ಶುಚೀಕರಣ ಯಜ್ಞ ಮಾದರಿಯಾದ ಸ್ಥಳೀಯಾಡಳಿತ ಸಂಸ್ಥೆಗಳು
Team Udayavani, May 13, 2019, 6:15 AM IST
ಕಾಸರಗೋಡು: ರಾಜ್ಯ ಸರಕಾರದ ಶುಚಿತ್ವ ಯಜ್ಞವನ್ನು ಅನುಷ್ಠಾನಗೊಳಿಸುವಲ್ಲಿ ಮಾದರಿ ರೂಪದಲ್ಲಿ ಚಟುವಟಿಕೆ ನಡೆಸಿದ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕೆಲವು ಗರಿಷ್ಠ ಮಟ್ಟದಲ್ಲಿ ಸಾಧನೆ ನಡೆಸಿ ಗಮನ ಸೆಳೆದಿವೆ.
ಈ ಸಾಲಿನಲ್ಲಿ ಮಡಿಕೈ ಗ್ರಾಮ ಪಂಚಾಯತ್‌ನ ಸಾಧನೆ ಗಮನಾರ್ಹವಾಗಿದೆ. ಏಕಕಾಲಕ್ಕೆ 15 ವಾರ್ಡ್ ಗಳನ್ನು ಶುಚಿಗೊಳಿಸುವ ಮೂಲಕ ಈ ಪಂಚಾಯತ್ ತನ್ನ ಜನಬೆಂಬಲ ಸಾಬೀತುಪಡಿಸಿದೆ. ಚಾಳಕ್ಕಡವು ಪ್ರದೇಶದಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಪ್ರಭಾಕರನ್ ಉದ್ಘಾಟಿಸಿದರು. ಕುಟುಂಬಶ್ರೀ ಕಾರ್ಯಕರ್ತರು, ವಿವಿಧ ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳು, ಆಟೋರಿûಾ ಕಾರ್ಮಿಕರು, ವಿವಿಧ ಕ್ಲಬ್‌ಗಳ ಕಾರ್ಯಕರ್ತರು ಶುಚೀಕರಣಕ್ಕೆ ಹೆಗಲು ನೀಡಿದರು.
ಅಜಾನೂರು ಗ್ರಾಮ ಪಂಚಾಯತ್‌ನ 23 ವಾರ್ಡ್‌ಗಳ ಶುಚೀಕರಣ ಏಕಕಾಲಕ್ಕೆ ನಡೆಸಲಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಪಿ.ದಾಮೋದರನ್ ಉದ್ಘಾಟಿಸಿದರು. ವಾರ್ಡ್‌ಗಳ ಶುಚೀಕರಣಕ್ಕೆ ಆಯಾ ವಾರ್ಡ್ ಸದಸ್ಯರು ನೇತೃತ್ವ ವಹಿಸಿದರು.
ಪಳ್ಳಿಕ್ಕರೆ ಗ್ರಾಮ ಪಂಚಾಯತ್‌ನ ಶುಚೀಕರಣ ಸಂಬಂಧ ಆಲಕ್ಕೋಡ್‌ನಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷೆ ಪಿ. ಇಂದಿರಾ ಶುಚಿತ್ವಕ್ಕೆ ಚಾಲನೆ ನೀಡಿದರು.
ಪಾಕಂ-ಪೆರಿಯ ರಸ್ತೆ ಬದಿಗಳ ಶುಚೀಕರಣಕ್ಕೆ ಅವರು ನೇತೃತ್ವ ವಹಿಸಿದ್ದರು. ಎರಡೂ ದಿನಗಳಲ್ಲಿ 16 ವಾರ್ಡ್‌ಗಳ ಶುಚೀಕರಣ ನಡೆದಿದೆ.
ಬಳಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಶುಚೀಕರಣಕ್ಕೆ ಎvತ್ತೋಡ್ ವಾರ್ಡ್‌ನಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷರು ಚಾಲನೆ ನೀಡಿದರು. ವೆಸ್ಟ್ ಏಳೇರಿಯಲ್ಲಿ ಅಧ್ಯಕ್ಷೆ ಪ್ರಸೀತಾ ರಾಜನ್ ಅವರ ನೇತೃತ್ವದಲ್ಲಿ, ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್‌ನಲ್ಲಿ ಆಯಾ ಜನಪ್ರತಿನಿಧಿಗಳ ನೇತೃತ್ವದಲ್ಲಿ ಶುಚೀಕರಣ ನಡೆದುವು.
ಕಾಂಞಂಗಾಡ್ ನಗರಸಭೆ ವ್ಯಾಪ್ತಿಯ ಶುಚೀಕರಣಕ್ಕೆ ಅಧ್ಯಕ್ಷ ವಿ.ವಿ.ರಮೇಶನ್ ಚಾಲನೆ ನೀಡಿದರು. ಮನೆ ಮನೆ ಸಂದರ್ಶನ ನಡೆಸಿ ಶುಚೀಕರಣ ಜಾಗೃತಿ ಸಂದೇಶ ನೀಡಲಾಯಿತು.
ರವಿವಾರ ಶುಚೀಕರಣ ಯಜ್ಞ ಸಮಾರೋಪಗೊಂಡಿತು. ಮೇ 9 ರಂದು ಜಿಲ್ಲಾಡಳಿತೆ ನೇತೃತ್ವದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳೊಂದಿಗೆ ನಡೆಸಲಾದ ಶುಚೀಕರಣ ಕಾಯಕವೂ ಯಶಸ್ವಿಯಾಗಿತ್ತು. 4 ಸಾವಿರಕ್ಕೂ ಅಧಿಕ ಮಂದಿ ಸೇರಿ ನಡೆಸಿದ್ದ ಆ ಕಾಯಕದಲ್ಲಿ 15 ಟನ್‌ಗೂ ಅಧಿಕ ತ್ಯಾಜ್ಯ ಸಂಗ್ರಹಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು
Udupi: ಇಲ್ಲಿ ಹೊಂಡಗಳೇ ಸ್ಪೀಡ್ ಬ್ರೇಕರ್‌ಗಳು!
Rainy Season: ಮೊಬೈಲ್ ಬಿಟ್ಟು ಬೇರೆ ಆಡೋಣವೇ? ಮಕ್ಕಳಿಗೆ ಹೀಗೊಂದು ಪ್ರಶ್ನೆ
Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು
Jammu; ವೈಷ್ಣೋದೇವಿ ರೋಪ್‌ವೇ ವಿವಾದ: ಪ್ರತಿಭಟನೆಗಿಳಿದವರು ವಶಕ್ಕೆ, ಎಫ್ಐಆರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.