Manjeshwar: ಬಂಧಿತರ ಪೈಕಿ ಓರ್ವ 15 ಪ್ರಕರಣಗಳಲ್ಲಿ ಆರೋಪಿ
Team Udayavani, Nov 12, 2024, 7:30 AM IST
ಮಂಜೇಶ್ವರ: ಮಾರಕಾಯುಧ ಸಹಿತರಾಗಿ ಕಳವು ನಡೆಸಲು ಬಂದ ಕಳ್ಳರ ತಂಡದ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದು, ಅವರಲ್ಲೋರ್ವ 15 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಉಳ್ಳಾಲ ಕೋಡಿ ಹೌಸ್‌ನ ಫೈಝಲ್ (36) ವಿರುದ್ಧ 15 ಪ್ರಕರಣಗಳಿವೆ. ಪರಾರಿಯಾದ ನಾಲ್ವರ ಪೈಕಿ ಓರ್ವ ಕಳವಿನ ಸೂತ್ರಧಾರನಾಗಿದ್ದಾನೆನ್ನಲಾಗಿದೆ. ಬಂಧಿತರು ವಿಚಾರಣೆಯ ವೇಳೆ ತದ್ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಆರೋಪಿಗಳು ಸಂಚರಿಸಿದ ಕಾರಿನಲ್ಲಿ ನಂಬರ್ ಪ್ಲೇಟ್ ಇರಲಿಲ್ಲ. ಅದನ್ನು ಕೂಡ ಎಲ್ಲಿಂದಲೋ ಕಳವು ಮಾಡಿರಬೇಕೆಂದು ಮಂಜೇಶ್ವರ ಪೊಲೀಸರು ಶಂಕಿಸಿದ್ದಾರೆ.
ಬಂಧಿತ ಇನ್ನೋರ್ವ ತುಮಕೂರು ಜಿಲ್ಲೆಯ ಸಿರಾ ಗ್ರಾಮದ ಮೊಹಲ್ಲ ಕಚೇರಿಯ ಸಯ್ಯಿದ್ ಅಮಾನ್(22) ನ ಪೂರ್ವ ಕೃತ್ಯಗಳ ಬಗ್ಗೆ ತನಿಖೆ ನಡೆಯುತ್ತಿದೆ. ಪರಾರಿಯಾದ ಆರೋಪಿಗಳ ಮಾಹಿತಿ ಲಭಿಸಿದ್ದು, ಶೋಧ ನಡೆಯುತ್ತಿದೆ.
ಕೊಡ್ಲಮೊಗರು ದೈಗೋಳಿಯಲ್ಲಿ ರವಿವಾರ ಮುಂಜಾನೆ ಸಿಐ ಅನೂಪ್ ನೇತೃತ್ವದ ಪೊಲೀಸರು ಹಾಗೂ ನಾಗರಿಕರು ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಕಳ್ಳರನ್ನು ಬಂಧಿಸಲಾಗಿದೆ. ನಾಲ್ವರು ಪರಾರಿಯಾಗಿದ್ದಾರೆ. ಮುಂಜಾನೆ ನಂಬರ್ ಪ್ಲೇಟ್ ಇಲ್ಲದ ಕಾರು ಮಜೀರ್ಪಳ್ಳಕ್ಕೆ ಬಂದಿತ್ತು. ಕಾರಿನ ಬಗ್ಗೆ ಸಂಶಯಗೊಂಡ ಸ್ಥಳೀಯರು ಅದನ್ನು ಹಿಂಬಾಲಿಸಿ ದೈಗೋಳಿಯಲ್ಲಿ ತಡೆಯೊಡ್ಡಿದರು. ಈ ವೇಳೆ ಕಾರಿನಲ್ಲಿದ್ದವರು ಸ್ಥಳೀಯರು ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದರು. ಇಬ್ಬರನ್ನು ಸೆರೆ ಹಿಡಿಯುವಲ್ಲಿ ಸ್ಥಳೀಯರು ಯಶಸ್ವಿಯಾದರು. ಕಾರಿನಲ್ಲಿ ನಕಲಿ ನಂಬರ್ ಪ್ಲೇಟ್‌ಗಳು, ಗ್ಯಾಸ್ ಕಟ್ಟರ್‌ಗಳು, ಆಕ್ಸಿಜನ್ ಸಿಲಿಂಡರ್, ತಲವಾರು, ಪಿಕ್ಕಾಸು ಮೊದಲಾದ ಮಾರಕಾಯುಧಗಳು ಪತ್ತೆಯಾಗಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.