ಕಾಸರಗೋಡು ರಾಜ್ಯಕ್ಕೆ ಮಾದರಿ: ಷಾಹಿದಾ ಕಮಾಲ್
ಹೆಣ್ಣುಮಕ್ಕಳಿಗೆ ಪ್ಲಂಬಿಂಗ್, ವಯರಿಂಗ್ ತರಬೇತಿ
Team Udayavani, Sep 20, 2019, 5:40 AM IST
ಕಾಸರಗೋಡು: ಹೆಣ್ಣು ಮಕ್ಕಳಿಗೆ ವಯರಿಂಗ್ ಮತ್ತು ಪ್ಲಂಬಿಂಗ್ ಕಾಯಕದ ಬಗ್ಗೆ ತರಬೇತಿ ನೀಡುವ ಮೂಲಕ ಅವರನ್ನು ಸಬಲರನ್ನಾಗಿಸುವ ಯತ್ನದಲ್ಲಿ ಕಾಸರಗೋಡು ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಸದಸ್ಯೆ ಡಾ| ಷಾಹಿದಾ ಕಮಾಲ್ ಶ್ಲಾಘಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಚಾರದತ್ತ ಬೆಳಕು ಚೆಲ್ಲಿದರು.ಕೇರಳ ಪುನರ್ ನಿರ್ಮಾಣ ಯೋಜನೆ ಅಂಗವಾಗಿ ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಹೆಣ್ಣು ಮಕ್ಕಳಿಗೆ ಈ ವಲಯದಲ್ಲಿ ನೀಡಲಾದ ತರಬೇತಿ ಪೂರ್ಣಗೊಂಡಿದ್ದು ಸುಮಾರು 20 ಮಂದಿ ಹೆಣ್ಣು ಮಕ್ಕಳು ತರಬೇತಿ ಪಡೆದಿರುವುದು ಆರೋಗ್ಯಕರ ಬೆಳವಣಿಗೆ ಎಂದವರು ಕೊಂಡಾಡಿದರು.
ಈ ವರೆಗೆ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಈ ವಲಯಗಳಲ್ಲಿ ಈ ಮೂಲಕ ಮಹಿಳೆಯರಿಗೂ ಅವಕಾಶ ಒದಗಿದೆ. ಮನೆಯೊಂದಕ್ಕೆ ಅನಿವಾರ್ಯ ಘಟಕಗಳಾಗಿರುವ ಈ ವಲಯಗಳಲ್ಲಿ ಪುರುಷರು ಮಾತ್ರ ಕಾಯಕ ನಡೆಸುತ್ತಿದ್ದುದು ಅನೇಕ ಸಮಸ್ಯೆಗಳಿಗೂ ಕಾರಣವಾಗುವ ಭೀತಿಗಳಿದ್ದುವು. ಆದರೆ ಮಹಿಳೆಯರೂ ಈ ವಲಯದಲ್ಲಿ ಸಿದ್ಧರಾಗುವ ನೂತನ ಸಾಧ್ಯತೆಗಳು ತೆರೆದುಕೊಂಡಿವೆ ಎಂದವರು ನುಡಿದರು.
ಇದೇ ವೇಳೆ ಪ್ರತಿ ಮನೆಯಲ್ಲೂ ಕನಿಷ್ಠ ಓರ್ವ ಮಹಿಳೆಗೆ ಈ ತರಬೇತಿ ನೀಡಬೇಕು ಎಂದು ಆಯೋಗ ಆಗ್ರಹಿಸುತ್ತಿದೆ ಎಂದು ಷಾಹಿದಾ ಕಮಾಲ್ ತಿಳಿಸಿದರು.
ಈ ನಿಟ್ಟಿನಲ್ಲಿ ಈ ತರಬೇತಿ ಯೋಜನೆಯನ್ನು ವಿಪುಲಗೊಳಿಸಬೇಕು ಎಂದು ಜಿಲ್ಲಾ ಧಿಕಾರಿ ಅವರಲ್ಲಿ ವಿನಂತಿಸಿರುವುದಾಗಿ ಮತ್ತು ಅವರು ಇದಕ್ಕೆ ಸಮ್ಮತಿ ನೀಡಿರುವುದಾಗಿ ಅವರು ಹೇಳಿದರು. ಇದರ ಅಂಗವಾಗಿ ಅ. 12ರಂದು ಈ ವಿಚಾರಕ್ಕೆ ಆದ್ಯತೆ ನೀಡುವ ವಿಚಾರಸಂಕಿರಣ ನಡೆಸುವುದಾಗಿ ಅವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.