“ಎಲ್ಲ  ಗ್ರಾಮಗಳಲ್ಲಿ  ಸಾಂಸ್ಕೃತಿಕ ಕೇಂದ್ರಗಳಾಗಬೇಕು’


Team Udayavani, Jul 11, 2017, 3:45 AM IST

kendra.jpg

ಕಾಸರಗೋಡು: ವಿದ್ಯುನ್ಮಾನ ಮಾಧ್ಯಮಗಳಿಂದಾಗಿ ಇಂದಿನ ಯುವ ಜನತೆ ಭಾರತೀಯ ಸಂಸ್ಕೃತಿಯಿಂದ ದೂರಸರಿದು ಅನ್ಯ ಸಂಸ್ಕೃತಿಗೆ ಮಾರು ಹೋಗಿ ತಮ್ಮ ಬಾಳನ್ನು ಅಡ್ಡ ದಾರಿಯಲ್ಲಿ ಸಾಗಿಸುವ ಮೂಲಕ ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ. ಇದರಿಂದ ಪಾರು ಮಾಡಲು ಹಾಗೂ ಯುವಜನರಿಗೆ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ತಿಳಿಸಿಕೊಡಲು ಎಲ್ಲಾ ಗ್ರಾಮಗಳಲ್ಲಿ ಸಾಂಸ್ಕೃತಿಕ ಕೇಂದ್ರಗಳಾಗಬೇಕೆಂದು ಕಾಸರಗೋಡು ಕೋ-ಆಪರೇಟಿವ್‌ ಟೌನ್‌ ಬ್ಯಾಂಕ್‌ ಅಧ್ಯಕ್ಷ, ನ್ಯಾಯವಾದಿ ಎ.ಸಿ. ಅಶೋಕ್‌ ಕುಮಾರ್‌ ಅವರು ಹೇಳಿದರು.

ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಆಶ್ರಯ ದಲ್ಲಿ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ “ತಿಂಗಳ ಹಬ್ಬ’ದ ಮೂರನೇ ಕಾರ್ಯಕ್ರಮ “ಯಕ್ಷ-ಗಾನ-ನಾಟ್ಯ-ಸಂಕೀರ್ತನೆ’ ಕಾರ್ಯಕ್ರಮವನ್ನು ಚೆಂಡೆ ಬಾರಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ದೃಶ್ಯ ಮಾಧ್ಯಮಗಳು, ವಾಟ್ಸಾಪ್‌, ಫೇಸ್‌ಬುಕ್‌ ಮೊದಲಾದ ಮಾಧ್ಯಮ ಗಳಿಂದಾಗಿ ಭಾರತೀಯ ಸಂಸ್ಕಾರ, ಪರಂಪರೆ, ಆಚಾರ, ವಿಚಾರಗಳು ಕಣ್ಮರೆಯಾಗುತ್ತಿವೆೆ. ಯುವ ಜನತೆ ಇವುಗಳಿಂದ ಪ್ರಭಾವಿತರಾಗಿ ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ. ಯುವ ಜನತೆಯನ್ನು ಸರಿ ದಾರಿಗೆ ತರಲು ಮತ್ತು ಸನ್ಮಾರ್ಗದತ್ತ ಕೊಂಡೊಯ್ಯಲು ಅಲ್ಲಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸತ್ಸಂಗಗಳು ನಡೆಯಬೇಕು. ಈ ಹಿನ್ನೆಲೆ ಯಲ್ಲಿ ಕಳೆದ ಹಲವು ವರ್ಷಗಳಿಂದ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ನಡೆಸಿಕೊಂಡು ಬರುತ್ತಿರುವ ಚಟುವಟಿಕೆಗಳು ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಸಾಮಾಜಿಕ ಜಾಲತಾಣದಿಂದ ದುಷ್ಪರಿಣಾಮ  
ಸಾಮಾಜಿಕ ಜಾಲ ತಾಣಗಳನ್ನು ಗಮನಿಸಿದರೆ ಮುದ್ರಣ ಮಾಧ್ಯಮಗಳಿ ಗಿಂತ ಮಾಹಿತಿಗಳನ್ನು ಬೇಗ ತಲುಪಿ ಸುತ್ತವೆ. ಆದರೆ ಅದರ ಸತ್ಯಾಸತ್ಯತೆ ಎಷ್ಟು ಎಂಬುದು ಪ್ರಶ್ನಾರ್ಹ. ಜಾಲತಾಣದಲ್ಲಿ ವಿಚಾರವಿನಿಮಯ ಮಾಡುತ್ತಾ ದುಷ್ಪರಿ ಣಾಮ ಬೀರುತ್ತದೆ. ವ್ಯಕ್ತಿತ್ವದ ವಿನಾಶಕ್ಕೆ ಕಾರಣವಾಗುತ್ತದೆ. ದೂರದ ವ್ಯಕ್ತಿ ಹತ್ತಿರ ವಾಗುವ ಮತ್ತು ಹತ್ತಿರದ ವ್ಯಕ್ತಿ ದೂರ ವಾಗುವ ವೈಚಿತ್ರÂವನ್ನು ಕಾಣ ಬಹು ದೆಂದು “ಸಾಮಾಜಿಕ ಜಾಲತಾಣ ಒಳಿತು ಕೆಡುಕುಗಳು’ ಎಂಬ ಕುರಿತಾಗಿ ಉಪನ್ಯಾಸ ನೀಡುತ್ತ ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾ ಪಕ ಬಾಲಕೃಷ್ಣ ಹೊಸಂಗಡಿ ಹೇಳಿದರು.

ಸಾಮಾಜಿಕ ಜಾಲತಾಣಗಳು ಆರ್ಥಿಕತೆಗೆ ಉತ್ತೇಜನ ನೀಡುತ್ತವೆ ಎಂಬ ವಾದವೂ ಇದೆ. ಆದರೆ ಅದೇ ವೇಳೆ ಉದ್ಯೋಗಿಗಳ ಉತ್ಪಾದಕತೆಯ ಮಟ್ಟ ಕುಗ್ಗಿಸುತ್ತದೆ. ದ್ವೇಷದ ಗುಂಪುಗಳನ್ನು ಕಟ್ಟಿಕೊಳ್ಳುವುದನ್ನು ಕಾಣಬಹುದು. ಖಾಸಗಿ ಬದುಕು ಹರಾಜಾಗುತ್ತದೆ ಎಂದರು. ಶೈಕ್ಷಣಿಕ ವಿಚಾರದಲ್ಲಿ ಅದು ನೆರವಾಗುತ್ತದೆ. ಸಂಶೋಧನೆ, ತಾಂತ್ರಿಕತೆ, ವೈದ್ಯಕೀಯ ವಲಯದಲ್ಲಿ ನೆರವಾಗುತ್ತಿರುವಂತೆ ವಿದ್ಯಾರ್ಥಿಗಳಲ್ಲಿ ಅಂಕ ಕಡಿಮೆಯಾಗುತ್ತಿರುವುದನ್ನು ಕಾಣಬಹುದು. ಈ ಮೂಲಕ ಎರಡು ಧ್ರುವಗಳನ್ನು ಕಾಣಲು ಸಾಧ್ಯವಾಗುತ್ತದೆ. ನಮಗೆ ತಿಳಿಯದೇ ಅಪಾಯಕಾರಿ ಹಂತಕ್ಕೆ ತಲುಪಬಹುದಾದ ಎಲ್ಲ ಸಾಧ್ಯತೆಗಳು ಸಾಮಾಜಿಕ ಜಾಲತಾಣಗಳಲ್ಲಿವೆ. ವಿದ್ವೇಷದ ವಿಚಾರಗಳನ್ನು ಹರಡುತ್ತಾ, ದೇಶ ವಿರೋಧಿ ಪ್ರಚಾರಕ್ಕೂ ಕೂಡ ಸಾಮಾಜಿಕ ಜಾಲತಾಣಗಳು ವೇದಿಕೆ ಯಾಗುತ್ತವೆ. ಇವುಗಳ ದುಷ್ಪರಿಣಾಮ ಗಳಿಂದ ಪಾರಾಗಬೇಕಾದರೆ ಸತ್ಸಂಗ ಅಗತ್ಯವಾಗಿ ನಡೆಯಲೇಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಧಾರ್ಮಿಕ ಮುಖಂಡ ಗಣಪತಿ ಕೋಟೆಕಣಿ ಅವರು ಅಧ್ಯಕ್ಷತೆ ವಹಿಸಿದರು. ಇದೇ ಸಂದರ್ಭದಲ್ಲಿ ಖ್ಯಾತ ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗೂ ಖ್ಯಾತ ಸಂಕೀರ್ತನಾಕಾರ ರಾಮಕೃಷ್ಣ ಕಾಟುಕುಕ್ಕೆ ಅವರನ್ನು ಶಾಲು ಹೊದಿಸಿ ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ಯಕ್ಷ- ಗಾನ-ನಾಟ್ಯ-ಸಂಕೀರ್ತನೆ ನಡೆಯಿತು. ರಾಮಕೃಷ್ಣ ಕಾಟುಕುಕ್ಕೆ ಅವರಿಂದ ಸಂಕೀರ್ತನೆ ಮತ್ತು ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರಿಂದ ಭಾಗವತಿಕೆ ನಡೆಯಿತು. ಪುಟಾಣಿಗಳಾದ ಉಪಾಸನಾ ಪಂಜರಿಕೆ, ಕಿಶನ್‌ ನೆಲ್ಲಿಕಟ್ಟೆ  ಅವರಿಂದ ಯಕ್ಷನಾಟ್ಯ ಪ್ರಸ್ತುತಗೊಂಡಿತು.

ಟಾಪ್ ನ್ಯೂಸ್

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Ravikumar

Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್‌

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

court

Kasaragod; ಯುವಕನ ಕೊಲೆ: 6 ಮಂದಿಗೆ ಜೀವಾವಧಿ

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

2

Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.