ಮಲಬಾರ್‌ ಕ್ರೂಸ್‌ ಟೂರಿಸಂ ಯೋಜನೆಗೆ ಅಂಗೀಕಾರ


Team Udayavani, May 20, 2018, 6:10 AM IST

19ksde8b.jpg

ಕಾಸರಗೋಡು: ಕಾಸರಗೋಡು-ಕಣ್ಣೂರು ಜಿಲ್ಲೆಯ 8 ನದಿಗಳ ಆಸುಪಾಸಿನಲ್ಲಿ “ಮಲಬಾರ್‌ ಕ್ರೂಸ್‌ ಟೂರಿಸಂ ಯೋಜನೆ’ಯನ್ನು ಸಾಕಾರಗೊಳಿಸಲು ಕೇಂದ್ರ ಪ್ರವಾಸೋದ್ಯಮ ಇಲಾಖೆ ಅಂಗೀಕಾರ ನೀಡಿದೆ. ಹಿನ್ನೀರುಗಳಲ್ಲಿ ಜಲಸಾರಿಗೆ ಸೌಕರ್ಯವನ್ನು ಬಳಸಿಕೊಂಡು ಯೋಜಿಸಿರುವ ಈ ಯೋಜನೆಯಲ್ಲಿ ಆರಂಭಿಕ ಹಂತದಲ್ಲಿ ಮೂರು ನದಿಗಳನ್ನು ಕೇಂದ್ರೀಕರಿಸಿ ಯೋಜನೆ ಜಾರಿಗೊಳಿಸಲು ಈಗಾಗಲೇ 83 ಕೋಟಿ ರೂ. ಅನುದಾನ ಮಂಜೂರು ಮಾಡಿದೆ.

ಮುತ್ತಪ್ಪನ್‌ ಆ್ಯಂಡ್‌ ಮಲಬಾರ್‌ ಕ್ಯೂಸಿನ್‌ ಕ್ರೂಸ್‌, ಕಾಂಡ್ಲ ಕ್ರೂಸ್‌. ದೈವ(ತೈಯ್ಯಂ) ಕಲೆಗಳ ಕ್ರೂಸ್‌ ಎಂಬೀ ಯೋಜನೆಗಳಿಗಾಗಿ 84 ಕೋಟಿ ರೂ. ಮಂಜೂರು ಮಾಡಲಾಗುವುದೆಂದು ಸಂಸದೆ ಪಿ.ಕೆ.ಶ್ರೀಮತಿ ಟೀಚರ್‌ ಅವರಿಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.

ಕೇರಳ ರಾಜ್ಯ ಪ್ರವಾಸೋದ್ಯಮ ಇಲಾಖೆ ತಯಾರಿಸಿ ಸಮರ್ಪಿಸಿದ 325 ಕೋಟಿ ರೂಪಾಯಿಯ ಯೋಜನೆಯಲ್ಲಿರುವ ಇತರ ನದಿಗಳನ್ನು ಮುಂದಿನ ದಿನಗಳಲ್ಲಿ ಪರಿಗಣಿಸಲಾಗುವುದು. ಈ ಯೋಜನೆಗೆ ಸಂಬಂಧಿಸಿ ರಾಜ್ಯ ಸರಕಾರ 53 ಕೋಟಿ ರೂ. ಈ ಮೊದಲೇ ಮಂಜೂರು ಮಾಡಿತ್ತು.

ಶಾಸಕರಾದ ಜೇಮ್ಸ್‌ ಮ್ಯಾಥ್ಯೂ ಮತ್ತು ಟಿ.ವಿ. ರಾಜೇಶ್‌ ನೇತೃತ್ವದಲ್ಲಿ ನಡೆಸಿದ ನದಿ ಯಾತ್ರೆ ಅನುಭವದ ಹಿನ್ನೆಲೆಯಲ್ಲಿ ಮಲಬಾರ್‌ ಕ್ರೂಸ್‌ ಟೂರಿಸಂ ಯೋಜನೆಗೆ ರೂಪು ನೀಡಲಾಗಿತ್ತು. ಕಣ್ಣೂರಿನ ಎಂ.ಕುಮಾರ್‌ ಆರ್ಕಿಟೆಕ್ಟ್Õ ತಯಾರಿಸಿದ ಯೋಜನೆಯನ್ನು ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆ ಅಂಗೀಕರಿಸಿತ್ತು. ಈ ಯೋಜನೆ ಸಮಗ್ರ ವರದಿಯನ್ನು ತಯಾರಿಸಿ ಕೇಂದ್ರ ಯೋಜನೆಯನ್ನಾಗಿ ಪರಿವರ್ತಿಸಲು ಕೇಂದ್ರಕ್ಕೆ ಸಲ್ಲಿಸಲಾಗಿತ್ತು.
ಈ ಮಹತ್ವದ ಯೋಜನೆಗೆ ಅನುಮತಿ ನೀಡಬೇಕೆಂದು ಸಂಸದೆ ಪಿ. ಕೆ. ಶ್ರೀಮತಿ ಟೀಚರ್‌ ಹಲವು ಬಾರಿ ಕೇಂದ್ರ ಸರಕಾರದ ಪ್ರವಾಸೋದ್ಯಮ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇದರಂತೆ ಕೇಂದ್ರ ಸರಕಾರ ನೇಮಿಸಿದ ಸಲಹಾ ಸಮಿತಿ ಪದಾಧಿಕಾರಿಗಳು ಬೋಟ್‌ ಯಾತ್ರೆ ನಡೆಸಿ ವರದಿ ಪರಿಗಣಿಸಿ ಪ್ರಥಮ ಹಂತದ ಮೊತ್ತವನ್ನು ಮಂಜೂರು ಮಾಡಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ತಜ್ಞ ಸಮಿತಿ ಶಿಫಾರಸು ಮಾಡಿತ್ತು.

ಪ್ರಥಮ ಹಂತದ ಯೋಜನೆಗಳು 
– ವಳಪಟ್ಟಣ ಹೊಳೆಯಲ್ಲಿ ವಳಪಟ್ಟಣದಿಂದ ಆರಂಭಿಸಿ ಪರಶ್ಶಿನಿಕಡವಿನ ಮೂಲಕ ಮಲಪ್ಪುಟ್ಟಂ ಮುನಂಬುಕಡವು ತನಕ ಮುತ್ತಪ್ಪನ್‌ ಕ್ರೂಸ್‌.
– ಭಗತ್‌ ಸಿಂಗ್‌, ಸಿ.ಎಚ್‌.ಮುಹಮ್ಮದ್‌ ಕೋಯ, ಎ.ಕೆ.ಜಿ.  ಹೆಸರಿನಲ್ಲಿರುವ ಜಟ್ಟಿಗಳಿಗೆ ತಲುಪುವ ಪ್ರವಾಸಿಗಳಿಗೆ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಸೌಲಭ್ಯಗಳ ಸ್ಥಾಪನೆ.
– ಪಾಂಬುರುತಿಯನ್ನು ಪ್ರವಾಸೋದ್ಯಮ ಗ್ರಾಮವಾಗಿ ಅಭಿವೃದ್ಧಿ.
– ಪ್ರಾದೇಶಿಕ ವೈವಿಧ್ಯತೆಗಳ ಊಟೋಪಚಾರ ಕೇಂದ್ರಗಳ ಸ್ಥಾಪನೆ.
– 50, 15, 10 ಎಂಬಂತೆ ಸೀಟುಗಳಿರುವ ಪ್ರಯಾಣ ಸೌಕರ್ಯ.
– ವಳಪಟ್ಟಣನಿಂದ ಅಳಿಕಲ್‌ ಫೆರಿ, ಮಾಟ್ಟೂಲ್‌, ತೆಕ್ಕುಂಬಾಟ್‌, ಪಳಯಂಗಾಡಿ, ವಡಿಕಲ್‌ಗ‌ಳಲ್ಲಿ ದೈವ ಕ್ರೂಸ್‌- ಇದಕ್ಕಾಗಿ 41.48 ಕೋ. ರೂ. ಮಂಜೂರು ಮಾಡಲಾಗಿದೆ.
– ತೆಕ್ಕುಂಬಾಟ್‌ ದ್ವೀಪವನ್ನು ಪ್ರವಾಸೋದ್ಯಮ ಗ್ರಾಮವಾಗಿ ಅಭಿವೃದ್ಧಿ.
– ವಿದೇಶಿ ಪ್ರವಾಸಿಗರಿಗೆ ಸಹಿತ ದೈವಗಳ ವೈವಿಧ್ಯತೆ ವೀಕ್ಷಿಸಲು ಮಡಕ್ಕರದಲ್ಲಿ ಓಪನ್‌ ಏರ್‌ ಥಿಯೇಟರ್‌, ವಾಡಿಕಲ್‌ನಲ್ಲಿ ಖಾಯಂ ರಂಗಭೂಮಿ ವೇದಿಕೆ ನಿರ್ಮಾಣ, ಹೌಸ್‌ ಬೋಟು ಸೌಕರ್ಯ – ಇದಕ್ಕಾಗಿ 22.23 ಕೋಟಿ ರೂ. ಮಂಜೂರು ಮಾಡಲಾಗಿದೆ.
– ಪಳಯಂಗಾಡಿಯಿಂದ ಕುಪ್ಪತ್‌ಗೆ ಕಾಂಡ್ಲಾ ಕ್ರೂಸ್‌.
– ಮುತ್ತುಕುಡದಲ್ಲಿ ದೋಣಿ ಸ್ಪರ್ಧೆ ಪವಿಲಿಯನ್‌, ಹೊಳೆಯಲ್ಲಿ ಸಂಚಾರಿ ಥಿಯೇಟರ್‌.
– ಕಾಂಡ್ಲಾ ಸಂಪತ್ತು ಬಗ್ಗೆ ಅಧ್ಯಯನ ಮಾಡಲು ಪ್ರತ್ಯೇಕ ವ್ಯವಸ್ಥೆ – ಇದಕ್ಕಾಗಿ 18.84 ಕೋಟಿ ರೂ. ಮಂಜೂರು.

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Untitled-1

Kasaragod ಅಪರಾಧ ಸುದ್ದಿಗಳು

Untitled-5

Kasaragod: ಮಾನ್ಯ ಅಯ್ಯಪ್ಪ ಭಜನ ಮಂದಿರದಿಂದ ಕಳವು; ಓರ್ವನ ಬಂಧನ

Arrest

Kasaragodu: ಆಸ್ತಿ ವಿವಾದ: ಅಣ್ಣನ ಕೊಲೆ, ಇಬ್ಬರಿಗೆ ಇರಿತ; ತಮ್ಮನ ಸೆರೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.