ಕನ್ನಡ ಉಳಿಸಿ ಮಲಯಾಳ ಕಡ್ಡಾಯ: ಮುಖ್ಯಮಂತ್ರಿ ಪಿಣರಾಯಿ
Team Udayavani, May 4, 2017, 12:01 PM IST
ಕಾಸರಗೋಡು: ಕನ್ನಡ ಸಹಿತ ಭಾಷಾ ಅಲ್ಪಸಂಖ್ಯಾಕರ ಮಾತೃ ಭಾಷೆ ಸಂರಕ್ಷಿಸಿ ಶಾಲೆಗಳಲ್ಲಿ ಮಲಯಾಳವನ್ನು ಕಡ್ಡಾಯಗೊಳಿಸಲಾಗು ವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಮಲಯಾಳ ಭಾಷೆ ಕಡ್ಡಾಯ ಗೊಳಿಸುವಾಗ ಕನ್ನಡ ಕಲಿಕೆ ಮುಂದುವರಿಸಲಾಗುವುದು. ಇಂತಹ ಶಾಲೆಗಳಲ್ಲಿ ಎರಡನೇ ಭಾಷೆಯಾಗಿ ಮಲಯಾಳ ಇರುವುದು. ಕನ್ನಡ ಭಾಷೆಯ ಪ್ರಾಧಾನ್ಯತೆಗೆ ಯಾವುದೇ ಅಡ್ಡಿಯಿಲ್ಲ ಎಂದಿದ್ದಾರೆ.
ಶಾಸಕರಾದ ಎಂ. ರಾಜಗೋಪಾಲ್, ಎನ್.ಎ. ನೆಲ್ಲಿಕುನ್ನು, ಪಿ.ಬಿ. ಅಬ್ದುಲ್ ರಝಾಕ್, ಒ. ರಾಜಗೋಪಾಲ್ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಕನ್ನಡ ಭಾಷಾ ಅಲ್ಪಸಂಖ್ಯಾಕ ಸಂಘಟನೆಗಳ ಪ್ರತಿನಿಧಿಗಳಿಗೆ ಮುಖ್ಯಮಂತ್ರಿ ಈ ಭರವಸೆ ನೀಡಿದ್ದಾರೆ.
ಕನ್ನಡ ಭಾಷೆಗೆ ಪ್ರಾಧಾನ್ಯಕಡಿಮೆ ಯಾಗಲಿದೆ ಎಂಬ ಆತಂಕ ಬೇಡ ಎಂದಮುಖ್ಯಮಂತ್ರಿ, ಮಲಯಾಳ ದ್ವಿತೀಯ ಭಾಷೆಯಾಗಲಿದೆ. ಒಂದನೇತರಗತಿಯಿಂದ ಮಲಯಾಳ ಆರಂಭಗೊಳ್ಳಲಿದೆ. ಮುಂದಿನ ಅಧ್ಯಯನ ವರ್ಷದಲ್ಲಿ ಇದನ್ನು ಆರಂಭಿಸಲಾಗುವುದು. 10 ವರ್ಷಗಳಲ್ಲಿ ಎಲ್ಲ ತರಗತಿಗಳಲ್ಲೂ ಮಲಯಾಳವನ್ನು ಕಡ್ಡಾಯಗೊಳಿಸಲಾಗುವುದು. ಪ್ರಸ್ತುತ ಕಲಿಯುತ್ತಿರುವ ಕನ್ನಡ ವಿದ್ಯಾರ್ಥಿಗಳಿಗೆ ಇದು ಬಾಧಕವಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.