ವಿಪಕ್ಷಗಳಿಗೆ ನಿದ್ರೆಯಲ್ಲೂ ಮೋದಿ ಭಯ: ಸಿ.ಕೆ. ಪದ್ಮನಾಭನ್‌


Team Udayavani, Mar 7, 2019, 1:00 AM IST

vipaksha.jpg

ಕುಂಬಳೆ: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು, ಕೇರಳ ಮೋದಿಯೊಂದಿಗೆ, ಘೋಷಣೆಯೊಂದಿಗೆ ಶಬರಿಮಲೆ ಆಚಾರ ಸಂರಕ್ಷಣೆಗೆ ಭಂಗ, ಅಭಿವೃದ್ಧಿ ಕಾಣದ ರಾಜ್ಯ ಎಡರಂಗ ಸರಕಾರದ ವಿರುದ್ಧ ಸರಕಾರದ ವಿರುದ್ಧ ಬಿ.ಜೆ.ಪಿ. ರಾಜ್ಯ ಸಮಿತಿ ಆಯೋಜಿಸಿದ ಉತ್ತರವಲಯ ಪರಿವರ್ತನಾ ಯಾತ್ರೆ ಕುಂಬಳೆ ಯಿಂದ ಆರಂಭಗೊಂಡಿತು. ಬಿ.ಜೆ.ಪಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್‌ ನೇತೃತ್ವ ನೀಡಿದ ಪರಿವರ್ತನಾ ಯಾತ್ರೆಗೆ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಸಿ.ಕೆ. ಪದ್ಮನಾಭನ್‌ ಪಕ್ಷದ ಧ್ವಜ ನೀಡಿ ಬೃಹತ್‌ ಗಾತ್ರದ ಮಾಲೆ ತೊಡಿಸಿ ಯಾತ್ರೆಯನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಪರಿವರ್ತನಾ ಯಾತ್ರೆ ಲೋಕಸಭಾ ಚುನಾವಣೆಯ ರಣ ಕಹಳೆಯಾಗಿದೆ. ವಿಪಕ್ಷಗಳು ಕನಸಿನಲ್ಲೂ ಮೋದಿ ಯವನ್ನು ಕಂಡು ಭಯಪಡುತ್ತಿವೆ. ಪ್ರಕೃತ ದೇಶ ದ್ರೋಹಿಗಳು ಪರಸ್ಪರ ಒಟ್ಟಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಲು ಯತ್ನಿಸುತ್ತಿದ್ದಾರೆ. ಸಿ.ಪಿ.ಎಂ. ಪಕ್ಷದ ನಾಯಕರು ತತ್ವಾದರ್ಶಕ್ಕೆ ತಿಲಾಂಜಲಿ ಇತ್ತು ಕಾಂಗೈಯೊಂದಿಗೆ ಕೈಜೋಡಿಸಿ ಸೋನಿಯಾ ಗಾಂಧಿ ಸೆರಗು ಹಿಡಿದು ಹಿಂದೆ ಸಾಗುತ್ತಿದ್ದಾರೆ.   ಯುಪಿಎ ಸರಕಾರವಿದ್ದಾಗ ದೇಶದ ಹಲವೆಡೆಗಳಲ್ಲಿ ಉಗ್ರರು ಬಾಂಬ್‌ ಸಿಡಿಸಿ ಮಾನವರ ಮಾರಣ ಹೋಮ ನಡೆಸುತ್ತಿದ್ದರು. ಮೋದಿಯವರು ಅಧಿಕಾರ ಸೀÌಕರಿಸಿದ ಬಳಿ ದೇಶದೊಳಗೆ ಉಗ್ರರ ನಿಗ್ರಹವಾಗಿದೆ. ಎಲ್ಲೂ ಬಾಂಬ್‌ ಸಿಡಿದಿಲ್ಲ. ಆದರೆ ಭಾರತದ ಸೈನಿಕರು ಪಾಕಿಸ್ಥಾನದಲ್ಲಿ ಉಗ್ರವಾದಿಗಳನ್ನು ಸದೆಬಡಿದ ದಿಟ್ಟ ನಿಲುವನ್ನು ವಿಪಕ್ಷಗಳು ಸಂಕುಚಿತವಾಗಿ ಕಾಣುತ್ತಿವೆ. ಪಾಕಿಸ್ಥಾನಕ್ಕೆ ಬೆಂಬಲವಾಗಿ ಕಾಂಗೈ ಮತ್ತು ಸಿ.ಪಿ.ಎಂ. ರಾಜ್ಯ ಕಾರ್ಯದರ್ಶಿಯವರ ಹೇಳಿಕೆ ದೇಶದೋÅಹ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಕ್ಷದ ಉತ್ತರ ವಲಯಾಧ್ಯಕ್ಷ ವಿ.ವಿ. ರಾಜನ್‌ ಮಾತನಾಡಿ ದೇಶದ ಶೇ. 88.04  ಮತದಾರರು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂಬ ಬಯಕೆ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಇದೀಗ ಪ್ರಧಾನಿಯವರು ಘೋಷಿಸಿದ ಕಿಸಾನ್‌ ಸಮ್ಮಾನ್‌ ಯೋಜನೆಗೆ ತಮ್ಮ ಗುರುತು ಸಿಗದಂತೆ ತಲೆಗೆ ಕರವಸ್ತ್ರ ಸುತ್ತಿ ಅರ್ಜಿಸಲ್ಲಿಸಲು ಕಾಂಗೈ ಮತ್ತು ಸಿಪಿಎಂನವರು ಸರತಿಯಲ್ಲಿ ನಿಲ್ಲುತ್ತಿದ್ದಾರೆ. ದೇಶದ 8 ಕೋಟಿ ಬಡವರಿಗೆ ಗ್ಯಾಸ್‌ ಸಂಪರ್ಕ ನೀಡಲಾಗಿದೆ.ವಿವಿಧ ಜನಪ್ರಿಯ ಯೋಜನೆಗಳನ್ನು ದೇಶಕ್ಕೆ ನೀಡಿದ ಪ್ರಧಾನಿ ವಿರುದ್ಧ ಒಟ್ಟಾಗಲು ಮುಂದಾದ ಎಡ ಐಕ್ಯರಂಗಗಳು ಮೋದಿಯನ್ನು ಕೆಳಗಿಳಿಸಲು ಕಾರ್ಯಾಚರಿಸಲು ಮುಂದಾಗಿರುವುದಾಗಿ ಲೇವಡಿ ಮಾಡಿದರು.ಉಗ್ರರನ್ನು ಸದೆಬಡಿದ ಸೇನೆಯನ್ನು ಪ್ರಂಶಸಿಸಿ ಧೈರ್ಯ ನೀಡಬೇಕಾದ ವಿಪಕ್ಷಗಳು ದೇಶದೋÅಹಿಗಳೊಂದಿಗೆ ಶಾಮೀಲಾಗಿರುವುದಾಗಿ ಆರೋಪಿಸಿದರು.

ಬಿ.ಜೆ.ಪಿ. ರಾಜ್ಯ, ಜಿಲ್ಲಾ, ಮಂಡಲ ನಾಯಕ ರಾದ ಕೆ.ಪಿ. ಶ್ರೀಶನ್‌ ಮಾಸ್ಟರ್‌, ಪ್ರಮೀಳಾ ಸಿ. ನಾಯಕ್‌, ವಿ.ಕೆ. ಸಜೀವನ್‌,ಕೆ. ರಂಜಿತ್‌, ಎಂ. ಸಂಜೀವ ಶೆಟ್ಟಿ, ಕುಂಟಾರು ರವೀಶ ತಂತ್ರಿ, ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ, ಪಿ. ಸುರೇಶ್‌ ಕುಮಾರ್‌ ಶೆಟ್ಟಿ, ಪದ್ಮಿನಿ ಟೀಚರ್‌, ಪುಷ್ಪಾ ಅಮೆಕ್ಕಳ, ಎ. ವೇಲಾಯುಧನ್‌, ಸತ್ಯ ಪ್ರಕಾಶ್‌, ರಾಮದಾಸ್‌, ಆದರ್ಶ್‌ ಬಿ.ಎಂ. ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ನ್ಯಾಯವಾದಿ ಶ್ರೀಕಾಂತ್‌ ಸ್ವಾಗತಿಸಿದರು.ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ವಂದಿಸಿದರು. ಮಧುಸೂದ‌ನ ಕಾಮತ್‌ ಪ್ರಾರ್ಥನೆ ಹಾಡಿದರು. ಯಾತ್ರೆಯು ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಮಾ. 10ರಂದು ವಯನಾಡಿನಲ್ಲಿ ಸಮಾರೋಪಗೊಳ್ಳಲಿದೆ.

ಟಾಪ್ ನ್ಯೂಸ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

POlice

Kasaragod: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು

crimebb

Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

5

Kasaragod: ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ; ಪ್ರಕರಣ ದಾಖಲು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.