ಅಪಾರ ಔಷಧೀಯ ಗುಣ ಹೊಂದಿರುವ ಸಂಬಾರ ಬಳ್ಳಿ


Team Udayavani, Mar 26, 2018, 9:40 AM IST

Sambrani-25-3.jpg

ಮನೆ ಅಂಗಳದ ಹೂಗಿಡಗಳ ಮಧ್ಯೆ ಅಗಲ ಎಲೆಯ ಹಚ್ಚ ಹಸುರಿನಿಂದ ಬೆಳೆಯುವ ಗಿಡ ಸಂಬಾರ ಬಳ್ಳಿ ಅಥವಾ ಸಾಂಬ್ರಾಣಿ ಅಥವಾ ದೊಡ್ಡ ಪತ್ರೆ ಗಿಡ. ಸಾಂಬ್ರಾಣಿ ಪರಿಮಳದಿಂದ ಕೂಡಿದ್ದು, ರಸಭರಿತ ದಪ್ಪ ಎಲೆಗಳುಳ್ಳ ಅಪಾರ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯ. ಕಫ‌, ಕೆಮ್ಮು, ಶೀತದಿಂದ ಬಳಲುವ ಚಿಕ್ಕ ಮಕ್ಕಳಿಗೆ ನಾಲ್ಕಾರು ಸಾಂಬ್ರಾಣಿ ಎಲೆಗಳನ್ನು ಕೆಂಡದಲ್ಲಿ ಬಾಡಿಸಿ ರಸ ಹಿಂಡಿ ಜೇನು ಬೆರೆಸಿ ಕುಡಿಸಿದರೆ ಆರಾಮ ಸಿಗುತ್ತದೆ. ಇದರ ಸೊಪ್ಪಿನ ಹೊಗೆಯನ್ನು ಕೆಲವು ಸೆಕೆಂಡುಗಳ ಕಾಲ ಮಕ್ಕಳಿಗೆ ನೀಡುವುದರಿಂದ ಶೀತ ಕಡಿಮೆಯಾಗುತ್ತದೆ. ಶೀತದಿಂದ ಮೂಗು ಕಟ್ಟುತ್ತಿದ್ದರೆ 1- 2 ಹನಿ ರಸವನ್ನು ಮೂಗಿಗೆ ಹಾಕಿದರೆ ಸಾಕು. ಎಲೆಗಳನ್ನು ಅರೆದು ಹಣೆಗೆ ಲೇಪಿಸುವುದರಿಂದ ತಲೆನೋವು ಗುಣವಾಗುತ್ತದೆ.

ಸೌಂದರ್ಯ ವೃದ್ಧಿ
ಮುಖ, ಮೈಯಲ್ಲಿ  ತುರಿಕೆ ಕಜ್ಜಿ ಅಥವಾ ಬೆವರುಸಾಲೆ ಎದ್ದಾಗ ಆ ಜಾಗಕ್ಕೆ ಸಾಂಬ್ರಾಣಿ ಎಲೆಗಳನ್ನು ಹಸಿಯಾಗಿಯೇ ಚೆನ್ನಾಗಿ ಉಜ್ಜಬೇಕು. ಇದರಿಂದ ಕೇವಲ ಐದು- ಹತ್ತು ನಿಮಿಷಗಳಲ್ಲಿ ದಡಿಕೆಗಳು ಮಾಯವಾಗುತ್ತವೆ. ಬೇಕಿದ್ದರೆ ಮತ್ತೆರಡು ಬಾರಿ ಉಜ್ಜಬಹುದು. ಪತ್ರೆಯ ರಸವನ್ನು ಮೊಸರಿನಲ್ಲಿ ಬೆರೆಸಿ ದೇಹಕ್ಕೆ ಲೇಪಿಸುವುದರಿಂದ ಚರ್ಮವು ಮೃದುವಾಗಿ ಕಾಂತಿಯುಕ್ತವಾಗುತ್ತದೆ. ಇದರಿಂದ ಹಲವು ವಿಧದ ಚರ್ಮವ್ಯಾಧಿಗಳು ಗುಣಮುಖವಾಗುತ್ತವೆ ಎನ್ನುತ್ತಾರೆ ಸೌಂದರ್ಯ ತಜ್ಞರು.

ಇದರ ಎಲೆಗಳಿಂದ ತಯಾರಿಸುವ ಸೂಪ್‌ ಬಾಣಂತಿಯರಿಗೆ ಎದೆಹಾಲಿನ ಕೊರತೆ ನೀಗುತ್ತದೆ. ಋತುಸ್ರಾವದ ಸಮಸ್ಯೆಗಳು, ಸ್ತ್ರೀ, ಪುರುಷರ ಬಂಜೆತನದ ನಿವಾರಣೆಯಲ್ಲೂ ಇದರ ಪತ್ರೆಗಳು ಪರಿಣಾಮಕಾರಿಯಾಗಿದೆ. ಚೇಳಿನ ಕಡಿತಕ್ಕೂ ಇದರ ರಸ ದಿವ್ಯ ಔಷಧವಾಗಿದೆ. ಕಿವಿನೋವಿಗೆ ಎಲೆಗಳ ರಸವನ್ನು ಬಿಸಿ ಮಾಡಿ ಕಿವಿಗೆ ಹಾಕಬೇಕು. ಇದರಿಂದ ಕಿವಿ ನೋವು ಕಡಿಮೆಯಾಗುತ್ತದೆ.

ಅಡುಗೆ ಮನೆಯಲ್ಲೂ ಸ್ಥಾನ
ಜೀರ್ಣಕಾರಕ ಗುಣ ಹೊಂದಿರುವ ಸಾಂಬ್ರಾಣಿ ಅಡುಗೆಯಲ್ಲೂ ಬಳಸಬಹುದು. ಎಲೆಗಳನ್ನು ಬಿಡಿಸಿ/ ಬೇಯಿಸಿ ತೆಂಗಿನ ಹೂವಿನೊಂದಿಗೆ ಅರೆದು, ಮಜ್ಜಿಗೆ ಸೇರಿಸಿ ತಂಬುಳಿಯಾಗಿ ಉಪಯೋಗಿಸಬಹುದು. ಅಲ್ಲದೆ ಈರುಳ್ಳಿಯೊಂದಿಗೆ ಸಣ್ಣಗೆ ಕೊಚ್ಚಿ ಸಲಾಡ್‌ ಮಾಡಬಹುದು. ಇದು ಬೇಸಗೆಯಲ್ಲಿ ದೇಹವನ್ನು ತಂಪಾಗಿರಿಸುತ್ತದೆ. ನಾರಿನ ಅಂಶ, ಜೀವಸತ್ವ  ಹಾಗೂ ಕಬ್ಬಿಣಾಂಶಗಳ ಆಗರವಾಗಿರುವ ಸಾಂಬ್ರಾಣಿ ಸೊಪ್ಪನ್ನು ಹಾಗೆಯೇ ಜಗಿದು ತಿನ್ನಬಹುದು. ಗ್ರೀನ್‌ ಟೀ ತಯಾರಿಯಲ್ಲಿ ಇದರ ಸೊಪ್ಪನ್ನು ಬಳಸಿದರೆ ಚಹಾಕ್ಕೆ ವಿಶಿಷ್ಟ ಸ್ವಾದ ಬರುತ್ತದೆ.

ಸಾಂಬ್ರಾಣಿ ಎಣ್ಣೆ
ಸಾಂಬ್ರಾಣಿ ಎಣ್ಣೆಯು ಮಾನಸಿಕ ಉದ್ವೇಗವನ್ನು ನಿಯಂತ್ರಿಸುತ್ತದೆ. ನರವ್ಯೂಹದ ಬಿಗಿತವನ್ನು ಕಡಿಮೆ ಮಾಡುತ್ತದೆ. ಗ್ಯಾಸ್‌ಟ್ರಿಕ್‌ನಿಂದ ಮುಕ್ತಿ ನೀಡಿ ಜೀರ್ಣಕ್ರಿಯೆ ಸುಗಮವಾಗುವಂತೆ ಮಾಡುತ್ತದೆ. ರೋಗ ನಿರೋಧಕದಂತೆ ಕೆಲಸ ಮಾಡುವ ಇದರಲ್ಲಿ ಬೆನ್ಫೋಯೇಟ್‌, ಬೆನಾ#ಯಿಕ್‌ ಆಮ್ಲ ಮತ್ತು ಬೆನÛಲ್‌ ಡಿಹೈಡ್ರೇಟ್‌ ಇದ್ದು, ಇದು ಫ‌ಂಗಸ್‌ ಮತ್ತು ಬ್ಯಾಕ್ಟ್ರೀರಿಯಾ ನಿರೋಧಕದಂತೆ ಕೆಲಸ ಮಾಡುತ್ತದೆ. ಗಾಯಕ್ಕೆ ಸಾಂಬ್ರಾಣಿ ಎಣ್ಣೆಯನ್ನು ಹಚ್ಚಿದರೆ ಸೋಂಕು ಬೇಗನೆ ನಿವಾರಣೆಯಾಗುತ್ತದೆ.

ಸಾಂಬ್ರಾಣಿ ಎಲೆಗಳು ಔಷಧೀಯ ಗುಣಗಳನ್ನು ಮಾತ್ರವಲ್ಲ ಅಪಾರ ಪೋಷಕಾಂಶಗಳನ್ನು ಹೊಂದಿವೆ. ಪ್ರೋಟಿನ್‌, ದೇಹಕ್ಕೆ ಬೇಕಾಗುವ ಪ್ರಮುಖ ಜೀವಸತ್ವಗಳು, ಕಬ್ಬಿಣ, ತಾಮ್ರ ಮುಂತಾದ ಖನಿಜಗಳು, ಸೋಡಿಯಂ, ಮೆಗ್ನೇಷಿಯಂ, ನಾರು, ಸತು ಹೀಗೆ ಅನೇಕ ಪೋಷಕಾಂಶಗಳಿಂದ ಕೂಡಿದ ಕಾರಣ ನಿತ್ಯ ಆಹಾರದ ಜತೆಗೆ ಇದನ್ನು ಬಳಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

ಸಾಂಬ್ರಾಣಿ ಕಷಾಯ
ಸಾಂಬ್ರಾಣಿ ಎಲೆಯ ಕಷಾಯದಿಂದ ಜ್ವರ ನಿಯಂತ್ರಣವಾಗುತ್ತದೆ. ಮಲೇರಿಯಾ ಜ್ವರಕ್ಕೆ ಸಾಂಬ್ರಾಣಿ ದೊಡ್ಡ ಪತ್ರೆ ಎಲೆಗಳು, ಕಾಳುಮೆಣಸು, ಶುಂಠಿ, ಕಿರಾತಕಡ್ಡಿ ಸೇರಿಸಿ ತಯಾರಿಸುವ ಕಷಾಯ ಸೇವನೆಯಿಂದ ಶೀಘ್ರ ಉಪಶಮನವಾಗುತ್ತದೆ. ಉದರಶೂಲೆ, ಮಾನಸಿಕ ಒತ್ತಡ, ನಿದ್ರಾಹೀನತೆಗೆ ಈ ಕಷಾಯ ಸೇವನೆಯಿಂದ ಪರಿಹಾರ ಸಿಗುತ್ತದೆ.

— ಭರತ್‌ ರಾಜ್‌ ಕರ್ತಡ್ಕ

ಟಾಪ್ ನ್ಯೂಸ್

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Suside-Boy

Kasaragodu: ರೈಲಿನಿಂದ ಬಿದ್ದು ವ್ಯಕ್ತಿ ಸಾವು

14

Kasaragod: ಕೇರಳದಿಂದ ಕರ್ನಾಟಕಕ್ಕೆ ಪಲಾಯನಗೊಂಡಿದ್ದ ನಕ್ಸಲರು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

madhu-bangara

Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.