ಮಾಧವತ್ವದೆಡೆಗೆ ಸಾಗಿದರೆ ಬದುಕು ಸಾರ್ಥಕ: ಗುರುಪುರ ಶ್ರೀ


Team Udayavani, Mar 17, 2017, 2:31 PM IST

16ksde5.jpg

 ಮೀಯಪದವು: ಸುಣ್ಣಾರ ಬಾಳಿಯೂರು ಶ್ರೀ ಕೊರಗ ತನಿಯ ಗುಳಿಗ ದೈವಸ್ಥಾನದ  ಪುನರ್‌ ಪ್ರತಿಷ್ಠಾ ಸಾನ್ನಿಧ್ಯ ಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಆಶೀರ್ವ ಚನವಿತ್ತು, ಕೊರಗಜ್ಜನಿಗೆ ಕಟ್ಟುಪಾಡುಗಳಿಲ್ಲ. ಹಿರಿಯರು ಹಾಕಿಕೊಟ್ಟ ತಳಪಾಯವನ್ನು ಉಳಿಸಿ ಬೆಳೆಸುವುದು ಯುವಕರಿಂದಾಗಬೇಕು. ಹಿರಿಯರು ನಡೆಸಿಕೊಂಡು ಬಂದ ಸಂಸ್ಕಾರವನ್ನು ಬೆಳೆಸುವ ಶಕ್ತಿ ಈ ಆಧುನಿಕ ಯುಗದಲ್ಲಾಗಬೇಕು. ಮನುಷ್ಯತ್ವದಿಂದ ಮಾಧವತ್ವದೆಡೆಗೆ ಸಾಗಿದರೆ ಬದುಕು ಸಾರ್ಥಕವೆನಿಸುವುದು. ಕೊರಗಜ್ಜನನ್ನು ಧರ್ಮಶ್ರದ್ಧೆಯಿಂದ ಆರಾಧಿಸಿದಾಗ ಧರ್ಮ ನೆಲೆಯೂರಲು ಸಾಧ್ಯವೆಂದು ಆಶೀರ್ವಚಿಸಿದರು.

ಬಾಳಿಯೂರು ಶ್ರೀ ಅಯ್ಯಪ್ಪ ಭಜನಾ ಮಂದಿರದ ಸಂಚಾಲಕ ಡಾ|ಜಯಪ್ರಕಾಶ್‌ ನಾರಾಯಣ ತೊಟ್ಟೆತ್ತೋಡಿ ಅವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ನ್ಯಾಯವಾದಿ ರವಿ ಪ್ರಸನ್ನ ಪದಂಗಡಿ, ಮುತ್ತು ಶೆಟ್ಟಿ ಬಾಳಿಯೂರು, ಬ್ಲಾಕ್‌ ಪಂಚಾಯತ್‌ ಸದಸ್ಯೆ ಆಶಾಲತ, ವಾರ್ಡ್‌ ಸದಸ್ಯೆ ಚಂದ್ರಾವತಿ ವಿ.ಪಿ ಕುಳೂರು, ವಾರ್ಡ್‌ ಸದಸ್ಯ ಮುಹಮ್ಮದ್‌ ಕುಂಞ, ಹರೀಶ್‌ ಕುಮಾರ್‌ ಮಂಗಲ್ಪಾಡಿ ಅತಿಥಿಗಳಾಗಿ ಹಾಗೂ ವಿಶೇಷ ಆಹ್ವಾನಿತರಾಗಿ ಕಿರುತೆರೆ ನಟ ರಾಜಶೇಖರ ಶೆಟ್ಟಿ ಅಳಿಕೆ ಪಾಲ್ಗೊಂಡಿದ್ದರು.

ಈ ಶುಭ ಸಂದರ್ಭದಲ್ಲಿ ಕೃಷ್ಣ ಜಿ. ಮಂಜೇಶ್ವರ, ಜಗನ್ನಿವಾಸ ಶೆಟ್ಟಿ ಮಂಗಲ್ಪಾಡಿ, ಪಿಂಕಿರಾಣಿ ಮಂಗಳೂರು, ಅಶ್ರಫ್ ಬಾಳಿಯೂರು ಚಿನಾಲ,ರಾಜಶೇಖರ ಶೆಟ್ಟಿ ಅಳಿಕೆ ಅವರನ್ನು ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು. 

ದಿವಾಕರ್‌ ಪ್ರತಾಪ್‌ನಗರ ಅವರು ಕಾರ್ಯಕ್ರಮ ನಿರೂಪಿಸಿದರು. ಅರವಿಂದಾಕ್ಷ ಭಂಡಾರಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತವನ್ನಿತ್ತರು. ಜಯಪ್ರಕಾಶ್‌ ಅಂಗಡಿದಾರು ವಂದಿಸಿದರು.  ಬ್ರಿಜೇಶ್‌ ಬಾಳಿಯೂರು ಪ್ರಾರ್ಥನೆ ಹಾಡಿದರು.

ಮಹಾಲಿಂಗೇಶ್ವರ ದೇವಸ್ಥಾನದಿಂದ ಹಸಿರು ಹೊರೆಕಾಣಿಕೆ ವಾದ್ಯ ಘೋಷಗಳೊಂದಿಗೆ ಶ್ರೀ ಅರಸು ಸಂಕಲ ಜೈ ಹನುಮಾನ್‌ ವ್ಯಾಯಾಮ ಶಾಲೆ ಸಂತಡ್ಕ ಅವರ ತಾಲೀಮು ಪ್ರದರ್ಶನದೊಂದಿಗೆ ಪ್ರತಿಷ್ಠಾ ಸಾನ್ನಿಧ್ಯ ಕಲಶೋತ್ಸವಕ್ಕೆ ಚಾಲನೆ ನೀಡಲಾಯಿತು. ಬ್ರಹ್ಮಶ್ರೀ ಕರ್ಕುಳ ಬೂಡು ಶಂಕರನಾರಾಯಣ ಕಡಮಣ್ಣಾಯ  ಮತ್ತು ಯೋಗೀಶ್‌ ಕಲ್ಯಾಣತ್ತಾಯ ಅವರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ಕಾರ್ಯಕ್ರಮ ನಡೆದು ಅನ್ನ ಸಂತರ್ಪಣೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯುವಧಾರ ಫ್ರೆಂಡ್ಸ್‌ ಕ್ಲಬ್‌ ಚಿಗುರುಪಾದೆ ಇವರ ಪ್ರಾಯೋಜಕತ್ವದಲ್ಲಿ ನƒತ್ಯ ವೈಭವ ಮತ್ತು ಕೃಷ್ಣ ಜಿ.ಮಂಜೇಶ್ವರ  ಅವರ ನಿರ್ದೇಶನದಲ್ಲಿ ನಾಟಕ “ಜನನೇ ಬೇತೆ’ ಪ್ರದರ್ಶನಗೊಂಡಿತು.
 

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

crime

Tipper ಢಿಕ್ಕಿ: ಎಂಬಿಬಿಎಸ್‌ ವಿದ್ಯಾರ್ಥಿ ಸಾವು

Untitled-1

Kasaragod ಅಪರಾಧ ಸುದ್ದಿಗಳು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Court-Symbol

Kasaragodu: ಶಿಕ್ಷಕಿ ಆತ್ಮಹತ್ಯೆ: ಪತಿಗೆ 9 ವರ್ಷ, ಅತ್ತೆಗೆ 7 ವರ್ಷ ಕಠಿನ ಜೈಲು ಶಿಕ್ಷೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.