ಮಂಜೇಶ್ವರ: ಶಾಂತಿಯುತ ಮತದಾನ


Team Udayavani, Oct 22, 2019, 5:55 AM IST

21KBL-E-

ಕುಂಬಳೆ: ಶಾಸಕರ ನಿಧನದಿಂದ ತೆರವಾಗಿದ್ದ ಮಂಜೇಶ್ವರ ವಿಧಾನಸಭಾ ಉಪ ಚುನಾವಣೆಯು ಅ.21 ರಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡು ಸಂಜೆ 6 ಗಂಟೆಯ ತನಕ ನಡೆಯಿತು.

ಮಂಡಲದ 198 ಬೂತ್‌ಗಳ ಎಲ್ಲಾ ಮತದಾನ ಕೇಂದ್ರಗಳಲ್ಲೂ ಮತದಾರರು ಮತದಾನ ಮಾಡಿದ ವೀಡಿಯೋ ಚಿತ್ರೀಕರಣ ನಡೆಸಲಾಯಿತು. ನಕಲಿ ಮತದಾನ ತಡೆಯಲು ಕೆಲವೊಂದು ಬಿಗಿ ಕ್ರಮ ಕೈಗೊಳ್ಳಲಾಯಿತು. 20 ಕಡೆಗಳಲ್ಲಿ ವೆಬ್‌ ಕ್ಯಾಮರಾ ಸ್ಥಾಪಿಸಲಾಗಿತ್ತು. ಪರದೆ ಧರಿಸಿದ ಮಹಿಳೆಯರ ಪರದೆಯನ್ನು ಎತ್ತಲು ಎಲ್ಲ ಮತದಾನ ಕೇಂದ್ರಗಳಲ್ಲಿ ಓರ್ವ ಮಹಿಳಾ ಉದ್ಯೋಗಿಯನ್ನು ನೇಮಿಸಲಾಗಿತ್ತು. ಓರ್ವ ಮಹಿಳಾ ಪೊಲೀಸ್‌ ಪೇದೆ ಸಹಿತ ಎಲ್ಲ ಮತದಾನ ಕೇಂದ್ರಗಳಲ್ಲಿ ತಲಾ ಮೂವರು ಪೊಲೀಸರನ್ನು ಕರ್ತವ್ಯಕ್ಕೆ ನೇಮಿಸಲಾಗಿತ್ತು.ಕೆಲವು ಸೂಕ್ಷ ಮತದಾನ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಹಿರಿಯ ನಾಗರಿಕರು ಮತ್ತು ವಿಕಲಾಂಗರು ಸರತಿಯಲ್ಲಿ ನಿಲ್ಲದೆ ನೇರ ತೆರಳಿ ಮತ ಚಲಾಯಿಸಿದರು. ಪ್ರಾಯಸ್ತರನ್ನು, ಅಶಕ್ತರನ್ನು ಮತ್ತು ವಿಕಲಾಂಗರನ್ನು ಆಯಾ ಪಕ್ಷಗಳ ಕಾರ್ಯಕರ್ತರು ಎತ್ತಿ ತಂದು, ಕುರ್ಚಿಯಲ್ಲಿ ಕುಳ್ಳಿರಿಸಿ ಮತದಾನಕ್ಕೆ ಕರೆ ತಂದರು.

ಎಡರಂಗ ಅಭ್ಯರ್ಥಿ ಶಂಕರ ರೈ ಮಾತ್ರ ಸ್ವಕ್ಷೇತ್ರದ ಅಭ್ಯರ್ಥಿಯಾಗಿದ್ದು ಇವರು ಅಂಗಡಿಮೊಗರು ಶಾಲೆಯಲ್ಲಿ ಮತದಾನಮಾಡಿದರು. ಉಳಿದ ಇಬ್ಬರು ಪ್ರಧಾನ ಸ್ಪರ್ಧಿಗಳಾದ ಐಕ್ಯರಂಗ ಮತ್ತು ಎನ್‌ಡಿಎ ಅಭ್ಯರ್ಥಿಗಳು ಅನ್ಯಕೇÒತ್ರದ ಅಭ್ಯರ್ಥಿಗಳಾಗಿದ್ದು ಇವರಿಗೆ ಸ್ವ ಮತದಾನದಿಂದ ವಂಚಿತರಾಗಬೇಕಾಯಿತು.

ಪೆರ್ಲ: ಮಂಜೇಶ್ವರ ವಿಧಾನ ಸಭಾ ಚುನಾವಣೆ ಪ್ರಯುಕ್ತ ಮತದಾನ ಮಧ್ಯಾಹ್ನ 2 ಗಂಟೆಗೆ ಬಂದ ವರದಿ ಪ್ರಕಾರ ಪುರೋಗತಿಯಲ್ಲಿ ನಡೆದಿದ್ದು, ಸುಮಾರು 60% ಮತದಾನ ನಡೆಯಿತು. ಎಣ್ಮಕಜೆ ಪಂಚಾಯತಿನ ಹಲವೆಡೆಗಳಲ್ಲಿ ಬೆಳಗ್ಗಿನಿಂದಲೇ ಮತದಾರರು ಮತದಾನಕ್ಕಾಗಿ ಆಗಮಿಸಿ ಸರದಿ ಸಾಲಿನಲ್ಲಿ ನಿಂತಿದ್ದರು. ಬೆಳಗ್ಗೆ ಮಳೆ ಹನಿಯುತ್ತಿದ್ದರೂ, ಅದನ್ನು ಲೆಕ್ಕಿಸದೇ ಮತದಾರರು ಮತದಾನಗೈಯ್ಯಲು ಆಗಮಿಸಿದ್ದರು. ಎಣ್ಮಕಜೆ ಗ್ರಾ.ಪಂ.ನ 178ನೇ ಸಾಯ ಬೂತಿನಲ್ಲಿ ಮೊದಲನೆಯ ಮತದಾನವನ್ನು ವಾರ್ಡ್‌ ಸದಸ್ಯೆ ಜಯಶ್ರೀ ಎ. ಕುಲಾಲ್‌ ನಡೆಸಿದರು.

ಅ. 24ರಂದು ಮತ ಎಣಿಕೆ
ಒಟ್ಟು 7 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ಧೆಯಲ್ಲಿದ್ದು ಐಕ್ಯರಂಗದ ಎಂ.ಸಿ. ಕಮರುದ್ದೀನ್‌,ಎನ್‌ಡಿಎ ಪಕ್ಷದ ಕುಂಟಾರು ರವೀಶ ತಂತ್ರಿ, ಎಡರಂಗದ ಎಂ ಶಂಕರ ರೈ ಮಾಸ್ಟರ್‌ ಪ್ರಧಾನ ತ್ರಿಕೋನ ಸ್ಪರ್ಧಿಗಳಾಗಿರುವರು. ಚುನಾವಣೆಯ ಮತ ಎಣಿಕೆ ಅ. 24ರಂದು ಪೈವಳಿಕೆ ನಗರ ಸರಕಾರಿ ಹೈಯರ್‌ ಸೆಕೆಂಡರಿ ವಿದ್ಯಾಲಯದಲ್ಲಿ ನಡೆದು ಫಲಿತಾಂಶ ಪ್ರಕಟಗೊಳ್ಳಲಿರುವುದು.

7 ಗಂಟೆಗೆ ಆರಂಭ
ಮತಯಂತ್ರದ ಧೃಢೀಕರಣಕ್ಕಾಗಿ ಬೆಳಗ್ಗೆ ಎಲ್ಲ ಮತದಾನ ಕೇಂದ್ರಗಳಲ್ಲಿ ಬೆಳಗ್ಗೆ 5.30 ಕ್ಕೆ ಅಣಕು ಮತದಾನ ನಡೆಸಿದ ಬಳಿಕ 7 ಗಂಟೆಗೆ ಮತದಾನ ಆರಂಭಗೊಂಡಿತು. ಆದರೆ ಕೆಲವು ಕಡೆಗಳಲ್ಲಿ ಮತದಾನ ಯಂತ್ರ ಕೆಟ್ಟು ಗಂಟೆಗಟ್ಟಲೆಗಳ ಕಾಲ ಮತದಾನಕ್ಕೆ ತಡೆಯುಂಟಾಯಿತು.

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.