ಮಂಜೇಶ್ವರ ಗಿಳಿವಿಂಡಿನಲ್ಲಿ ಏನಾಗಬೇಕಾಗಿದೆ ? 


Team Udayavani, Jul 22, 2018, 6:00 AM IST

20ksde8.jpg

ರಾಷ್ಟ್ರಕವಿ ಗೋವಿಂದ ಪೈಗಳ (1883-1963) ಸಾಹಿತ್ಯದ ತಪೋಭೂಮಿಯಂತಿದ್ದ ನಿವಾಸ ಸ್ಥಳವನ್ನು ಕುವೆಂಪು ಅವರ ಕುಪ್ಪಳ್ಳಿ ಅಥವಾ ಕೇರಳದ  ವಳ್ಳತ್ತೋಳ್‌ ನಾರಾಯಣ ಮೆನನರ ಮನೆಯಂತೆ ಒಂದು ಸ್ಮಾರಕ/ಸಂಶೋಧನ ಕೇಂದ್ರ ಮಾಡಬೇಕೆಂಬುದು ಸಾಹಿತ್ಯ ಪ್ರಿಯರ ಅಪೇಕ್ಷೆಯಾಗಿತ್ತು. ಅದಕ್ಕಾಗಿ ಗೋವಿಂದ ಪೈ ಸ್ಮಾರಕ ಕಮಿಟಿ ಮತ್ತು ಟ್ರಸ್ಟ್‌ (ಎರಡರ ಮೂಲ ಆಶಯ ಒಂದೇ) ರೂಪೀಕರಣಗೊಂಡು ಶ್ರಮವಹಿಸಿ ಪೈಗಳ ಮನೆ ಪುನರ್‌ ನವೀಕರಣಗೊಂಡು ಆಶೋತ್ತರಗಳನ್ನು ಈಡೇರಿಸಲು ಸಜ್ಜಾಗಿದೆ. ಕರ್ನಾಟಕ  ಮತ್ತು ಕೇರಳ ಸರಕಾರ ಸಾಕಷ್ಟು ಸಹಾಯ ನೀಡಿದೆ. ಈ ಸ್ಮಾರಕ ಕೇಂದ್ರವೀಗ “ಗಿಳಿವಿಂಡು’ ಎಂಬ ಅರ್ಥಪೂರ್ಣವಾದ ನಾಮಧೇಯದಿಂದ ಪ್ರಚಾರಗೊಳ್ಳುತ್ತಿದೆ. 

ಗಿಳಿವಿಂಡು ಏನು ಸಾಧಿಸಿದರೆ ಒಳ್ಳೆಯದು (ನನ್ನ ಚಿಂತನ ವಿಷಯ). ಪೈಗಳ ಸ್ವಂತ ಗ್ರಂಥಾಲಯದಲ್ಲಿ ಸುಮಾರು 36 ಭಾಷೆಗಳಲ್ಲಿ ರಚಿತವಾಗಿರುವ 4,734 ಗ್ರಂಥಗಳಲ್ಲದೆ ಇತರೆ 406 ಪುಸಕ್ತಗಳಿದ್ದವು.  ಇವುಗಳು ಈಗ ಉಡುಪಿ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ “ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ’ದ ಗ್ರಂಥ ಭಂಡಾರದಲ್ಲಿವೆ. ಅವುಗಳನ್ನು ನಮಗೆ ಹಿಂದಿ ರುಗಿಸದಿದ್ದಲ್ಲಿ ಆ ಗ್ರಂಥಗಳನ್ನು ಡಿಜಿಟಲೀಕರಣಗೊಳಿಸಿ ಗಿಳಿವಿಂಡಿನಲ್ಲಿರುವಂತೆ ನೋಡಿಕೊಳ್ಳಬಹುದು. ಅದರೊಂದಿಗೆ ಮೈಸೂರು ವಿವಿ ಸಹಿತ ಕರ್ನಾಟಕದ ವಿವಿಗಳಲ್ಲಿರುವ ಅಪೂರ್ವ ಮಾಹಿತಿಗಳನ್ನು ಡಿಜಿಟಲೀಕರಣಗೊಳಿಸಿ ಸಂಗ್ರಹಿಸಬೇಕು.

“ಗಿಳಿವಿಂಡು’ ಒಂದು ಪರಿಪೂರ್ಣ ಸಂಶೋಧನ ಕೇಂದ್ರವಾಗಬೇಕು. ಪ್ರಾಮಾಣಿಕ ಸಂಶೋಧನ ಆಸಕ್ತರಿಗೆ ಆದಷ್ಟು ಪರಿಕರಗಳು ಲಭ್ಯವಿರಬೇಕು. ಬಹು ಭಾಷಾಕೋವಿದರಾದ ಪೈಗಳ ಹೆಸರಿನ ಸಂಶೋಧನ ಕೇಂದ್ರವು ಬಹುಭಾಷಾಕೋವಿದರಿಗೆ ಸಂಶೋಧನ ಸಾಮಗ್ರಿಯನ್ನು ಒದಗಿಸುವಂತಿದ್ದು  ಸಂಶೋಧಕರನ್ನು  ಆಕರ್ಷಿಸುವಂತಿರಬೇಕು.
  
ನಾನು ಕಾಸರಗೋಡು ತಾಲೂಕಿನ ಅದೆಷ್ಟೋ ಮನೆಗಳಿಗೆ ಕ್ಷೇತ್ರ ಕಾರ್ಯಕ್ಕಾಗಿ ಹೋಗಿರುವಾಗ ಅನೇಕ ತಾಳೆ ಓಲೆಯ ಹಸ್ತಪ್ರತಿಗಳನ್ನು ನೋಡಿದ್ದೇನೆ. ಅವು ವಿವಿಧ ವಿಷಯಗಳಿಗೆ ಸಂಬಂಧಪಟ್ಟವು.  ಮನೆ ಗಳಲ್ಲಿದ್ದರೆ ಅವು ಖಂಡಿತ ನಶಿಸಿ ಹೋಗಬಹುದು. ಆ ಮನೆಯವರ ಮನವೊಲಿಸಿ ಅವನ್ನು  ಗಿಳಿವಿಂಡಿನಲ್ಲಿ  ತಾಳೆ ಓಲೆ ಸಂಗ್ರಹಾಲಯ ಮಾಡಬಹುದು. 
ಕಾಸರಗೋಡು ತಾಲೂಕಿನ ಹಲವೆಡೆ ಹಲವಾರು ಶಾಸನಗಳಿವೆ. ಅವು ಪಾಳು ಬಿದ್ದಿವೆ. ಅವುಗಳನ್ನು ಗಿಳಿವಿಂಡಿನಲ್ಲಿ ಸಂರಕ್ಷಿಸಿಡಬಹುದು.  ಇವುಗಳು ತೌಲನಿಕ ಅಧ್ಯಯನ ಮಾಡಲು ಒಂದೆಡೆ ಸಹಕಾರಿಯಾದರೆ ಗಿಳಿವಿಂಡಿನಂತಹ ಕೇಂದ್ರವನ್ನು ಸಂದರ್ಶಿಸುವ ಹಲವು ವಿಧದ ಆಸಕ್ತರಿಗೆ ಒಂದೇ ಕಡೆ ಮಾಹಿತಿ ಸಿಗುವಂತಾಗುವುದಲ್ಲದೆ ಕೇಂದ್ರವು ಸಜೀವವಾಗಿರುತ್ತದೆ. ಈ ಮಾಹಿತಿ ಸಂಗ್ರಹಕ್ಕೆ ಅಧಿಕ ಖರ್ಚುವೆಚ್ಚಗಳಾಗಲಾರದು. 

ಗಿಳಿವಿಂಡಿನಲ್ಲಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ವಾಗುವ ಸಭಾಭವನ ಇರಲಿದೆ. ಅಂತಾರಾಷ್ಟ್ರೀಯ ವಿಚಾರಗೋಷ್ಠಿಗಳು ಆಯೋಜಿಸಬೇಕಿದ್ದರೆ ಇಂತಹ ಸಭಾಭವನದ ಅಗತ್ಯ. ಆದರೆ ಆರ್ಥಿಕವಾಗಿ ಈ ಸಭಾಭವನ ಗಿಳಿವಿಂಡಿಗೆ ಸಹಕಾರಿಯಾಗದು. ಭಾಷೆ, ಸಾಹಿತ್ಯ, ಕಲೆಗೆ ಸಂಬಂಧಪಟ್ಟಂತೆ ಎಷ್ಟು ಗೋಷ್ಠಿಗಳನ್ನು ಕ್ಯಾಲೆಂಡರ್‌ ವರ್ಷದಲ್ಲಿ ನಡೆಸಬಹುದು ಎಂಬು ದರ ಚಿಂತನೆಯೂ ಇಂತಹ ಸಂದರ್ಭಗಳಲ್ಲಿ ಬೇಕಾಗು ತ್ತದೆ. ಕಣ್ಣೂರು ವಿವಿಯು ಮಂಜೇಶ್ವರ ಸರಕಾರಿ ಕಾಲೇಜಿನ ಆವರಣದಲ್ಲಿ ಭಾರತೀಯ ಭಾಷಾ ಅಧ್ಯಯನ ಕೇಂದ್ರಕ್ಕೆಂದು ಕೋಟಿಗಟ್ಟಲೆ ಹಣ ವ್ಯಯಿಸಿ ಕಟ್ಟಡ ನಿರ್ಮಿಸಿದೆ. ವರ್ಷಗಳೇ ಕಳೆದರೂ ಕಟ್ಟಡ ಪೂರ್ಣಗೊಂಡಿದ್ದರೂ ಭಾಷಾ ಅಧ್ಯಯನ ಕೇಂದ್ರ ಕಾರ್ಯವೆಸಗುತ್ತಿಲ್ಲ. ಇಂತಹ ಸ್ಥಿತಿ ಬರಬಾರದು. ಗಿಳಿವಿಂಡು ಯಾವುದೇ ರಾಜಕೀಯವಿಲ್ಲದೆ, ಭಾಷಾ ವ್ಯತ್ಯಾಸವಿಲ್ಲದೆ ಪ್ರವರ್ತಿಸಿದರೆ ಹಣದ ವಿನಿಯೋಗವನ್ನು ಆದ್ಯತೆಯನ್ನನುಸರಿಸಿ ಮಾಡಿದರೆ ಕೇಂದ್ರವು ಭಾರತೀಯ ಸಂಸ್ಕೃತಿಗೆ ಉತ್ತಮ ಕೊಡುಗೆ ನೀಡಬಲ್ಲುದು. 

ಕೃಷಿ ಜಾನಪದ ಮಾಹಿತಿ ಸಂಗ್ರಹಿಸಿಡಲು ಅವಕಾಶ 
ಕೃಷಿ ಜಾನಪದಕ್ಕೆ ಸಂಬಂಧಪಟ್ಟ ಮಾಹಿತಿ ಸಂಗ್ರಹಿಸಿಡಲು ವಿಪುಲ ಅವಕಾಶವಿದೆ.  ಕೃಷಿ ಉಪಕರಣಗಳಿಂದು ಪಳೆಯುಳಿಕೆಗಳಾಗಿ ಕೆಲವು ತರವಾಡು ಮನೆಗಳಲ್ಲಿ ನಶಿಸಿ ಹೋಗುವ ಹಂತದಲ್ಲಿವೆ. ಉದಾಹರಣೆಗೆ ಕಂಬಳಕ್ಕೆ ಓಡಿಸುವ ಕೋಣಗಳ ದೊಡ್ಡ ಆಕಾರದ ನೊಗಗಳು, ನೇಗಿಲುಗಳು, ಉತ್ತಗದ್ದೆಯ ಮಣ್ಣನ್ನು ಹದಗೊಳಿಸಲು ಜೋಡಿ ಎತ್ತುಗಳಿಗೆ ಅಥವಾ ಕೋಣಗಳ ನೊಗಕ್ಕೆ ಕಟ್ಟಿ  ಎಳೆಯಿಸುವ ಹಲಗೆ, ಕಂಬಳದ ಕೋಣಗಳನ್ನು ಅಲಂಕರಿಸುವ ಹುರಿಹಗ್ಗದಿಂದ ತಯಾರಿಸಿದ ಸಾಧನ ಮೊದಲಾದವುಗಳನ್ನು ಸಂಗ್ರಹಿಸಬಹುದು. ಅದರೊಂದಿಗೆ ಬತ್ತ ಕುಟ್ಟುವ ಒನಕೆ, ಬೀಸುವ ಕಲ್ಲು, ಧಾನ್ಯ ಹುಡಿ ಮಾಡಲು ಹಾಕಲು ಉಪಯೋಗಿಸುವ ಬಿರಲು ಅದರೊಂದಿಗೆ ಅಳತೆ ಪಾತ್ರೆಗಳಾದ ಕುಡ್ತೆ, ಸೇರು, ಪಾವು, ಹಾನೆ, ಪರೆ, ಕಳಸಿಗೆ, ಅಕ್ಕಿಮುಡಿ ಇಂತಹುಗಳನ್ನು ಸಂಗ್ರಹಿಸಿ ಇಡಬಹುದು. ನಾನು ಕ್ಷೇತ್ರ ಕಾರ್ಯಕೈಗೊಂಡಿದ್ದಾಗ ಇಚ್ಲಂಪಾಡಿ ಮನೆಯಲ್ಲಿ ಕೋಡಿಂಗರು, ಬಂಬ್ರಾಣ, ಕುಂಬಾxಜೆ ಆಳ್ವರ ಮನೆಯಲ್ಲಿ ಇನ್ನಿತರ ಕೃಷಿಕರ ಮನೆಯಲ್ಲಿ ನಾನು ನೋಡಿದ್ದೇನೆ. ಇವನ್ನೆಲ್ಲಾ ಸುಲಭವಾಗಿ ಸಂಗ್ರಹಿಸಬಹುದು. 

ತೆಂಕಣ ಶೈಲಿಯ ಯಕ್ಷಗಾನ ಮ್ಯೂಸಿಯಂ 
ಗಿಳಿವಿಂಡಿನಲ್ಲಿ ಒಂದು ತೆಂಕಣ ಶೈಲಿಯ ಯಕ್ಷಗಾನ ಮ್ಯೂಸಿಯಂ ಇದೆ.  ಅದ‌ನ್ನು ವಿಸ್ತೃತಗೊಳಿಸಿ ಬಡಗು, ಬಡಾಬಡಗು ಸೇರಿಸಿದರೆ ಅಧ್ಯಯನಕ್ಕೆ ಅನುಕೂಲವಾಗುತ್ತದೆ. ಯಕ್ಷಗಾನ ಪ್ರಸಂಗಗಳ ಅದೆಷ್ಟೋ ತಾಳೆ ಓಲೆ ಪ್ರತಿಗಳು ಕಾಸರಗೋಡಿನ ಪ್ರಾಚೀನ ಮನೆಗಳಲ್ಲಿವೆ. 150 ವರ್ಷಗಳಷ್ಟು ಹಳೆಯದಾದ ಹಸ್ತ ಪ್ರತಿಗಳಿವೆ. 100 ವರ್ಷಗಳ ಹಿಂದೆ ಅಚ್ಚಾದ ಯಕ್ಷಗಾನ ಪ್ರಸಂಗಗಳಿವೆ. ಅವುಗಳನ್ನು ಸಂಗ್ರಹಿಸುವ, ಕಾಪಾಡುವ ಅಗತ್ಯವಿದೆ. ಅದರೊಂದಿಗೆ ಅಪೂರ್ವ ಯಕ್ಷಗಾನ ಕಲಾವಿದರ ಭಾವಚಿತ್ರಗಳ ಸಂಗ್ರಹ ಮಾಡಬೇಕಾದ ಅಗತ್ಯವಿದೆ. ಕೂಡ್ಲು ಮೇಳವನ್ನು ಪುನರುಜ್ಜೀವಗೊಳಿಸಿದ ಕೂಡ್ಲು ಸುಬ್ರಾಯ ಶ್ಯಾನಭೋಗರು, ಇಚ್ಲಂಪಾಡಿ ಮೇಳದ ಸ್ಥಾಪಕರಾದ ದೊಡ್ಡ ಕೋಟ್ಯಣ್ಣಾಳ್ವರು, 200 ವರ್ಷಗಳ ಹಿಂದಿದ್ದ ಕುಂಬ್ಳೆ ಮೇಳದಲ್ಲಿ ಪೂಜಿಸಲ್ಪಡುತ್ತಿದ್ದ ಮರದ ಗಣಪತಿ ಮೊದಲಾದವುಗಳ ಛಾಯಾ ಚಿತ್ರಗಳ ಸಂಗ್ರಹವಾಗಬೇಕು. ಕಾಸರಗೋಡಿನಂತಹ ಚಿಕ್ಕ ಪ್ರದೇಶದಲ್ಲಿ ಎರಡು ಮೂರು ಯಕ್ಷಗಾನ ಸಂಶೋಧನ ಕೇಂದ್ರಗಳ ಅಗತ್ಯವಿದೆಯೇ. ಯಕ್ಷಗಾನದ ಕುರಿತಾಗಿ ಅದೆಷ್ಟೋ ಕೃತಿಗಳು ಈಗಾಗಲೇ ಬಂದಿವೆ. ಅವುಗಳು ಗಿಳಿವಿಂಡಿನಲ್ಲಿ ಲಭ್ಯವಿರಬೇಕು. ಅದರೊಂದಿಗೆ ಕೇರಳದ ಕಲೆಗಳಾದ ಕಥಕ್ಕಳಿ, ರಾಮನಾಟ್ಟ, ಕೇರಳ ನಟನ ಮೊದಲಾದ ಕಲೆಗಳಿಗೆ ಸಂಬಂಧಿಸಿದ ಮಾಹಿತಿಗಳ ಸಂಗ್ರಹವಿದ್ದರೆ ತೌಲನಿಕ ಅಧ್ಯಯನಕ್ಕೆ ಅನುಕೂಲ. 

– ಡಾ|ಉಪ್ಪಂಗಳ ಶಂಕರನಾರಾಯಣ ಭಟ್‌ 

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

POlice

Kasaragod: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು

crimebb

Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.