ಆದರ್ಶ ಮೆರೆದ ಮುಸ್ಲಿಂ ದಂಪತಿ
ಹಿಂದೂ ಸಂಪ್ರದಾಯದಂತೆ ಸಾಕುಪುತ್ರಿಗೆ ವಿವಾಹ
Team Udayavani, Feb 18, 2020, 7:00 AM IST
ಅಬ್ದುಲ್ಲ - ಖದೀಜಾ ದಂಪತಿ ಅವರು ಹಿಂದೂ ಸಂಪ್ರದಾಯದಂತೆ ಸಾಕುಪುತ್ರಿಯ ವಿವಾಹ ನೆರವೇರಿಸಿದರು.
ಕಾಸರಗೋಡು: ಸುಮಾರು 10ರ ಹರೆಯದಲ್ಲಿ ಹೆತ್ತವರನ್ನು ಕಳೆದುಕೊಂಡು ಅನಾಥೆಯಾದ ಹಿಂದೂ ಧರ್ಮದ ಬಾಲಕಿಯೊಬ್ಬಳನ್ನು ಸಲಹಿದ ಅಬ್ದುಲ್ಲ ಮತ್ತು ಖದೀಜಾ ದಂಪತಿ ಆಕೆಗೆ 22 ವರ್ಷ ಪೂರ್ತಿಯಾದಾಗ ಹಿಂದೂ ಧರ್ಮದ ಸಂಪ್ರದಾಯದಂತೆ ಹಿಂದೂ ಯುವಕನೊಂದಿಗೆ ವಿವಾಹ ಮಾಡಿಕೊಟ್ಟು ಆದರ್ಶ ಮೆರೆದಿದ್ದಾರೆ.
ಶ್ರೀ ಭಗವತಿಯ ನಡೆಯಲ್ಲಿ ಕಾಂಞಂಗಾಡ್‌ನ ಪುದಿಯ ಕೋಟೆ (ಹೊಸದುರ್ಗ)ಯ ಬಾಲಚಂದ್ರನ್-ಜಯಂತಿಯ ಪುತ್ರ ವಿಷ್ಣು ಪ್ರಸಾದ್ ಮೇಲ್ಪರಂಬದ ಶಮೀಂ ಮಂಜಿಲ್‌ನ ರಾಜೇಶ್ವರಿಯ ಕುತ್ತಿಗೆಗೆ ತಾಳಿ ಕಟ್ಟಿದಾಗ ಅಬ್ದುಲ್ಲ-ಖದೀಜಾ ದಂಪತಿ ಕಣ್ಣಲ್ಲಿ ಆನಂದಬಾಷ್ಪ ಹರಿಯಿತು. ಈ ಸಂದರ್ಭ ವಧುವಿನ ಇತರ ಮುಸ್ಲಿಂ ಸಹೋದರರೂ ಉಪಸ್ಥಿತರಿದ್ದರು.
ತಂಜಾವೂರಿನ ಬಾಲಕಿ
ಅಬ್ದುಲ್ಲ-ಖದೀಜಾ ದಂಪತಿಯ ಸಾಕು ಪುತ್ರಿ ತಂಜಾವೂರು ನಿವಾಸಿ ಯಾದ ರಾಜೇಶ್ವರಿ 7-8 ವರ್ಷ ಪ್ರಾಯವಿದ್ದಾಗ ಇಲ್ಲಿಗೆ ಬಂದಿದ್ದಳು. ಆಕೆಗೆ 10 ವರ್ಷವಾದಾಗ ತಂದೆ- ತಾಯಿ ನಿಧನ ಹೊಂದಿದ್ದರು. ತಂದೆ ಶರವಣನ್ ಕಾಸರಗೋಡಿನಲ್ಲೂ, ಮೇಲ್ಪರಂಬದಲ್ಲೂ ಕೂಲಿ ಕೆಲಸ ಮಾಡಿ ಜೀವನ ಸಾಗಿಸಿದ್ದರು. ಹಲವು ವರ್ಷ ಅಬ್ದುಲ್ಲ ಅವರ ಕಾಂಞಂಗಾಡ್‌ನ ಕುನ್ನರಿಯದಲ್ಲಿರುವ ಕೃಷಿ ಭೂಮಿ ಯಲ್ಲಿ ಕೆಲಸ ಮಾಡಿದ್ದರು. ಹೀಗೆ ಅಬ್ದುಲ್ಲ ಅವರ ಮನೆಯನ್ನು ಸೇರಿ ಕೊಂಡ ರಾಜೇಶ್ವರಿ ಅಬ್ದುಲ್ಲ ಅವರ ಮಕ್ಕಳಾದ ಶಮೀಮ್, ನಜೀಬ್, ಶರೀಫ್ ಅವರ ಸಹೋದರಿಯಾಗಿ ಬೆಳೆದಳು.
ಇತ್ತೀಚೆಗೆ ಅದೇ ಊರಿನ ವಿಷ್ಣು ಪ್ರಸಾದ್ ಅವರ ಹೆತ್ತವರು ತಮ್ಮ ಪುತ್ರನಿಗೆ ರಾಜೇಶ್ವರಿಯನ್ನು ವಿವಾಹ ಮಾಡಿ ಕೊಡುವಂತೆ ಪ್ರಸ್ತಾವ ಮಾಡಿದ್ದರು. ವಿವಾಹವನ್ನು ಹಿಂದೂ ಕ್ಷೇತ್ರದಲ್ಲಿ ನೆರವೇರಿಸಿ ಕೊಡಬೇಕೆಂದು ಕೇಳಿ ಕೊಂಡಿದ್ದರಿಂದ ಎಲ್ಲ ಧರ್ಮದವರೂ ಪ್ರವೇಶಿಸಬಹುದಾದ ಕಾಂಞಂಗಾಡ್‌ಮನ್ಯೋಟ್ಟು ಕ್ಷೇತ್ರ ದಲ್ಲಿ ವಿವಾಹ ಮಾಡಲು ತೀರ್ಮಾನಿಸಲಾಯಿತು.
ರವಿವಾರ ಬೆಳಗ್ಗೆ ನಡೆದ ವಿವಾಹ ಸಮಾರಂಭದಲ್ಲಿ ಅಬ್ದುಲ್ಲ ಅವರ ತಾಯಿ 84ರ ಹರೆಯದ ಸಫೀಯುಮ್ಮ ಸಹಿತ ಬಂಧು ಮಿತ್ರರು ಭಾಗವಹಿಸಿದ್ದರು. ಕಾಂಞಂಗಾಡ್ ನಗರಸಭಾ ಕೌನ್ಸಿಲರ್ ಎಚ್.ಆರ್. ಶ್ರೀಧರನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್ ಮೊದಲಾದವರು ಉಪಸ್ಥಿತರಿದ್ದರು.
ವಿವಾಹ ಸಮಾರಂಭ ನಡೆಯು ತ್ತಿದ್ದಾಗ ದೂರ ಉಳಿದಿದ್ದ ಅಬ್ದುಲ್ಲ, ಸಹೋದರ ಮುತ್ತಲಿಬ್, ಪತ್ನಿಯ ಸಹೋದರ ಬಶೀರ್ ಕುನ್ನರಿಯತ್ ಅವರನ್ನು ವರನ ಮನೆಯವರು ಕೈಹಿಡಿದು ಮಂಟಪದ ಕಡೆ ಕರೆತಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Demand: ಕೊರೆವ ಚಳಿಯಲ್ಲೂ ಮುಂದುವರಿದ ‘ಆಶಾ’ ಕಾರ್ಯಕರ್ತೆಯರ ಮುಷ್ಕರ
ಎಂಟು ಅಧಿಕಾರಿಗಳಿಗೆ ಸೇರಿದ 38 ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ: 21 ಕೋಟಿ ರೂ. ಆಸ್ತಿ ಪತ್ತೆ
Puttur: ಮಹಿಳೆಯ ಮಾನಭಂಗ ಯತ್ನ ಪ್ರಕರಣ; ಆರೋಪಿ ಖುಲಾಸೆ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.