ಮದ್ಯ ಸೇವನೆಗೆ ಅಡ್ಡಿ; ಯುವಕನ ಹತ್ಯೆ
Team Udayavani, Aug 7, 2018, 3:19 PM IST
ಉಪ್ಪಳ: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಅಡ್ಡಿಯಾದ ವ್ಯಕ್ತಿಯೊಬ್ಬನನ್ನು ಹತ್ಯೆಗೈದ ಘಟನೆ ಮಂಗಲ್ಪಾಡಿಯ ಪ್ರತಾಪ ನಗರದಲ್ಲಿ ರವಿವಾರ ರಾತ್ರಿ ನಡೆದಿದೆ. ಆರೋಪಿಗಳು ಸೋಮ ವಾರ ಕುಂಬಳೆ ಠಾಣೆಯಲ್ಲಿ ಶರಣಾಗಿದ್ದಾರೆ.
ಸಿಪಿಎಂ ಕಾರ್ಯಕರ್ತ ಸೋಂಕಾಲು ನಿವಾಸಿ ಅಝೀಝ್ ಪುತ್ರ ಅಬೂ ಬಕ್ಕರ್ ಸಿದ್ದೀಕ್ (24) ಮೃತಪಟ್ಟ ವರು. ರಾತ್ರಿ 11ರ ಸುಮಾರಿಗೆ ಪ್ರತಾಪನಗರದಲ್ಲಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ಸಂದರ್ಭ ಬೈಕ್‌ನಲ್ಲಿ ಬಂದ ನಾಲ್ವರು ಚೂರಿಯಿಂದ ಇರಿದು ಹತ್ಯೆಗೈದರು ಎನ್ನಲಾಗಿದೆ.
ಆರೋಪಿ ಪ್ರತಾಪ್‌ನಗರದ ಅಶ್ವಿತ್ ಮತ್ತು ಕಾರ್ತಿಕ್ ಶರಣಾಗಿದ್ದು, ವಿಚಾರಣೆ ನಡೆಯುತ್ತಿದೆ.
ಪ್ರತಾಪನಗರದ ಸಾರ್ವಜನಿಕ ಸ್ಥಳದಲ್ಲಿ ತಂಡವೊಂದು ಮದ್ಯ ಸೇವಿಸುತ್ತಿದ್ದು ಅಬೂಬಕ್ಕರ್ ಸಿದ್ದಿಕ್ ವಿರೋಧಿಸಿದ್ದರು. ಆಗ ತಂಡವು ತೆರಳಿತ್ತು. ಅಬೂಬಕ್ಕರ್ ಆ ಬಳಿಕವೂ ಅಲ್ಲೇ ಇದ್ದರು. ಬಳಿಕ ಆರೋಪಿಗಳು ಬೈಕಿನಲ್ಲಿ ಆಗಮಿಸಿ ಅಬೂಬಕ್ಕರ್ ಅವರಿಗೆ ಇರಿದು ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಕತಾರ್‌ನಲ್ಲಿ ಉದ್ಯೋಗಿ ಹತ್ಯೆಯಾದ ಸಿದ್ದಿಕ್ ಕತಾರ್‌ನಲ್ಲಿ ಹೊಟೇಲ್ ನೌಕರನಾಗಿದ್ದು, 10 ದಿನಗಳ ಹಿಂದೆ ಊರಿಗೆ ಬಂದಿದ್ದರು.
ಹರತಾಳ
ಪ್ರಕರಣ ಖಂಡಿಸಿ ಮಂಜೇಶ್ವರ ತಾಲೂಕಿನಲ್ಲಿ ಸೋಮವಾರ ಮಧ್ಯಾಹ್ನದಿಂದ ಸಿಪಿಎಂ ಕರೆಯಂತೆ ಹರತಾಳ ನಡೆಯಿತು. ವ್ಯಾಪಾರ ಸಂಸ್ಥೆಗಳು ಮುಚ್ಚಿದ್ದವು. ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದವು. ಆಟೋ ರಿಕ್ಷಾ, ಟ್ಯಾಕ್ಸಿ ಸಂಚಾರವೂ ಇರಲಿಲ್ಲ. ಶಿಕ್ಷಣ ಸಂಸ್ಥೆಗಳಿಗೂ ರಜೆ ನೀಡಲಾಗಿತ್ತು.
ಇಬ್ಬರಿಗೆ ಗಾಯ; ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ಗೆ ಸೋಮವಾರ ಬೆಳಗ್ಗೆ ಮಳ್ಳಂಗೈ ರಾ. ಹೆದ್ದಾರಿಯಲ್ಲಿ ಕಲ್ಲೆಸೆಯಲಾಗಿದ್ದು, ಚಾಲಕ ಜಮಾಲ್ ಹಾಗೂ ನಿರ್ವಾಹಕ ರಂಗಪ್ಪ ಗಾಯಗೊಂಡಿದ್ದಾರೆ.
ಮಂಜೇಶ್ವರ ತಾಲೂಕಿಗೆ ಎರಡು ದಿನ ಹರತಾಳ !
ಕುಂಬಳೆ: ಹತ್ಯೆ ಖಂಡಿಸಿ ಸೋಮವಾರ ಎಡರಂಗ ಹರತಾಳಕ್ಕೆ ಕರೆ ನೀಡಿತ್ತು. ವಿವಿಧ ಬೇಡಿಕೆ ಮುಂದಿರಿಸಿ ವಾಹನ ವ್ಯವಸಾಯ ಸಂರಕ್ಷಣಾ ಸಮಿತಿ ಮಂಗಳವಾರ ಮಧ್ಯ ರಾತ್ರಿ ಯಿಂದ 24 ಗಂಟೆಗಳ ರಾಜ್ಯಾದ್ಯಂತ ಹರತಾಳಕ್ಕೆ ಕರೆ ನೀಡಿದೆ. ಮಂಜೇ ಶ್ವರ ತಾಲೂಕಿನವರು ಎರಡು ದಿನ ಹರತಾಳ ಅನುಭವಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
ESI ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸಂಕಷ್ಟ:ಸಂಸದ ಬ್ರಿಜೇಶ್ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.