“ಭಾಷೆಯ ಶ್ರೇಷ್ಠತೆಗೆ ಸಾಹಿತ್ಯದಿಂದ ಮಹತ್ವ ಕಾರ್ಯ’


Team Udayavani, May 7, 2019, 6:26 AM IST

basheya-shreestate

ಬದಿಯಡ್ಕ: ಭಾಷೆಯ ಶ್ರೇಷ್ಠತೆಯನ್ನು ಎತ್ತಿಹಿಡಿಯುವಲ್ಲಿ ಸಾಹಿತ್ಯ ಗಳು ಮಹತ್ವದ ಕೆಲಸ ನಿರ್ವಹಿಸಿ ಸಮೃದ್ಧಗೊಳಿಸುತ್ತದೆ. ಪುರಾಣ, ಖುರಾನ್‌, ಗೀತೆ, ಬೈಬಲ್‌ಗ‌ಳಲ್ಲಿ ಮಾತ್ರವಾಗಿರದೆ ಪ್ರೀತಿ, ವಾತ್ಸಲ್ಯ ಸಹೋದರತೆ ಹಾಗೂ ಮಾನವೀಯತೆಗಳು ಹೃದಯದಲ್ಲಿ ಹುಟ್ಟಿಕೊಳ್ಳಬೇಕು. ಪರಸ್ಪರ ವೈಮನಸ್ಸು, ವೈರುಧ್ಯಗಳಲ್ಲಿದ ಒಳ್ಳೆಯ ಮನಸ್ಸುಗಳನ್ನು ಜೋಡಿಸಲು ಭಾಷೆ, ಸಾಹಿತ್ಯಗಳು ಬೆಳೆದುಬರಬೇಕು ಎಂದು ತೆಹ್ರೀಕ್‌-ಎ-ಉರ್ದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಮೊಹಮ್ಮದ್‌ ಅಝೀಂ ಮಣಿಮುಂಡ ಅವರು ತಿಳಿಸಿದರು.

ಬದಿಯಡ್ಕದ ರಾಮಲೀಲಾ ಸಭಾಂಗಣದಲ್ಲಿ ನಡೆದ ಯುವ ಕವಯಿತ್ರಿ, ವಿಮರ್ಶಕಿ ಚೇತನಾ ಕುಂಬಳೆ ಅವರ ಚೊಚ್ಚಲ ಕೃತಿ ಗಝಲ್‌ ಸಂಕಲನ ನಸುಕಿನಲ್ಲಿ ಬಿರಿದ ಹೂಗಳು ಹಾಗೂ ಕನ್ನಡ ಸಾಹಿತ್ಯ ವಲಯದ ವಿವಿಧ ಕಥೆಗಾರ, ಲೇಖಕ, ಕವಿಗಳ ಸಾಹಿತ್ಯ ರಚನೆಗಳ ವಿಮಶಾì ಸಂಕಲನ ಪಡಿನೆಳಲು ಕೃತಿಯ ಬಿಡುಗಡೆ ಸಮಾರಂಭದಲ್ಲಿ ವಿಶೇಷವಾಗಿ ಆಯೋಜಿಸಲಾಗಿದ್ದ ಗಝಲ್‌ ಸಾಹಿತ್ಯದ ಪರಂಪರೆಯ ಅವಲೋಕನ ವಿಶೇಷೋಪನ್ಯಾಸ ನೀಡಿ ಅವರು ಮಾತನಾಡಿದರು.

ಉರ್ದು ಭಾಷಾ ಮೂಲದ ಗಝಲ್‌ ಸಾಹಿತ್ಯವು ಅಲ್ಲಾಮಾ ಇಕ್ಬಾಲ್‌ ನೆಂಬ ಸಂತ ಕವಿಯ ಮೂಲಕ ಹೆಚ್ಚು ಪ್ರಚುರಗೊಂಡು ಬೆಳವಣಿಗೆ ಪಡೆಯಿತು. ಪ್ರೇಮ ಕಾವ್ಯ ಸ್ವರೂಪದ ಗಝಲ್‌ಗ‌ಳಿಗೆ ಉರ್ದು ಭಾಷೆಯಲ್ಲಿ ವೈವಿಧ್ಯಮಯ ಪರಂಪರೆಯಿದ್ದು, ಹತ್ತಾರು ಜನರೊಂದಿಗೆ ಕಾವ್ಯ ಸ್ವರೂಪದ ಸಂಭಾಷಣೆ, ಪ್ರಶ್ನೋತ್ತರಗಳು, ನವಿರು ಹಾಸ್ಯಗಳೊಂದಿಗೆ ಮನಸ್ಸುಗಳನ್ನು ಪುಳಕಗೊಳಿಸುವ ಶಕ್ತಿಹೊಂದಿ ಪ್ರಸಿದ್ಧವಾಗಿದೆ ಎಂದು ಅವರು ವಿವರಣೆ ನೀಡಿದರು. ಕನ್ನಡದಲ್ಲಿ ಕೆಲವು ದಶಕಗಳಿಂದ ಪ್ರಯೋಗಿಸಲ್ಪಡುತ್ತಿರುವ ಗಝಲ್‌ ಸಾಹಿತ್ಯ ರಚನೆಗಳು ಇನ್ನಷ್ಟು ವಿಪುಲಗೊಂಡು ಉತ್ತಮ ಸಮಾಜ ನಿರ್ಮಾಣದಲ್ಲಿ ಕೊಡುಗೆಗಳನ್ನು ನೀಡಲಿ ಎಂದು ಅವರು ಹಾರೈಸಿದರು.

ಬಳಿಕ ಯುವ ಗಝಲ್‌ ಗಾಯಕ ಮೊಹಮ್ಮದ್‌ ಅಶ್ವಾಕ್‌ ಮಣಿಮುಂಡ ಅವರಿಂದ ಸುಮಧುರ ಗಝಲ್‌ ಗಾಯನ ನಡೆಯಿತು. ಕವಯಿತ್ರಿ ಶ್ವೇತಾ ಕಜೆ ಸ್ವರಚಿತ ಗಝಲ್‌ ವಾಚನ ನಡೆಸಿದರು.

ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಖ್ಯಾತ ಚಿತ್ರ ಕಲಾವಿದ ಪಿ.ಎಸ್‌.ಪುಣಿಂಚಿತ್ತಾಯ ಉದ್ಘಾಟಿಸಿದರು. ಚೇತನಾ ಕುಂಬಳೆ ರಚಿಸಿರುವ ಗಝಲ್‌ ಸಂಕಲನ ನಸುಕಿನಲ್ಲಿ ಬಿರಿದ ಹೂಗಳು ಕೃತಿಯನ್ನು ನಿವೃತ್ತ ಶಿಕ್ಷಕಿ ಸರಸ್ವತಿ ಎಚ್‌. ಹಾಗೂ ವಿವಿಧ ಲೇಖಕರ ಕೃತಿ ವಿಮಶಾì ಸಂಕಲನ ಪಡಿ ನೆಳಲನ್ನು ಕವಯಿತ್ರಿ, ರಂಗನಟಿ ಪೂರ್ಣಿಮಾ ಸುರೇಶ್‌ ಹಿರಿಯಡ್ಕ ಬಿಡುಗಡೆಗೊಳಿಸಿದರು.

ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ, ಕವಿ ಡಾ|ವಸಂತಕುಮಾರ್‌ ಪೆರ್ಲ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಉಪನ್ಯಾಸಕಿ ಲಕ್ಷಿ$¾à ಕೆ., ರಾಜಗೋಪಾಲ ಓಕುಣ್ಣಾಯ ಮೊದಲಾದವರು ಉಪಸ್ಥಿತರಿದ್ದರು.

ಕೃತಿಕರ್ತೆ ಚೇತನಾ ಕುಂಬಳೆ ತಮ್ಮ ಸಾಹಿತ್ಯ ಯಾನದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮೇಘನಾ ರಾಜಗೋಪಾಲ್‌ ವಂದಿಸಿದರು. ಪತ್ರಕರ್ತ, ಸಂಘಟಕ ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.