ತುಳು ಭಾಷೆಗೆ ಮಾತೃ ಸ್ಥಾನ: ರಾಮಕೃಷ್ಣನ್
Team Udayavani, Feb 28, 2019, 12:30 AM IST
ಮಂಜೇಶ್ವರ: ವಿಶಾಲ ಪರಿಕಲ್ಪನೆಯ ಭಾರತೀಯ ಸಂಸ್ಕೃತಿ ವೈವಿಧ್ಯಗಳಿಂದ ಜಗತ್ತಿನಲ್ಲೇ ವಿಶಿಷ್ಟವಾಗಿದೆ. ಗಡಿನಾಡು ಕಾಸರಗೋಡಿನ ಬಹು ಭಾಷಾ ಸಂಸ್ಕೃತಿಯಲ್ಲಿ ತುಳು ಭಾಷೆಗೆ ಮಾತೃ ಸ್ಥಾನ ಇದೆ ಎಂದು ವಿಧಾನಸಭಾ ನಾಯಕ ಶ್ರೀರಾಮಕೃಷ್ಣನ್ ಹೇಳಿದರು.
ಹೊಸಂಗಡಿ ಸಮೀಪದ ದುರ್ಗಿ ಪಳ್ಳದಲ್ಲಿ ಕೇರಳ ತುಳು ಅಕಾಡೆಮಿಯ ನೇತೃತ್ವದಲ್ಲಿ ನಿರ್ಮಾಣವಾಗಲಿರುವ ತುಳು ಭವನಕ್ಕೆ ಬುಧವಾರ ಸಂಜೆ ಶಿಲಾನ್ಯಾಸಗೈದು ಅವರು ಮಾತನಾಡಿದರು.
ಸಂಸ್ಕೃತಿಗೆ ನಿಗದಿತ ಸ್ವರೂಪವನ್ನು ಆರೋಪಿಸಿ ಗ್ರಹಿಸುವುದು ಸರಿಯಲ್ಲ. ಸಂಸ್ಕಾರದ ಧಾರೆಯನ್ನು ವರ್ತ ಮಾನಕ್ಕನುಗುಣವಾಗಿ ಕಲ್ಮಶಗಳಿಲ್ಲದೆ ಮುಂದುವರಿಸುವ ಮನಸ್ಸು ನಮ್ಮ ದಾಗಬೇಕು ಎಂದು ತಿಳಿಸಿದ ಅವರು ಕಾಸರಗೋಡಿನಲ್ಲಿ ತುಳು ಭಾಷೆ, ಸಂಸ್ಕೃತಿಯ ಪುನರುತ್ಥಾನಕ್ಕೆ ತುಳು ಅಕಾಡೆಮಿ ಸಾಕಷ್ಟು ಪುನಶ್ಚೇತನ ನೀಡಲಿ ಎಂದರು.
ಉದುಮ ಶಾಸಕ ಕೆ. ಕುಂಞಿ ರಾಮನ್, ನ್ಯಾಯವಾದಿ ಸಿ.ಎಚ್. ಕುಂಞಿಂಬು, ಕೆ. ಶ್ರೀಕಾಂತ್, ವಿವಿಧ ಪಕ್ಷಗಳ ಮುಖಂಡರಾದ ಬಿ.ವಿ. ರಾಜನ್, ವಿ.ಕೆ. ರಮೇಶನ್, ಕೆ.ಆರ್. ಜಯಾನಂದ, ಅಡೂರು ಉಮೇಶ್ ನಾೖಕ್, ಜಯರಾಮ ಮಂಜತ್ತಾಯ ಎಡನೀರು, ಜೋನ್ ವರ್ಗೀಸ್ ಪಿ., ಎಂ. ಶಂಕರ ರೈ ಮಾಸ್ತರ್, ಎಸ್. ವಿ. ಭಟ್, ಸಿಡಿಎಸ್ ಮಂಜೇಶ್ವರ ಘಟಕದ ಅಧ್ಯಕ್ಷೆ ಜ್ಯೋತಿಪ್ರಭಾ ಪಿ, ಉಪಜಿಲ್ಲಾಧಿಕಾರಿ ಜಯಲಕ್ಷ್ಮೀ, ತುಳು ಅಕಾಡೆಮಿ ಸದಸ್ಯರಾದ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ರವೀಂದ್ರ ರೈ ಮಲ್ಲಾವರ ಉಪ ಸ್ಥಿತರಿದ್ದರು.
ಸಮ್ಮಾನ
ತುಳು- ಮಲೆಯಾಳ ಭಾಷಾ ನಿಘಂಟು ಕತೃì ಡಾ| ಎ.ಎಂ. ಶ್ರೀಧರನ್, ತುಳು ಭಾಷಾ ಸಂಶೋಧಕಿ ಡಾ| ಲಕ್ಷ್ಮೀ ಜಿ. ಪ್ರಸಾದ್, ಹಿರಿಯ ಸಾಹಿತಿ ಮಲಾರು ಜಯರಾಮ ರೈ ಅವರನ್ನು ಸಮ್ಮಾ ನಿಸಲಾಯಿತು. ತುಳು ಅಕಾಡೆಮಿಯ ತ್ತೈಮಾಸಿಕ ಸಂಚಿಕೆ “ತೆಂಬೆರೆ’ಯನ್ನು ಸಿ.ಎಚ್. ಕುಂಞಿಂಬು ಬಿಡು ಗಡೆಗೊಳಿದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ. ಉಮೇಶ್ ಸಾಲ್ಯಾನ್ ಪ್ರಸ್ತಾ ವನೆ ಗೈದರು. ಕಾರ್ಯದರ್ಶಿ ವಿಜಯ ಕುಮಾರ್ ಪಾವಳ ವಂದಿಸಿದರು. ಸದಸ್ಯ ರಾಮಕೃಷ್ಣ ಕಡಂಬಾರ್ ಕಾರ್ಯಕ್ರಮ ನಿರೂಪಿಸಿದರು.
ಬೊಳಿಕೆ ಜಾನಪದ ಕಲಾ ತಂಡದಿಂದ ಕಾರ್ಯಕ್ರಮ ವೈವಿಧ್ಯ, ತುಳು ಸಾಹಿತ್ಯ ಕೃತಿಗಳ ಪ್ರದರ್ಶನ, ಮಾರಾಟ, ತುಳುನಾಡ ಜಾನಪದ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಿತು.
ತುಳು ಅಕಾಡೆಮಿಗೆ ಚಾಲನೆ
ಅಧ್ಯಕ್ಷತೆ ವಹಿಸಿದ್ದ ಸಂಸದ ಪಿ. ಕರುಣಾಕರನ್ ಮಾತನಾಡಿ, ಕಾಸರಗೋಡಿನ ತುಳು ಭಾಷೆಯ ಬೆಳವಣಿಗೆಗೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿ ಸಲು ತುಳು ಅಕಾಡೆಮಿಗೆ ಚಾಲನೆ ನೀಡಲಾಗಿದೆ. ಹಲವು ವರ್ಷಗಳ ಕಾಲ ಯಾವುದೇ ಚಟುವಟಿಕೆಗಳನ್ನು ನಿರ್ವಹಿಸಲು ಅಸಾಧ್ಯವಾಗಿ ಮೂಲೆಗುಂಪಾ ಗುವ ಭೀತಿಯಲ್ಲಿದ್ದ ಅಕಾಡೆಮಿ ಯನ್ನು ಮತ್ತೆ ಚಾಲನೆಗೆ ತರುತ್ತಿ ರುವ ರಾಜ್ಯ ಸರಕಾರದ ಪ್ರಯತ್ನ ಶ್ಲಾಘನೀಯ ಎಂದರು.
ತುಳು ಅಕಾಡೆಮಿಗೆ ಚಾಲನೆ
ಅಧ್ಯಕ್ಷತೆ ವಹಿಸಿದ್ದ ಸಂಸದ ಪಿ. ಕರುಣಾಕರನ್ ಮಾತನಾಡಿ, ಕಾಸರಗೋಡಿನ ತುಳು ಭಾಷೆಯ ಬೆಳವಣಿಗೆಗೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿ ಸಲು ತುಳು ಅಕಾಡೆಮಿಗೆ ಚಾಲನೆ ನೀಡಲಾಗಿದೆ. ಹಲವುವರ್ಷಗಳ ಕಾಲ ಯಾವುದೇ ಚಟುವಟಿಕೆಗಳನ್ನು ನಿರ್ವಹಿಸಲು ಅಸಾಧ್ಯವಾಗಿ ಮೂಲೆಗುಂಪಾ ಗುವ ಭೀತಿಯಲ್ಲಿದ್ದ ಅಕಾಡೆಮಿ ಯನ್ನು ಮತ್ತೆ ಚಾಲನೆಗೆ ತರುತ್ತಿ ರುವ ರಾಜ್ಯ ಸರಕಾರದ ಪ್ರಯತ್ನ ಶ್ಲಾಘನೀಯ ಎಂದರು.
ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಒದಗಿಸುವ ನಿಟ್ಟಿನಲ್ಲಿ ನಾನು ಲೋಕಸಭೆ ಯಲ್ಲಿ ಅಹರ್ನಿಶಿ ಕಾರ್ಯ ಪ್ರವೃತ್ತ¤ನಾಗಿದ್ದೇನೆ. ತುಳು ಭಾಷೆಯ ಮೂಲವಾದ ಕರ್ನಾಟಕದ ಸಂಸದರು ತುಳುವಿಗೆ ಮಾನ್ಯತೆಗಾಗಿ ಪ್ರಯತ್ನಿಸದಿದ್ದರೂ, ಮಲಯಾಳಿಯಾಗಿರುವ ನಾನು ಹೆಚ್ಚು ಆಸಕ್ತಿಯಿಂದ ಪ್ರಯತ್ನಿಸುತ್ತಾ ಇದ್ದೇನೆ.
– ಪಿ. ಕರುಣಾಕರನ್, ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
Kasaragodu: ಸಿವಿಲ್ ಪೊಲೀಸ್ ಆಫೀಸರ್ ಕೊಲೆ ಪ್ರಕರಣ: ಪತಿಯ ಸೆರೆ
Kasragodu: ನರ್ಸಿಂಗ್ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್ ತನಿಖೆ
Court: ಮಾವೋವಾದಿ ಸೋಮನ್ ಕಾಸರಗೋಡು ಕೋರ್ಟಿಗೆ ಹಾಜರು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.