ಮಂಜೇಶ್ವರ: ಅಪಹೃತ ವಿದ್ಯಾರ್ಥಿ ಬಿಡುಗಡೆ


Team Udayavani, Jul 26, 2019, 6:43 AM IST

kidnap

ಕಾಸರಗೋಡು: ದುಷ್ಕರ್ಮಿಗಳಿಂದ ಮೂರು ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದ ವಿದ್ಯಾರ್ಥಿ ಮಂಜೇಶ್ವರ ಸಮೀಪದ ಮಜೀರ್ಪಳ್ಳ ಕೋಳಿಯೂರಿನ ಅಬ್ದುಲ್‌ ರಹ್ಮಾನ್‌ ಹಾರೀಸ್‌ (17) ಕ್ಷೇಮವಾಗಿ ಮರಳಿ ಬಂದಿದ್ದಾರೆ. ಈ ನಡುವೆ ಆತನ ಬಿಡುಗಡೆಗಾಗಿ ಅಪಹಾರಕರಿಗೆ 1.25 ಕೋಟಿ ರೂ. ಪಾವತಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಗುರುವಾರ ಬೆಳಗ್ಗೆ 7.30ರ ಸುಮಾರಿಗೆ ತಾಯಿ ಮೈಮೂನಾ ಅವರಿಗೆ ಕರೆ ಮಾಡಿದ ಹಾರೀಸ್‌ ತಾನು ಬಿಡುಗಡೆಯಾಗಿದ್ದು ಮಂಗಳೂರು ಪಂಪ್‌ವೆಲ್‌ ಜಂಕ್ಷನ್‌ನಲ್ಲಿ ಇರುವುದಾಗಿ ತಿಳಿಸಿದ. ತತ್‌ಕ್ಷಣ ಮನೆಯವರು ಮಂಜೇಶ್ವರ ಪೊಲೀಸರ ಜತೆಗೂಡಿ ಮಂಗಳೂರಿಗೆ ತೆರಳಿ ಆತನನ್ನು ಕರೆತಂದರು.

ಕುಂಬಳೆಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿದ ಬಳಿಕ ಪೊಲೀಸರು ವಿದ್ಯಾರ್ಥಿಯ ಹೇಳಿಕೆ ದಾಖಲಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಪ್ರಸ್ತುತ ಹಾರೀಸ್‌ನನ್ನು ಹೆತ್ತವರಿಗೆ ಒಪ್ಪಿಸಲಾಗಿದೆ.

ಕೊಲ್ಲಿಯಲ್ಲಿ ಮಧ್ಯಸ್ಥಿಕೆ
ಜುಲೈ 24ರಂದು ಅಪಹರಿಸಿ 48 ಗಂಟೆ ಕಳೆದರೂ ಪತ್ತೆಹಚ್ಚಲು ಅಥವಾ ಬಿಡುಗಡೆಗೊಳಿಸಲು ಸಾಧ್ಯವಾಗ ದ್ದರಿಂದ ಸಾರ್ವಜನಿಕರು ಗುರುವಾರ ಬೆಳಗ್ಗೆ ಮಂಜೇಶ್ವರ ಠಾಣೆಗೆ ಜಾಥಾ ನಡೆಸಲು ಸ್ಥಳೀಯರು ನಿರ್ಧರಿಸಿದ್ದರು. ಇದರಿಂದ ತೀವ್ರ ಒತ್ತಡಕ್ಕೀ ಡಾದ ಪೊಲೀಸರು ತನಿಖೆ ಯನ್ನು ಕ್ರೈಂಬ್ರಾಂಚ್‌ಗೆ
ಹಸ್ತಾಂತರಿಸಿದರು. ತನಿಖೆ ತೀವ್ರಗೊಂಡಾಗ ಚಿನ್ನ ಸಾಗಾಟಕ್ಕೆ ವಿವಾದಕ್ಕೆ ಸಂಬಂಧಿಸಿ ಕೊಲ್ಲಿ ಯಲ್ಲಿ ಮಧ್ಯಸ್ಥಿಕೆ ಚರ್ಚೆ ನಡೆದಿದ್ದು, ಅಪಹಾರಕರು 3 ಕೋಟಿ ರೂ. ಬೇಡಿಕೆ ಮುಂದಿಟ್ಟರು. ಕೊನೆಗೆ ಜು. 24ರಂದು ರಾತ್ರಿ 12 ಗಂಟೆಗೆ ಹಾರೀಸ್‌ನ ಮಾವ ಲತೀಫ್‌ ಊರಿಗೆ ಕರೆ ಮಾಡಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗಿದೆ; ಹುಡುಗ ಶೀಘ್ರ ಬಿಡುಗಡೆಯಾಗಲಿದ್ದಾನೆ ಎಂದು ತಿಳಿಸಿದರು. ಗುರುವಾರ ಮುಂಜಾನೆ ಅಪಹರಣ ಪ್ರಕರಣ ಸುಖಾಂತ್ಯವಾಗಿದೆ.
ಅಪಹಾರಕರು ತನ್ನಲ್ಲಿ ಅನುಚಿತವಾಗಿ ವರ್ತಿಸಿಲ್ಲ ಎಂದು ಹಾರೀಸ್‌ ತಿಳಿಸಿದ್ದಾನೆ.

4 ಕಿಲೋ ಚಿನ್ನದ ವಿವಾದ ಕಾರಣ?
ಜು. 22ರಂದು ಹಾರೀಸ್‌ ಹಾಗೂ ಸಹೋದರಿ ಸ್ಕೂಟರ್‌ನಲ್ಲಿ ತೊಕ್ಕೊಟ್ಟಿನ ಕಾಲೇಜಿಗೆ ತೆರಳುತ್ತಿದ್ದಾಗ ಮನೆಯಿಂದ 1 ಕಿ.ಮೀ. ದೂರದಲ್ಲಿ ಕಪ್ಪು ಬಣ್ಣದ ಕಾರೊಂದು ಹಿಂಬಾಲಿಸಿ ಬಂದು ಅಡ್ಡಗಟ್ಟಿತು. ನಾಲ್ವರು ವ್ಯಕ್ತಿಗಳೆ ಹಾರೀಸ್‌ನನ್ನು ಬಲವಂತವಾಗಿ ಕಾರಿಗೆ ಹತ್ತಿಸಿ ಪರಾರಿಯಾದರು. ಭಯದಿಂದ ಓಡಿದ ಸಹೋದರಿ ಮನೆಯವರಲ್ಲಿ ವಿಷಯ ತಿಳಿಸಿದ್ದಳು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ವ್ಯಾಪಕ ಶೋಧ ನಡೆಸಿದರೂ ಪತ್ತೆ ಸಾಧ್ಯವಾಗಲಿಲ್ಲ.

ಈ ಮಧ್ಯೆ ಕೊಲ್ಲಿಯಿಂದ ಹಾರೀಸ್‌ನ ಮನೆಯವರ ಮೊಬೈಲ್‌ಗೆ ಧ್ವನಿ ಸಂದೇಶ
ವೊಂದು ಬಂದಿದ್ದು, 3 ಕೋ.ರೂ. ನೀಡದಿ ದ್ದಲ್ಲಿ ಬಾಲಕನ ಜೀವಕ್ಕೆ ಅಪಾಯವಿದೆ ಎಂದು ಎಚ್ಚರಿಸಲಾಗಿತ್ತು. ಜತೆಯಲ್ಲೇ ಹಾರೀಸ್‌ನ ಧ್ವನಿ ಸಂದೇಶವೂ ಬಂದಿದ್ದು ಹಣ ನೀಡದಿದ್ದಲ್ಲಿ ನನ್ನ ಜೀವಕ್ಕೆ ಅಪಾಯವಿದೆ ಎಂದಿದ್ದ.

ಕೊಲ್ಲಿಯಲ್ಲಿರುವ ವ್ಯಕ್ತಿಗಳು ಹಾರೀಸ್‌ನ ಸೋದರ ಮಾವ ಲತೀಫ್ ಮೂಲಕ ಮಂಗಳೂರಿಗೆ ಕಳುಹಿಸಿದ 4 ಕಿಲೋ ಚಿನ್ನವನ್ನು ಆತ ಅದರ ಮಾಲಕನಿಗೆ ನೀಡದಿರುವುದೇ ಅಪಹರಣ ಹಿಂದಿರುವ ಕಾರಣ ಎಂಬ ವಿಚಾರ ಆಗಷ್ಟೇ ಮನೆ ಯವರ ಅರಿವಿಗೆ ಬಂದಿತು. ಚಿನ್ನವನ್ನು ಕಸ್ಟಂಸ್‌ ವಶಪಡಿಸಿಕೊಂಡಿರುವ ಕಾರಣ ಅದನ್ನು ಸಂಬಂಧಪಟ್ಟವರಿಗೆ ಕೊಡಲಾಗಿಲ್ಲ ಎಂದು ಲತೀಫ್ ಕಾರಣ ನೀಡಿ ದ್ದರು. ಪ್ರಸ್ತುತ ಲತೀಫ್ ಕತಾರ್‌ನಲ್ಲಿರು ವುದರಿಂದ ಪೊಲೀಸರಿಗೆ ಆತನ ವಿಚಾರಣೆ ಸಾಧ್ಯವಾಗಿಲ್ಲ. ತನಿಖೆ ಪ್ರಗತಿ ಬಗ್ಗೆ ಮಾಹಿತಿ ನೀಡಲು ಮಂಜೇಶ್ವರ ಪೊಲೀಸರು ನಿರಾಕರಿಸಿದ್ದಾರೆ.

ಟಾಪ್ ನ್ಯೂಸ್

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5

Mangaluru: ಪದವು ಜಂಕ್ಷನ್‌- ಶರ್ಬತ್‌ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್‌

4

Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ

3(1

Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ

2

Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.