ಸಚಿವ ಸಜಿ ಚೆರಿಯಾನರನ್ನು ಭೇಟಿಯಾದ ಶಾಸಕ ಎ.ಕೆ ಎಂ.ಅಶ್ರಫ್: ವಿವಿಧ ಯೋಜನೆಗಳ ಕುರಿತು ಚರ್ಚೆ
Team Udayavani, Jun 28, 2021, 12:19 PM IST
ಮಂಜೇಶ್ವರ/ತಿರುವಂತಪುರ: ಮಂಜೇಶ್ವರ ಕ್ಷೇತ್ರದ ಎಂಟು ತೀರ ಪ್ರದೇಶ ರಸ್ತೆಗಳ ಅಭಿವೃದ್ಧಿಗಾಗಿ ಆಡಳಿತಾತ್ಮಕ ಅನುಮೋದನೆ ಹಾಗೂ ಸಮುದ್ರದ ಅಬ್ಬರದಿಂದ ತತ್ತರಿಸಿದ ಪ್ರದೇಶಗಳ ಜನತೆಯ ಗೋಳನ್ನು ವಿವರಿಸಿ, ಟ್ರಾಲಿಂಗ್ ನಿಷೇಧದ ಅವಧಿಯಲ್ಲಿ ಸರ್ಕಾರ ಮೀನುಗಾರರಿಗೆ ನ್ಯಾಯಬೆಲೆ ಅಂಗಡಿಯ ಮೂಲಕ ವಿತರಿಸುವ ಆಹಾರ-ಧಾನ್ಯಗಳನ್ನು ಪಡೆಯಲು ಅರ್ಹರಾದ ಹಲವು ಫಲಾನುಭವಿಗಳು ಪ್ರಸ್ತುತ ಯೋಜನೆಯ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದಿರುವುದರ ಬಗ್ಗೆ ಮಂಜೇಶ್ವರ ಕ್ಷೇತ್ರದ ಶಾಸಕರಾದ ಶ್ರೀ ಎ ಕೆ ಎಂ ಅಶ್ರಫ್ ಕೇರಳ ಮೀನುಗಾರಿಕೆ ಮತ್ತು ಸಾಂಸ್ಕೃತಿಕ ಸಚಿವರಾದ ಶ್ರೀ ಸಜಿ ಚೆರಿಯಾನ್ ಇವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದರು.
ತೀರಪ್ರದೇಶದ ಜನತೆಯ ಬಗ್ಗೆ ಹಾಗೂ ಮೀನುಗಾರರ ವಿಚಾರವಾಗಿ ಜೂನ್ ತಿಂಗಳಲ್ಲಿ ಶಾಸಕರು ಸಚಿವರನ್ನು ಭೇಟಿಯಾಗುತ್ತಿರುವುದು ಇದು ಎರಡನೇ ಬಾರಿ.ಹಲವು ಸಂಕಷ್ಟಗಳನ್ನು ಎದುರಿಸುತ್ತಿರುವ ಕ್ಷೇತ್ರದ ತೀರ ಪ್ರದೇಶಕ್ಕೆ ಸಚಿವರು ಮುಖತಃ ಭೇಟಿಯಾಗಬೇಕೆಂದು ಮನವಿ ಮಾಡಿದ ಎ ಕೆ ಎಂ ಅಶ್ರಫ್ ರವರು ಉಪ್ಪಳ ಮುಸೋಡಿ, ಕೊಯಿಪ್ಪಾಡಿ, ಪೆರ್’ವಾಡ್, ಕೊಪ್ಪಳ, ಮಂಜೇಶ್ವರ ಕಣ್ವ ತೀರ್ಥ, ಹೊಸಬೆಟ್ಟು, ಬೆಂಗ್ರೆ ಮಂಜೇಶ್ವರ, ಆರಿಕ್ಕಾಡಿ ಮುಂತಾದ ತೀರಪ್ರದೇಶಗಳಿಗಾಗಿ ಪ್ರತ್ಯೇಕ ಪ್ಯಾಕೇಜ್ ಮಂಜೂರು ಮಾಡಬೇಕೆಂದು ಕೋರಿದರು.
ಕಡಲಿನ ಅಬ್ಬರವನ್ನು ತಡೆಯಲು ಟೆಟ್ರಾಪೋಡ್ ಯೋಜನೆಯನ್ನು ಕೇರಳದಲ್ಲಿ ಜಾರಿಗೊಳಿಸುವಾಗ ಮಂಜೇಶ್ವರವನ್ನು ಸಮುದ್ರದ ಅಬ್ಬರ ಅತಿಯಾದ ಕ್ಷೇತ್ರ ಎಂಬ ಕಾರಣದಿಂದ ಮೊದಲಿನ ಆದ್ಯತೆ ನೀಡಬೇಕು.ಸಮುದ್ರ ತೀರದಿಂದ ಮನೆ ಮತ್ತು ಆಸ್ತಿಯನ್ನು ಬಿಟ್ಟು ತೆರಳುವವರಿಗೆ ‘ಪುನರ್’ಗೇಹಂ’ ಯೋಜನೆಯ ಮೂಲಕ ವಿತರಿಸುವ ಆರ್ಥಿಕ ನೆರವನ್ನು ಹತ್ತು ಲಕ್ಷದಿಂದ ಇಪ್ಪತ್ತು ಲಕ್ಷಕ್ಕೆ ಹೆಚ್ಚಿಸಬೇಕು. ಹೀಗೆ ತೆರಳುವವರಲ್ಲಿ ಒಂದೇ ಮನೆಯ ಒಂದಕ್ಕಿಂತ ಹೆಚ್ಚು ಕುಟುಂಬವಿದ್ದಲ್ಲಿ ಅವನ್ನು ಬೇರೆ ಕುಟುಂಬ ಎಂದು ಗಣನೆಗೆ ತೆಗೆದುಕೊಂಡು ಧನ ಸಹಾಯಯನ್ನು ನೀಡಬೇಕು ಎಂದು ಮನವಿಯಲ್ಲಿ ವಿವರಿಸಲಾಯಿತು.ಮನವಿಯನ್ನು ಕೂಲಂಕಷವಾಗಿ ಆಲಿಸಿದ ಸಚಿವರು ಸಾಧ್ಯವಾಗುವ ಮಟ್ಟಿನಲ್ಲಿ ಸಹಕಾರವನ್ನು ನೀಡುವ ಬಗ್ಗೆ ಭರವಸೆ ನೀಡಿರುವುದಾಗಿ ಶಾಸಕರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Madikeri: ದೇಗುಲದಲ್ಲಿ ಸಮಾನತೆಯೇ ಉದ್ದೇಶ ; ಕಟ್ಟೆಮಾಡಿನ ಶ್ರೀ ಮಹಾ ಮೃತ್ಯುಂಜಯ ವಿವಾದ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Kodagu: ಯೋಧ ದಿವಿನ್ ಪಂಚಭೂತಗಳಲ್ಲಿ ಲೀನ
Kasaragod ಅಪರಾಧ ಸುದ್ದಿಗಳು: ಅಂಗಡಿಗೆ ಲಾರಿ ಢಿಕ್ಕಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.