ಕಾಸರಗೋಡಿನ ಸಾಹಿತ್ಯ ಲೋಕ – 207; ಶಂಕರ ಶರ್ಮ, ಕುಳಮರ್ವ

Team Udayavani, Jul 10, 2017, 3:55 AM IST

Shankara-Sharma,.jpg

ಕಾಸರಗೋಡಿನ ಸಾಹಿತ್ಯ ಪರಂಪರೆಗೆ ನೀರ್ಚಾಲಿನ ಕುಳಮರ್ವ ಮನೆತನದ ಕೊಡುಗೆಯು ಮಹತ್ವದ್ದಾಗಿದೆ. ಕವಿ ಪರಂಪರೆಯ ಈ ಮನೆತನದಲ್ಲಿ ಇದೀಗ ಶಂಕರ ಶರ್ಮರು ಖಂಡ ಕಾವ್ಯವೊಂದನ್ನು ರಚಿಸಿ ಹೆಸರು ಮಾಡಿದ ಕವಿಯಾಗಿದ್ದಾರೆ.

ಬಾಲ್ಯ ಬದುಕು: ಕಾಸರಗೋಡು ತಾಲೂಕಿನ ನೀರ್ಚಾಲು ಸಮೀಪದ ವಿದ್ವಾಂಸ-ಕೃಷಿಕ ಕುಳಮರ್ವ ಅಬ್ಬಿಮೂಲೆ ಶಂಕರ ನಾರಾಯಣ ಭಟ್‌ – ಶಂಕರಿ ಅಮ್ಮ ದಂಪತಿಯರ ದ್ವಿತೀಯ ಪುತ್ರರಾಗಿ ಶಂಕರ ಶರ್ಮ ಅವರು 1952 ಜುಲೈ ತಿಂಗಳ 17ರಂದು ಜನಿಸಿದರು. ಕೇಶವ ಭಟ್ಟ (ನಿವೃತ್ತ ಉಪನ್ಯಾಸಕರು) ವೆಂಕಟಕೃಷ್ಣ (ಕೃಷಿಕರು), ಶ್ಯಾಮ ಭಟ್‌ (ಕೃಷಿಕರು) ಅವರು ಸಹೋದರರು. ತಿರುಮಲೇಶ್ವರಿ, ಸರಸ್ವತಿ, ಶಾಂತಾ ಕುಮಾರಿ ಸಹೋದರಿಯರು.

ಶಂಕರ ಶರ್ಮ ಅವರು ತಮ್ಮ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಕುಂಟಿಕ್ಕಾನ ಹಿರಿಯ ಬುನಾದಿ ಶಾಲೆಯಲ್ಲಿ ಮತ್ತು ಪ್ರೌಢ ಶಿಕ್ಷಣವನ್ನು ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲ್‌ನಲ್ಲಿ  ಪೂರೈಸಿದರು. ನಂತರ ಕೃಷಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಸಾಹಿತ್ಯ ಸೇವೆ: ಶಂಕರ ಶರ್ಮರಿಗೆ ಪ್ರಾಥಮಿಕ ವಿದ್ಯಾಭ್ಯಾಸ ಕಾಲದಲ್ಲಿಯೇ ಕಾವ್ಯ ಪ್ರೀತಿಯು ಇತ್ತು. ಅವರ ಅಮ್ಮ ಹಾಡುತ್ತಿದ್ದ ಜೋಗುಳ ಹಾಡುಗಳು ಮತ್ತು ತಂದೆಯವರು ಪಾರಾಯಣ ಮಾಡುತ್ತಿದ್ದ ಕುಮಾರವ್ಯಾಸ ಮಹಾಕವಿಯ ಕರ್ಣಾಟಕ ಮಹಾಭಾರತ, ತೊರವೆ ರಾಮಾಯಣ, ಭಾಗವತ ಮೊದಲಾದವುಗಳಿಂದ ಪ್ರೇರಣೆ ಪಡೆದರು. ಮನೆಯಲ್ಲಿ ತಾಳೆಗರಿಯಲ್ಲಿದ್ದ ಶಿವಪುರಾಣ ಮತ್ತು ತೊರವೆ ರಾಮಾಯಣಗಳನ್ನು ಪ್ರತಿಮಾಡಿ ಓದಲು ತೊಡಗಿದರು. ತೊರವೆ ರಾಮಾಯಣದಲ್ಲಿ ಉತ್ತರಕಾಂಡವಿಲ್ಲದಿರುವುದನ್ನು ಮನಗಂಡು ಆ ಕಥೆಯನ್ನು ಭಾಮಿನಿ ಷಟ³ದಿಯಲ್ಲಿ ಬರೆಯಬೇಕೆಂಬ ತುಡಿತದಿಂದ ರಚಿಸಲು ತೊಡಗಿ ಎರಡು ವರ್ಷಗಳಲ್ಲಿ ಸುಮಾರು 1600 ಪದ್ಯಗಳಿರುವ ‘ಉತ್ತರ ರಾಮ ಚರಿತೆ’ ಎಂಬ ಖಂಡ ಕಾವ್ಯವನ್ನು ರಚಿಸಿದರು.

ಶಂಕರ ಶರ್ಮ ಅವರು ಈ ಕೃತಿಯನ್ನಲ್ಲದೆ ಭಾಮಿನಿ  ಸುಮಾರು 20 ಸಂಧಿಗಳಲ್ಲಾಗಿ 1128 ಪದ್ಯಗಳಲ್ಲಿ ಸ್ಕಾಂದ ಪುರಾಣದ ಆಧಾರಿತ “ಕುಮಾರೇಶ್ವರ ಚರಿತ್ರೆ’ ಎಂಬ ಕೃತಿಯನ್ನು ರಚಿಸಿದ್ದು ಅದು ಲೋಕಾರ್ಪಣೆಗೊಂಡಿದೆ. ಅಲ್ಲದೆ 18 ಭಾಗಗಳಲ್ಲಾಗಿ 201 ಪದ್ಯಗಳಿರುವ “ಚೆನ್ನವೀರ ಶರಣರ ಶ್ರೀ ನುಡಿಗಳು’ ಎಂಬ ಕೃತಿಯನ್ನು ರಚಿಸಿದ್ದು ಇದು ಕಾಸರಗೋಡಿನ ಕನ್ನಡ ದೈನಿಕವೊಂದರಲ್ಲಿ ಪ್ರಕಟವಾಗಿದೆ.

ಕಾಸರಗೋಡು ತಾಲೂಕಿನ ಉಪ್ಪಂಗಳ ತಲೇಕದ‌ ಕೃಷಿಕ ವೆಂಕಪ್ಪ ಭಟ್‌ – ಸರಸ್ವತಿ ದಂಪತಿಯರ ಪುತ್ರಿ  ಸರೋಜಿನಿ ಅವರನ್ನು ವಿವಾಹವಾದ ಶಂಕರ ಶರ್ಮ ಅವರಿಗೆ ಶಂಕರ ನಾರಾಯಣ ಪ್ರಕಾಶ (ಅಧ್ಯಾಪಕ), ಶೀಲಾ ಶಂಕರಿ (ಶಿಕ್ಷಕಿ) ಎಂಬಿಬ್ಬರು ಮಕ್ಕಳು.

ಬಹುದೊಡ್ಡ ಸಾಧನೆ ಮಾಡಿ ಕಾಸರಗೋಡಿನ ಸಾಹಿತ್ಯಲೋಕಕ್ಕೆ ಕೀರ್ತಿ ಯನ್ನು ತಂದಂತಹ ಕುಳಮರ್ವ ಶಂಕರ ಶರ್ಮರಿಂದ ಇನ್ನಷ್ಟು ಸಾಹಿತ್ಯ ಕೃತಿಗಳು ಹೊರಬರಲೆಂದು ಹಾರೈಸುವ.

– ಕೇಳು ಮಾಸ್ತರ್‌, ಅಗಲ್ಪಾಡಿ

ಟಾಪ್ ನ್ಯೂಸ್

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

Chalavadi

Ambedkar Row: ಕಾಂಗ್ರೆಸ್‌ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

Nagendra-ED

Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri: ವಾಹನ ಅಪಘಾತಕ್ಕೀಡಾದ ವ್ಯಕ್ತಿ ಸಾವುMadikeri: ವಾಹನ ಅಪಘಾತಕ್ಕೀಡಾದ ವ್ಯಕ್ತಿ ಸಾವು

Madikeri: ವಾಹನ ಅಪಘಾತಕ್ಕೀಡಾದ ವ್ಯಕ್ತಿ ಸಾವು

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ: ಡಿ. 28 ರಂದು ಕೋರ್ಟ್‌ ತೀರ್ಪು

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ: ಡಿ. 28 ರಂದು ಕೋರ್ಟ್‌ ತೀರ್ಪು

2-madikeri

Madikeri: ರಾಜ್ಯದಲ್ಲೇ ಮೊಟ್ಟಮೊದಲ ಮೂಳೆ ದಾನ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

court

Kasaragod; ಯುವಕನ ಕೊಲೆ: 6 ಮಂದಿಗೆ ಜೀವಾವಧಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ

Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

Chalavadi

Ambedkar Row: ಕಾಂಗ್ರೆಸ್‌ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.