Manjeshwar: ಟಿಪ್ಪರ್ನೊಳಗೆ ಯುವಕನ ನಿಗೂಢ ಸಾವು
Team Udayavani, Jan 16, 2025, 12:17 AM IST
ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಯರ್ಕಟ್ಟೆಯಲ್ಲಿ ನಿಲ್ಲಿಸಿದ್ದ ಟಿಪ್ಪರ್ನೊಳಗೆ ವ್ಯಕ್ತಿಯೊಬ್ಬನ ಮೃತ ದೇಹ ಸಿಕ್ಕಿದ್ದು, ಪೈವಳಿಕೆ ಬಾಯಾರು ಪದವು ಕ್ಯಾಂಪ್ಕೋ ಕಂಪೌಂಡ್ ಬಳಿಯ ಮುಹಮ್ಮದ್ ಆಶಿಫ್ (29) ಎಂದು ಗುರುತಿಸಲಾಗಿದೆ.
ಬುಧವಾರ ಮುಂಜಾನೆ 3.20ಕ್ಕೆ ಟಿಪ್ಪರ್ನೊಳಗೆ ಆಶಿಫ್ ಅಸ್ವಸ್ಥ ಸಿœತಿ ಯಲ್ಲಿ ಕಂಡುಬಂದಿದ್ದು, ಹೈವೇ ಪಟ್ರೋಲಿಂಗ್ ಪೊಲೀಸ್ ಹಾಗೂ ಸ್ಥಳೀಯರು ಅಶಿಫ್ ಅವರನ್ನು ಬಂದ್ಯೋ ಡ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಕುಂಬಳೆಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ, ಫೋನ್ ಕರೆ ಬಂದ ಹಿನ್ನೆಲೆಯಲ್ಲಿ ಮುಂಜಾನೆ 2 ಕ್ಕೆ ಆಶಿಫ್ ತನ್ನ ಟಿಪ್ಪರ್ ಸಹಿತ ಮನೆ ಯಿಂದ ತೆರಳಿದ್ದರು.
ಸಂಬಂಧಿಕ ನೋರ್ವ ಫೋನ್ ಮಾಡಿದ್ದಾಗಿ ಹೇಳಲಾಗಿದೆ. ಉಪ್ಪಳಕ್ಕೆ ತಲುಪಬೇಕಾದ ಸಮಯವಾದರೂ ತಲುಪದ ಕಾರಣ, ಮನೆಯಿಂದ 3 ಕಿ.ಮೀ ದೂರದ ಕಾಯರ್ಕಟ್ಟೆಯ ರಸ್ತೆ ಬದಿ ಟಿಪ್ಪರ್ ನಿಲ್ಲಿಸಿದ್ದು ಕಂಡುಬಂದಿತು. ಆಶಿಫ್ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೃದಯಾಘಾತದಿಂದ ಸಾವು ಸಂಭವಿ ಸಿರಬಹುದು ಎಂದು ಶಂಕಿಸಿದ್ದರೂ ಪ್ರಕರಣ ನಿಗೂಢವಾಗಿದೆ.
ಟಿಪ್ಪರ್ನೊಳಗೆ ಬೆತ್ತ, ರಕ್ತದ ಕಲೆಗಳು ಪತ್ತೆ
ಚಾಲಕನ ಸೀಟಿನ ಬಳಿಯ ಬಾಗಿಲು ಹಾಗೂ ಟಿಪ್ಪರ್ನೊಳಗೆ ರಕ್ತದ ಕಲೆಗಳು, ದಾರಿಯಲ್ಲಿ ಒಂದು ಬೆತ್ತ ಕೂಡಾ ಕಂಡುಬಂದಿದೆ. ಆಶಿಫ್ ಅವರ ಪಾದರಕ್ಷೆಗಳು ರಸ್ತೆ ಬದಿಯಲ್ಲಿದ್ದವು. ಘಟನೆಗೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.