ಕಾಸರಗೋಡು ಜಿಲ್ಲೆಯಲ್ಲಿ ಮಿಲ್ಕ್ ಡೇ ಆಚರಣೆ
Team Udayavani, Jun 1, 2019, 11:46 AM IST
ಬದಿಯಡ್ಕ: ಮಿಲ್ಕ್ ಡೇ ಇದರಂಗವಾಗಿ ಬದಿಯಡ್ಕ ಹಾಲು ಉತ್ಪಾದಕರ ಸಂಘದ ಆಶ್ರಯದಲ್ಲಿ ನಡೆದ ವಿಶೆಷ ಕಾರ್ಯಕ್ರಮವನ್ನು ಬದಿಯಡ್ಕ ಗ್ರಾ.ಪಂ. ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು.
ಬದಿಯಡ್ಕ ಹಾಲುತ್ಪಾದಕರ ಸಂಘದ ಅಧ್ಯಕ್ಷರಾದ ಕೆ.ಎ.ಶೆಟ್ಟಿ ಅದ್ಯಕ್ಷತೆ ವಹಿಸಿದರು. ಆಡಳಿತ ಮಂಡಳಿ ಸದಸ್ಯರಾದ ಸದಾನಂದ ರೈ ಶುಭಾಶಂಸನೆಗೈದರು. ಉಮಾನಾಥ ಕಾಮತ್ ಉಪಸ್ಥಿತರಿದ್ದರು. ಸುರೇಖ ಸ್ವಾಗತಿಸಿ ಆಶೋಕ ರೈ ವಂದಿಸಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಬೆಳಿಗ್ಗೆ ಡೈರಿಗೆ ಹಾಲು ತಂದವರಿಗೆ ಹಾಲಿನಿಂದ ತಯಾರಿಸಿದ ಸಿಹಿ ತಿಂಡಿಗಳನ್ನು ವಿತರಿಸಿ ಮಿಲ್ಕ್ ಡೇ ಯ ಶುಭ ಕೋರಲಾಯಿತು.
ಉತ್ತಮ ಗುಣಮಟ್ಟದ ಹಾಲಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಹಾಲುತ್ಪಾದಕರು ಗುಣಮಟ್ಟ ಕಾಪಾಡುವತ್ತ ಹೆಚ್ಚಿನ ಗಮನ ಹರಿಸಬೇಕು. ಮನೆಮನೆಯಲ್ಲೂ ಗೋವುಗಳನ್ನು ಸಾಕಿ ಹಾಲುಮಾರಾಟ ಮಾಡುವ ಮೂಲಕ ಸ್ವಾವಲಂಬಿಗಳಾಗಳು ಸಾಧ್ಯ. ಕಲ್ಪವೃಕ್ಷದಂತೆ ಜನ ಸಾಮಾನ್ಯರ ಬದುಕಿಗೆ ವರದಾನವಾಗಿರುವ ಕಾಮದೇನುವಿನ ಹಾಲು ಮತ್ತು ಹಾಲುತ್ಪನ್ನಗಳಿಗೆ ಪ್ರಾಮುಖ್ಯತೆ ಇದ್ದು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ. ನಮ್ಮ ಸೊಸೈಟಿಯು ಹಾಲುತ್ಪಾದಕರಿಗೆ ಸೂಕ್ತ ಬೆಲೆ ನೀಡಿ ಹಾಲು ಖರೀದಿ ಮಾಡುವುದರಿಂದ ಹಾಗೂ ಜನರ ಪ್ರೋತ್ಸಾಹ ಉತ್ತಮ ರೀತಿಯಲ್ಲಿರುವುದರಿಂದ ಇಂದು ಈ ಮಟ್ಟಕ್ಕೆ ತಲುಪಲು ಸಾಧ್ಯವಾಗಿದೆ.
ಕೆ.ಎ.ಐತ್ತಪ್ಪ ಶೆಟ್ಟಿ , ಹಾಲುತ್ಪಾದಕರ ಸಂಘದ ಅಧ್ಯಕ್ಷ
ಹಾಲೆಂಬುದು ಅಮೃತ. ಹಾಲಿನ ಮಹತ್ವ ವಿಶ್ವಕ್ಕೆ ತಿಳಿಯಪಡಿಸಬೇಕು. ಕೃಷಿಕರಿಗೂ ಕೂಡ ಇಂದಿನ ದಿನ ಅವಿಸ್ಮರಣೀಯ. ಎಲ್ಲರೂ ಕೂಡ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಬೇಕು. ಬದಿಯಡ್ಕ ಹಾಲು ಘಟಕ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಬಾಲಕೃಷಂ ಶೆಟ್ಟಿ, ಬದಿಯಡ್ಕ ಪಂ. ಸದಸ್ಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.