ರಾಷ್ಟ್ರೀಯ ಪೌಷ್ಟಿಕ ಆಹಾರ ಯೋಜನೆ: ಕಾಸರಗೋಡು ಸೇರ್ಪಡೆ
Team Udayavani, Sep 7, 2017, 8:20 AM IST
ಕಾಸರಗೋಡು: ರಾಷ್ಟ್ರೀಯ ಪೋಷಕ ಆಹಾರ ಯೋಜನೆಯಲ್ಲಿ ಕಾಸರಗೋಡು ಜಿಲ್ಲೆಯನ್ನು ಸೇರ್ಪಡೆ ಗೊಳಿಸಲಾಗಿದೆ. ರಾಷ್ಟ್ರೀಯ ಪೌಷ್ಟಿಕ ಆಹಾರ ಯೋಜನೆಗೆ ನ್ಯಾಯ ಆಯೋಗ ರೂಪು ನೀಡಿದ್ದು, ಈ ಯೋಜನೆಯಲ್ಲಿ ಕಾಸರಗೋಡು ಜಿಲ್ಲೆಯೊಂದಿಗೆ ಕೇರಳದ ಮಲಪ್ಪುರಂ ಮತ್ತು ಪಾಲಾ^ಟ್ ಜಿಲ್ಲೆಗಳೂ ಸೇರ್ಪಡೆಗೊಂಡಿವೆ.
ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಕಂಡುಬರುವ ಪೋಷಕ ಆಹಾರದ ಕೊರತೆ ಮತ್ತು ಹಸಿವು ಸಮಸ್ಯೆಗಳನ್ನು 2022ರೊಳಗೆ ನಿವಾರಿಸುವ ಅಂಗವಾಗಿ ರಾಷ್ಟ್ರೀಯ ಪೌಷ್ಟಿಕ ಆಹಾರ ಯೋಜನೆಯನ್ನು ಆವಿಷ್ಕರಿಸಲಾಗಿದೆ.
ಕೃಷಿ ವಿಜ್ಞಾನಿ ಡಾ| ಎಂ.ಎಸ್. ಸ್ವಾಮಿ ನಾಥನ್, ನ್ಯಾಯ ಆಯೋಗದ ಉಪಾಧ್ಯಕ್ಷ ಡಾ| ರಾಜೀವ್ ಕುಮಾರ್, ಸಿ.ಇ.ಒ. ಅಮಿತಾಬ್ ಕಾಂತ್ ಸಂಯುಕ್ತವಾಗಿ ರಾಷ್ಟ್ರೀಯ ಪೌಷ್ಟಿಕ ಆಹಾರ ನೀತಿ ಯನ್ನು ಪ್ರಕಟಿಸಿದ್ದಾರೆ.
ಪೌಷ್ಟಿಕ ಆಹಾರ ಕೊರತೆಯಿಂದ ಮಕ್ಕಳು ಮತ್ತು ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆಗಳು ಹತ್ತುಹಲವು. ಐದು ವರ್ಷಕ್ಕಿಂತ ಕೆಳ ಹರೆಯದ ಮಕ್ಕಳ ಭಾರ ಕಡಿಮೆಯಾಗುತ್ತಿದೆ. ವಿಟಮಿನ್, ಉಕ್ಕು, ಅಯೋಡಿನ್ ಮೊದಲಾದ ಅಂಶಗಳು ಮಕ್ಕಳಲ್ಲಿ ಬಹಳಷ್ಟು ಕಡಿಮೆಯಾಗುತ್ತಿವೆ ಎಂದು ವರದಿಯಲ್ಲಿ ಸೂಚಿಸಿದೆ. ಇಂತಹ ಸಮಸ್ಯೆ ಪರಿಹಾರಕ್ಕಾಗಿ ಮೂರು ಹಂತಗಳಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. 2017-18ನೇ ವರ್ಷದಲ್ಲಿ ದೇಶದ 254 ಜಿಲ್ಲೆಗಳಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗು ವುದು. 2018-19ನೇ ವರ್ಷ ದಲ್ಲಿ ಇನ್ನೂ 254 ಜಿಲ್ಲೆಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗುವುದು. 2019-20ನೇ ವರ್ಷದಲ್ಲಿ ಉಳಿದ ಎಲ್ಲ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಸಾಕಾರ ಗೊಳಿಸಲಾಗುವುದು. ಇದಕ್ಕಾಗಿ ರಾಷ್ಟ್ರೀಯ ಆರೋಗ್ಯ ಮಿಷನ್, ಅಂಗನವಾಡಿಗಳು, ಸ್ಥಳೀಯಾಡಳಿತ ಸಂಸ್ಥೆಗಳ ನೆರವನ್ನು ಪಡೆಯಲಾಗುವುದು.
ಅಧ್ಯಯನ ವರದಿ
ಐದು ವರ್ಷಗಳಿಗಿಂತ ಕೆಳಗಿನ ಮಕ್ಕ ಳಲ್ಲಿ ತೂಕ ಕಡಿಮೆಯಾಗುತ್ತಿರುವವರ ಪ್ರಮಾಣ ಅಧಿಕವಾಗುತ್ತಿದೆ. ಹಿಮಾಚಲ ಪ್ರದೇಶ, ಮೇಘಾಲಯ, ಮಿಜೋರಾಂ, ಅರುಣಾಚಲ ಪ್ರದೇಶ, ತ್ರಿಪುರ, ಮಣಿಪುರ ಮೊದಲಾದ ರಾಜ್ಯಗಳಲ್ಲಿ ಈ ವಿಷಯದಲ್ಲಿ ಗಂಭೀರ ಚಿಂತನೆ ಮಾಡಬೇಕಾದ ಸ್ಥಿತಿ ನೆಲೆಗೊಂಡಿದೆ.
ಮಕ್ಕಳ ಬೆಳವಣಿಗೆಯಲ್ಲಿ ಸಾಕಷ್ಟು ಸಮಸ್ಯೆಗಳು ಅರುಣಾಚಲ ಪ್ರದೇಶ, ತ್ರಿಪುರ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಕಂಡುಕೊಳ್ಳಲಾಗಿದೆ.
2022ನೇ ಇಸವಿಯೊಳಗೆ ಪೌಷ್ಟಿಕ ಆಹಾರದ ಕೊರತೆಯನ್ನು ಪ್ರತೀ ವರ್ಷ ಶೇ. 3ರಂತೆ ಕಡಿಮೆಗೊಳಿಸುವ ಉದ್ದೇಶವಿರಿಸಿ ಕೊಳ್ಳಲಾಗಿದೆ. 15ರಿಂದ 49ನೇ ವರ್ಷ ಪ್ರಾಯದೊಳಗಿನವರಲ್ಲಿ ಕಂಡುಬರುವ ಪೌಷ್ಟಿಕ ಆಹಾರದ ಕೊರತೆಯನ್ನು 2020ರೊಳಗೆ ನಿವಾರಿಸುವ ಪ್ರಯತ್ನ ಮಾಡಲಾಗುವುದು.
ಕೇರಳದಲ್ಲೂ ಮಹಿಳೆಯರಲ್ಲಿ ಪೌಷ್ಟಿಕ ಆಹಾರ ಕೊರತೆ
ಮಹಿಳೆಯರಲ್ಲಿ ಪೌಷ್ಟಿಕ ಆಹಾರ ಕೊರತೆ ಕಂಡು ಬರುತ್ತಿರುವ ರಾಜ್ಯಗಳ ಯಾದಿಯಲ್ಲಿ ಕೇರಳವೂ ಒಳಗೊಂಡಿದೆ. ರಾಷ್ಟ್ರೀಯ ಪೋಷಕ ಆಹಾರ ಯೋಜನೆಯನ್ನು ಆವಿಷ್ಕರಿಸಲು ನ್ಯಾಯ ಆಯೋಗ ನಡೆಸಿದ ಅಧ್ಯಯನದಲ್ಲಿ ದೇಶದ ಏಳು ರಾಜ್ಯಗಳಲ್ಲಿ ಮಹಿಳೆಯರಲ್ಲಿ ಪೋಷಕ ಆಹಾರದ ಕೊರತೆ ಕಂಡು ಬಂದಿದೆ. ಪಂಜಾಬ್, ಹಿಮಾಚಲ ಪ್ರದೇಶ, ದಿಲ್ಲಿ, ಉತ್ತರ ಪ್ರದೇಶ, ತಮಿಳ್ನಾಡು, ಗೋವಾ ಮತ್ತು ಕೇರಳದಲ್ಲಿ ಮಹಿಳೆಯರಲ್ಲಿ ಪೌಷ್ಟಿಕ ಆಹಾರದ ಕೊರತೆ ಪತ್ತೆಹಚ್ಚಲಾಗಿದೆ. ಹೆರಿಗೆಗೆ ಮುನ್ನ ಕೇರಳ, ಗೋವಾ, ತಮಿಳುನಾಡು, ಉತ್ತರ ಪ್ರದೇಶದಲ್ಲಿ ಗರ್ಭಿಣಿಯರ ಬಗ್ಗೆ ಹೆಚ್ಚಿನ ಗಮನಹರಿಸುವುದಿಲ್ಲ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಆರು ತಿಂಗಳಿಗಿಂತ ಕಡಿಮೆ ಪ್ರಾಯದ ಮಕ್ಕಳಿಗೆ ಕೇರಳ, ಅರುಣಾಚಲ ಪ್ರದೇಶ, ಕರ್ನಾಟಕ, ಛತ್ತೀಸ್‌ಗಢ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಸ್ತನ್ಯಪಾನ ಕಡಿಮೆಯಾಗುತ್ತಿದೆ ಎಂಬುದಾಗಿ ಅಧ್ಯಯನದಲ್ಲಿ ಪತ್ತೆಹಚ್ಚಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.