ಮದ್ರಸಾ ಅಧ್ಯಾಪಕನ ಕತ್ತು ಕೊಯ್ದು ಹತ್ಯೆ


Team Udayavani, Mar 22, 2017, 3:50 AM IST

21-KARAVALI-1.jpg

ಕಾಸರಗೋಡು: ಮಧೂರು ಗ್ರಾಮ ಪಂಚಾಯತ್‌ನ ಹಳೆಯ ಚೂರಿ (ಸೂರ್ಲು) ಇಶತೂಲ್‌ ಇಸ್ಲಾಂ ಮದ್ರಸದ ಅಧ್ಯಾಪಕ ಮಡಿಕೇರಿ ನಿವಾಸಿ ರಿಯಾಸ್‌ ಮೌಲವಿ (30) ಅವರನ್ನು ಮಾ. 20 ಮಧ್ಯರಾತ್ರಿ ಕುತ್ತಿಗೆ ಕೊಯ್ದು, ಎದೆಗೆ ಇರಿದು ಕೊಲೆ ಮಾಡಲಾಗಿದೆ.

ಘಟನೆಯನ್ನು ಖಂಡಿಸಿ ಕಾಸರಗೋಡು ವಿಧಾನಸಭಾ ವ್ಯಾಪ್ತಿಯಲ್ಲಿ ಮುಸ್ಲಿಂ ಲೀಗ್‌ ಕರೆ ನೀಡಿದ ಹರತಾಳದಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವ್ಯಾಪಕ ಹಿಂಸಾಚಾರ ನಡೆಯಿತು. ಹಿಂಸಾನಿರತ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ನಡೆಸಿದರು. ಹಿಂಸೆಯಲ್ಲಿ ಹಲವು ಮನೆಗಳು, ವಾಹನಗಳು ಹಾನಿಗೀಡಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.

ಪೊಲೀಸ್‌ ವರಿಷ್ಠರು ಕಾಸರಗೋಡಿಗೆ
ಕೊಲೆಯ ಹಿನ್ನೆಲೆಯಲ್ಲಿ ಉತ್ತರ ವಲಯ ಎಡಿಜಿಪಿ ರಾಜೇಶ್‌ ದಿವಾನ್‌, ಐ.ಜಿ. ಮಹಿಪಾಲ ಕಾಸರಗೋಡಿಗೆ ಬಂದಿದ್ದು ಸಮಗ್ರ ತನಿಖೆಗೆ ನಿರ್ದೇಶಿಸಿದ್ದಾರೆ. ಕಾಸರಗೋಡು ಡಿವೈಎಸ್‌ಪಿ ಎಂ.ವಿ. ಸುಕುಮಾರನ್‌, ಸಿ.ಐ. ಅಬ್ದುಲ್‌ ರಹೀಂ, ಎಸ್‌.ಐ. ಅಜಿತ್‌ ಕುಮಾರ್‌ ಮೊದಲಾದವರ ನೇತೃತ್ವದಲ್ಲಿ ಹಲವು ತಂಡಗಳಾಗಿ ತನಿಖೆ ನಡೆಯುತ್ತಿದೆ. ಶ್ವಾನ ದಳ ಮತ್ತು ಬೆರಳ ಗುರುತು ತಜ್ಞರು ಸ್ಥಳಕ್ಕೆ ಧಾವಿಸಿ ಮಾಹಿತಿ ಕಲೆ ಹಾಕಿದ್ದಾರೆ. ಸಿ.ಸಿ. ಟಿ.ವಿ. ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಸೈಬರ್‌ ಸೆಲ್‌ನ ನೆರವನ್ನು ಯಾಚಿಸಲಾಗಿದೆ.

ಹರತಾಳ, ಹಿಂಸೆ
ಮದ್ರಸಾ ಅಧ್ಯಾಪಕ ರಿಯಾಸ್‌ ಮೌಲವಿ ಹತ್ಯೆಧಿ ಪ್ರತಿಭಟಿಸಿ ಕಾಸರಗೋಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಸ್ಲಿಂ ಲೀಗ್‌ ಕರೆ ನೀಡಿದ ಹರತಾಳದ ಬೆನ್ನಲ್ಲೇ ವ್ಯಾಪಕ ಹಿಂಸೆ ನಡೆದಿದೆ. ಅಮೈ, ಕೋಟೆಕಣಿ ಮೊದಲಾದ ಜನವಾಸ ಕೇಂದ್ರಗಳಿಗೆ ನುಗ್ಗಿದ ಗುಂಪು ಸಿಕ್ಕ ಸಿಕ್ಕ ಮನೆಗಳಿಗೆ ಕಲ್ಲೆಸೆದು ಹಾನಿಗೊಳಿಸಿದ್ದು, ಕಲ್ಲೆಸೆತದಿಂದ ಮಂಗಳೂರಿನ ನಿವಾಸಿ ಶ್ರೀನಿವಾಸ, ಕೋಟೆಕಣಿಯ ಮಣಿ, ಮನೋಜ್‌ ಸಹಿತ ಹಲವರು ಗಾಯಗೊಂಡಿದ್ದಾರೆ.

ರಸ್ತೆ ತಡೆ ನಡೆಸಿ ವಾಹನಗಳನ್ನು ತಡೆದು ಹಾನಿಗೊಳಿಸಲಾಯಿತು. ಎಡನೀರು, ತಳಂಗರೆ ಮೊದಲಾದೆಡೆಗಳಲ್ಲಿ ರಸ್ತೆಗೆ ಮರಗಳನ್ನು ಅಡ್ಡವಿರಿಸಿ ವಾಹನ ಸಂಚಾರ ತಡೆಯಲಾಯಿತು. ಉಳಿಯತ್ತಡ್ಕ, ವಿದ್ಯಾನಗರ, ಅಣಂಗೂರು, ನಗರದ ವಿವಿಧೆಡೆ, ನಾಯಮ್ಮಾರಧಿಮೂಲೆ, ಆಲಂಪಾಡಿ, ಚೌಕಿ, ಸೂರ್ಲು ಮೊದಧಿಲಾದೆಡೆಗಳಲ್ಲೂ ಮನೆಗಳಿಗೆ ಕಲ್ಲೆಸೆದು ಹಾನಿಗೊಳಿಸಲಾಯಿತು.
ಕಾಸರಗೋಡು ನಗರದಲ್ಲಿ ಗುಂಪು ಸೇರಿದ್ದ ತಂಡವನ್ನು ಚದುರಿಸಲು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗಿಸಲಾಯಿತು.

ಶವ ಮಡಿಕೇರಿಗೆ
ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ  ಉನ್ನತ ಮಟ್ಟದ ಶವ ಮಹಜರು ನಡೆಸಿದ ಬಳಿಕ ರಿಯಾಸ್‌ ಅವರ ಶವವನ್ನು ಊರಾದ ಮಡಿಕೇರಿಗೆ ಕೊಂಡೊಯ್ಯಲಾಯಿತು. ಮಾರಕಾಯುಧಗಳಿಂದ ಕುತ್ತಿಗೆ ಹಾಗೂ ಎದೆಯಲ್ಲಿ ಆಗಿರುವ ಮೂರು ಆಳವಾದ ಗಾಯಗಳು ಸಾವಿಗೆ ಕಾರಣವೆಂದು ಶವ ಮಹಜರು ವರದಿಯಲ್ಲಿ ತಿಳಿಸಲಾಗಿದೆ. 25ರಷ್ಟು ಸಣ್ಣ ಗಾಯಗಳೂ ದೇಹದಲ್ಲಿ ಕಂಡುಬಂದಿವೆ. ಒಂದೇ ಆಯುಧದಿಂದ ಗಾಯಗಳಾಗಿವೆ ಎಂದು ತನಿಖೆಯಿಂದ ತಿಳಿಯಲಾಗಿದೆ.

ಸಮಗ್ರ ತನಿಖೆ: ಇ. ಚಂದ್ರಶೇಖರನ್‌
ಚೂರಿಯ ಮದ್ರಸಾ ಅಧ್ಯಾಪಕ ರಿಯಾಸ್‌ ಮೌಲವಿ ಹತ್ಯೆ ಪ್ರಕರಣದ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಕಂದಾಯ ಸಚಿವ ಇ. ಚಂದ್ರಶೇಖರನ್‌ ಹೇಳಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದ ಅವರು ಕಾಸರಗೋಡಿನಲ್ಲಿ ಶಾಂತಿ ಹದಗೆಡದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಸರ್ವಪಕ್ಷ  ಶಾಂತಿ ಸಭೆ
ಜಿಲ್ಲಾಧಿಕಾರಿ ಕೆ. ಜೀವನ್‌ ಬಾಬು ಅವರ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಶಾಂತಿ ಸಭೆಧಿಯಲ್ಲಿ ಮದ್ರಸಾ ಅಧ್ಯಾಪಕರ ಹತ್ಯೆಯನ್ನು ಖಂಡಿಸಲಾಯಿತು. ಯಾವುದೇ ವದಂತಿಗಳಿಗೆ ಕಿವಿಗೊಡದಂತೆಯೂ ವದಂತಿ ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿಯೂ ಅವರು ಹೇಳಿದರು. ಇದೇ ಸಂದರ್ಭದಲ್ಲಿ ಶಾಂತಿ ಕಾಪಾಡುವಂತೆ ಕರೆ ನೀಡಲಾಯಿತು.
ಬಿಜೆಪಿ ಖಂಡನೆ ಹಳೆಯ ಚೂರಿ (ಸೂರ್ಲು) ಇಶತೂಲ್‌ ಇಸ್ಲಾಂ ಮದ್ರಸದ ಅಧ್ಯಾಪಕ ರಿಯಾಸ್‌ ಮೌಲವಿ ಅವರ ಹತ್ಯೆಯನ್ನು ಬಿಜೆಪಿ ಕಾಸರಧಿಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್‌ ಖಂಡಿಸಿದ್ದಾರೆ. ಅಪರಾಧಿಗಳನ್ನು ಶೀಘ್ರವೇ ಪತ್ತೆಹಚ್ಚಿ ಕಾನೂನಿನ ಮುಂದೆ ತರಬೇಕಾಗಿ ಅವರು ಕೇಳಿಕೊಂಡಿದ್ದಾರೆ.

ಧ್ವನಿವರ್ಧಕದಲ್ಲಿ  ರಕ್ಷಣೆಗೆ ಮೊರೆ
ಮಸೀದಿಗೆ ಹೊಂದಿಕೊಂಡಿರುವ ಕೊಠಡಿಗೆ ಸೋಮವಾರ ಮಧ್ಯರಾತ್ರಿ ನುಗ್ಗಿದ ತಂಡವೊಂದು ರಿಯಾಸ್‌ ಅವರನ್ನು ಕೊಲೆ ಮಾಡಿದೆ. ಇನ್ನೊಂದು ಕೊಠಡಿಯಲ್ಲಿದ್ದ ಖತೀಬ್‌ ಅಬ್ದುಲ್‌ ಅಝೀಝ್ ಮುಸ್ಲಿಯಾರ್‌ ಅವರು ಆಗ ಸದ್ದು ಕೇಳಿಸಿ ಎಚ್ಚರಗೊಂಡಿದ್ದು ಏನೋ ಅವಘಡ ನಡೆಯುತ್ತಿದೆ ಎಂದು ಅರಿತು ಬಾಗಿಲು ತೆರೆದು ಹೊರಬಂದರು. ಅವರತ್ತ ಕಲ್ಲು ತೂರಾಟ ನಡೆದದ್ದರಿಂದ ಬಾಗಿಲು ಮುಚ್ಚಿ ಒಳಬಂದು ಮಸೀದಿಯ ಧ್ವನಿವರ್ಧಕದಲ್ಲಿ ಮಸೀದಿಗೆ ತಂಡವೊಂದು ನುಗ್ಗಿರುವ ಬಗ್ಗೆ ಕೂಗಿಹೇಳಿದರು. ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬಂದಾಗ ತಂಡ ಪರಾರಿಯಾಗಿತ್ತು. ರಿಯಾಸ್‌ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತತ್‌ಕ್ಷಣ ಆಸ್ಪತ್ರೆಗೆ ಕೊಂಡೊಯ್ದರೂ ಆಗಲೇ ಸಾವು ಸಂಭವಿಸಿತ್ತು. ರಿಯಾಸ್‌ ಅವರು ಕಳೆದ ಎಂಟು ವರ್ಷಗಳಿಂದ ಈ ಮದ್ರಸಾದಲ್ಲಿ ದುಡಿಯುತ್ತಿದ್ದಾರೆ. ಪೂರ್ವದ್ವೇಷದ ಹಿನ್ನೆಲೆಯಲ್ಲಿ ಅವರ ಕೊಲೆ ನಡೆದಿರಬೇಕು  ಎಂದು ಪೊಲೀಸರು ಶಂಕಿಸಿದ್ದು, ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಯುತ್ತಿದೆ.

ಭೀತಿ ಸೃಷ್ಟಿಸಿದ್ದ ಗೂಂಡಾ ಪಡೆ
ಎರಡು ದಿನಗಳ ಹಿಂದೆ ಇದೇ ಪರಿಸರದಲ್ಲಿ ರಾತ್ರಿ ಶಟಲ್‌ ಬ್ಯಾಡ್ಮಿಂಟನ್‌ ಪಂದ್ಯಾಟ ನಡೆಯುತ್ತಿದ್ದಾಗ ಎರಡು ಬೈಕ್‌ಗಳಲ್ಲಿ ಬಂದಿದ್ದ ನಾಲ್ವರ ತಂಡ ತಲವಾರುಗಳನ್ನು ಬೀಸುತ್ತಾ ಸಾರ್ವಜನಿಕವಾಗಿ ಬೆದರಿಕೆಯೊಡ್ಡಿದ್ದ  ಘಟನೆ ನಡೆದಿತ್ತು. ಈ ಘಟನೆಯ ಬೆನ್ನಲ್ಲೇ ರಿಯಾಸ್‌ ಹತ್ಯೆ ನಡೆದಿರುವುದರಿಂದ ಗೂಂಡಾ ತಂಡದ ಕೃತ್ಯವೇ ಇದಾಗಿರಬಹುದು ಎಂಬ  ಶಂಕೆ ಬಲವಾಗಿದೆ.

ಟಾಪ್ ನ್ಯೂಸ್

1-reddd

BJP,ಮೋದಿ ಸಾಂವಿಧಾನಿಕ ಮೌಲ್ಯಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ: ಪ್ರಿಯಾಂಕಾ ಕಿಡಿ

Tiger

Jaipur; ರಾಷ್ಟ್ರೀಯ ಉದ್ಯಾನವನದಿಂದ ಭಾರೀ ಸಂಖ್ಯೆಯ ಹುಲಿಗಳು ನಾಪತ್ತೆ!

Ramayana: ಎರಡು ಭಾಗಗಳಾಗಿ ಬರಲಿದೆ‌ ಬಿಗ್‌ ಬಜೆಟ್ ʼರಾಮಾಯಣʼ; ರಿಲೀಸ್‌ ಡೇಟ್‌ ಅನೌನ್ಸ್

Ramayana: ಎರಡು ಭಾಗಗಳಾಗಿ ಬರಲಿದೆ‌ ಬಿಗ್‌ ಬಜೆಟ್ ʼರಾಮಾಯಣʼ; ರಿಲೀಸ್‌ ಡೇಟ್‌ ಅನೌನ್ಸ್

4-wadi

Wadi: ಎದೆಯ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಕೊಲೆ

eshwarappa

Siddaramaiah ರಾಜೀನಾಮೆ‌ ಕೊಟ್ಟು ವಜ್ರವೆಂದು ಸಾಬೀತುಪಡಿಸಲಿ: ಈಶ್ವರಪ್ಪ

US Result: ಜಾರ್ಜಿಯಾ, ಉ.ಕೆರೋಲಿನಾದಲ್ಲಿ ಟ್ರಂಪ್‌ ಕಮಾಲ್‌, ಹ್ಯಾರಿಸ್‌ ಗೆ ತೀವ್ರ ಹಿನ್ನಡೆ

US Result: ಜಾರ್ಜಿಯಾ, ಉ.ಕೆರೋಲಿನಾದಲ್ಲಿ ಟ್ರಂಪ್‌ ಕಮಾಲ್‌, ಹ್ಯಾರಿಸ್‌ ಗೆ ತೀವ್ರ ಹಿನ್ನಡೆ

3-gadaga

Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

k

Kasaragod: ಎಡನೀರು ಶ್ರೀಗಳ ವಾಹನದ ಮೇಲೆ ದಾಳಿ: ಪ್ರತಿಭಟನೆ

2

Kasaragod: ರೈಲು ಹಳಿಯಲ್ಲಿ ಬಾಟಲಿ, ನಾಣ್ಯ ಇರಿಸಿ ದುಷ್ಕೃತ್ಯಕ್ಕೆ ಸಂಚು

kalla

Kasaragod: ಆರಾಧನಾಲಯಗಳ ಸರಣಿ ಕಳವಿನ ಹಿಂದೆ ಒಂದೇ ತಂಡ?

Court-1

Kasaragod: ಪಟಾಕಿ ದುರಂತ; ಜಾಮೀನು ರದ್ದುಗೊಳಿಸುವಂತೆ ಅರ್ಜಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-reddd

BJP,ಮೋದಿ ಸಾಂವಿಧಾನಿಕ ಮೌಲ್ಯಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ: ಪ್ರಿಯಾಂಕಾ ಕಿಡಿ

2

Belthangady: ಹೆಬ್ಬಾವು ಹಿಡಿದು ವೈರಲ್‌ ಆದ ಕುಪ್ಪೆಟ್ಟಿ ನಿವಾಸಿ ಆಶಾ!

1(1)

Punjalkatte: ಗುಂಡಿಗಳು ಸಾರ್‌ ಗುಂಡಿಗಳು

Tiger

Jaipur; ರಾಷ್ಟ್ರೀಯ ಉದ್ಯಾನವನದಿಂದ ಭಾರೀ ಸಂಖ್ಯೆಯ ಹುಲಿಗಳು ನಾಪತ್ತೆ!

Ramayana: ಎರಡು ಭಾಗಗಳಾಗಿ ಬರಲಿದೆ‌ ಬಿಗ್‌ ಬಜೆಟ್ ʼರಾಮಾಯಣʼ; ರಿಲೀಸ್‌ ಡೇಟ್‌ ಅನೌನ್ಸ್

Ramayana: ಎರಡು ಭಾಗಗಳಾಗಿ ಬರಲಿದೆ‌ ಬಿಗ್‌ ಬಜೆಟ್ ʼರಾಮಾಯಣʼ; ರಿಲೀಸ್‌ ಡೇಟ್‌ ಅನೌನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.