ಅವ್ಯವಸ್ಥೆಯ ಆಗರ ಮಂಜೇಶ್ವರ ತಾಲೂಕು ಸಪ್ಲೈ ಆಫೀಸ್!
Team Udayavani, Apr 28, 2018, 6:40 AM IST
ಕುಂಬಳೆ: ಸರಕಾರ ನೂತನ ಮಂಜೇಶ್ವರ ತಾಲೂಕು ಘೋಷಿಸಿದ ಬಳಿಕ ಕಾಸರಗೋಡು ತಾಲೂಕನ್ನು ವಿಭಜಿಸಿ ಮಂಜೇಶ್ವರ ತಾಲೂಕಿನಲ್ಲಿ ಕೆಲವೊಂದು ಕಚೇರಿಗಳನ್ನು ಕೆಲವೆಡೆಗಳಲ್ಲಿ ಆರಂಭಿಸಲಾಯಿತು. ಇದರಲ್ಲಿ ಮಂಜೇಶ್ವರ ತಾಲೂಕು ಕಚೇರಿ ಮತ್ತು ಮಂಜೇಶ್ವರ ತಾಲೂಕು ಸಪ್ಲೈ ಆಫೀಸ್ ಪ್ರಧಾನವಾಗಿದೆ.
ತಾಲೂಕಿನ ಪ್ರಧಾನ ಕೇಂದ್ರವಾದ ಮಂಜೇಶ್ವರದಲ್ಲಿ ಹೆಚ್ಚಿನೆಲ್ಲ ಕೇಂದ್ರ ಗಳನ್ನು ಆರಂಭಿಸಬೇಕೆಂಬುದಾಗಿ ಕೆಲವರಾದರೆ ಉಪ್ಪಳದಲ್ಲೇ ಸರಕಾರಿ ಕಚೇರಿಗಳನ್ನು ಆರಂಭಿಸಬೇಕೆಂಬ ಬೇಡಿಕೆ ಯನ್ನು ರಾಜಕೀಯ ಪಕ್ಷಗಳ ನಾಯಕರು ಬಲವಾದ ವಾದ ಮಂಡಿಸಿ ದರು. ಸರ್ವಪಕ್ಷಗಳ ನಾಯಕ ರನ್ನೊಳಗೊಂಡ ಕ್ರಿಯಾ ಸಮಿತಿ ರಚಿಸಿ ಮಂಜೇಶ್ವರ ತಾಲೂಕು ಕಚೇರಿಯನ್ನು ಮಂಜೇಶ್ವರದಲ್ಲೇ ಆರಂಭಿಸ ಬೇಕೆಂಬುದಾಗಿ ಪ್ರತಿಭಟನೆ ನಡೆಸಲಾಯಿತು. ಕೊನೆಗೆ ಅದೊಂದು ದಿನ ಗುಪ್ತವಾಗಿ ತಾಲೂಕು ಕಂದಾಯ ಕಚೇರಿ ಉಪ್ಪಳದಲ್ಲಿ ಆರಂಭ ಗೊಂಡಿತು. ಇದರ ವಾದ ಇದೀಗ ನ್ಯಾಯಾ ಲಯದಲ್ಲಿದೆ.
ಕಚೇರಿ ಹುಡುಕಬೇಕು
ಮಂಜೇಶ್ವರ ತಾಲೂಕು ಕಚೇರಿ ಪ್ರಕೃತ ಉಪ್ಪಳದ ಖಾಸಗಿ ಕಟ್ಟಡದ ಎರಡನೇ ಮಾಳಿಗೆಯಲ್ಲಿ ಲಂಡನ್‌ಲೇಡಿ ಜವುಳಿ ಅಂಗಡಿ ಮೇಲಿನ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಅದೇ ರೀತಿ ಮಂಜೇಶ್ವರ ತಾಲೂಕು ಪಡಿತರ ವಿತರಕ ಕಚೇರಿ ಮಂಗಲ್ಪಾಡಿ ಬಂದ್ಯೋಡಿನ ಖಾಸಗಿ ಕಟ್ಟಡದ ಮಾರುತಿ ಸರ್ವಿಸ್ ಸೆಂಟರ್ ಮೇಲಿನ ಒಂದನೇ ಮಹಡಿಯ ಅಂಗಡಿಗಳಲ್ಲಿ ಕಾರ್ಯಚರಿಸುತ್ತಿದೆ.ಕಟ್ಟಡದ ಮೂರು ಕೊಠಡಿಗಳನ್ನು ಕಚೇರಿಯಾಗಿ ಬಳಸಲಾಗುತ್ತಿದೆ. ಇದು ಸರಕಾರಿ ಕಚೇರಿಯಾಗಿದ್ದರೂ ವ್ಯಾಪಾರದ ಅಂಗಡಿಯಂತಿದೆ. ವ್ಯವಸ್ಥಿತವಾಗಿ ಇಲ್ಲಿ ಯಾವುದೂ ಇಲ್ಲ. ಆದುದರಿಂದ ಇಲ್ಲಿನ ನೌಕರರು ಉಸಿರುಗಟ್ಟಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವರು. ಈ ಕಚೇರಿಗೆ ಆಗಮಿಸಬೇಕಾದಲ್ಲಿ ಬಂದೋÂಡಿನಿಂದ ಅಥವಾ ಮಳ್ಳಂಗೈಯಿಂದ ಪಾದ ಯಾತ್ರೆಯ ಮೂಲಕ ಜನರು ಸಾಗಬೇಕಾಗಿದೆ. ಇಲ್ಲಿನ ಕಚೇರಿಯ ನಾಮಫಲಕವನ್ನು ಹುಡುಕಬೇಕಾಗಿದೆ.
ಸ್ವಪಕ್ಷೀಯ ಕೆಲವು ನಾಯಕರ ಸ್ವಾರ್ಥ ಒತ್ತಡಕ್ಕೆ ಮಣಿದು ಶಾಸಕರು ಉಪ್ಪಳದಲ್ಲಿ ಮತ್ತು ಬಂದ್ಯೋಡಿನಲ್ಲಿ ತಾಲೂಕು ಕಚೇರಿ ಮತ್ತು ಸಪ್ಲೆ„ಆಫೀಸ್ ಗಳನ್ನು ತೆರೆದಿರುವುದಾಗಿ ಆರೋಪ ಕೇಳಿ ಬರುತ್ತಿದೆ. ಸಾರ್ವಜನಿಕರಿಗೆ ಅನನುಕೂಲವಾಗುವಂತೆ ತಾಲೂಕು ಕಚೇರಿ ಮತ್ತು ತಾಲೂಕು ಸಪ್ಲೈ ಆಫೀಸ್‌ಗಳ ಉಭಯ ಕಚೇರಿಗಳು ಕಾರ್ಯಾ ಚರಿಸುತ್ತಿವೆ. ಈ ಅನಾನುಕೂಲವನ್ನು ಸರಿಪಡಿಸಬೇಕೆಂಬ ಬೇಡಿಕೆ ಬಲವಾಗಿದೆ.ಇನ್ನಾದರೂ ವ್ಯವಸ್ಥಿತ ಕಟ್ಟಡಕ್ಕೆ ಸಾರ್ವ ಜನಿಕರಿಗೆ ಅನುಕೂಲವಾಗುವಂತೆ ಕಚೇರಿಯನ್ನು ಬದಲಾಯಿಸಬೇಕಾಗಿದೆ.ಇದಕ್ಕೆ ಸಂಬಂಧಪಟ್ಟವರು ಮುಂದಾಗಬೇಕಾಗಿದೆ.
– ಅಚ್ಯುತ ಚೇವಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.