ನೂತನ ಸೇತುವೆಗೆ ಕಾಯಬೇಕಿನ್ನೆಷ್ಟು ಕಾಲ?


Team Udayavani, Jul 4, 2017, 3:50 AM IST

03ksde4.jpg

ಮಾಡಕ್ಕಲ್‌ ತೂಗು ಸೇತುವೆ ಕುಸಿದು ನಾಲ್ಕು ವರ್ಷ
ಕಾಸರಗೋಡು: ಮಾಡಕ್ಕಲ್‌ ತೂಗು ಸೇತುವೆ ಮುರಿದು ಬಿದ್ದು ನಾಲ್ಕು ವರ್ಷ ಸಂದರೂ ಇನ್ನೂ ನೂತನ ಸೇತುವೆ ನಿರ್ಮಾಣಗೊಂಡಿಲ್ಲ. ಈ ಕಾರಣದಿಂದ ಸ್ಥಳೀಯ ನಿವಾಸಿಗಳು ವಿವಿಧ ಸಮಸ್ಯೆಗಳಿಗೆ ತುತ್ತಾಗಿದ್ದು ಹಿನ್ನೀರು ದಾಟಬೇಕಾದರೆ ದೋಣಿ ಸವಾರಿ ಮಾತ್ರವೇ ದಾರಿಯಾಗಿದೆ.

ನಾಲ್ಕು ವರ್ಷಗಳ ಹಿಂದೆ ಕುಸಿದು ಬಿದ್ದ ಮಾಡಕ್ಕಲ್‌ ತೂಗುಸೇತುವೆಗೆ ಬದಲಿಯಾಗಿ ನೂತನ ಸೇತುವೆಯ ನಿರೀಕ್ಷೆಯಲ್ಲಿದ್ದ ಸ್ಥಳೀಯರು ಇಂದೂ ಸೇತುವೆಗಾಗಿ ಎದುರು ನೋಡುತ್ತಿದ್ದಾರೆ. ಬಹಳಷ್ಟು ಆಳ ಹಾಗೂ ಸುಳಿಯಿರುವ ಕವ್ವಾಯಿ ಹಿನ್ನೀರು ದಾಟಬೇಕಾದರೆ ದೋಣಿಯನ್ನು ಆಶ್ರಯಿಸಬೇಕಾದ ಪರಿಸ್ಥಿತಿ ನೆಲೆಗೊಂಡಿದೆ. ವಲಿಯಪರಂಬ ನಿವಾಸಿಗಳು ಹಿನ್ನೀರಿನ ಅತ್ತಯಿತ್ತ ಸಾಗಬೇಕಾದರೆ ದೋಣಿ ಅಲ್ಲದೆ ಬೇರೆ ಮಾರ್ಗವಿಲ್ಲ. ದಿನಾ ನೂರಾರು ಮಂದಿ ಹಿನ್ನೀರಿನ ಅಚೆ ತಲುಪಬೇಕಾದರೆ ದೋಣಿಯನ್ನೇ ಬಳಸುತ್ತಿದ್ದಾರೆ. ಈ ಪೈಕಿ ವಿದ್ಯಾರ್ಥಿಗಳೂ, ಕಾರ್ಮಿಕರೂ ಇದ್ದಾರೆ.

ಮಂಜೇರಿಯಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಮಕ್ಕಳು ಸಾವಿ ಗೀಡಾದ ಹಿನ್ನೆಲೆಯಲ್ಲಿ ಹಿಂದಿನ ವಿ.ಎಸ್‌. ಅಚ್ಯುತಾನಂದನ್‌ ನೇತೃತ್ವದ ಎಡರಂಗ ಸರಕಾರ ಮಾಡಕ್ಕಲ್‌ನಲ್ಲಿ ತೂಗು ಸೇತುವೆಯನ್ನು ಮಂಜೂರು ಮಾಡಿತ್ತು. ನಿರ್ಮಾಣ ಪೂರ್ತಿಗೊಳಿಸಿದ ತೂಗು ಸೇತುವೆ 2013ರ ಎಪ್ರಿಲ್‌ 30ರಂದು ಹಿಂದಿನ ಯುಡಿಎಫ್‌ ಸರಕಾರದ ಅವಧಿ ಯಲ್ಲಿ ಅಂದಿನ ಕಂದಾಯ ಸಚಿವರು ಉದ್ಘಾಟಿಸಿ ಲೋಕಾರ್ಪಣೆ ಗೈದಿದ್ದರು. ಆದರೆ ಈ ತೂಗು ಸೇತುವೆ ಹೆಚ್ಚು ಕಾಲ ಉಳಿಯದೆ ಸೇತುವೆ ಉದ್ಘಾಟನೆ ಗೊಂಡು ಎರಡು ತಿಂಗಳಿಗೆ ಎರಡು ದಿನಗಳಿರು ವಂತೆ ಮುರಿದುಬಿತ್ತು. 

ಕಂದಾಯ ಇಲಾಖೆ ದುರಂತ ನಿವಾರಣೆ ನಿಧಿಯಿಂದ ನಾಲ್ಕು ಕೋ. ರೂ. ವೆಚ್ಚದಲ್ಲಿ ಈ ತೂಗು ಸೇತುವೆಯನ್ನು ನಿರ್ಮಿಸಿತ್ತು. ಈ ತೂಗೆ ಸೇತುವೆ ನಿರ್ಮಾಣಗೊಂಡು ಉದ್ಘಾಟನೆ ಗೊಂಡಿದ್ದರಿಂದ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದರು. ಆದರೆ ಸ್ಥಳೀಯರ ಹರ್ಷ ಹೆಚ್ಚು ದಿನ ಉಳಿಯಲಿಲ್ಲ. ಕರಾ ವಳಿಯ ಜನರು ಹಲವು ವರ್ಷ ಗಳಿಂದ ಅನುಭವಿ ಸುತ್ತಿದ್ದ ಸಾರಿಗೆ ಸಮಸ್ಯೆ ಪರಿಹಾರ ವಾಯಿತು ಎಂದು ಖುಷಿಪಟ್ಟಿ ದ್ದರು. ಆದರೆ ಈ ತೂಗು ಸೇತುವೆಯ ಆಯುಷ್ಯ ಕೇವಲ 58 ದಿನಗಳಿಗೆ ಸೀಮಿತ ಗೊಂಡಿತು. ತೂಗು ಸೇತುವೆ ಮುರಿದು ಬಿದ್ದುದರಿಂದ ಮತ್ತೆ ಅದೇ ಹಿಂದಿನ ಸಾರಿಗೆ ಸಮಸ್ಯೆ ಸ್ಥಳೀಯರನ್ನು ಕಾಡುತ್ತಲೇ ಇದೆ. ನೂತನ ಸೇತುವೆ ಇಂದು ನಾಳೆ ನಿರ್ಮಾಣವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಸœಳೀಯರು ನಾಲ್ಕು ವರ್ಷಗಳಿಂದ ಸೇತುವೆಗಾಗಿ ಕಾಯುತ್ತಿದ್ದಾರೆ.

ಅಧಿಕಾರ ಬಂತು ತನಿಖೆ  ಮರೆತುಹೋಯ್ತು
ತೂಗು ಸೇತುವೆ ಕೆಲವೇ ದಿನಗಳಲ್ಲಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ ವಿವಿಧ ತನಿಖೆ ನಡೆದಿತ್ತು. ಆದರೆ ಇನ್ನೂ ತೂಗು ಸೇತುವೆ ಕುಸಿದು ಬೀಳಲು ಸ್ಪಷ್ಟ ಕಾರಣವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಸ್ಥಳೀಯರು ನೂತನ ಸೇತುವೆಗಾಗಿ ಹಲವು ಮನವಿಗಳನ್ನು ನೀಡಿದ್ದರೂ ಇನ್ನೂ ಸೇತುವೆ ನಿರ್ಮಾಣವಾಗಿಲ್ಲ. ಯುಡಿಎಫ್‌ ಸರಕಾರದ ಅವಧಿಯಲ್ಲಿ ಸೇತುವೆಗಾಗಿ ಹೋರಾಟ ನಡೆದಿತ್ತು. ಮನವಿಗಳ ಮಹಾಪೂರವೇ ಹರಿದು ಬಂದಿತ್ತು. ಅಂದು ಮನವಿಗಳನ್ನು ನೀಡಿದವರು, ಹೋರಾಟ ಮಾಡಿದವರು, ಸೇತುವೆ ಮುರಿದು ಬೀಳಲು ಕಾರಣದ ಕುರಿತು ಸಮಗ್ರ ತನಿಖೆಗಾಗಿ ಆಗ್ರಹಿಸಿದವರು ಇಂದು ಅಧಿಕಾರಕ್ಕೆ ತಲುಪಿದ್ದರೂ ಸ್ಥಳೀಯರಿಗೆ ಹಿನ್ನೀರು ದಾಟಲು ದೋಣಿ ಅಲ್ಲದೆ ಬೇರೆ ಮಾರ್ಗವಿಲ್ಲ.

ಟಾಪ್ ನ್ಯೂಸ್

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Kasaragod Crime News: ನೇಣು ಬಿಗಿದು ಯುವಕ ಆತ್ಮಹ*ತ್ಯೆ

1-katte

ಕಟ್ಟೆಮಾಡು ದೇಗುಲ ವಸ್ತ್ರ ಸಂಹಿತೆೆ ವಿವಾದ: ಆಡಳಿತ ಮಂಡಳಿ ಸಭೆಯಲ್ಲಿ ಮೂಡದ ಒಮ್ಮತ‌

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

1-ksde

CPCRI; ಅಡಿಕೆ ಉತ್ಪನ್ನ ಬಗ್ಗೆ ಸಂಶೋಧನೆ

Fraud case: ಸಚಿತಾ ರೈ ವಿರುದ್ಧ ಇನ್ನೊಂದು ಕೇಸು ದಾಖಲು

Fraud case: ಸಚಿತಾ ರೈ ವಿರುದ್ಧ ಇನ್ನೊಂದು ಕೇಸು ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.