ನಾಳೆ ಸುಜಾತಾ ಗುರವ್‌ ಕಮ್ಮಾರ, ರಾಜೇಶ್‌ ಪಡಿಯಾರ್‌ ಸ್ವರಮಾಧುರ್ಯ


Team Udayavani, Mar 30, 2018, 9:40 AM IST

Padiyar-29-3.jpg

ಕಾಸರಗೋಡು: ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾಗಿರುವ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಖ್ಯಾತ ಹಿಂದೂಸ್ಥಾನಿ ಗಾಯಕಿ ಸುಜಾತಾ ಗುರವ್‌ ಕಮ್ಮಾರ ಮತ್ತು ಖ್ಯಾತ ಸುಗಮ – ಭಕ್ತಿ ಸಂಗೀತ ಗಾಯಕ ರಾಜೇಶ್‌ ಪಡಿಯಾರ್‌ ಅವರಿಂದ ಭಕ್ತಿ – ಭಾವ – ವಚನ ಗಾಯನ “ನಾಮವೊಂದೇ ಸಾಲದೇ…’ ಕಾರ್ಯಕ್ರಮ ಮಾ. 31ರಂದು ಶನಿವಾರ ಸಂಜೆ 5.30ರಿಂದ ಕರಂದಕ್ಕಾಡಿನ ಪದ್ಮಗಿರಿ ಕುಟೀರದಲ್ಲಿ ನಡೆಯಲಿದೆ.

ಸುಜಾತಾ ಗುರವ್‌ ಕಮ್ಮಾರ 
1973 ನವಂಬರ್‌ 19ರಂದು ಸಂಗೀತ ಮನೆತನದಲ್ಲಿ ಜನಿಸಿದ ಸುಜಾತಾ ಗುರವ್‌ ಕಮ್ಮಾರ ಅವರು ಹಿಂದೂಸ್ತಾನಿ ಸಂಗೀತ ಹಾಗೂ ಸುಗಮ ಸಂಗೀತದಲ್ಲಿ ಖ್ಯಾತಿಗಳಿಸಿದ್ದಾರೆ. ಸಂಗೀತದಲ್ಲಿ ಅದಮ್ಯ ಅಭಿರುಚಿ ಮೈಗೂಡಿಸಿಕೊಂಡ ಸುಜಾತಾ ಅವರು ತಮ್ಮ ತಂದೆ ಹಾಗೂ ಗುರುಗಳಾದ ಖ್ಯಾತ ಹಿಂದುಸ್ಥಾನಿ ಗಾಯಕರಾದ ಪಂಡಿತ್‌ ಸಂಗಮೇಶ್ವರ ಗುರುವ ಅವರ ಮಾರ್ಗದರ್ಶನದಲ್ಲಿ ಶಾಸ್ತ್ರೀಯ ಮತ್ತು ಹಿಂದೂಸ್ಥಾನಿ ಸಂಗೀತ ಹಾಗೂ ಸುಗಮ ಸಂಗೀತವನ್ನು ಖ್ಯಾತ ಹಾರ್ಮೋನಿಯಂ ವಾದಕರಾದ ಪಂಡಿತ ವಸಂತ ಕನಕಾಪೂರ ಅವರಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ತಂದೆಯ ಮಾರ್ಗದರ್ಶನದಲ್ಲಿ ಸಂಗೀತದ ಜ್ಞಾನಾರ್ಜನೆ ಮಾಡಿ ತಮ್ಮ ಗಾಯನದಲ್ಲಿ ಅಳವಡಿಸಿಕೊಂಡಿದ್ದಾರೆ. ಕನ್ನಡ, ಹಿಂದಿ, ಮರಾಠಿ ಭಾಷೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದೂ ಅಲ್ಲದೇ ವಚನ, ದಾಸರ ಪದ, ಜಾನಪದ, ಕನ್ನಡ ರಂಗಗೀತೆಗಳನ್ನು ಮತ್ತು ಠುಮಲ ಝಲಾಗಳನ್ನು ಸುಶ್ರಾವ್ಯವಾಗಿ ಹಾಡಿ ಶ್ರೋತೃಗಳ ಮನಸೂರೆಗೊಂಡಿದ್ದಾರೆ.

ಪ್ರಸಕ್ತ ಧಾರವಾಡ ಆಕಾಶವಾಣಿ ಹಾಗೂ ದೂರದರ್ಶನ ಕೇಂದ್ರದ ಕಲಾವಿದರಾಗಿರುವ ಅವರು ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸುಮಧುರ ಗಾಯಕಿಯಾಗಿರುವ ಇವರು ಖ್ಯಾತ ರಾಗ ಸಂಯೋಜಕರಾಗಿದ್ದಾರೆ. ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ಮೂಡಿಬಂದ ‘ನಮನ’ ಕಾರ್ಯಕ್ರಮದ ಅತಿಥಿಯಾಗಿ ನಾಡಿಗೆ ಚಿರಪರಿಚಿತರು. ಖಾಸಗಿ ದೂರದರ್ಶನ ಚಾನೆಲ್‌ಗ‌ಳಾದ ಉದಯ ಹಾಗೂ ಸುವರ್ಣ ನ್ಯೂಸ್‌ ವಾಹಿನಿಯಲ್ಲಿ ಸುಗಮ ಸಂಗೀತ, ರಾಷ್ಟ್ರೀಯ ಉತ್ಸವಗಳಾದ ಮೈಸೂರು ದಸರಾ, ಹಂಪಿ ಉತ್ಸವ, ಗಡಿನಾಡು ಉತ್ಸವ, ಆಳ್ವಾಸ್‌ ನುಡಿಸಿರಿ ಉತ್ಸವ, ಕದಂಬೋತ್ಸವ, ಧಾರವಾಡ ಉತ್ಸವ ಹೀಗೆ ಅನೇಕ ವೇದಿಕೆಗಳಲ್ಲಿ ರಾಜ್ಯದಾದ್ಯಂತ ಕಾರ್ಯಕ್ರಮ ನೀಡಿದ್ದಾರೆ. ತಿರುಪತಿ ಹಾಗೂ ಮಂತ್ರಾಲಯದಲ್ಲಿ ದಾಸವಾಣಿ ಕಾರ್ಯಕ್ರಮ ನೀಡಿದ್ದಾರೆ. ಬೆಂಗಳೂರಿನ ಅಶ್ವಿ‌ನಿ ರಿಕಾರ್ಡಿಂಗ್‌ ಕಂಪೆನಿಯವರು ‘ವಚನ ಸುಧೆ’ ಎಂಬ ವಚನಗಳ ಧ್ವನಿ ಸುರಳಿಯನ್ನು ಬಿಡುಗಡೆ ಮಾಡಿದ್ದಾರೆ.

1991ರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಸಭೆಯ ‘ಜನಪದ ಗೀತೆಯಲ್ಲಿ’ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುವ ಅವರು 1992ರ ನಾಡ ಹಬ್ಬದ ಕಾರ್ಯಕ್ರಮದಲ್ಲಿ ಶ್ರೇಷ್ಠ ಗಾಯಕಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಹುಬ್ಬಳ್ಳಿಯ ರಾಧಾಕೃಷ್ಣ ಅಕಾಡೆಮಿ ವತಿಯಿಂದ “ದಶಕದ ಸಾಧಕರು’ ಪ್ರಶಸ್ತಿ, ಸೌತ್‌ ಸೆಂಟ್ರಲ್‌ ಜೋನ್‌ ಕಲ್ಚರಲ್‌ ಸೆಂಟರ್‌ ನಾಗಪುರ ಇವರಿಂದ ಟಪ್ಪಾ-ಟುಮಲ ಪ್ರಶಸ್ತಿ ಪಡೆದಿದ್ದಾರೆ. 2004ರ ಎಪ್ರಿಲ್‌ 4ರಂದು ಗದುಗಿನ ಪುಟ್ಟರಾಜ ಗವಾಯಿಗಳ ಹುಟ್ಟು ಹಬ್ಬದ ಸಮ್ಮೇಳನದಲ್ಲಿ  “ಸಂಗೀತ ವಿಕಾಸ ರತ್ನ’ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ರೋಟರಿ ಕ್ಲಬ್‌ ಧಾವರಾಡ ಇವರಿಂದ ವೊಕೇಶನಲ್‌ ಎಕ್ಸಲೆನ್ಸ್‌ ಅವಾರ್ಡ್‌ ಪಡೆದಿದ್ದಾರೆ.

ರಾಜೇಶ್‌ ಪಡಿಯಾರ್‌
18 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಮೈಸೂರಿನ ರಾಜೇಶ್‌ ಪಡಿಯಾರ್‌ ಹಿಂದೂಸ್ಥಾನಿ ಶಾಸ್ತ್ರೀಯ, ಭಜನ್ಸ್‌, ಭಕ್ತಿಗೀತೆ, ಜಾನಪದ ಗೀತೆ ಮತ್ತು ಸುಗಮ ಸಂಗೀತದಲ್ಲಿ ಖ್ಯಾತರಾಗಿದ್ದಾರೆ. ರಿಥಂ ಪ್ಯಾಡ್‌ ಮತ್ತು ತಬ್ಲಾದಲ್ಲೂ ವಿಶೇಷ ಸಾಧನೆ ಮಾಡಿರುವ ಅವರು ಚಿಕ್ಕಂದಿನಿಂದಲೇ ಸಂಗೀತದಲ್ಲಿ ಆಸಕ್ತಿ ವಹಿಸಿದ್ದರು. ಕನ್ನಡ, ಹಿಂದಿ, ಕೊಂಕಣಿ ಮತ್ತು ಮರಾಠಿ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲರು. 2011 ರಲ್ಲಿ ಮಂತ್ರಾಲಯ ಸುಶಮೀಂದ್ರ ಕಲಾ ಪುರಸ್ಕಾರ್‌ ಪಡೆದಿದ್ದಾರೆ.

ಮದ್ರಾಸ್‌ನಲ್ಲಿ ಭಜನ್‌ ಉತ್ಸವ್‌, ಪುನಾದಲ್ಲಿ ದತ್ತ ಜಯಂತಿ, 2009 ರಲ್ಲಿ ಮಂತ್ರಾಲಯದಲ್ಲಿ ರಾಘವೇಂದ್ರ ಆರಾಧನಾ, 2008 ಮತ್ತು 2009ರಲ್ಲಿ ಮೈಸೂರು ದಸರಾ ಉತ್ಸವ, ಮುಂಬ ಯಿಯ ಕಾಶೀಮಠ ಮೊದಲಾದೆಡೆ ಸಂಗೀತ ಕಾರ್ಯಕ್ರಮ ನೀಡಿರುವ ಅವರು ದೂರದರ್ಶನ, ಇ-ಟಿವಿ. ಸುವರ್ಣ, ಉದಯ, ಜನಶ್ರೀ ಮೊದ ಲಾದ ವಾಹಿನಿಗಳಲ್ಲಿ ಸುಗಮ ಸಂಗೀತ ಮತ್ತು ದಾಸವಾಣಿ ಕಾರ್ಯಕ್ರಮ ನೀಡಿದ್ದಾರೆ. ದಿ| ಅಶ್ವತ್ಥ್, ಪುತ್ತೂರು ನರಸಿಂಹ ನಾಯಕ್‌, ಸಂಗೀತಾ ಕಟ್ಟಿ ಮೊದಲಾದವರ ಜತೆ ಕಳೆದ 15 ವರ್ಷಗಳಿಂದ ಆಲ್ಲದೆ, ಆಲ್‌ ಇಂಡಿಯಾ ರೇಡಿಯೋದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.

ಟಾಪ್ ನ್ಯೂಸ್

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

1

Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

Police

Kasragodu: ನರ್ಸಿಂಗ್‌ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್‌ ತನಿಖೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.