ಕಾಸರಗೋಡಿನ ಸಾಹಿತ್ಯ ಲೋಕ: ನಾಡೋಜ ಸಾರಾ ಅಬೂಬಕರ್
Team Udayavani, Apr 23, 2018, 6:25 AM IST
ಗಡಿನಾಡು-ಕಾಸರಗೋಡು ಹಲವಾರು ಕವಿಗಳಿಗೆ, ಸಾಹಿತಿಗಳಿಗೆ, ವಿದ್ವಾಂಸರಿಗೆ ಜನ್ಮ ನೀಡಿದ ನಾಡು. ಇಲ್ಲಿನ ಕವಿಗಳು ಬಹುಭಾಷಾ ಸಂಪನ್ನರು. ಇಲ್ಲಿ ಮನೆಮಾತು ಬೇರೆಯಾಗಿದ್ದು ಕನ್ನಡ ಸಾಹಿತ್ಯಲೋಕಕ್ಕೆ ಉನ್ನತ ಕೃತಿಗಳನ್ನು ನೀಡಿ ರಾಷ್ಟ್ರಕವಿ, ನಾಡೋಜ ಮೊದಲಾದ ಉತ್ತುಂಗ ಪ್ರಶಸ್ತಿಗಳನ್ನು ಪಡೆದ ಕವಿಗಳು, ಲೇಖಕರು ಇದ್ದಾರೆ.
ಅಂತಹವರಲ್ಲಿ ಮಹಿಳಾ ಲೇಖಕಿಯಾಗಿರುವ ನಾಡೋಜ ಬಿರುದಾಂಕಿತ ಜೀವಪರ ಚಿಂತಕಿ-ಸಾಹಿತಿಗಳಾಗಿರುವ ಸಾರಾ ಅಬೂಬಕರ್‌ರವರೂ ಓರ್ವರು.ಸಾರಾರವರು ಕಾಸರಗೋಡು ತಾಲೂಕಿನ ಚಂದ್ರಗಿರಿಯ ಪುದಿಯಪುರ ತರವಾಡು ಆಗರ್ಭ ಶ್ರೀಮಂತ ಮನೆತನದ, ಕಾಸರಗೋಡಿನಲ್ಲಿ ವಕೀಲರಾಗಿದ್ದ ಅಹಮ್ಮದ್ ಹಾಗೂ ಜೈನಾಬಿ ದಂಪತಿಗಳ 6 ಮಂದಿ ಮಕ್ಕಳಲ್ಲಿ ನಾಲ್ಕನೇಯವರಾಗಿ 1936 ಜೂನ್ 30ರಂದು ಜನಿಸಿದರು. ಅವರ ಹಿರಿಯಣ್ಣ ವಕೀಲ ವೃತ್ತಿ ಕಲಿಯುತ್ತಿರುವಾಗಲೇ ಅನಿರೀಕ್ಷಿತ ಸಾವಿಗೀಡಾಗಿದ್ದರು. ಮತ್ತೂಬ್ಬ ಅಣ್ಣ ಇಂಗ್ಲೆಂಡಿನಲ್ಲಿ ಡಾಕ್ಟರಾಗಿದ್ದರು. ಇನ್ನೊಬ್ಬರು ಎಂಜಿನಿಯರಾಗಿ ದೆಹಲಿಯಲ್ಲಿ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ. ತಮ್ಮಂದಿರಲ್ಲಿ ಒಬ್ಬರು ಭಾರತೀಯ ಸೇನೆಯ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದರು. ಕಿರಿಯ ತಮ್ಮ ಕಲ್ಲಿಕೋಟೆಯಲ್ಲಿ ವಕೀಲರಾಗಿರುತ್ತಾರೆ.
ಸಾರಾರವರು ತಮ್ಮ ಪ್ರಾಥಮಿಕ ಶಿಕ್ಷಣದ ಎರಡು ತರಗತಿಗಳನ್ನು ಚೆಮ್ನಾಡಿನ ಶಾಲೆಯಲ್ಲಿ ಮತ್ತಿನ ತರಗತಿಗಳನ್ನು ಕಾಸರಗೋಡಿನ ಕನ್ನಡ ಶಾಲೆಯಲ್ಲೂ ಪೂರೈಸಿದರು. ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕಾಸರಗೋಡಿನ ಬಿ.ಇ.ಯಂ. ಹೆ„ಸ್ಕೂಲಿನಲ್ಲಿ ಪಡೆದರು.
ಎಸ್.ಎಸ್.ಎಲ್.ಸಿ.ಯ ನಂತರ ಅವರ ವಿವಾಹವು ಮಂಗಳೂರಿನ ಅಡಿಕೆ ವ್ಯಾಪಾರಿಯಾಗಿದ್ದ ಎಂ.ಮೊದಿನಬ್ಬ-ಮರಿಯಮ್ಮ ದಂಪತಿಯರ ಪುತ್ರನಾದ ವೃತ್ತಿಯಲ್ಲಿ ಎಂಜಿನಿಯರಾಗಿದ್ದ ಎಂ.ಅಬೂಬಕ್ಕರ್ ಅವರೊಡನೆ 1963ರಲ್ಲಿ ನಡೆದು ಸಾರಾ ಅಬೂಬಕರ್ ಆದರು.ಸಾರಾ ಅಬೂಬಕರ್‌ರವರು ವಿವಾಹ ನಂತರ ಪತಿಯೊಡನೆ ಬೆಂಗಳೂರು, ಮಂಗಳೂರಿನಲ್ಲಿ ನೆಲೆಸಿದಾಗ ಸಾಹಿತ್ಯ, ಸಂಘಟನೆ, ಸಮಾಜ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಪಣಂಬೂರಿನ ಮಹಿಳಾ ಸಮಾಜದ ಸ್ಥಾಪಕ ಸದಸ್ಯೆಯಾಗಿ ಸ್ತ್ರೀಯರಲ್ಲಿ ಸಾಹಿತ್ಯ, ಕ್ರೀಡೆಗಳಲ್ಲಿ ಆಸಕ್ತಿಯನ್ನು ಮೂಡಿಸಿದರು. ಮಂಗಳೂರಿನಲ್ಲಿ ಕರಾವಳಿ-ಲೇಖಕಿಯರ-ವಾಚಕಿಯರ ಸ್ಥಾಪನೆಯಲ್ಲಿ ಹಿರಿದಾದ ಪಾತ್ರವನ್ನು ವಹಿಸಿ ಅದರ ಅಧ್ಯಕ್ಷೆಯಾಗಿಯೂ ದುಡಿದರು. ಒಮ್ಮೆ ಜನತಾದಳದ ಅಭ್ಯರ್ಥಿಯಾಗಿ ಮಂಗಳೂರು ಮಹಾನಗರಪಾಲಿಕೆಯ ಕಾರ್ಪೋರೇಟರ್ ಚುನಾವಣೆಗೂ ಸ್ಪರ್ಧಿಸಿದ್ದರು.ಸಾರಾ ಅಬೂಬಕರ್‌ಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಶಾಲಾ ಕನ್ನಡ ಪಂಡಿತರಾಗಿದ್ದ ಕೆ.ಎಸ್.ಶರ್ಮಾರ ಪಾಠಗಳು ಸಾಹಿತ್ಯದ ಮೇಲೆ ಅಪರಿಮಿತ ಪ್ರೀತಿ ಹುಟ್ಟುವುದಕ್ಕೆ ಕಾರಣವಾಗಿತ್ತು. ಅವರ ಪ್ರೇರಣೆಯಿಂದ ಶಾಲಾ ಭಿತ್ತಿ ಪತ್ರಿಕೆಗಾಗಿ ಕತೆಗಳನ್ನು ಬರೆದಿದ್ದರು. ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅಬೂಬಕರ್ ಶಿವರಾಮ ಕಾರಂತರು, ಇನಾಂದಾರ್, ಬೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರುಹೋಗಿ ಓದಿನಲ್ಲಿ ಮಗ್ನರಾಗುತ್ತಿದ್ದರು. ಮನೋವಿಜ್ಞಾನದ ಬಗ್ಗೆ ತ್ರಿವೇಣಿಯವರು ಬರೆದ ಕಾದಂಬರಿಗಳು ಅವರಲ್ಲಿ ಆಕರ್ಷಣೆ ಹುಟ್ಟಿಸಿದವು. ಬದುಕಿನಲ್ಲಿ ಸುತ್ತಮುತ್ತಲಿನ ಪರಿಸರದಲ್ಲಿ ಮನೋವ್ಯಾಕುಲತೆಗೆ ಒಳಗಾಗುತ್ತಿದ್ದ ಬಹಳಷ್ಟು ಸಹಧರ್ಮೀಯರ ಕುರಿತು ಅವರ ಮನ ನಿರಂತರವಾಗಿ ಮಿಡಿಯುತ್ತಿತ್ತು.
ತಲಾಖ್ ಸಂಪ್ರದಾಯ, ಮಕ್ಕಳಾದ ನಂತರದ ಅಸಹನೀಯ ಬದುಕು ಅವರನ್ನು ಕಾಡುತ್ತಿದ್ದುವು. ಅಲ್ಲದೆ ವರ್ತಮಾನ ಪತ್ರಿಕೆಯ ನಿರಂತರ ಓದು ಸಾರಾ ಅಬೂಬಕರ್‌ರವರ ರಾಜಕೀಯ ಸಾಮಾಜಿಕ ಪ್ರಜ್ಞೆ, ಸಾಹಿತ್ಯ ರಚನೆ ಜಾಗೃತವಾಗಿರಿಸುವುದಕ್ಕೆ ಸಹಕರಿಸಿತು. ಅವರ ಪ್ರಥಮ ಲೇಖನವು ಬೆಂಗಳೂರಿನ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಯಿತು. ಅನಂತರ ಅವರ ನೂರಾರು ಕತೆಗಳು ನಾಡಿನ ಹೆಚ್ಚಿನ ಎಲ್ಲಾ ಕನ್ನಡ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ದೇಶದ ಆಕಾಶವಾಣಿಗಳಲ್ಲಿ ಅವರ ಕತೆಗಳು, ನಾಟಕಗಳು, ಸಂದರ್ಶನಗಳು ಪ್ರಸಾರವಾಗಿವೆ. ಅವರು ತಮ್ಮ ಬಹುತೇಕ ಕೃತಿಗಳಲ್ಲಿ ಮಧ್ಯಮ ವರ್ಗದ, ಕೆಳಮಧ್ಯಮ ವರ್ಗದ ಬಡ ಮುಸ್ಲಿಂ ಸಮುದಾಯಗಳ ಚಿತ್ರಣ ನೀಡಿದ್ದಾರೆ. ಸ್ತ್ರೀಪರ ಸಂವೇದನೆಯನ್ನೊಳಗೊಂಡ ಸಮಕಾಲೀನ ಪ್ರಜ್ಞೆ ಅವರ ಕೃತಿಗಳಲ್ಲಿ ಕಂಡುಬರುತ್ತದೆ. ಸಾರಾ ಅಬೂಬಕರ್‌ರವರಿಗೆ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಯಾಗಿರುವ ಡಾ|ಸಭಿಹಾ ಭೂಮಿ ಗೌಡರು ಸಂಪಾದಿಸಿರುವ “ಚಂದ್ರಗಿರಿ’ ಎಂಬ ಅಭಿನಂದನ ಗ್ರಂಥವನ್ನು ಅರ್ಪಿಸಲಾಗಿದೆ. ಅವರ ಜೀವನ ಚರಿತ್ರೆಯನ್ನು ಶ್ರೀ ದೇವಿಕಾ ನಾಗೇಶ್ ಬರೆದಿದ್ದು ಅದನ್ನು ಕಾಂತಾವರ ಕನ್ನಡ ಸಂಘದವರು ಪ್ರಕಾಶಿಸಿರುತ್ತಾರೆ.
ಸಾರಾರವರ ಪತಿ 1988ರಲ್ಲಿ ನಿಧನರಾಗಿರುತ್ತಾರೆ. ಈ ದಂಪತಿಗಳಿಗೆ 4 ಮಂದಿ ಪುತ್ರರು. ಹಿರಿಯವರಾದ ಅಬ್ದುಲ್ ಮೊದೀನ್ ಚಾರ್ಟೆಡ್ ಅಕೌಂಟೆಂಟ್, ಎರಡನೇ ನಾಸಿರ್‌ರವರು ಫಿಶರೀಸ್ ಕಾಲೇಜಿನಲ್ಲಿ ಉಪನ್ಯಾಸಕ ರಾಗಿದ್ದು ನಿವೃತ್ತಿ ಹೊಂದಿರುತ್ತಾರೆ. ಮೂರನೇಯವರಾದ ರಹೀಮ್ ಮಂಗಳೂರಿನಲ್ಲಿ ಸಾರಾರೊಂದಿಗೆ ವಾಸವಾಗಿದ್ದಾರೆ. ನಾಲ್ಕನೇ ಸಂಶುದ್ದೀನ್ ಜಲವಿಭಾಗ ಮಂಡಳಿಯಲ್ಲಿ ಎಂಜಿನಿಯರ್ ಆಗಿರುತ್ತಾರೆ.
– ಕೆ.ಕೇಳು ಮಾಸ್ತರ್ ಅಗಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.