ಮೇ 9ರಿಂದ ಮುಳ್ಳೇರಿಯದಲ್ಲಿ ಸಂಗೀತ ಶಿಬಿರ
Team Udayavani, Apr 16, 2019, 5:45 PM IST
ಬದಿಯಡ್ಕ: ರಾಗ ಸುಧಾರಸ ಕಾಸರಗೋಡು ಇದರ ನೇತೃತ್ವದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಬಿರ ಮೇ 9ರಿಂದ 12ರ ತನಕ ಮುಳ್ಳೇರಿಯದ ಗಣೇಶ ಕಲಾ ಮಂದಿರದಲ್ಲಿ ನಡೆಯಲಿದೆ.
ಕಲೆಮಾಮಣಿ ವಿದ್ವಾನ್ ವಿಠಲ್ ರಾಮಮೂರ್ತಿ ಚೆನ್ನೈ ಶಿಬಿರವನ್ನು ನಡೆಸಿಕೊಡಲಿದ್ದಾರೆ. ಮೇ 9ರಂದು ಬೆಳಿಗ್ಗೆ 9 ಕ್ಕೆ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಸಂಗೀತ ಶಿಬಿರವನ್ನು ಉದ್ಘಾಟಿಸುವರು. 9.30ರಿಂದ ಶಿಬಿರ ಆರಂಭಗೊಳ್ಳಲಿದೆ. ಶಿಬಿರದಲ್ಲಿ ಭಾಗವಹಿಸುವವವರು ಅಂದು ಬೆಳಿಗ್ಗೆ 8.45ಕ್ಕೆ ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸುವಂತೆ ವಿನಂತಿಸಲಾಗಿದೆ.
ಮೇ 12ರಂದು ಮಧ್ಯಾಹ್ನ 3ಕ್ಕೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಡಾ.ಶಂಕರ್ ರಾಜ್ ಆಲಂಪಾಡಿ ಅಧ್ಯಕ್ಷತೆ ವಹಿಸುವರು. ಡಾ. ಶ್ರೀಪತಿ ಕಜಂಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಗೀತ ಕಲಾನಿಧಿ ಪದ್ಮಭೂಷಣ ಟಿ.ವಿ.ಶಂಕರನಾರಾಯಣನ್ , ಕಲೆ„ಮಾಮಣಿ ವಿಠಲ್ ರಾಮಮೂರ್ತಿ ಭಾಗವಹಿಸುವರು.
ಸಂಜೆ 4ಕ್ಕೆ ನಡೆಯುವ ಕರ್ನಾಟಕ ಸಂಗೀತ ಕಛೇರಿಯಲ್ಲಿ ಹಾಡುಗಾರಿಕೆಯಲ್ಲಿ ಕಲಾನಿಧಿ ಟಿ.ವಿ.ಶಂಕರನಾರಾಯಣನ್ ವಯಲಿನ್‌ನಲ್ಲಿ ಕಲೆ„ಮಾಮಣಿ ವಿಠಲ್ ರಾಮಮೂರ್ತಿ ಮೃದಂಗದಲ್ಲಿ ವಿದ್ವಾನ್ ನೈವೇಲಿ ನಾರಾಯಣನ್ , ಘಟಂನಲ್ಲಿ ವಿದ್ವಾನ್ ಜಿ.ಎಸ್.ರಾಮಾನುಜಂ ಮೈಸೂರು ಭಾಗವಹಿಸುವರು.
ಈ ಬಗ್ಗೆ ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಕೊಚ್ಚಿ ಗೋವಿಂದ ಭಟ್, ಬಾಲರಾಜ್ ಬೆದ್ರಡಿ, ಪ್ರಭಾಕರ ಕುಂಜಾರ್, ಬಾಲಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ, ರಂಗನಾಥ ಶೆಣೆ, ಗಣೇಶ್ ವತ್ಸ, ಕೃಷ್ಣಮೂರ್ತಿ ಎಡಪ್ಪಾಡಿ, ಸ್ಮಿತಾ ಭಾಸ್ಕರನ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.