ಗಿಳಿವಿಂಡಿನಲ್ಲಿ ರಾಷ್ಟ್ರೀಯ ಸಾಹಿತ್ಯೋತ್ಸವ :ಮೊಯಿಲಿ
Team Udayavani, Jun 30, 2017, 3:45 AM IST
ಮಂಜೇಶ್ವರ: ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಗಿಳಿವಿಂಡುನಲ್ಲಿ ರಾಷ್ಟ್ರೀಯ ಸಾಹಿತ್ಯಉತ್ಸವವನ್ನು ಆಯೋಜಿಸಲಾಗುವುದೆಂದು ಟ್ರಸ್ಟ್ ಅಧ್ಯಕ್ಷ ಹಾಗೂ ಸಂಸದ ಎಂ.ವೀರಪ್ಪ ಮೊಲಿ ಹೇಳಿದರು. ಸಾಹಿತ್ಯೋತ್ಸವಕ್ಕೆ ದೇಶದ ವಿವಿಧ ರಾಜ್ಯಗಳಲ್ಲಿನ ಭಾಷಾ ಕವಿ ಸಾಹಿತಿಗಳನ್ನು ಆಹ್ವಾನಿಸಲಾಗುವುದು ಎಂದು ಅವರು ತಿಳಿಸಿದರು.
ಕಾಸರಗೋಡು ಜಿಲ್ಲಾ ವಾರ್ತಾ ಕಚೇರಿ ಹಾಗೂ ಜಿಲ್ಲಾ ವಾಚನ ಪûಾಚರಣಾ ಸಮಿತಿ ನೇತೃತ್ವದಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯನ್ನು ಕವಿ ನಿವಾಸ ನಲಂದಾದಲ್ಲಿ ಉದ್ಘಾಟಿಸಿ ಮಾತನಾಡಿದರು.
23 ಭಾಷೆಗಳಲ್ಲಿ ಪ್ರಾವೀಣ್ಯತೆಯನ್ನು ಮೆರೆದಿದ್ದ ಗೋವಿಂದ ಪೈ ನಿವಾಸದಲ್ಲಿ ಆಯೋಜಿಸಲ್ಪಟ್ಟ ಕಾರ್ಯಕ್ರಮ ಅರ್ಥಪೂರ್ಣ ಹಾಗೂ ಶ್ಲಾಘನೀಯ. ಗಿಳವಿಂಡು ಸಮುಚ್ಚಯದಲ್ಲಿ ಮುಂ ದೆಯೂ ಇಂಥಹ ಅರ್ಥ ಪೂರ್ಣ ಕವಿಗೋಷ್ಠಿಗಳು, ಸಾಹಿತ್ಯ ಕಾರ್ಯ ಕ್ರಮಗಳು ಸಹಿತ ರಂಗ ಪ್ರದರ್ಶನಗಳು ಜರಗಲಿವೆ. ವಿವಿಧ ಸಾಹಿತ್ಯಿಕ, ಬೌದ್ಧಿಕ, ಸಾಂಸ್ಕೃಕ ಕಾರ್ಯಕ್ರಮಗಳ ಮೂಲಕ ಕನ್ನಡದ ಪ್ರಥಮ ರಾಷ್ಟ್ರ ಕವಿ ಗೋವಿಂದ ಪೈ ಅವರ ಪರಿಚಯ ಇಡಿ ವಿಶ್ವಕ್ಕಾಗಲಿ ಎಂದು ಹಾರೈಸಿದರು. ಪ್ರೊ| ಶ್ರೀನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಕನ್ನಡ ಕವಿ, ಸಾಹಿತಿ ಡಾ| ಯು. ಮಹೇಶ್ವರಿ, ಬಾಲ ಕೃಷ್ಣ ಹೊಸಂಗಡಿ, ಡಾ| ರಾಧಾಕೃಷ್ಣ ಬೆಳ್ಳೂರು, ವಿಜಯಲಕ್ಷ್ಮೀ ಶಾನುಭಾಗ್, ವೆಂಕಟ್ ಭಟ್ ಎಡನೀರು, ಮಲಯಾಳ ಭಾಷೆಯಲ್ಲಿ ಎಂ.ಪಿ. ಜಿಲ್‌ಜಿಲ್, ರಾಘವನ್ ಬೆಳ್ಳಿಪ್ಪಾಡಿ, ಪ್ರೇಮ ಚಂದ್ರನ್. ತುಳು ಭಾಷೆಯಲ್ಲಿ ಮಲಾರು ಜಯರಾಮ ರೈ, ರಾಧಾಕೃಷ್ಣ ಉಳಿಯತ್ತಡ್ಕ. ಕೊಂಕಣಿ ಭಾಷೆಯಲ್ಲಿ ಸ್ಟಾನ್ಲಿ ಲೋಬೊ ಕೊಲ್ಲಂಗಾನ ಮೊದ ಲಾದವರು ಸ್ವರಚಿತ ಕವಿತೆಗಳನ್ನು ಓದಿದರು. ಟ್ರಸ್ಟ್ ಸದಸ್ಯರಾದ ಪ್ರೊ| ವಿವೇಕ ರೈ, ಕೆ.ಆರ್. ಜಯಾನಂದ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.