ಕಡಲಬ್ಬರ : ಕಣ್ವತೀರ್ಥ, ಮುಸೋಡಿ ಅಧಿಕದಲ್ಲಿ 3 ಕುಟುಂಬಗಳ ಸ್ಥಳಾಂತರ
Team Udayavani, Apr 24, 2018, 6:25 AM IST
ಕಾಸರಗೋಡು: ಮಳೆಗಾಲಕ್ಕೆ ಮುನ್ನವೇ ಸಮುದ್ರದಲ್ಲಿ ತೀವ್ರ ಗಾತ್ರದ ಅಬ್ಬರದ ತೆರೆಗಳು ದಡಕ್ಕೆ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ಕಣ್ವತೀರ್ಥ, ಮುಸೋಡಿ ಅಧಿಕದಲ್ಲಿ ಮೂರು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಕೆಲವು ತಿಂಗಳ ಹಿಂದೆ ವ್ಯಾಪಕ ಕಡಲ್ಕೊರೆತದಿಂದ ಮುಸೋಡಿ ಅಧಿಕ ಮತ್ತು ಪರಿಸರದಲ್ಲಿ 9 ಮನೆಗಳು ಸಂಪೂರ್ಣ ಸಮುದ್ರ ಪಾಲಾಗಿತ್ತು. ಇದೀಗ ಮತ್ತೆ ಮೂರು ಮನೆಗಳು ಈ ಪ್ರದೇಶದಲ್ಲಿ ಸಮುದ್ರ ಪಾಲಾಗುವ ಭೀತಿಯುಂಟಾಗಿದೆ.
ಕಡಲಬ್ಬರದಿಂದ ಎರ್ಮಾಳ, ಮರಿಯ, ಮೊಹಮ್ಮದ್ ಅವರ ಮನೆ ಹಾಗೂ ಪರಿಸರದ ಮಸೀದಿ ಸುತ್ತು ನೀರು ತುಂಬಿಕೊಂಡಿದೆ. ಮನೆಗಳು ಯಾವುದೇ ಕ್ಷಣದಲ್ಲಿ ಸಮುದ್ರ ಪಾಲಾಗುವ ಸ್ಥಿತಿಯಲ್ಲಿದೆ. ಇಲ್ಲಿನ ಕುಟುಂಬಗಳು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.
ಮುಸೋಡಿ ಅಧಿಕದಲ್ಲಿ ಸುಮಾರು 500 ಮೀಟರ್ ಕಡಲ್ಕೊರೆತ ವ್ಯಾಪಿಸಿದೆ. ಘಟನೆ ಸ್ಥಳಕ್ಕೆ ಕಾಸರ ಗೋಡು ಡಿವೈಎಸ್‌ಪಿ ಸುಕುಮಾರನ್, ಮಂಜೇಶ್ವರ ಪೊಲೀಸರು, ತಹಶೀಲ್ದಾರ್, ಉಪ್ಪಳ ಗ್ರಾಮಾಧಿಕಾರಿಗಳು, ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಶಾಹುಲ್ ಹಮೀದ್, ಉಪಾಧ್ಯಕ್ಷೆ ಜಮೀಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ಸಫ, ರಜಾಕ್,ಹ್ಯಾರೀಸ್, ಸದಸ್ಯರಾದ ಬಾಲಕೃಷ್ಣ ಅಂಬಾರು, ಮಂಜು ನಾಥ, ಪ್ರಸಾದ ರೈ, ಫಾತಿಮಾ ಮೊದಲಾದವರು ಭೇಟಿ ನೀಡಿದರು.
ಈ ಪರಿಸರದಲ್ಲಿ 2017 ಜುಲೈ ತಿಂಗಳಲ್ಲಿ ಉಂಟಾದ ಕಡಲುಬ್ಬರದಿಂದ ಅಬ್ದುಲ್ ಖಾದರ್, ಮೊದೀನ್ ಕುಂಞಿ, ಹಮೀದ್, ಹಸನಬ್ಬ, ಇಬ್ರಾಹಿಂ,ನೆಬೀಸ, ಅಶ್ರಫ, ಹನೀಫ ಮೊದೀನ್ ಮೊದಲಾದವರು ಮನೆಗಳು ಹಾಗೂ ಹಲವಾರು ತೆಂಗಿನ ಮರಗಳು ಸಮುದ್ರ ಪಾಲಾಗಿತ್ತು.ಕಣ್ವತೀರ್ಥದಲ್ಲಿ ಕಡಲುಬ್ಬರ ತೀವ್ರತೆ ಪಡೆದಿದ್ದು,ಸಮುದ್ರ ತೆರೆಗಳು ಆಳೆತ್ತರಕ್ಕೇರುತ್ತಿದೆ. ಆದರೆ ಇಲ್ಲಿ ಎತ್ತರದಲ್ಲಿ ರಸ್ತೆಯಿರುವುದರಿಂದ ಅಲ್ಲಿಯ ವರೆಗೆ ನೀರು ತಲುಪಿಲ್ಲ. ಕಾಸರಗೋಡು ಜಿಲ್ಲೆಯ ವಿವಿಧೆಡೆ ಕಡಲುಬ್ಬರ ಕಂಡು ಬಂದಿದ್ದು, ಸಮುದ್ರ ತೀರ ಪರಿಸರದ ನಿವಾಸಿಗಳನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಕಾಸರಗೋಡು ಜಿಲ್ಲೆಯ ವಿವಿಧೆಡೆ ಸುಮಾರು 20 ಅಡಿಯಷ್ಟು ಎತ್ತರದಲ್ಲಿ ಅಲೆಗಳು ತಲೆಯೆತ್ತಿವೆ ಮಂಜೇಶ್ವರ, ಮೂಸೋಡಿ,ಮೊಗ್ರಾಲ್, ತೃಕ್ಕನ್ನಾಡ್, ಅಜಾನೂರು, ಚಿತ್ತಾರಿ, ಚೆರ್ವತ್ತೂರು, ಪರಂದನ್‌ಕಾಡ್ ಮೊದಲಾದೆಡೆ ಗಳಲ್ಲಿ ಕಡಲಬ್ಬರ ಕಂಡು ಬಂದಿದೆ.
ಸಮುದ್ರ ಕಿನಾರೆಯಲ್ಲಿ ನಿಲ್ಲಿಸಲಾಗಿದ್ದ ಮೀನುಗಾರಿಕಾ ದೋಣಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಕೋಟಿಕುಳಂನಿಂದ ಆರಂಭಗೊಂಡು ತೃಕ್ಕನ್ನಾಡ್ ತನಕದ ಸಮುದ್ರದಲ್ಲಿ 20 ಅಡಿಗಿಂತಲೂ ಹೆಚ್ಚಿನ ಎತ್ತರದಲ್ಲಿ ಅಲೆಗಳು ಗೊಚರಿಸಿದ್ದು, ಹಲವು ಮನೆಗಳಿಗೂ ನುಗ್ಗಿದೆ. ಕಡಲಬ್ಬರ ಉಂಟಾಗಿರುವ ಹಿನ್ನೆಲೆಯಲ್ಲಿ ಮೀನುಗಾರಿಕಾ ಇಲಾಖೆ, ಕರಾವಳಿ ಪೊಲೀಸರು, ಕಂದಾಯ ಇಲಾಖೆ, ದುರಂತ ನಿವಾರಣಾ ಪಡೆಯವರೂ ರಕ್ಷಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಎಲ್ಲ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರನ್ನು ನಿಯಂತ್ರಿಸಲಾಗುತ್ತಿದೆ.
ಜಾಗ್ರತೆಗೆ ಕರೆ
ಸಮುದ್ರ ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆಯಲ್ಲಿ ಜಾಗ್ರತೆ ವಹಿಸಬೇಕೆಂದು ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. ಚಿತ್ತಾರಿ,
ಚೆರ್ವತ್ತೂರು, ವಲಿಯತುರ, ಪಳ್ಳಿಕ್ಕೆರೆ, ತೃಕ್ಕನ್ನಾಡ್, ಉಪ್ಪಳ ಮೊದಲಾದೆಡೆಗಳಲ್ಲಿ ಜಾಗ್ರತೆ ವಹಿಸಬೇಕೆಂದು ನಿರ್ದೇಶಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.