಸಲಾಗುವುದು.
ಲೈಫ್ ಭವನ : ಅರ್ಹ ಫಲಾನುಭವಿಗಳಿಗೆ ಭವನ ನಿರ್ಮಾಣಕ್ಕೆ 4 ಲಕ್ಷ ರೂ. ಆರ್ಥಿಕ ಸಹಾಯ ಒದಗಿಸಲಾಗುತ್ತದೆ. ವಸತಿ ನಿರ್ಮಾಣದ ಪ್ರಗತಿಗನುಸಾರ ಕಂತುಗಳಲ್ಲಿ ಮೊಬಲಗು ವಿತರಿಸಲಾಗುತ್ತದೆ. ಆದರೆ ವಿವಿಧ ಕಾರಣಗಳಿಂದ ಪರಿಶಿಷ್ಟ ಪಂಗಡದ ಮಂದಿಗೆ 6 ಲಕ್ಷ ರೂ. ಆರ್ಥಿಕ ಸಹಾಯ ನೀಡಲಾಗುತ್ತದೆ. 12 ವಿಭಿನ ಡಿಸೈನ್‌ಗಳಲ್ಲಿ ಯಾವುದಾದರೊಂದು ಶೈಲಿಯಲ್ಲಿ ಮನೆ ನಿರ್ಮಾಣವನ್ನು ಫಲಾನುಭವಿ ಆಯ್ಕೆಮಾಡಿಕೊಳ್ಳಬಹುದಾಗಿದೆ.
ಪ್ರಗತಿಯಲ್ಲಿ ಮೂರನೇ ಹಂತ
ಲೈಫ್ ಮಿಷನ್ ಯೋಜನೆಯ ಮೂರನೇ ಹಂತವಾಗಿರುವ ಜಾಗ, ವಸತಿ ರಹಿತರಿಗೆ ಸೂರು ಒದಗಿಸುವ ಫಲಾನುಭವಿಗಳಿಗೆ ವಸತಿ ಸಮುತ್ಛಯಗಳನ್ನು ನಿರ್ಮಿಸುವ ಪ್ರಕ್ರಿಯೆಗಳು ಜಿಲ್ಲೆಯಲ್ಲಿ ಪ್ರಗತಿಯಲ್ಲಿವೆ. ಚೆಮ್ನಾಡ್ ಗ್ರಾಮ ಪಂಚಾಯತ್‌ನ ಚಟ್ಟಂಚಾಲ್‌ನಲ್ಲಿ ಪತ್ತೆ ಮಾಡಲಾದ ಜಾಗದಲ್ಲಿ ಪೈಲೆಟ್ ಯೋಜನೆಯಲ್ಲಿ ಅಳವಡಿಸಿ ಫ್ಲಾಟ್ ನಿರ್ಮಾಣ ನಡೆಸಲಾಗುವುದು. ಇದಕ್ಕಿರುವ ಟೆಂಡರ್ ಕ್ರಮಗಳು ಪೂರ್ಣಗೊಂಡಿವೆ. ನೀಲೇಶ್ವರ ನಗರಸಭೆ ವ್ಯಾಪ್ತಿಯ ಕೋಟ್ಟಪುರದಲ್ಲಿ ಪತ್ತೆ ಮಾಡಿರುವ 50 ಸೆಂಟ್ಸ್ ಜಾಗದಲ್ಲಿ ಜಿಲ್ಲೆಯ ಎರಡನೇ ವಸತಿ ಸಮುಚ್ಚಯ ನಿರ್ಮಾಣಕ್ಕೆ ಪ್ರಾರಂಭದ ಕ್ರಮಗಳು ಆರಂಭಗೊಂಡಿವೆ. ಇದಲ್ಲದೆ ಭವನ ಸಮುಚ್ಚಯಕ್ಕಾಗಿ ಗ್ರಾಮ ಪಂಚಾಯತ್, ನಗರಸಭೆಗಳಲ್ಲಿ ಈ ಸಂಬಂಧ ಪರಿಶೀಲನೆ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಭೂರಹಿತ, ಭವನ ರಹಿತರಾಗಿರುವ 12,081 ಮಂದಿ ಪಟ್ಟಿಯಲ್ಲಿ ಸೇರಿದ್ದು, 8,751 ಫಲಾನುಭವಿಗಳ ಅರ್ಹತಾ ಪರಿಶೀಲನೆಯಲ್ಲಿ 455 ಮಂದಿ ದ್ವಿತೀಯ ಹಂತಕ್ಕೆ ವರ್ಗಾವಣೆಗೊಂಡಿದ್ದಾರೆ. 2,730 ಮಂದಿ ಮೂರನೇ ಹಂತದ ಅರ್ಹರಾಗಿ ಆಯ್ಕೆಯಾಗಿದ್ದಾರೆ.
ದುರಂತಗಳ ನಡುವೆಯೂ ಮನೆ ಲಭಿಸಿದ ನೆಮ್ಮದಿ
ದುರಂತಗಳ ಸರಮಾಲೆಯ ನಡುವೆಯೇ ನೊಂದು-ಬೆಂದು ಬದುಕುತ್ತಿರುವ ಉಚ್ಚಿರಿಯಮ್ಮ ಅವರು 90ನೇ ವಯಸ್ಸಿನಲ್ಲಿ ಸ್ವಂತ ಮನೆ ಲಭಿಸಿದ ಸಾರ್ಥಕತೆ ಅನುಭವಿಸುತ್ತಿದ್ದಾರೆ. ಕೋಡೋಂ- ಬೇಳೂರು ಗ್ರಾಮ ಪಂಚಾಯತ್‌ನ ಅಡ್ಕಂ ನಿವಾಸಿ ಉಚ್ಚಿರಿಯಮ್ಮ ಅವರಿಗೆ ಕನಸಾಗಿಯೇ ಉಳಿದಿದ್ದ ಸ್ವಂತ ಮನೆ ಈಗ ನನಸಾಗಿದೆ. ಮೇಲ್ಛಾವಣಿಗೆ ಪ್ಲಾಸ್ಟಿಕ್ ಟರ್ಪಾಲ್ ಹಾಸಿದ ಶಿಥಿಲ ಗುಡಿಸಲಲ್ಲಿ ಅನೇಕ ವರ್ಷಗಳಿಂದ ಯಾತನೆಯೊಂದಿಗೆ ಬದುಕುತ್ತಿದ್ದ ಅವರಿಗೆ ರಾಜ್ಯ ಸರಕಾರದ ಲೈಫ್ ಮಿಷನ್ ಯೋಜನೆ ಮೂಲಕ ಸದೃಢ ಮನೆ ಲಭಿಸಿದೆ. ದೇಹದಲ್ಲಿ ಶಕ್ತಿ ಇರುವಲ್ಲಿಯವರೆಗೆ ಆರಾಧನಾಲಯವೊಂದರಲ್ಲಿ ನೌಕರಿಯಲ್ಲಿದ್ದ ಉಚ್ಚಿರಿಯಮ್ಮ ಅವರಿಗೆ ಇಂದು ವಯೋ ಸಹಜ ಬಳಲಿಕೆ ಮತ್ತು ಅಸೌಖ್ಯಗಳಿಂದ ಕಾಯಕಕ್ಕೆ ತೆರಳಲಾಗುತ್ತಿಲ್ಲ. ಕೌಟುಂಬಿಕವಾಗಿ ಅನೇಕ ಸಮಸ್ಯೆಗಳನ್ನು ಹೊಂದಿರುವ ಅವರಿಗೆ ಮನೆ ಲಭಿಸಿರುವುದು ಸಂಕಷ್ಟಗಳ ನಡುವೆಯೂ ಬದುಕಿನಲ್ಲಿ ನೆಮ್ಮದಿ ಕಾಣುವಂತಾಗಿದೆ.
ಸಂತಸ ತಳೆದ ಖದೀಜಾ ಅವರ ಕುಟುಂಬ
ಸತತ 20 ವರ್ಷಗಳ ಬಾಡಿಗೆ ಮನೆಯ ವಾಸಕ್ಕೆ ವಿದಾಯ ಹೇಳಿ ಖದೀಜಾ ಮತ್ತು ನಿಝಾರ್ ದಂಪತಿ ರಾಜ್ಯ ಸರಕಾರ ಒದಗಿಸಿದ ಸೂರಿನಡಿ ನೆಮ್ಮದಿ ಕಾಣುತ್ತಿದ್ದಾರೆ. ಪಳ್ಳಿಕ್ಕರೆ ನಿವಾಸಿ ಖದೀಜಾ ಮತ್ತು ನಿಝಾರ್ ಅವರು ಲೈಫ್ ಮಿಷನ್ ಯೋಜನೆಯ ಮೂಲಕ ಸ್ವಂತ ಮನೆಯನ್ನು ಹೊಂದಿದ್ದಾರೆ. ಇದು ಖದೀಜಾ, ಕೂಲಿ ಕಾರ್ಮಿಕ ನಿಝಾರ್ ಮತ್ತು 9ನೇ ತರಗತಿ ವಿದ್ಯಾರ್ಥಿ ನಿಝಾಮುದ್ದೀನ್ ಅವರಿಗೆ ಅತೀವ ಸಂತಸ ತಂದಿದೆ. ಗೆಳೆಯರನ್ನೆಲ್ಲ ಮನೆಗೆ ಕರೆಸಿ ಹೊಟ್ಟೆ ತುಂಬ ಉಂಡು ಈ ಸಂತೋಷವನ್ನು ಹಂಚಿಕೊಂಡಿದ್ದಾರೆ.
ಬಾಡಿಗೆ ಮನೆಯಲ್ಲಿದ್ದ ಖದೀಜಾ ಅವರ ಬಡ ಕುಟುಂಬಕ್ಕೆ ಚಿಕ್ಕ ಪುತ್ರಿ ನಿಷಾಂತ್ ಸಾರಿ ಅವರ ಅಸೌಖ್ಯ ತುಂಬ ಬಸವಳಿಯುವಂತೆ ಮಾಡಿದೆ. ಭಾರೀ ವೆಚ್ಚದಲ್ಲಿ ಚಿಕಿತ್ಸೆ ಅಗತ್ಯವಿದ್ದರೂ, ಇವರ ಕುಟುಂಬಕ್ಕೆ ಅದನ್ನು ಭರಿಸುವ ಶಕ್ತಿ ಇಲ್ಲ. ಕೂಲಿಕಾರ್ಮಿಕ ನಿಝಾರ್ ಅವರ ದುಡಿಮೆ, ಸಮೀಪದ ಮನೆಗಳಲ್ಲಿ ಕೆಲಸ ನಡೆಸಿ ಮನೆ ಮಂದಿಯ ಹೊಟ್ಟೆ ಹೊರೆಯುವಲ್ಲಿ ಖದೀಜಾ ಅವರ ಕಾಯಕ ದೈನಂದಿನ ಖರ್ಚು ವೆಚ್ಚಕ್ಕೇ ಸಾಲುವುದಿಲ್ಲ. ಇಂತಹ ದುಃಸ್ಥಿತಿಯಲ್ಲೂ ಸ್ವಂತದ್ದೊಂದು ಮನೆ ಲಭಿಸಿರುವುದು ಇವರಿಗೆ ಕೊಂಚ ಮಟ್ಟಿಗೆ ಸಾಂತ್ವನ ನೀಡಿದೆ.
ಯತ್ನಗಳ ಫಲ
ಗ್ರಾಮ ವಿಸ್ತರಣೆ ಅಧಿಕಾರಿಯಾಗಿದ್ದ ಇಕ್ಬಾಲ್ ಸಹಿತ ಕೆಲವು ಸರಕಾರಿ ಸಿಬಂದಿ ನಡೆಸಿದ ಯತ್ನಗಳ ಫಲವಾಗಿ ಉಚ್ಚಿರಿಯಮ್ಮ ಅವರಿಗೆ ಮನೆ ಲಭಿಸುವಂತಾಗಿದೆ.
-ಮುಸ್ತಫಾ ತಾಯನ್ನುರು,
ಕೋಡೋಂ-ಬೇಳೂರು, ಗ್ರಾಮ ಪಂಚಾಯತ್ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.