ಮುಂಗಾರು ಮಳೆ ಕಣ್ಣಾಮುಚ್ಚಾಲೆ, ನೀಗಿಲ್ಲ ನೀರಿನ ರಗಳೆ

ಬಿಸಿ ವಾತಾವರಣದಿಂದ ಬಿದ್ದ ಮಳೆನೀರೂ ಆವಿ

Team Udayavani, Jun 21, 2019, 5:50 AM IST

19-BDK-02

ಬದಿಯಡ್ಕ: ತಡವಾಗಿ ಜಿಲ್ಲೆಗೆ ಕಾಲಿರಿಸಿದ ಮುಂಗಾರು ಮಳೆ ನಿರೀಕ್ಷೆಯನ್ನು ಸುಳ್ಳಾಗಿಸಿ ಕಣ್ಣಾಮಚ್ಚಾಲೆಯಾಡುತ್ತಿರುವುದು ಜನರಿಗೆ ಬಲುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ವಾರದ ಹಿಂದೆ ಪ್ರಾರಂಭವಾದ ಮಳೆ ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಕಾರಣ ಬಿಸಿ ಕಾವಲಿಗೆ ನೀರು ಸಿಂಪಡಿಸಿದಂತೆ ಬಿಸಿಲಿನ ಬೇಗೆಗೆ ಬೆಂದ ಇಳೆಯಲ್ಲಿ ಮಳೆನೀರು ಆ ಕೂಡಲೆ ಬತ್ತಿಹೋಗುತ್ತದೆ. ದಿನದ ಉಷ್ಣಾಂಶವೂ ಕಡಿಮೆಯಾಗದೇ ಇರುವುದರಿಂದ ಹಳ್ಳ, ತೋಡು, ಕೆರೆ, ಮದಕಗಳು ಇನ್ನೂ ಖಾಲಿ ಖಾಲಿ. ರೈತರ ಮುಖದಲ್ಲಿ ಆತಂಕದ ಗೆರೆಗಳು ಗೋಚರಿಸುತ್ತಿವೆ.

ನೀರು ಸಂಗ್ರಹಣೆಯತ್ತ ಗಮನಹರಿಸೋಣ
ಜಿಲ್ಲೆಯಾದ್ಯಂತ ಹಲವಾರು ಮದಕಗಳು, ಪಳ್ಳ, ಕೆರೆಗಳಿದ್ದರೂ ನಿರ್ವಹಣೆಯ ಕೊರತೆಯಿಂದ ಸಮಯಕ್ಕೂ ಮುನ್ನವೇ ನೀರು ಬತ್ತಿ ಬರಡಾಗುತ್ತವೆ. ಅವುಗಳನ್ನು ಸ್ವತ್ಛಗೊಳಸಿ ಹೆಚ್ಚು ನೀರು ಸಂಗ್ರಹವಾಗುವಂತೆ ಮಾಡುವ ಕಾರ್ಯದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ತೋರುವ ಔದಾಸೀನ್ಯ ಇಂದು ನೀರಿನ ಸಮಸ್ಯೆ ಹೆಚ್ಚಾಗಲು ಕಾರಣ ಎಂದರೆ ತಪ್ಪಾಗದು. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಇಂತಹ ನೀರು ಸಂಗ್ರಹವಾಗುವ ಆ ಮೂಲಕ ಅಂತರ್ಜಲ ಮಟ್ಟ ಬೇಗನೆ ಕುಸಿಯದಂತೆ ಸಂರಕ್ಷಿಸುವ ಪ್ರಾಕೃತಿಕ ಮೂಲಗಳನ್ನು ಪುನಶ್ಚೇತನ ಗೊಳಿಸುವತ್ತ ಸಕಾಲದಲ್ಲಿ ಗಮನಹರಿಸಿದರೆ ಮುಂದೆ ಎದುರಾಗುವ ನೀರಿನ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯ.

ಮಾನ್ಯ ಪ್ರದೇಶದಲ್ಲಿ ಹೂಳೆತ್ತಿದಲ್ಲಿ ಹೆಚ್ಚು ನೀರು ಇಂಗಲು ಸಹಾಯಕವಾಗಬಲ್ಲ, ಹೆಚ್ಚು ಕಾಲ ನೀರು ಸಂಗ್ರಹಿಸಬಲ್ಲ ಹಲವಾರು ಕೆರೆ, ಮದಕಗಳು ಇದ್ದರೂ ಪಂಚಾಯತ್‌ ಜನರ ವಿರೋಧದ ನಡುವೆಯೂ ಜಲಸಂರಕ್ಷಣೆ ಹೆಸರಲ್ಲಿ ಹೊಂಡಗಳನ್ನು ನಿರ್ಮಾಣ ಮಾಡುತ್ತಿರುವುದು ವಿಪರ್ಯಾಸ. ಮಾಡಬೇಕಾದ ಕಾರ್ಯ ಮಾಡದೆ ನೀರ ಮೇಲೆ ಹೋಮವಿಟ್ಟಂತಿರುವ ಇಂತಹ ಕೆಲಸಗಳಿಂದ ಯಾವುದೇ ಪ್ರಯೋಜನವಿಲ್ಲ ಎನ್ನುವುದು ನಾಗರಿಕರ ಮಾತು.

ಮಾಯವಾಗುತ್ತಿವೆ ಮದಕಗಳು
ಪುತ್ತಿಗೆ ಪಂಚಾಯತ್‌, ಎಣ್ಮಕಜೆ ಪಂಚಾಯತ್‌ ಸೇರಿದಂತೆ ಜಿಲ್ಲೆಯ ಹೆಚ್ಚಿನ ಪಂಚಾಯತ್‌ಗಳಲ್ಲೂ ಮದಕಗಳು ನೀರಿಲ್ಲದೆ ಸೊರಗುತ್ತಿವೆ. ಎಣ್ಮಕಜೆ ಪಂಚಾಯತ್‌ನ ಬೆದ್ರಂಪಳ್ಳದಲ್ಲಿರುವ ಪಳ್ಳವು ಶಿಥಿಲಗೊಂಡಿದ್ದು ಸೂಕ್ತ ರೀತಿಯಲ್ಲಿ ನೀರು ಸಂಗ್ರಹವಾಗುವ ಸಾಧ್ಯತೆಯೂ ಕಾಣುವುದಿಲ್ಲ. ಈ ಪಳ್ಳ ಕೇವಲ ಒಂದು ನೆನಪಾಗಿ ಉಳಿಯುವ ಮೊದಲು ಅಧಿಕೃತರು ಇತ್ತ ಗಮನಹರಿಸಬೇಕಾಗಿದೆ. ಮೊದಲು ಪಳ್ಳ, ಮದಕಗಳಲ್ಲಿ ನೀರು ತುಂಬಿದ್ದಾಗ ಪರಿಸರದ ಬಾವಿಗಳಲ್ಲಿ ನೀರಿನ ಮಟ್ಟ ಬೇಗನೆ ಕುಸಿಯುತ್ತಿರಲಿಲ್ಲ. ಆದರೆ ಇಂದು ಸಂಗ್ರಹವಾಗುವ ನೀರು ಕಡಿಮೆಯಾದಂತೆ ಅಂತರ್ಜಲದ ಮಟ್ಟ ಕುಸಿದು ಬಾವಿಗಳು, ಕೊಳವೆ ಬಾವಿಗಳೂ ಬೇಗನೆ ಬತ್ತಿ ಹೋಗುತ್ತಿವೆ.

ಬಾವಿಕ್ಕೆರೆಯಲ್ಲೂ ನೀರಿಲ್ಲ
ಕಾಸರಗೋಡು ನಗರ ಮತ್ತು ಸುತ್ತುಮುತ್ತಲ ಜನತೆಗೆ ನೀರು ಸರಬರಾಜು ಮಾಡಲು ಜಲ ಪ್ರಾಧಿಕಾರ ಆಶ್ರಯಿಸಿರುವ ಏಕೈಕ ಜಲಮೂಲವೆಂದರೆ ಬಾವಿಕ್ಕೆರೆ. ಸಾಧಾರಣವಾಗಿ ಮೇ ಮಾಸದಲ್ಲಿ ಬರುವ ಉಪ್ಪುನೀರು ಈ ವರ್ಷ ಎಪ್ರಿಲ್‌ ತಿಂಗಳಿನಲ್ಲಿಯೇ ಬರಲಾರಂಭಿಸಿತ್ತು. ಆದರೆ ಕೆಲವೇ ದಿನಗಳಲ್ಲಿ ನೀರು ಸರಬರಾಜು ನಿಲುಗಡೆಗೊಳಿಸಿತು.

ನೀರಿಗಾಗಿ ಕಾದಿರುವ ಜನತೆ ಸುಮಾರು ಎರಡು ತಿಂಗಳಿಂದೀಚೆಗೆ ಪೈಪ್‌ ನೀರಿಗಾಗಿ ಕಾದಿರುವ ಜನತೆಯನ್ನು ಮುಂಗಾರು ಮಳೆಯೂ ನಿರಾಸೆಗೊಳಿಸಿದ್ದು ಬಾವಿಕ್ಕೆರೆಯಲ್ಲಿ ತಕ್ಕಷ್ಟು ನೀರು ಸಂಗ್ರಹವಾಗಿಲ್ಲದ ಕಾರಣ ನೀರು ಸರಬರಾಜು ಇನ್ನೂ ಪ್ರಾರಂಭವಾಗಿಲ್ಲ.

ನಿಜವಾಯಿತೇ
ಸ್ಕೈಮೆಟ್‌ ಭವಿಷ್ಯ?
ದೇಶದಲ್ಲಿ ಈ ಬಾರಿಯ ಮುಂಗಾರು ಮಳೆ ವಾಡಿಕೆಗಿಂತಲೂ ಕಡಿಮೆಯಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌ ಈಗಾಗಲೇ ಮೇ ಭವಿಷ್ಯ ನುಡಿದಿದೆ. ಜೂನ್‌ ತಿಂಗಳು ಕಳೆದು ಜುಲೈ ಹತ್ತಿರವಾಗುತ್ತಿದ್ದರೂ ಬಾನಿನಲ್ಲಿ ಕರಿಮೋಡ ಗಳಿಲ್ಲ. ಮಿಂಚು, ಗುಡುಗು, ಸಿಡಿಲಿನ ಸುಳಿವಿಲ್ಲ. ಸಾಮಾನ್ಯವಾಗಿ ಎಪ್ರಿಲ್‌ ಮಧ್ಯಭಾಗದಲ್ಲಿ ಮತ್ತು ಮೇ ಕೊನೆಯ ವಾರದಲ್ಲಿ ಸುರಿಯುವ ಮಳೆಯೂ ಈ ವರ್ಷ ಸುರಿಯಲಿಲ್ಲ. ಆದುದರಿಂದ ನೀರಿನ ಸಮಸ್ಯೆ ಇಷ್ಟೊಂದು ಜಟಿಲವಾಗಿ ಕಾಡಲಾರಂಭಿಸಿದೆ.

ಮಳೆ ಕೊರತೆ ಆತಂಕ
ಮುಖ್ಯವಾಗಿ ಮುಂಗಾರು ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುವ ನಮ್ಮ ರಾಜ್ಯವು ಮುಂಗಾರು ವಿಳಂಬದಿಂದಾಗಿ ತೊಂದರೆ ಅನುಭವಿಸುವಂತಾಗಿದೆ. ಈಗಾಗಲೇ ಗದ್ದೆ ಬೇಸಾಯ ಪ್ರಾರಂಭಿಸಿರುವ ರೈತರಲ್ಲಿ ಮಳೆಯ ಕೊರತೆ ಆತಂಕ ಮೂಡಿಸಿದೆ. ಇದರಿಂದಾಗಿ ಭತ್ತದ ಇಳುವರಿ ಗಮನೀಯವಾಗಿ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ. ಮುಂಗಾರು ಮಳೆಯಲ್ಲಿ ಉಂಟಾಗುವ ವ್ಯತ್ಯಯ ಕೃಷಿಕರಿಗೆ ಕೃಷಿ ಮೇಲಿನ ಆಸಕ್ತಿ ಕಡಿಮೆಯಾಗಲು ಕಾರಣವಾಗುತ್ತದೆ.
-ಕರುಣಾಕರನ್‌ ಕೆ.,
ಸಹಾಯಕ ಕೃಷಿ ಅಧಿಕಾರಿ,
ಸ್ಟೇಟ್‌ ಸೀಡ್‌ ಫಾರ್ಮ್, ಕಾಸರಗೋಡು

– ಅಖೀಲೇಶ್‌ ನಗುಮುಗಂ

ಟಾಪ್ ನ್ಯೂಸ್

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.